Mumbai: 2008 ರಲ್ಲಿ ಮುಂಬೈನಲ್ಲಿ ಉಗ್ರರ ದಾಳಿ ೨೬/೧೧ ಮಾಡಿಸಿದವರು ಇಂದಿಗೂ ಪಾಕಿಸ್ತಾನದಲ್ಲಿ ಆರಾಮವಾಗಿ ಓಡಾಡಿಕೊಂಡು ಇದ್ದಾರೆ ಎಂದು ಬಾಲಿವುಡ್ ಚಿತ್ರ ಸಾಹಿತಿ ಜಾವೇದ್ ಅಖ್ತರ್(Javed Akhtar) ಅವರು ಪಾಕ್ ನೆಲದಲ್ಲೇ ಪಾಕಿಗಳಿಗೆ (viral javed akhtar statement) ಬಯ್ದು ಬಂದ ಘಟನೆ ನಡೆದಿದೆ.
ಲಾಹೋರ್ ನಡೆದ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ವೇಳೆ ಬಾಲಿವುಡ್ ಚಿತ್ರಸಾಹಿತಿ ಜಾವೇದ್ ಅಖ್ತರ್ ಅವರು ೨೬/೧೧ ಮುಂಬೈ ದಾಳಿಯನ್ನು ನೆನಪಿಸಿಕೊಂಡು ಭಾರತದ ಮೇಲೆ ದಾಳಿ ಮಾಡಿದ ಉಗ್ರರು ನಾರ್ವೆಯಿಂದಲೋ,
ಈಜಿಪ್ಟ್ನಿಂದಲೋ ಬಂದವರಲ್ಲ. ಅವರೆಲ್ಲಾ ಪಾಕಿಸ್ತಾನದಲ್ಲೇ ಈಗಲೂ ಆರಾಮವಾಗಿ ಓಡಾಡಿಕೊಂಡಿದ್ದಾರೆ ಎಂದು ಪಾಕಿಸ್ತಾನದ ನೆಲದಲ್ಲೇ ಕಟುವಾಗಿ ಹೇಳಿದ್ದಾರೆ.
ಬಾಲಿವುಡ್ ಚಿತ್ರಸಾಹಿತಿ ಜಾವೇದ್ ಅಖ್ತರ್ ಅವರನ್ನು ಪಾಕಿಸ್ತಾನದ ಹೆಸರಾಂತ ಉರ್ದು ಕವಿ ಫೈಜ್ ಅಹ್ಮದ್ ಫೈಜ್(Fazil Ahmed Fazil) ಅವರ ನೆನಪಿಗಾಗಿ ಆಯೋಜಿಸಲಾದ ಉತ್ಸವದಲ್ಲಿ ಪಾಲ್ಗೊಳ್ಳಲು ಪಾಕಿಸ್ತಾನದ ಲಾಹೋರ್‌ಗೆ ಆಹ್ವಾನಿಸಲಾಗಿತ್ತು.
ಕಾರ್ಯಕ್ರಮದಲ್ಲಿ ಸಭಿಕರನ್ನು ಉದ್ದೇಶಿಸಿ ಮಾತನಾಡುವಾಗ ಜಾವೇದ್ ಅವರು ಹೆಚ್ಚು ಯೋಚಿಸದೆ, ಭಯೋತ್ಪಾದನೆ ಬಗ್ಗೆ ಪಾಕಿಸ್ತಾನದ ವಿರುದ್ಧ ಗುಡುಗಿದರು.
2008ರಲ್ಲಿ ಮುಂಬೈನಲ್ಲಿ ದಾಳಿ ನಡೆಸಲು ಸಂಚು ರೂಪಿಸಿದವರು ಇಂದಿಗೂ ಪಾಕಿಸ್ತಾನದಲ್ಲಿ ಆರಾಮವಾಗಿ ಅಡ್ಡಾಡಿಕೊಂಡಿದ್ದಾರೆ ಎಂದು ಜಾವೇದ್ ಅಖ್ತರ್ ತರಾಟೆಗೆ ತೆಗೆದುಕೊಂಡರು.
ಜಾವೇದ್ ಅಖ್ತರ್(Javed Akhtar) ಮುಸ್ಲಿಮರಾದರೂ ನಾಸ್ತಿಕರು. ಭಾರತದಲ್ಲಿ ಇಸ್ಲಾಂ ಮತ್ತು ಹಿಂದೂ ಮೂಲಭೂತವಾದಿಗಳಿಬ್ಬರನ್ನೂ ಸಮಾನವಾಗಿ ಟೀಕಿಸುವ ದಿಟ್ಟ ವ್ಯಕ್ತಿತ್ವ ಅವರದ್ದು.
