ಭಾರತದ ಶ್ರೇಷ್ಠ ಆಟಗಾರ, ಅತೀ ಹೆಚ್ಚು ರೆಕಾರ್ಡ್ಸ್ ಗಳನ್ನು ಹೊಂದಿರುವ ಕ್ರಿಕೆಟಿಗ ಎಂದರೆ ಅದು ಭಾರತದ ಮಾಜಿ ನಾಯಕ ವಿರಾಟ್ ಕೊಹ್ಲಿ! ವಿರಾಟ್ ಕೊಹ್ಲಿ ಅವರ 100ನೇ ಟೆಸ್ಟ್ ಪಂದ್ಯ ಮೊಹಾಲಿಯಲ್ಲಿ ಇದೇ ಮಾರ್ಚ್ 04 ಶುಕ್ರವಾರ ಪ್ರಾರಂಭವಾಗಲಿದ್ದು, ಶ್ರಿಲಂಕಾ ಮತ್ತು ಭಾರತದ ನಡುವೆ ಸಂಭವಿಸಲಿರುವ ಟೆಸ್ಟ್ ಪಂದ್ಯ ಇದಾಗಲಿದೆ. ಈ ಟೆಸ್ಟ್ ಪಂದ್ಯ ವಿರಾಟ್ ಕೊಹ್ಲಿ ಅವರ ವೃತ್ತಿ ಬದುಕಿನ 100ನೇ ಟೆಸ್ಟ್ ಪಂದ್ಯವಾಗಲಿದೆ. ಹೀಗಾಗಿ ವಿರಾಟ್ ಕೊಹ್ಲಿ ಅವರ 100ನೇ ಟೆಸ್ಟ್ ಪಂದ್ಯ ವೀಕ್ಷಿಸಲು ಅವರ ಅಭಿಮಾನಿಗಳು ಬಹಳ ಕಾತುರದಿಂದ ಕಾಯುತ್ತಿದ್ದಾರೆ.
ವಿರಾಟ್ ಕೊಹ್ಲಿ ಅವರ ಈ ಪಂದ್ಯವನ್ನು ಕಣ್ತುಂಬಿಕೊಳ್ಳಲು ಕಾಯುತ್ತಿರುವ ಅಭಿಮಾನಿಗಳನ್ನು ಗಮನದಲ್ಲಿಟ್ಟುಕೊಂಡು ಬಿಸಿಸಿಐ ವೀಕ್ಷಿಸಲು ಅನುಮತಿ ಕೊಟ್ಟಿದೆ. ಆದರೆ ಪೂರ ಸ್ಟೇಡಿಯಂ ಆವರಿಸಿಕೊಳ್ಳಲು ಸಾಧ್ಯವಿಲ್ಲ ಎಂಬುದನ್ನು ತಿಳಿಸಿದೆ. ಈ ವಿಶೇಷ ಪಂದ್ಯಕ್ಕೆ ಪ್ರೇಕ್ಷಕರು ವೀಕ್ಷಿಸಲಿದ್ದಾರೆ. ಆದರೆ ಕೇವಲ 50 ರಷ್ಟು ಪ್ರೇಕ್ಷಕರಿಗೆ ಮಾತ್ರ ಕುಳಿತು ಪಂದ್ಯ ನೋಡಲು ಅವಕಾಶ ಕಲ್ಪಿಸಲಾಗಿದೆ. ಈ ಒಂದು ಪಂದ್ಯ ವಿರಾಟ್ ಕೊಹ್ಲಿ ಅವರ ಅಭಿಮಾನಿಗಳಿಗೆ ಹೆಚ್ಚು ಸಂತಸ ತಂದಿದೆ.
ವಿಶೇಷವಾಗಿ ವಿರಾಟ್ ಕೊಹ್ಲಿ ಅವರ ವೃತ್ತಿ ಬದುಕಿನ 100ನೇ ಟೆಸ್ಟ್ ಪಂದ್ಯ ಇದಾಗಲಿದೆ. ಪಂದ್ಯ ವೀಕ್ಷಣಗೆ ಸಂಪೂರ್ಣ ಪ್ರವೇಶ ಕಲ್ಪಿಸಲು ಅಸಾಧ್ಯ ಎಂದು ಹೇಳಿದ್ದ ಬಿಸಿಸಿಐ ಈಗ 50 ರಷ್ಟು ಅವಕಾಶ ಕಲ್ಪಿಸಿಕೊಡುವ ಮೂಲಕ ಅಭಿಮಾನಿಗಳಿಗೆ ಸಂತಸ ನೀಡಿದೆ ಎಂದು ಹೇಳಬಹುದು.