Manipur: ಕುಕಿ ಪ್ರಾಬಲ್ಯದ ಚುರಾಚಂದ್‌ಪುರ (Churachandpura) ಮತ್ತು ಮೈತಿ ಪ್ರಾಬಲ್ಯದ ಬಿಷ್ಣುಪುರ್ (violence again in manipur) ಜಿಲ್ಲೆಗಳ ಗಡಿಯಲ್ಲಿ ಭುಗಿಲೆದ್ದಿರುವ ಹಿಂಸಾಚಾರದಲ್ಲಿ
ಖ್ಯಾತ ಆದಿವಾಸಿ ಗೀತ ರಚನೆಗಾರ- ಸಂಗೀತ ಸಂಯೋಜಕ ಸೇರಿದಂತೆ ಆರು ಮಂದಿ ಬಲಿಯಾಗಿದ್ದಾರೆ. ಈ ಘಟನೆಯಲ್ಲಿ 14 ಜನ ಗಾಯಗೊಂಡಿದ್ದು, ಮಣಿಪುರದಲ್ಲಿ ಹಿಂಸಾಚಾರ ಮತ್ತೆ ಮುಂದುವರೆದಿದೆ.

ಎಲ್.ಎಸ್.ಮಂಗ್ಬೋಯ್ ಲುಂಗ್ಡಿಮ್ (LS Mangboi Lungdim) (42) ಎಂಬ ಗೀತರಚನೆಕಾರರು ಆದಿವಾಸಿ ಗೀತೆ “ಐ ಗಾಮ್ ಹಿಲೋ ಹಮ್” ರಚಿಸಿದ್ದರು ಇವರು ಈ ಗುಂಡಿನ ದಾಳಿ,
ಸ್ಫೋಟಗಳು ಮತ್ತು ನಿರಂತರ ಶೆಲ್ಲಿಂಗ್ನಿಂದ ಮೃತಪಟ್ಟಿದ್ದಾರೆ. ಈ ಮೂಲಕ ಸ್ವಲ್ಪ ಸಮಯದ ಮಟ್ಟಿಗೆ ಶಾಂತಿಯುತವಾಗಿದ್ದ ರಾಜ್ಯದಲ್ಲಿ ಮತ್ತೆ ರಕ್ತಪಾತ ಶುರುವಾಗಿದೆ.
ಮಂಗ್ಬೋಯ್ ಲುಂಗ್ಡಿಮ್ ಅವರು ಮೋರ್ಟರ್ (Morter) ದಾಳಿಯಲ್ಲಿ ತೀವ್ರವಾಗಿ ಗಾಯಗೊಂಡಿದ್ದು, ಅವರನ್ನು ಮಿಜೋರಾಂ ರಾಜಧಾನಿ ಐಜ್ವಾಲ್‌ಗೆ (Ijwaal) ಚಿಕಿತ್ಸೆಗಾಗಿ ಕರೆ ತರುತ್ತಿದ್ದಾಗ
ಗುರುವಾರ ಮಧ್ಯರಾತ್ರಿ ಸುಮಾರು 1 ಗಂಟೆಯ ವೇಳೆಗೆ ಅವರು ಕೊನೆಯುಸಿರೆಳೆದಿದ್ದಾರೆ. ಕೊಯಿರೆಂಗ್ಟೆಕ್ (Koyirengtek) – ನರನ್ ಸೇನಿಯಾ ಪ್ರದೇಶದಲ್ಲಿ ನಡೆದ ಶೆಲ್ಲಿಂಗ್ ದಾಳಿಯಲ್ಲಿ
ಗಾಯಗೊಂಡಿದ್ದ ರಿಚರ್ಡ್ ಹೆಮ್ ಕೊಲನ್ ಗಯಟೆ (Richard Hem Kolan Gayate) (31) ಬೆಳಿಗ್ಗೆ 9 ಗಂಟೆಯ ವೇಳೆಗೆ ಐಜ್ವಾಲ್ ಮೂಲಕ ಗುವಾಹತಿಗೆ ಕರೆದೊಯ್ಯುತ್ತಿದ್ದ ವೇಳೆ ಮೃತಪಟ್ಟರು.
ಸಂಸದ ಸ್ಥಾನದಿಂದ ಪ್ರಜ್ವಲ್ ರೇವಣ್ಣ ಅನರ್ಹ : ಹೈಕೋರ್ಟ್ ಮಹತ್ವದ ಆದೇಶ
ಗ್ರಾಮ ಸ್ವಯಂಸೇವಕರಿಬ್ಬರು ಗಡಿಯ ಪಕ್ಕ ನಡೆದ ಗುಂಡಿನ ದಾಳಿಯಲ್ಲಿ ಸಾವಿಗೀಡಾಗಿದ್ದು, ಚುರಚಂದನಪುರದ ಕೌಸಂಬಂಗ್ ಎಂಬಲ್ಲಿ ನಡೆದ ಶೆಲ್ಲಿಂಗ್ ದಾಳಿಯಲ್ಲಿ ಎಂಟು ಜನರು ಗಾಯಗೊಂಡಿದ್ದಾರೆ.