ತುಂಬಿದ ಸಭೆಯಲ್ಲಿ ದಿಟ್ಟ ಮಾತನಾಡಿದ ಜಾವೇದ್ ಅಖ್ತರ್ ಅವರು ಪಾಕಿಸ್ತಾನದಲ್ಲಿ ನಡೆಯುತ್ತಿರುವ ವಿದ್ಯಮಾನಗಳನ್ನು ಯಾವುದೇ ಮುಲಾಜಿಲ್ಲದೆ ಟೀಕಿಸಿದರು.
ಈ ಸಂದರ್ಭದಲ್ಲೊ ಸಭಿಕರಲ್ಲಿ ಒಬ್ಬರು ಎದ್ದು ನಿಂತು ನೇರ ಪ್ರಶ್ನೆಯೊಂದನ್ನು ಮುಂದಿಟ್ಟರು, ನೀವು ಪಾಕಿಸ್ತಾನಕ್ಕೆ ಹಲವು ಬಾರಿ ಬಂದಿದ್ದಿರಿ.
ನೀವು ಭಾರತಕ್ಕೆ ಹಿಂದಿರುಗಿದಾಗ, ಪಾಕಿಸ್ತಾನದ ಜನರ ಬಗ್ಗೆ ಒಳ್ಳೆಯ ಮಾತುಗಳನ್ನಾಡುತ್ತೀರಾ? ಎಂದು ಕೇಳಿದ್ದಾರೆ.
ಇದಕ್ಕೆ ಉತ್ತರಿಸಿದ ಜಾವೇದ್ ಅವರು, ನಾವು ಪರಸ್ಪರ ದೂರಿಕೊಳ್ಳುವುದು ಬೇಡ. ಇದರಿಂದ ಸಮಸ್ಯೆಗಳಿಗೆ ಪರಿಹಾರ ಲಭಿಸೋದಿಲ್ಲ. ಮುಂಬೈ ದಾಳಿ ಹೇಗಾಯ್ತು ಎಂಬುದನ್ನು ನೋಡಿದ್ದೇವೆ.
ಆ ಉಗ್ರರು ನಾರ್ವೆಯಿಂದಲೋ, ಈಜಿಪ್ಟ್ನಿಂದಲೋ ಬಂದವರಲ್ಲ. ನಿಮ್ಮ ದೇಶದಲ್ಲಿ ಈಗಲೂ ಆರಾಮವಾಗಿ ಓಡಾಡಿಕೊಂಡಿದ್ದಾರೆ ಎಂದು ನೇರವಾಗಿಯೇ ಹೇಳಿದ್ದಾರೆ.
ಪಾಕಿಸ್ತಾನದ ಗಾಯಕರಾದ ನುಸ್ರತ್ ಮತ್ತು ಮೆಹದಿ ಹಸನ್ ಅವರಿಗೆ ಭಾರತದಲ್ಲಿ ದೊಡ್ಡ ಕಾರ್ಯಕ್ರಮಗಳು ಆಯೋಜನೆಯಾಗಿವೆ.
ಆದರೆ, ಲತಾ ಮಂಗೇಶ್ಕರ್ ಅವರಿಗೆ ನಿಮ್ಮ ದೇಶ ಯಾವತ್ತಾದರೂ ಕಾರ್ಯಕ್ರಮ ಆಯೋಜಿಸಿದೆಯಾ ಎಂದು ಪ್ರಶ್ನೆ ಮಾಡಿದರು.
ಪಾಕಿಸ್ತಾನದ ಅದೆಷ್ಟೋ ಕಲಾವಿದರಿಗೆ ಭಾರತ ಆತಿಥ್ಯ ವಹಿಸಿದೆ, ಆಶ್ರಯ ಒದಗಿಸಿದೆ. ಲಿಫ್ಟ್ ಕರಾದೇ ಖ್ಯಾತಿಯ ಅದ್ನಾನ್ ಸಾಮಿ ಭಾರತದಲ್ಲೇ ನೆಲಸಿದ್ದಾರೆ.
ಗಾಯಕರಾದ ನುಸ್ರತ್ ಫತೇ ಅಲಿ ಖಾನ್, ಗುಲಾಮ್ ಅಲಿ ಮೊದಲಾದ ಹಲವರ ಗಾಯನವನ್ನು ಭಾರತೀಯರು ಮೆಚ್ಚಿಕೊಂಡಿದ್ದಿದೆ ಎಂದು ಹೇಳಿದ್ದಾರೆ.
ಸದ್ಯ ಜಾವೇದ್ ಅಖ್ತರ್ ಅವರ ಈ ಹೇಳಿಕೆಯ ವೀಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ ಆಗುತ್ತಿದೆ.