ಭಾರತೀಯ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ, ಬಾಲಿವುಡ್ ನಟಿ ಅನುಷ್ಕಾ ಶರ್ಮಾ ಅವರ 9 ತಿಂಗಳ ಪುತ್ರಿ ವಮಿಕಾಗೆ ಈಗ ಅತ್ಯಾಚಾರದ ಬೆದರಿಕೆ ಹಾಕಲಾಗಿದೆ ಎಂದು ತಿಳಿದು ಬಂದಿದೆ. ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಅಪಾರವಾದ ಅಭಿಮಾನಿ ಬಳಗವನ್ನು ಹೊಂದಿದ್ದಾರೆ .ಒಂದು ವೇಳೆ ಆಟ ಚೆನ್ನಾಗಿಲ್ಲದಿದ್ಧರೆ , ಆಡದೆ ಸೋತರೆ ತುಂಬಾನೆ ತರಾಟೆಗೆ ತೆಗೆದುಕೊಳ್ಳುವ ಜನರೂ ಕೂಡ ಇದ್ದಾರೆ. ಪಾಕಿಸ್ತಾನದ ವಿರುದ್ಧದ ಆಟ ಸೋತಿದ್ದಕ್ಕೆ ತಂಡವನ್ನು ಬೈಯುವುದರ ಜೊತೆಗೆ , ಅವರ 9 ತಿಂಗಳ ಮಗಳ ಮೇಲೆ ಅತ್ಯಾಚಾರ ಮಾಡುವುದಾಗಿ ಸೋಶಿಯಲ್ ಮೀಡಿಯಾದಲ್ಲಿ ಧಮ್ಕಿ ಹಾಕಲಾಗಿದೆ.
ಈ ರೀತಿ ಬೆದರಿಕೆ ಹಾಕಲು ಕಾರಣವೇನು???
ಭಾರತ ತಂಡ, ಐಸಿಸಿ ಟಿ20 ಕ್ರಿಕೆಟ್ ವಿಶ್ವಕಪ್ ಟೂರ್ನಿಯ ಸೆಮಿಫೈನಲ್ ರೇಸ್ನಿಂದ ಹೊರಬೀಳುವ ಹಂತದ್ಧಲ್ಲಿ ಬಂದು ನಿಂತಿದೆ , ಹಾಗೂ ಪಾಕಿಸ್ತಾನ ಮತ್ತು ನ್ಯೂಜಿಲೆಂಡ್ ತಂಡದ ಎದುರು 10 ಮತ್ತು 8 ವಿಕೆಟ್ಗಳಿಂದ ಸೋತಿದೆ. ಆದ ಕಾರಣ ಕೆಲವರು ವಿರಾಟ್ ಕೊಹ್ಲಿ ದಂಪತಿಯ ಪುತ್ರಿ ಮೇಲೆ ಅತ್ಯಾಚಾರ ಮಾಡುವುದಾಗಿ ಸೋಶಿಯಲ್ ಮೀಡಿಯಾದಲ್ಲಿ ಬೆದರಿಕೆ ಹಾಕಿದ್ದಾರೆ .
ವಿರಾಟ್ ಕೊಹ್ಲಿ ಮಗುವಿಗೆ ಎದುರಾದಂತೆ, ಕಳೆದ ವರ್ಷ ಮಹೇಂದ್ರ ಸಿಂಗ್ ಧೋನಿ ಪುತ್ರಿ ಝಿವಾ ಕೂಡಾ ಈ ರೀತಿ ಅತ್ಯಾಚಾರದ ಬೆದರಿಕೆಯನ್ನು ಎದುರಿಸಿದ್ದಾರೆ. ಮಹೇಂದ್ರ ಸಿಂಗ್ ಧೋನಿ ನೇತೃತ್ವದ ಚೆನ್ನೈ ಸೂಪರ್ ಕಿಂಗ್ಸ್ ತಂಡವು 2020ರ ಐಪಿಎಲ್ ಟೂರ್ನಿಯಲ್ಲಿ ನೀರಸ ಪ್ರದರ್ಶನ ತೋರಿದ್ದರಿಂದ ಲೀಗ್ ಹಂತದಿಂದಲೇ ಹೊರಬಿದ್ದಿತ್ತು. ಇದಾದ ನಂತರ ಧೋನಿ 5 ವರ್ಷದ ಪುತ್ರಿ ಝಿವಾಳನ್ನು ರೇಪ್ ಮಾಡುವುದಾಗಿ ಬೆದರಿಕೆ ಹಾಕಲಾಗಿತ್ತು.