• ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
    • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Menu
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
    • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Vijaya Times logo
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
    • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Menu
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
    • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Visit Channel
Home ದೇಶ-ವಿದೇಶ

ನೀವು ತಡೆಯದೇ ಇದ್ರೇ ಖಂಡಿತ ನಾನು `ಗುಜರಾತ್ ಫೈಲ್ಸ್’ ಮಾಡ್ತೀನಿ ; ಮೋದಿಗೆ ಸವಾಲಾಕಿದ ನಿರ್ದೇಶಕ!

Mohan Shetty by Mohan Shetty
in ದೇಶ-ವಿದೇಶ
narendra modi
0
SHARES
0
VIEWS
Share on FacebookShare on Twitter

ಇಡೀ ದೇಶದಲ್ಲಿ ಭಾರೀ ಸದ್ದು ಮಾಡಿದ `ದ ಕಾಶ್ಮೀರ್ ಫೈಲ್ಸ್’(The Kashmir Files) ಸಿನಿಮಾಗೆ ರಾಜಕೀಯ(Political) ವಲಯ ಸೇರಿದಂತೆ ಅನೇಕ ಕಡೆಯಿಂದ ಆಕ್ರೋಶ ವ್ಯಕ್ತವಾಗಿತ್ತು. ಒಂದೆಡೆ ಈ ಸಿನಿಮಾ ತಿಳಿಯದ ಸತ್ಯಾಸತ್ಯತೆಯನ್ನು ಬಹಿರಂಗಪಡಿಸಿದೆ ಎಂಬ ಸಂತಸದ ಮಾತುಗಳು ಕೇಳಿಬಂದರೆ, ಮತ್ತೊಂದೆಡೆ ಈ ಸಿನಿಮಾ ಸುಳ್ಳು, ಕಟ್ಟುಕಥೆ ಎಂಬ ವದಂತಿಗಳು ಹರಿದಾಡುತ್ತಲೇ ಇದೆ. ನಿಜ ಸ್ವರೂಪ ಅನಾವರಣಗೊಂಡರೂ ಅದನ್ನು ಕೆಲವರಿಗೆ ಒಪ್ಪಿಕೊಳ್ಳಲು ಆಗುತ್ತಿಲ್ಲ!

narendra modi

ಇದೇ ಬೆನ್ನಲ್ಲೇ ಟ್ವೀಟರ್ ಸೇರಿದಂತೆ, ಸಾಮಾಜಿಕ ಜಾಲತಾಣದಲ್ಲಿ ಗುಜರಾತ್ ಹಿಂಸೆಯನ್ನು ಬಹಿರಂಗಪಡಿಸಿ, ಕಾಶ್ಮೀರಿ ಪಂಡಿತರ ಸಾವು ಮಾತ್ರವಲ್ಲ! ಅದಕ್ಕಿಂತ ಘನಘೋರ ಕೃತ್ಯಗಳು ಗುಜರಾತ್ ನಲ್ಲಿ ನಡೆದಿವೆ. ಯಾಕೆ ನಿಮ್ಮಿಂದ ಆ ಸತ್ಯವನ್ನು ತೋರಿಸಲು ಅಸಾಧ್ಯವಾ ಎಂಬ ಆರೋಪವನ್ನು ಹೊರಹಾಕಿದ್ದಾರೆ. ಈ ಮಾತುಗಳೆಲ್ಲವೂ ಯಾರ ಕಿವಿಗೆ ತಲುಪಬೇಕಿತ್ತೋ ಅದು ಸ್ಪಷ್ಟವಾಗದಿದ್ದರೂ, ಬಾಲಿವುಡ್ ನಿರ್ದೇಶಕ ವಿನೋದ್ ಕಾಪ್ರಿ(Vinod Kapri) ಅವರಿಗೆ ತಲುಪಿದೆ ಎಂಬುದು ಅವರ ಕಟುವಾದ ಹೇಳಿಕೆ ಸಾಬೀತುಪಡಿಸಿದೆ.

