India : ಐಪಿಎಲ್ ಕ್ರಿಕೆಟ್(Virender Sehwag’s shocking answer) ಆವೃತ್ತಿಯ ಅತ್ಯುತ್ತಮ ನಾಯಕ ಯಾರು ಎಂಬ ಪ್ರಶ್ನೆ ಇಂದು ಅಥವಾ ನಿನ್ನೆಯದಲ್ಲ! ಈ ಪ್ರಶ್ನೆ ಹಲವಾರು ವರ್ಷಗಳಿಂದ ಕೇಳಿಬರುತ್ತಿತ್ತು. ಅದರಂತೆಯೇ ಈ ವರ್ಷವು ಈ ಪ್ರಶ್ನೆ ಮುನ್ನೆಲೆಗೆ ಬಂದಿದ್ದೆ ತಡ,
ಭಾರತ ಕ್ರಿಕೆಟ್ ತಂಡದ ಹಿರಿಯ ಆಟಗಾರ ವೀರೇಂದ್ರ ಸೆಹ್ವಾಗ್(Virender Sehwag’s shocking answer) ಅವರು ಶಾಕಿಂಗ್ ಉತ್ತರ ನೀಡಿದ್ದಾರೆ.
ಇಂಡಿಯನ್ ಪ್ರೀಮಿಯರ್ ಲೀಗ್(Indian Premier League) ಅಂದ್ರೆ ಅದೊಂದು ರೋಚಕ ಪಂದ್ಯಾವಳಿ! ಐಪಿಎಲ್ ಬಂದರೆ ಸಾಕು ಕ್ರಿಕೆಟ್(Cricket) ಅಭಿಮಾನಿಗಳಿಗಂತು ಈ ಸಮಯ ಮಹಾಪೂರ ಮನರಂಜನೆ ಫಿಕ್ಸ್ ಎಂದೇ ಹೇಳಬಹುದು.
ಸದ್ಯ ಕ್ರಿಕೆಟ್ ಅಭಿಮಾನಿಗಳು ಸೇರಿದಂತೆ ಕ್ರಿಕೆಟ್ ಇತಿಹಾಸದಲ್ಲಿ ಐಪಿಎಲ್ ತಂಡದ ಅತ್ಯುತ್ತಮ ನಾಯಕ ಯಾರು? ಎಂಬ ಪ್ರಶ್ನೆ ಸಾಕಷ್ಟು ವರ್ಷಗಳಿಂದ ಕೇಳಿಬರುತ್ತಲೇ ಇತ್ತು. ಇದೀಗ ಮತ್ತೊಮ್ಮೆ
ಈ ಪ್ರಶ್ನೆ ಉದ್ಭವಗೊಂಡಿದ್ದು, ಇದಕ್ಕೆ ಭಾರತೀಯ ಕ್ರಿಕೆಟ್ ತಂಡದ ಹಿರಿಯ ಆರಂಭಿಕ, ಸ್ಪೋಟಕ ಬ್ಯಾಟ್ಸ್‌ಮನ್ ವೀರೇಂದ್ರ ಸೆಹ್ವಾಗ್ ಅವರು ಅಶ್ಚರ್ಯಕರ ರೀತಿಯಲ್ಲಿ ಉತ್ತರ ನೀಡಿದ್ದಾರೆ.
ಸೆಹ್ವಾಗ್ ಅವರ ಉತ್ತರ ಹೀಗಿದೆ. ಐಪಿಎಲ್ ಇತಿಹಾಸದಲ್ಲಿ ಎಂ.ಎಸ್. ಧೋನಿ(Mahendra Singh Dhoni) ಮತ್ತು ರೋಹಿತ್ ಶರ್ಮಾ(Rohit Sharma) ನಡುವೆ ಯಾರು ಉತ್ತಮ ನಾಯಕರಾಗಿದ್ದಾರೆ.
ಮುಂಬೈ ಇಂಡಿಯನ್ಸ್ ತಂಡದ ನಾಯಕ ರೋಹಿತ್ ಶರ್ಮಾ ಮತ್ತು ಚೆನೈ ಸೂಪರ್ ಕಿಂಗ್ಸ್(Chennai Super Kings) ತಂಡದ ನಾಯಕ ಮಹೇಂದ್ರ ಸಿಂಗ್ ಧೋನಿ ಇಬ್ಬರು ಐಪಿಎಲ್ ಇತಿಹಾಸದಲ್ಲಿ ಹೆಚ್ಚು ಅಲಂಕರಿಸಲ್ಪಟ್ಟ ನಾಯಕರಾಗಿದ್ದಾರೆ.
