- ಇರಾನ್ ರಾಜಧಾನಿ ಟೆಹ್ರಾನ್‌ಅಲ್ಲಿ ರಕ್ತಪಾತ: ಹಿಂಸಾಚಾರಕ್ಕೆ (violence war in iran) ತಿರುಗಿದ 13 ದಿನಗಳ ಪ್ರತಿಭಟನೆ
- ತಲೆಬಾಗಲ್ಲ ಎಂದ ಖಮೇನಿ: ಇರಾನ್‌ನಲ್ಲಿ ಹಿಂಸಾಚಾರ ತೀವ್ರ
- ಟೆಹ್ರಾನ್‌ನಲ್ಲಿ 217 ಪ್ರತಿಭಟನಾಕಾರರು ಬಲಿ; ಯುವಕರ ಮೇಲೆ ಗುಂಡಿನ ಮಳೆ, ರಾಷ್ಟ್ರವ್ಯಾಪಿ ಪ್ರತಿಭಟನೆ
ಇರಾನ್‌ನಲ್ಲಿ ಖಮೇನಿ ಸರ್ಕಾರದ ವಿರುದ್ಧ ಭುಗಿಲೆದ್ದಿರುವ ಆಡಳಿತ ವಿರೋಧಿ ಪ್ರತಿಭಟನೆಗಳು ಇದೀಗ (violence war in iran) ತೀವ್ರ ಹಿಂಸಾಚಾರಕ್ಕೆ ತಿರುಗಿದ್ದು, ದೇಶದ ರಾಜಧಾನಿ ಟೆಹ್ರಾನ್ (Tehran) ರಕ್ತಪಾತದ ಕೇಂದ್ರವಾಗುತ್ತಿದೆ.
ಕಳೆದ 13 ದಿನಗಳಿಂದ ನಿರಂತರವಾಗಿ ನಡೆಯುತ್ತಿರುವ ಪ್ರತಿಭಟನೆಗಳನ್ನು ನಿಯಂತ್ರಿಸಲು ಸರ್ಕಾರ ಭದ್ರತಾ ಪಡೆಗಳಿಗೆ ಕಟ್ಟುನಿಟ್ಟಿನ ಆದೇಶ ನೀಡಿದ್ದು, ಹಲವು ಪ್ರದೇಶಗಳಲ್ಲಿ ಗುಂಡಿನ ದಾಳಿ ನಡೆಸಲಾಗಿದೆ.
ವೈದ್ಯಕೀಯ ಮೂಲಗಳ ಪ್ರಕಾರ, ಕೇವಲ ಟೆಹ್ರಾನ್‌ನಲ್ಲಿಯೇ ಕನಿಷ್ಠ 217 ಮಂದಿ ಪ್ರತಿಭಟನಾಕಾರರು ಸಾವನ್ನಪ್ಪಿರುವುದಾಗಿ ವರದಿಯಾಗಿದೆ.

ಹೆಚ್ಚಿನ ಸಾವುಗಳು ನೇರ ಗುಂಡಿನ ದಾಳಿಯಿಂದ (violence war in iran) ಸಂಭವಿಸಿರುವುದು ಆತಂಕಕಾರಿ ಸಂಗತಿಯಾಗಿದೆ.
ರಾಜಧಾನಿಯ ವಿವಿಧ ಭಾಗಗಳಲ್ಲಿ ಪ್ರತಿಭಟನಾಕಾರರು ಮತ್ತು ಭದ್ರತಾ ಪಡೆಗಳ ನಡುವೆ ಘರ್ಷಣೆಗಳು ತೀವ್ರಗೊಂಡಿವೆ.
ಟೆಹ್ರಾನ್‌ನ ಆರು ಪ್ರಮುಖ ಆಸ್ಪತ್ರೆಗಳಲ್ಲಿ ಮೃತದೇಹಗಳು ನಿರಂತರವಾಗಿ ದಾಖಲಾಗುತ್ತಿದ್ದು, ಆರೋಗ್ಯ ವ್ಯವಸ್ಥೆಯ ಮೇಲೂ ಒತ್ತಡ ಹೆಚ್ಚಾಗಿದೆ.
ಉತ್ತರ ಟೆಹ್ರಾನ್‌ನಲ್ಲಿ ನಡೆದ ಪ್ರತಿಭಟನೆಯ ವೇಳೆ ಯುವಕರ ಗುಂಪಿನ ಮೇಲೆ ಏಕಾಏಕಿ ಗುಂಡಿನ ಮಳೆ ಸುರಿದ ಪರಿಣಾಮ 30ಕ್ಕೂ ಹೆಚ್ಚು ಮಂದಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಈ ಘಟನೆಗಳು ಜನಸಾಮಾನ್ಯರಲ್ಲಿ ಭಯ ಹಾಗೂ ಆಕ್ರೋಶವನ್ನು ಮತ್ತಷ್ಟು ಹೆಚ್ಚಿಸಿದ್ದು, ಸರ್ಕಾರದ ವಿರುದ್ಧದ ಆಕ್ರೋಶ ದಿನದಿಂದ ದಿನಕ್ಕೆ ಉಗ್ರ ಸ್ವರೂಪ ಪಡೆಯುತ್ತಿದೆ.
ಪ್ರತಿಭಟನೆಗಳು ದೇಶಾದ್ಯಂತ ಹರಡುತ್ತಿರುವ ಹಿನ್ನೆಲೆ, ಇರಾನ್ (Iran) ಸರ್ಕಾರ ಇಂಟರ್‌ನೆಟ್ (Internet) ಮತ್ತು ದೂರವಾಣಿ ಸಂಪರ್ಕಗಳನ್ನು ಸಂಪೂರ್ಣವಾಗಿ ಸ್ಥಗಿತಗೊಳಿಸಿದೆ. 2025ರ ಡಿಸೆಂಬರ್ 28ರಂದು ಆರಂಭವಾದ ಈ ಪ್ರತಿಭಟನೆಗಳು ಈಗ ರಾಷ್ಟ್ರವ್ಯಾಪಿ ಚಳವಳಿಯಾಗಿ ರೂಪುಗೊಂಡಿವೆ.