kashmir files

ಹೌದು, ವಿನೋದ್ ಕಾಪ್ರಿ ನಾನು ಗುಜರಾತ್ ಫೈಲ್ಸ್ ಸಿನಿಮಾ ಮಾಡಲು ಸಜ್ಜಾಗಿದ್ದೀನಿ! ಈ ಕುರಿತು ನಾನು ನಿರ್ಮಾಪಕರ ಜೊತೆ ಒಂದು ಸುತ್ತು ಮಾತುಕತೆ ಮಾಡಿದ್ದೀನಿ. ಈ ಸಿನಿಮಾ ನಾನು ಖಂಡಿತ ಮಾಡೇ ಮಾಡುವೆ. ಆದರೆ, ಈ ಚಿತ್ರಕ್ಕೆ ಪ್ರಧಾನಿ ನರೇಂದ್ರ ಮೋದಿಯವರು ತಡೆಯಬಾರದು. ಪ್ರಧಾನಿ ಮೋದಿಯವರ ಪಾತ್ರವನ್ನು ಈ ಸಿನಿಮಾದಲ್ಲಿ ಎಳೆಎಳೆಯಾಗಿ ತೋರಿಸುತ್ತೀನಿ. ಈ ಚಿತ್ರವನ್ನು ನೀವು ತಡೆಯುವುದಿಲ್ಲ ಎಂದು ರಾಷ್ಟ್ರಕ್ಕೆ ಭರವಸೆ ನೀಡಿ ಎಂದು ಪ್ರಧಾನಿ ನರೇಂದ್ರ ಮೋದಿಯವರಿಗೆ ನೇರ ಸವಾಲನ್ನು ಹಾಕಿದ್ದಾರೆ.

vinod kapri

ಗುಜರಾತ್ ಘಟನೆ ಕೂಡ ಸಾಕಷ್ಟು ಸತ್ಯಗಳನ್ನು ಅಡಿಗಿಸಿಕೊಂಡಿದೆ. ಈ ಸತ್ಯವನ್ನು ದ ಗುಜರಾತ್ ಫೈಲ್ಸ್ ಸಿನಿಮಾ ಮೂಲಕ ನಾನು ಬಹಿರಂಗಪಡಿಸುವೆ. ಈ ಕಥೆ ಕೂಡ ನೈಜ ಘಟನೆಯನ್ನು ಆಧಾರಿಸಲಿದೆ, ಈ ಬಗ್ಗೆ ನಾನು ಸಂಶೋಧನೆ ಮಾಡಿಕೊಂಡಿದ್ದೇನೆ. ಬಳಿಕವೇ ಆ ಸಿನಿಮಾವನ್ನು ಪ್ರಾಮಾಣಿಕವಾಗಿ ತೆರೆಯ ಮೇಲೆ ತರುವೆ ಎಂದು ಹೇಳಿದ್ದಾರೆ. ಈ ಸಿನಿಮಾ ಪ್ರಾರಂಭಿಸಲು ನಾನು ಸಜ್ಜಾಗಿದ್ದೇನೆ, ಆದರೆ ಪ್ರಧಾನಿ ನರೇಂದ್ರ ಮೋದಿಯವರು ಇದಕ್ಕೆ ಒಪ್ಪಿಗೆ ಸೂಚಿಸಬೇಕು ಅಷ್ಟೇ ಎಂದು ಬರೆದು ಟ್ವೀಟರ್‍ನಲ್ಲಿ ಪೋಸ್ಟ್ ಮಾಡಿದ್ದಾರೆ. ಈ ಒಂದು ಟ್ವೀಟ್ ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ ಆಗುವ ಮೂಲಕ ಜನರಲ್ಲಿ ಕುತೂಹಲ ಕೆರಳಿಸುತ್ತಿದೆ.

