ಕೇಪ್ ಟೌನ್ ಜ 24 : ಹಲವು ದಿನಗಳಿಂದ ವಿರಾಟ್ ಮತ್ತು ಅನುಷ್ಕಾ ಅಭಿಮಾನಿಗಳು ಕಾಯುತ್ತಿದ್ದ ಕೂತುಹಲಕ್ಕೆ ನಿನ್ನೆ ತೆರೆ ಬಿದ್ದಿದೆ. ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವೆ ನಡೆದ ಏಕದಿನ ಸರಣಿಯ ಕೊನೆಯ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಪುತ್ರಿ ವಾಮಿಕಾ ಸ್ಕ್ರೀನ್ ಮೇಲೆ ಕಾಣಿಸಿಕೊಳ್ಳುವ ಮೂಲಕ ಅಬೀಮಾನಿಗಳ ಹಲವು ದಿನದ ಆಸೆ ನಿನ್ನೆ ಈಡೇರಿದಂತಾಗಿದೆ.
ದಕ್ಷಿಣ ಆಫ್ರಿಕಾ ನಡುವಿನ ಅಂತಿಮ ಏಕದಿನ ಪಂದ್ಯದಲ್ಲಿವಿರಾಟ್ ಅರ್ಧಶತಕವನ್ನು ಪೂರ್ಣಗೊಳಿಸಿದಾಗ ಅನುಷ್ಕಾ ಶರ್ಮಾ ತನ್ನ ಮಗಳನ್ನು ಎತ್ತಿಕೊಂಡಿದ್ದರು. ಅಷ್ಟೇ ಅಲ್ಲ ಕೊಹ್ಲಿ ಫಿಫ್ಟಿ ಬಾರಿಸಿದ ಬಳಿಕ ವಮಿಕಾ, ಅವರನ್ನು ನೋಡಿ ತಮಾಷೆಯ ಪ್ರತಿಕ್ರಿಯೆಯನ್ನೂ ನೀಡಿದ್ದಾರೆ. ಈ ವೇಳೆ ಅನುಷ್ಕಾ ಹಾಗೂ ವಮಿಕಾ ಚಪ್ಪಾಳೆ ತಟ್ಟಿ ಸ್ವಾಗತಿಸಿದ ದೃಶ್ಯ ಬಿಗ್ ಸ್ಕ್ರೀನ್‌ನಲ್ಲಿ ಕಾಣಿಸಿಕೊಂಡಿದೆ.
ಅನುಷ್ಕಾ ಕಪ್ಪು ಬಣ್ಣದ ಹಾಗೂ ಮಗಳು ವಮಿಕಾ ಪಿಂಕ್ ಕಲರ್ ಡ್ರೆಸ್ ತೊಟ್ಟಿದ್ದರು. ವಮಿಕಾ ಅವರ ಈ ಕೆಲವು ಸೆಕೆಂಡ್‌ಗಳ ವಿಡಿಯೋ ಹೊರಬೀಳುತ್ತಿದ್ದಂತೆಯೇ ವಿರಾಟ್-ಅನುಷ್ಕಾ ಮಗಳ ಮೊದಲ ನೋಟ ನೋಡಲು ಅಭಿಮಾನಿಗಳಲ್ಲಿ ಇದ್ದ ಕಾತುರ ಕೊನೆಗೊಂಡಂತಾಗಿದೆ.
ಒಂದು ವರ್ಷದ ಅವಧಿಯಲ್ಲಿ ಅವರು ಎಲ್ಲಿಯೂ ಮಗುವಿನ ಮುಖವನ್ನು ತೋರಿಸಿಲ್ಲ. ಅವಳಿಗೆ ಅನಗತ್ಯ ಪ್ರಚಾರ ನೀಡುವುದು ಬೇಡ ಹಾಗೂ ಸೋಶಿಯಲ್ ಮೀಡಿಯಾದಿಂದ ಆಕೆಯನ್ನು ದೂರವೇ ಇಡಬೇಕು ಎಂಬ ನಿರ್ಧಾರದ ಹಿನ್ನೆಲೆಯಲ್ಲಿ ದಂಪತಿ ಆಕೆಯ ಫೋಟೋ ಹಂಚಿಕೊಂಡಿಲ್ಲ.