15 ಸೀಸನ್‌ಗಳಲ್ಲಿ ಇಬ್ಬರೂ ಒಟ್ಟಿಗೆ ಸರಾಸರಿ ಐಪಿಎಲ್ ಟ್ರೋಫಿಗಳನ್ನು ಗೆದ್ದಿದ್ದಾರೆ. ಅವುಗಳಲ್ಲಿ ನಾಲ್ಕು ಧೋನಿಗೆ ಸೇರಿದ್ದು, ಅವರು ಚೆನ್ನೈ ಸೂಪರ್ ಕಿಂಗ್ಸ್ ಅನ್ನು ಎಲ್ಲಾ ಸಂದರ್ಭಗಳಲ್ಲಿ ಟ್ರೋಫಿ ವೈಭವಕ್ಕೆ ಮುನ್ನಡೆಸಿದ್ದಾರೆ.
ಆದರೆ ರೋಹಿತ್ ಮುಂಬೈ ಇಂಡಿಯನ್ಸ್‌ನ (Mumbai Indians)ನಾಯಕನಾಗಿ ಐದು ಬಾರಿ ಟ್ರೋಫಿಯನ್ನು ಗೆದ್ದಿದ್ದಾರೆ. ಸ್ಟಾರ್ ಸ್ಪೋರ್ಟ್ಸ್ (Star Sports)ಆಯೋಜಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಕ್ರಿಕೆಟಿಗ
ವೀರೇಂದ್ರ ಸೆಹ್ವಾಗ್, ಧೋನಿಗಿಂತಲೂ ಮೊದಲು ರೋಹಿತ್ ಅವರನ್ನು ಅತ್ಯುತ್ತಮ ಐಪಿಎಲ್ ನಾಯಕ ಎಂದು ಆಯ್ಕೆ ಮಾಡಿದರು! ಆದರೆ ಅದಕ್ಕೆ ಅಚ್ಚರಿ ಪಡುವಂತೆ ವಿವರಣೆಯನ್ನು ಕೂಡ ನೀಡಿದರು. ರೋಹಿತ್ ಶರ್ಮಾ
ಅವರ ಪ್ರಯಾಣವು ಮುಂಬೈ ಇಂಡಿಯನ್ಸ್ ತಂಡದೊಂದಿಗೆ ಪ್ರಾರಂಭವಾಯಿತು.
ಸಂಖ್ಯೆಗಳೇ ನಿಮಗೆ ಎಲ್ಲವನ್ನೂ ಹೇಳುತ್ತವೆ. ನೋಡಿ, ಎಂ.ಎಸ್ ಧೋನಿ ಭಾರತ ತಂಡದ ನಾಯಕತ್ವದ ಅನುಭವವನ್ನು ಹೊಂದಿದ್ದರು ಮತ್ತು ನಂತರ ಅವರು ಚೆನ್ನೈ ಸೂಪರ್ ಕಿಂಗ್ಸ್ ತಂಡದ ನಾಯಕರಾದರು. ರೋಹಿತ್
ಶರ್ಮಾ ಅವರ ಮೊದಲ ನಾಯಕತ್ವದ ಅವಧಿಯು ಮುಂಬೈ ಇಂಡಿಯನ್ಸ್‌ನಲ್ಲಿತ್ತು ಮತ್ತು ಅಲ್ಲಿಂದ ಅವರ ಯಶಸ್ಸಿನ ಪ್ರಯಾಣ ಪ್ರಾರಂಭವಾಯಿತು. ಆದ್ದರಿಂದ, ಅದಕ್ಕಾಗಿಯೇ ಅವರು ಹೆಚ್ಚಿನ ಗೌರವಕ್ಕೆ ಅರ್ಹರಾಗಿದ್ದಾರೆ.
ಸೌರವ್ ಗಂಗೂಲಿ ಅವರಂತೆಯೇ, ಅವರು ಭಾರತ ತಂಡದ ನಾಯಕರಾದರು ಮತ್ತು ಹೊಸ, ವಿಭಿನ್ನ ವಿಷಯಗಳನ್ನು ಪ್ರಯತ್ನಿಸಿದರು. ಅವರು ವಿಶ್ವಕಪ್‌ನ(World cup) ಎರಡು ಫೈನಲ್‌ಗಳನ್ನು ಆಡಿದ್ದು, ಅವರ
ನಾಯಕತ್ವದಲ್ಲಿ ಭಾರತವು ನಂಬರ್ ಒನ್ ಏಕದಿನ ತಂಡವಾಯಿತು. ಹಾಗಾಗಿ ನನ್ನ ಆಯ್ಕೆ ರೋಹಿತ್ ಶರ್ಮಾ! ಎಂದು ಸೆಹ್ವಾಗ್ ಹೇಳಿದ್ದಾರೆ.
ಇದನ್ನೂ ಓದಿ: ಎಸ್.ಎಸ್ ರಾಜಮೌಳಿ : ಧರ್ಮವು ಮೂಲಭೂತವಾಗಿ ಒಂದು ರೀತಿಯ ಶೋಷಣೆಯಾಗಿದೆ ; ರಾಜಮೌಳಿ ಹೇಳಿಕೆಯನ್ನು ಬೆಂಬಲಿಸಿದ ನಟಿ ಕಂಗನಾ!