Tags: challengedirectornarendramodivinodkapri

Related News

ಒಡಿಶಾದಲ್ಲಿ ಯಶವಂತಪುರ- ಕೊರೊಮಂಡೆಲ್ ಎಕ್ಸ್‌ಪ್ರೆಸ್ ರೈಲು ದುರಂತ : ಕ್ಷಣ ಕ್ಷಣಕ್ಕೂ ಹೆಚ್ಚುತ್ತಿದೆ ಸಾವಿನ ಸಂಖ್ಯೆ!
ದೇಶ-ವಿದೇಶ

ಒಡಿಶಾದಲ್ಲಿ ಯಶವಂತಪುರ- ಕೊರೊಮಂಡೆಲ್ ಎಕ್ಸ್‌ಪ್ರೆಸ್ ರೈಲು ದುರಂತ : ಕ್ಷಣ ಕ್ಷಣಕ್ಕೂ ಹೆಚ್ಚುತ್ತಿದೆ ಸಾವಿನ ಸಂಖ್ಯೆ!

June 3, 2023
ದೇಶ-ವಿದೇಶ

ಮುಸ್ಲಿಂ ಲೀಗ್ ಸಂಪೂರ್ಣವಾಗಿ ಜಾತ್ಯತೀತ ಪಕ್ಷ : ವಿವಾದವೆಬ್ಬಿಸಿದೆ ರಾಹುಲ್ ಗಾಂಧಿ ಹೇಳಿಕೆ

June 2, 2023
ಫೋನ್‌ ಜಾಸ್ತಿ ನೋಡ್ಬೇಡ ಅಂದಿದ್ದೇ ತಪ್ಪಾಯ್ತಾ? ಅಮ್ಮ ಬೈದಿದ್ದಾರೆ ಎಂದು ಆತ್ಮಹತ್ಯೆ ಮಾಡಿಕೊಂಡ 13 ವರ್ಷದ ಬಾಲಕಿ
ದೇಶ-ವಿದೇಶ

ಫೋನ್‌ ಜಾಸ್ತಿ ನೋಡ್ಬೇಡ ಅಂದಿದ್ದೇ ತಪ್ಪಾಯ್ತಾ? ಅಮ್ಮ ಬೈದಿದ್ದಾರೆ ಎಂದು ಆತ್ಮಹತ್ಯೆ ಮಾಡಿಕೊಂಡ 13 ವರ್ಷದ ಬಾಲಕಿ

June 1, 2023
ರಾಷ್ಟ್ರಪತಿಯಿಂದ ಹೊಸ ಸಂಸತ್ ಭವನ ಉದ್ಘಾಟನೆಗೆ ಕೋರಿಕೆ: ಸುಪ್ರೀಂ ಕೋರ್ಟ್‌ನಿಂದ ಅರ್ಜಿ ವಜಾ
ದೇಶ-ವಿದೇಶ

ರಾಷ್ಟ್ರಪತಿಯಿಂದ ಹೊಸ ಸಂಸತ್ ಭವನ ಉದ್ಘಾಟನೆಗೆ ಕೋರಿಕೆ: ಸುಪ್ರೀಂ ಕೋರ್ಟ್‌ನಿಂದ ಅರ್ಜಿ ವಜಾ

May 27, 2023

ವಿಜಯ ಟೈಮ್ಸ್‌ - ಬದಲಾವಣೆಯ ಹಾದಿ

Vijaya Times logo

ವಿಜಯ ಟೈಮ್ಸ್‌

  • ಪ್ರಮುಖ ಸುದ್ದಿ
  • ರಾಜಕೀಯ
  • ದೇಶ-ವಿದೇಶ
  • ಮನರಂಜನೆ
Menu
  • ಪ್ರಮುಖ ಸುದ್ದಿ
  • ರಾಜಕೀಯ
  • ದೇಶ-ವಿದೇಶ
  • ಮನರಂಜನೆ

Quick Links

  • About Us
  • Contact Us
  • For Advertisement
Menu
  • About Us
  • Contact Us
  • For Advertisement

Follow Us

Facebook Twitter Instagram Youtube

Download Vijaya Times App

Android
© 2022 Vijaya Times. All rights reserved.