ಈ ಹಿಂದೆ ದಕ್ಷಿಣ ಆಫ್ರಿಕಾಗೆ ಟೀಮ್ ಇಂಡಿಯಾ ತೆರಳುವ ವೇಳೆ ಕೆಲವೊಂದಿಷ್ಟು ಛಾಯಾಗ್ರಾಹಕರು ವಮಿಕಾ ಫೋಟೋ ತೆಗೆದಾಗಲೂ ಅದನ್ನ ಎಲ್ಲಿಯೂ ಪ್ರಕಟಿಸದಂತೆ ವಿರಾಟ್-ಅನುಷ್ಕಾ ಮನವಿ ಮಾಡಿಕೊಂಡಿದ್ದರು.. ಹೀಗಾಗಿ ಇದುವರೆಗೂ ವಿರಾಟ್ ಹಾಗೂ ಅನುಷ್ಕಾ ಮಗಳು ಹೇಗೆ ಕಾಣುತ್ತಾರೆ ಎಂಬ ಸಣ್ಣ ಸುಳಿವು ಕೂಡಾ ಅಭಿಮಾನಿಗಳಿಗೆ ಇರಲಿಲ್ಲ.. ಆದ್ರೆ ದಕ್ಷಿಣ ಆಫ್ರಿಕಾ ಹಾಗೂ ಭಾರತದ ನಡುವೆ ನಡೆದ ಮೂರನೇ ಏಕದಿನ ಪಂದ್ಯದ ವೇಳೆ ಕೊನೆಗೂ ವಮಿಕಾ ಕೊಯ್ಲಿ ಹೇಗೆ ಕಾಣುತ್ತಾಳೆ ಎಂಬ ಸಣ್ಣ ವಿಡಿಯೋ ವೈರಲ್ ಆಗಿದೆ..
ನಿನ್ನೆ ಭಾರತ ಹಾಗೂ ದಕ್ಷಿಣ ಆಫ್ರಿಕಾ ಏಕದಿನ ಸರಣಿಯ ಮೂರನೇ ಪಂದ್ಯಕ್ಕೆ ಅನುಷ್ಕಾ ಶರ್ಮಾ ಅವರು ಮಗಳು ವಮಿಕಾ ಜತೆ ಬಂದಿದ್ದರು. ಪೆವಿಲಿಯನ್ನಲ್ಲಿ ಮಗಳ ಜತೆ ಕುಳಿತು ಪಂದ್ಯ ವೀಕ್ಷಣೆ ಮಾಡುತ್ತಿದ್ದರು. ಈ ವೇಳೆ ಕ್ಯಾಮೆರಾಮೆನ್ ವಮಿಕಾಳನ್ನು ಸೆರೆ ಹಿಡಿದಿದ್ದಾನೆ. ಕಪ್ಪು ಬಣ್ಣದ ಬಟ್ಟೆ ಧರಿಸಿ ನಿಂತಿದ್ದ ಅನುಷ್ಕಾ ಶರ್ಮಾ ಜೊತೆ ಪಿಂಕ್ ಕಲರ್ ಡ್ರೆಸ್ ನಲ್ಲಿ ವಮಿಕಾ ಕ್ಯಾಮೆರಾ ಕಣ್ಣಿಗೆ ಸೆರೆಯಾಗಿದ್ದಾಳೆ.. ವಮಿಕಾ ವಿಡಿಯೋ ನೋಡುತ್ತಿದ್ದಂತೆ ಥೇಟ್ ವಿರಾಟ್ ಕೊಹ್ಲಿ ಯಂತೆ ವಮಿಕಾ ಮಾಡುತ್ತಿದ್ದಾಳೆ ಎಂದು ಅಭಿಮಾನಿಗಳು ಸಂತಸ ವ್ಯಕ್ತಪಡಿಸಿದ್ದಾರೆ..