Breaking News
ತಿರುಪತಿ ಸರ್ಕಾರಿ ಆಸ್ಪತ್ರೆ ದುರಂತ: ಮೃತರ ಕುಟುಂಬಕ್ಕೆ ಪರಿಹಾರ ಘೋಷಿಸಿದ ಸಿಎಂಇಂದಿರಾ ಕ್ಯಾಂಟೀನ್‌ಗಳಲ್ಲಿ ಉಚಿತ ಆಹಾರ ನೀಡಿ: ರಾಜ್ಯ ಸರ್ಕಾರಕ್ಕೆ ಹೈಕೋರ್ಟ್‌ ಆದೇಶಕೊರೊನಾ ಹಿನ್ನೆಲೆ: ತೆಲಂಗಾಣದಲ್ಲಿ ಮೇ 12ರಿಂದ ಹತ್ತು ದಿನಗಳ ಕಾಲ ಲಾಕ್ ಡೌನ್ಬೇರೆ ರಾಜ್ಯಗಳಿಗೆ ಆಕ್ಸಿಜನ್ ನೀಡಲು ಆಗಲ್ಲ: ಪ್ರಧಾನಿಗೆ ಕೇರಳ ಸಿಎಂ ಪತ್ರಭಾರತಕ್ಕೆ ಗವಿ ಮೈತ್ರಿಕೂಟದಿಂದ ಸಬ್ಸಿಡಿ ರೂಪದಲ್ಲಿ 2.5 ಕೋಟಿ ಡೋಸ್ ಲಸಿಕೆಯ ನೆರವುವಿದೇಶಕ್ಕೆ ಲಸಿಕೆ ಕಳುಹಿಸಲು ಅನುಮತಿ ಕೇಳಿದ ಸೆರಮ್​; ದೇಶದಲ್ಲೇ ಕೊರತೆ ಇದೆ, ರಫ್ತು ಸಾಧ್ಯವಿಲ್ಲ ಎಂದ ಭಾರತ ಸರ್ಕಾರಮಹಿಳೆಯರೇ, ಮುಟ್ಟಿನ ದಿನಗಳಲ್ಲಿ ಇವುಗಳಿಂದ ದೂರವಿರುವುದು ಉತ್ತಮಕೇರಳ ರಾಜಕೀಯದ ಕ್ರಾಂತಿಕಾರಿ ನಾಯಕಿ ಕೆ. ಆರ್.ಗೌರಿಯಮ್ಮ ನಿಧನಆಘಾತಕಾರಿ ವಿಷಯ; ಲಸಿಕೆ ಹಂಚಿಕೆಯ 14 ರಾಜ್ಯಗಳ ಪಟ್ಟಿಯಲ್ಲಿ ಕರ್ನಾಟಕದ ಹೆಸರೇ ಇಲ್ಲಕಳೆದ ೨೪ಗಂಟೆಯಲ್ಲಿ 3,29,942 ಹೊಸ ಪ್ರಕರಣಗಳು ಪತ್ತೆ: 3,876 ಮಂದಿ ಸಾವು

ಕ್ರೀಡೆ

ಕೋವಿಡ್‌ ಲಸಿಕೆ ಮೊದಲ ಡೋಸ್‌ ಪಡೆದ ಕ್ರಿಕೆಟಿಗ ಶಿಖರ್‌ ಧವನ್: ಆರೋಗ್ಯ ಕಾರ್ಯಕರ್ತರಿಗೆ ಧನ್ಯವಾದ ತಿಳಿಸಿದ ಗಬ್ಬರ್

ಲಸಿಕೆ ಪಡೆಯುತ್ತಿರುವ ಫೋಟೊವನ್ನು ತಮ್ಮ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿರುವ ಅವರು, ʻಕೋವಿಡ್‌ ಸಾಂಕ್ರಾಮಿಕ ಉಲ್ಬಣಿಸುತ್ತಿರುವ ಈ ಹಂತದಲ್ಲಿ ಅದನ್ನು ಮಣಿಸಲು ಮುಂಚೂಣಿಯಲ್ಲಿರುವ ಆರೋಗ್ಯ ಕಾರ್ಯಕರ್ತರಿಗೆ ಧನ್ಯವಾದʼ ಎಂದು ಪೋಸ್ಟ್‌ ಮಾಡಿದ್ದಾರೆ.