ಇನ್ನು ಬಿಷ್ಣುಪುರದ ತಮ್ನಪೋಕ್ಪಿ ಮತ್ತು ನರನ್ ಸೇನಿಯಾ ಎಂಬಲ್ಲಿ ಎರಡು ಗುಂಪುಗಳ ನಡುವೆ ನಡೆದ ಗುಂಡಿನ ಚಕಮಕಿಯಲ್ಲಿ ಪೆಬಮ್ ದೇಬನ್ ಮತ್ತು ಮೊಯಿರಂಗಥೆಮ್ ರೊಪೆನ್ ಎಂಬ
ಇಬ್ಬರು ಪ್ರಾಣ (violence again in manipur) ಕಳೆದುಕೊಂಡಿದ್ದಾರೆ.

ಮೇ 3ರಿಂದ ಬಿಜೆಪಿ (BJP) ಆಡಳಿತವಿರುವ ಮಣಿಪುರದಲ್ಲಿ ಹಿಂಸಾತ್ಮಕ ಕೃತ್ಯಗಳು ನಡೆಯುತ್ತಲೇ ಇವೆ. ಇಲ್ಲಿಯವರೆಗೆ ಒಟ್ಟು 190ಕ್ಕಿಂತ ಹೆಚ್ಚು ಜನರು ಮಣಿಪುರ ಹಿಂಸಾಚಾರದಲ್ಲಿ ಸಾವಿಗೀಡಾಗಿದ್ದಾರೆ.
ಮಂಗಳವಾರ ಬಿಷ್ಣುಪುರ್ ಜಿಲ್ಲೆಯ ನರಸೇನಾ ಪಕ್ಕದ ಹಳ್ಳಿಗಳಲ್ಲಿ ಗುಂಡಿನ ದಾಳಿ ನಡೆದಿದ್ದು, ಪರಿಹಾರ ಶಿಬಿರದಲ್ಲಿ ತಂಗಿದ್ದ ಕುಕಿ ಗ್ರಾಮ ರಕ್ಷಣಾ ಸ್ವಯಂಸೇವಕನು ಈ ಬಾಂಬ್ ಸ್ಫೋಟದ ನಂತರ
ಸಾವನ್ನಪ್ಪಿದ್ದಾನೆ.
ಮೃತ ವ್ಯಕ್ತಿಯನ್ನು 30 ವರ್ಷದ ಜಂಗ್ಮಿನ್ಲುನ್ ಗಂಗ್ಟೆ ಎಂದು ಗುರುತಿಸಲಾಗಿದೆ ಎಂದು ಸ್ಥಳೀಯ ಬುಡಕಟ್ಟು ನಾಯಕರ ವೇದಿಕೆ ತಿಳಿಸಿದ್ದು, ಇನ್ನೋರ್ವ ವ್ಯಕ್ತಿಯನ್ನು ಲೈಬುಜಮ್ ಇನಾವೋ ಎಂದು
ಗುರುತಿಸಲಾಗಿದೆ. ಅವರಿಗೆ ಬುಲೆಟ್ (Bullet) ತಗುಲಿದ್ದರಿಂದ ಗಾಯಗೊಂಡು ಇಂಫಾಲ್ (Impal) ಆಸ್ಪತ್ರೆ ಗೆ ಸೇರಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಅವರು ಸಾವನ್ನಪ್ಪಿದರೆ
ಎಂದು ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ.
ರಾಜ್ಯದಲ್ಲಿ ಕನಿಷ್ಠ 60,000 ಜನರು ಹಿಂಸಾಚಾರ ಪ್ರಾರಂಭವಾದಾಗಿನಿಂದ ಸ್ಥಳಾಂತರಗೊಂಡಿದ್ದಾರೆ. ಮಹಿಳೆಯರ ವಿರುದ್ಧದ ಅತ್ಯಾಚಾರ ಮತ್ತು ಲೈಂಗಿಕ ದೌರ್ಜನ್ಯದ ಪ್ರಕರಣಗಳು ವರದಿಯಾಗಿದ್ದು,
ಕೇಂದ್ರ ಭದ್ರತಾ ಪಡೆಗಳಿದ್ದರೂ ಜನಸಮೂಹವು ಪೊಲೀಸ್ ಶಸ್ತ್ರಾಸ್ತ್ರಗಳನ್ನು ಲೂಟಿ ಮಾಡಿದೆ. ಇನ್ನು ಹಲವಾರು ಮನೆಗಳಿಗೆ ಬೆಂಕಿ ಬಿದ್ದಿದೆ.
ಭವ್ಯಶ್ರೀ ಆರ್.ಜೆ