ಸಾಮಾಜಿಕ ಜಾಲತಾಣಗಳು ಹಾಗೂ ವಿದೇಶಿ ಮಾಧ್ಯಮಗಳ ಮೂಲಕ ಮಾಹಿತಿ ಹರಡುವುದನ್ನು ತಡೆಯಲು ಸರ್ಕಾರ ಈ ಕ್ರಮ ಕೈಗೊಂಡಿದೆ ಎನ್ನಲಾಗಿದೆ.
ಇಂಟರ್‌ನೆಟ್ ಬಂದ್‌ನಿಂದಾಗಿ ನಿಖರ ಮಾಹಿತಿಯ ಲಭ್ಯತೆ ಕಡಿಮೆಯಾಗಿದ್ದು, ಸಾವು-ನೋವಿನ ಸಂಖ್ಯೆಗಳ ಬಗ್ಗೆ ಗೊಂದಲ ಹೆಚ್ಚಾಗಿದೆ.
ಈ ಮಧ್ಯೆ, ಇರಾನ್‌ನಿಂದ ಗಡಿಪಾರು ಆಗಿರುವ ಯುವರಾಜ ರೇಜಾ ಪಹ್ಲವಿ ಅವರು ಸಾಮೂಹಿಕ ಪ್ರತಿಭಟನೆಗೆ ಕರೆ ನೀಡಿದ ಬಳಿಕ ಪರಿಸ್ಥಿತಿ ಇನ್ನಷ್ಟು ಉಲ್ಬಣಗೊಂಡಿದೆ.
ಅವರ ಕರೆ ಬೆನ್ನಲ್ಲೇ ಟೆಹ್ರಾನ್ ಸೇರಿದಂತೆ ಹಲವು ಪ್ರಮುಖ ನಗರಗಳಲ್ಲಿ ಸಾವಿರಾರು ಜನರು ಬೀದಿಗಿಳಿದು ಖಮೇನಿ ವಿರುದ್ಧ ಘೋಷಣೆ ಕೂಗುತ್ತಿದ್ದಾರೆ.
“ಮುಲ್ಲಾಗಳು ದೇಶಬಿಟ್ಟು ತೊಲಗಲಿ” ಎಂಬ ಘೋಷಣೆಗಳು ಕೇಳಿಬರುತ್ತಿದ್ದು, ಕೆಲವೆಡೆ ಸರ್ಕಾರಿ ಕಚೇರಿಗಳಿಗೆ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಲಾಗಿದೆ.
ಇಸ್ಲಾಮಿಕ್ ಗಣರಾಜ್ಯದ 47 ವರ್ಷಗಳ ಇತಿಹಾಸದಲ್ಲೇ ಇದು ಅತಿದೊಡ್ಡ ಆಡಳಿತ ವಿರೋಧಿ ಪ್ರತಿಭಟನೆ ಎನ್ನಲಾಗುತ್ತಿದೆ.
ಆದರೆ, ಸರ್ಕಾರದ ಪ್ರತಿಕ್ರಿಯೆ ಕಠಿಣವಾಗಿಯೇ ಉಳಿದಿದೆ. ಮಾನವ ಹಕ್ಕುಗಳ ಸಂಘಟನೆಗಳು ನೀಡಿರುವ ವರದಿಗಳಲ್ಲಿ, ಅಧಿಕೃತ ಅಂಕಿಅಂಶಗಳಿಗಿಂತ ಕಡಿಮೆ ಸಾವುಗಳು ಸಂಭವಿಸಿವೆ ಎಂದು ಹೇಳಲಾಗಿದೆ. ಕೆಲವು ವರದಿಗಳ ಪ್ರಕಾರ, ಸಾವಿನ ಸಂಖ್ಯೆ 63ರಷ್ಟಿದೆ ಎನ್ನಲಾಗುತ್ತಿದೆ.
ವಿದೇಶಿ ಮಾಧ್ಯಮಗಳ ಮೇಲಿನ ಕಟ್ಟುನಿಟ್ಟಿನ ನಿರ್ಬಂಧಗಳಿಂದಾಗಿ ನಿಖರ ಮಾಹಿತಿ ಹೊರಬರುತ್ತಿಲ್ಲ. ಈ ಎಲ್ಲ ಬೆಳವಣಿಗೆಗಳ ನಡುವೆಯೇ ಪ್ರತಿಕ್ರಿಯೆ ನೀಡಿರುವ ಇರಾನ್‌ನ ಸರ್ವೋಚ್ಛ ನಾಯಕ ಅಯತೊಲ್ಲಾ ಅಲ್ ಖಮೇನಿ, “ಇಸ್ಲಾಮಿಕ್ ಗಣರಾಜ್ಯವು ದಂಗೆಕೋರರ ಮುಂದೆ ತಲೆಬಾಗುವುದಿಲ್ಲ” ಎಂದು ಸ್ಪಷ್ಟವಾಗಿ ಹೇಳಿದ್ದಾರೆ.
ಸರ್ಕಾರದ ಈ ಕಠಿಣ ನಿಲುವು ಮುಂದಿನ ದಿನಗಳಲ್ಲಿ ಪರಿಸ್ಥಿತಿ ಇನ್ನಷ್ಟು ಗಂಭೀರವಾಗುವ ಸೂಚನೆ ಕಂಡುಬರುತ್ತಿದೆ.