ಕೊರೊನಾ ಹೊಡೆತಕ್ಕೆ ಕೊಚ್ಚಿಹೋದ ಕ್ರಿಕೆಟ್‌ ಅಬ್ಬರ: ಐಪಿಎಲ್‌ 14ನೇ ಆವೃತ್ತಿ ರದ್ದುಗೊಳಿಸಿ ಬಿಸಿಸಿಐ ಅಧಿಕೃತ ಆದೇಶ

ಕಳೆದೊಂದು ತಿಂಗಳಿಂದ ನಡೆಯುತ್ತಿದ್ದ ಐಪಿಎಲ್‌ 14ನೇ ಆವೃತ್ತಿಗೆ ಕೊರೊನಾ ಸಂಕಷ್ಟ ಎದುರಾಗಿದ್ದು, ಪ್ರಸಕ್ತ ಸೀಸನ್‌ನಲ್ಲಿ ಪಾಲ್ಗೊಂಡಿದ್ದ ಹಲವು ಆಟಗಾರರು ಮಹಾಮಾರಿಗೆ ತುತ್ತಾಗಿರುವುದು ಎಲ್ಲಾ ಫ್ರಾಂಚೈಸಿಗಳಲ್ಲಿ ಆತಂಕ ಮೂಡಿಸಿತ್ತು.

ಐಪಿಎಲ್ 2021: ಕೆ.ಎಲ್. ರಾಹುಲ್‌ಗೆ ಹೊಟ್ಟೆನೋವು, ಶಸ್ತ್ರ ಚಿಕಿತ್ಸೆ

ಶನಿವಾರ ರಾತ್ರಿ ರಾಹುಲ್‌ಗೆ ಹೊಟ್ಟೆ ನೋವು ಕಾಣಿಸಿದ್ದು, ಅವರನ್ನು ವೈದ್ಯಕೀಯ ತಪಾಸಣೆಗೆ ಒಳಪಡಿಸಿದಾಗ ಚಿಕಿತ್ಸೆಗೆ ಸ್ಪಂದಿಸಿಲ್ಲ. ತುರ್ತು ನಿಗಾ ಘಟಕದಲ್ಲಿ ಪರೀಕ್ಷಿಸಿದಾಗ ರಾಹುಲ್‌ ಅವರಿಗೆ ಕರುಳು ಸಂಬಂಧಿ ಕಾಯಿಲೆ (ಅಪೆಂಡಿಸೈಟಿಸ್‌) ಇರುವುದು ತಿಳಿದುಬಂದ ಹಿನ್ನೆಲೆಯಲ್ಲಿ ಶಸ್ತ್ರ ಚಿಕಿತ್ಸೆ ಅಗತ್ಯವಿದೆ ಎಂದು ವೈದ್ಯರು ತಿಳಿಸಿದ್ದಾರೆ.

ಐಪಿಎಲ್‌ 2021: ಕೆಕೆಆರ್‌ ತಂಡದ ಇಬ್ಬರು ಆಟಗಾರರಿಗೆ ಕೊರೊನಾ ಪಾಸಿಟಿವ್‌: ಇಂದು ನಡೆಯಬೇಕಿದ್ದ ಆರ್‌ಸಿಬಿ-ಕೆಕೆಆರ್‌ ಪಂದ್ಯ ಮುಂದೂಡಿಕೆ

ಕೊಲ್ಕತ್ತಾ ನೈಟ್‌ ರೈಡರ್ಸ್‌ ತಂಡದ ಮಿಸ್ಟ್ರೀ ಸ್ಪಿನ್ನರ್‌ ವರುಣ್‌ ಚಕ್ರವರ್ತಿ ಹಾಗೂ ಬೌಲರ್‌ ಸಂದೀಪ್‌ ವಾರಿಯರ್‌ ಅವರಿಗೆ ಕೊರೊನಾ ಸೋಂಕು ದೃಢಪಟ್ಟಿದೆ. ಇದು ತಂಡದ ಸಹ ಆಟಗಾರರು ಹಾಗೂ ವ್ಯವಸ್ಥಾಪನ ಮಂಡಳಿಯಲ್ಲಿ ದೊಡ್ಡ ಆತಂಕ ