ಸಾಹಿತಿ ದೇವನೂರು ಮಹದೇವ ಅವರು ಬರೆದಿರುವ “ಆರ್ ಎಸ್ ಎಸ್ : ಆಳ ಮತ್ತು ಅಗಲ” ಪುಸ್ತಕ ಶುದ್ಧ ಮಣ್ಣಂಗಟ್ಟೆ ಎಂದು ಹಿರಿಯ ಪತ್ರಕರ್ತ ವಿಶ್ವೇಶ್ವರ್ ಭಟ್(Vishweshwar Bhat comics on devanoor mahadeva) ಅಭಿಪ್ರಾಯಪಟ್ಟಿದ್ದಾರೆ.
ಈ ಕುರಿತು ತಮ್ಮ ಫೇಸ್ಬುಕ್ ಮುಖಪುಟದಲ್ಲಿ ಬರೆದುಕೊಂಡಿರುವ ಅವರು, ದೇವನೂರು ಮಹಾದೇವ ಅವರು ಬರೆದ ‘ಆರ್ ಎಸ್ ಎಸ್ : ಆಳ ಮತ್ತು ಅಗಲ’ ಎಂಬ ಕೃತಿಯನ್ನು ಓದಿದೆ(Vishweshwar Bhat comics on devanoor mahadeva).
ಅಪಾರ ಬೇಡಿಕೆಯಲ್ಲಿರುವ, ಎಲ್ಲೂ ಸಿಗದ ಪುಸ್ತಕ ಎಂಬ ಸುದ್ದಿ ಹಬ್ಬಿಸಿದ್ದರಿಂದ, ಪುಸ್ತಕದ ಅಂಗಡಿಗೆ ಹೋಗಿ, ಹುಡುಕಿ ತಂದು ಓದಿದೆ. ಅದು ಶುದ್ಧ ಮಣ್ಣಂಗಟ್ಟೆ. ಈ ಪುಸ್ತಕವನ್ನು ಓದದಿದ್ದರೇ ಒಳ್ಳೆಯದಿತ್ತು.
ದೇವನೂರು ಮಹಾದೇವರ ಬಗ್ಗೆ ಇದ್ದ ಗೌರವ ಹಾಗೇ ಇರುತ್ತಿತ್ತು ಎಂದು ಲೇವಡಿ ಮಾಡಿದ್ದಾರೆ.
ಇನ್ನೊಂದೆಡೆ ಸಾಹಿತಿ ರೆಹಮತ್ ತರೀಕೆರೆ ಇದೇ ಪುಸ್ತಕದ ಕುರಿತು ಫೇಸ್ಬುಕ್ನಲ್ಲಿ ಬರೆದುಕೊಂಡಿದ್ದು, ದೇವನೂರರ ಪುಸ್ತಕವನ್ನು ಒಂದೇ ಗುಕ್ಕಿನಲ್ಲಿ ಓದಿದೆ.
ಬಳಿಕ, ಇದು ಯಾಕೆ ಹೀಗೆ ಬಿರುಗಾಳಿಯಂತೆ ಮಾರಾಟವಾಗುತ್ತಿದೆ ಮತ್ತು ಓದುಗೊಳ್ಳುತ್ತಿದೆ? ಗೆಳೆಯರೊಬ್ಬರು ಹೇಳಿದಂತೆ ಚಳುವಳಿಯ ರೂಪಧಾರಣೆ ಮಾಡುತ್ತಿದೆ ಎಂದು ಆಲೋಚಿಸಿದೆ.
ತಕ್ಷಣಕ್ಕೆ ಹೊಳೆದ ಕಾರಣಗಳೆಂದರೆ : ಸಂಘ ಪರಿವಾರದ ಕೋರ್ ಚಿಂತನೆಗಳನ್ನು ಆಯ್ದು ಸಂಗ್ರಹಿಸಿರುವುದು, ಅವನ್ನು ನಮ್ಮ ಉರಿವ ಸಮಕಾಲೀನ ಬದುಕಿನ ವಿವಿಧ ಅವಸ್ಥೆಗಳಿಗೆ ಲಗತ್ತಿಸಿ ವಿಶ್ಲೇಷಿಸಿರುವುದು.