Bangladesh: ದಿನದಿಂದ ದಿನಕ್ಕೆ ಬಾಂಗ್ಲಾದೇಶದಲ್ಲಿ (Bangladesh) ಪರಿಸ್ಥಿತಿ ಬಿಗಡಾಯಿಸುತ್ತಿದೆ .ಪ್ರಧಾನಿ ಶೇಖ್ ಹಸೀನಾ (Sheikh Hasina) ಅವರು ಸೋಮವಾರ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿ ದೇಶವನ್ನು ತೊರೆದ ನಂತರ ದೇಶದಲ್ಲಿ ಹಿಂಸಾಚಾರ ಮತ್ತು ಅವ್ಯವಸ್ಥೆ ಮುಂದುವರೆದಿದೆ. ಪ್ರತಿಭಟನಾಕಾರರು ಬಾಂಗ್ಲಾದೇಶ ಕ್ರಿಕೆಟ್ (Cricket) ತಂಡದ ಮಾಜಿ ನಾಯಕ (Former Captain) ಮಶ್ರಫೆ ಬಿನ್ ಮೊರ್ತಜಾ (Mashrafe Bin Mortaza) ಅವರ ಮನೆಗೆ ಬೆಂಕಿ ಹಚ್ಚಿದ್ದಾರೆ .
ಮೊರ್ತಜಾ, ನಾಯಕನಾಗಿ 117 ಪಂದ್ಯಗಳಲ್ಲಿ ಬಾಂಗ್ಲಾದೇಶವನ್ನು ಮುನ್ನಡೆಸಿದ್ದಾರೆ. ಅವರು ತಮ್ಮ ಸುದೀರ್ಘ ಕ್ರಿಕೆಟ್ ಜೀವನದಲ್ಲಿ 36 ಟೆಸ್ಟ್, 220 ODI ಮತ್ತು 54 ಟಿ20 ಪಂದ್ಯಗಳನ್ನ ಆಡಿದ್ದು. ಒಟ್ಟು 390 ವಿಕೆಟ್ಗಳನ್ನು ಪಡೆದ್ರೆ, 2,955 ರನ್ ಗಳಿಸಿದ್ದಾರೆ.
ಈ ಹಿಂದೆ ಮೊರ್ತಾಜಾ (Morthajha) ಅವರು ಖುಲ್ನಾ ವಿಭಾಗದ ನರೈಲ್-2 ಕ್ಷೇತ್ರದ ಸಂಸದರಾಗಿದ್ದಾರೆ. ಈ ವರ್ಷದ ಆರಂಭದಲ್ಲಿ ಬಾಂಗ್ಲಾದೇಶದಲ್ಲಿ ನಡೆದ ಸಾರ್ವತ್ರಿಕ ಚುನಾವಣೆಗಳಲ್ಲಿ ಅವಾಮಿ ಲೀಗ್ ಅಭ್ಯರ್ಥಿಯಾಗಿ ಸತತ ಎರಡನೇ ಬಾರಿಗೆ ಗೆದ್ದಿದ್ದಾರೆ .2018ರಲ್ಲಿ ಹಸೀನಾ ನೇತೃತ್ವದ ಅವಾಮಿ ಲೀಗ್ಗೆ ಸೇರುವ ಮೂಲಕ ರಾಜಕೀಯ ಪ್ರವೇಶಿಸಿದ್ದ ಮೊರ್ತಜಾ ನರೈಲ್ -2 ಕ್ಷೇತ್ರದಿಂದ ಸಂಸದರಾಗಿ ಆಯ್ಕೆಯಾದರು.
ಪ್ರತಿಭಟನಾಕಾರರು ಜಿಲ್ಲಾ ಅವಾಮಿ ಲೀಗ್ ಕಚೇರಿಗೆ ಬೆಂಕಿ ಹಚ್ಚಿ, ಅದರ ಅಧ್ಯಕ್ಷ ಸುಭಾಷ್ ಚಂದ್ರ ಬೋಸ್ (Subash Chandra Bose) ಅವರ ಮನೆಯನ್ನು ಧ್ವಂಸಗೊಳಿಸಿದರು ಎಂದು ಬಾಂಗ್ಲಾದೇಶದ ಪ್ರಮುಖ ದಿನಪತ್ರಿಕೆ ವರದಿ ಮಾಡಿದೆ.
ಮೀಸಲಾತಿ ಸಂಬಂಧ ಕಳೆದ ತಿಂಗಳು ಆರಂಭವಾದ ಈ ಪ್ರತಿಭಟನೆಗಳು ವಿವಾದಾತ್ಮಕವಾಗಿ ಹೊರ ಹೊಮ್ಮಿದೆ. 1971 ರಲ್ಲಿ ಪಾಕಿಸ್ತಾನದ ವಿರುದ್ಧ ಬಾಂಗ್ಲಾದೇಶದ ವಿಮೋಚನಾ ಯುದ್ಧದಲ್ಲಿ ಹೋರಾಡಿದವರ ಕುಟುಂಬಗಳಿಗೆ ಸರ್ಕಾರಿ ಉದ್ಯೋಗಗಳಲ್ಲಿ 30 ಪ್ರತಿಶತ ಮೀಸಲಾತಿಯನ್ನು ಒದಗಿಸುವ ಕೋಟಾ ವ್ಯವಸ್ಥೆಯನ್ನು ಕೊನೆಗೊಳಿಸಬೇಕೆಂಬ ಬೇಡಿಕೆಯೊಂದಿಗೆ ಪ್ರಾರಂಭವಾದ ಪ್ರತಿಭಟನೆಗಳು ನಂತರ ಸರ್ಕಾರದ ವಿರೋಧಿ ಪ್ರತಿಭಟನೆಯಾಗಿ ಮಾರ್ಪಟ್ಟವೆ.ಕಳೆದ ಎರಡು ದಿನಗಳಲ್ಲಿ ಸರ್ಕಾರದ ವಿರುದ್ಧದ ಪ್ರತಿಭಟನೆಯಲ್ಲಿ 100ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ.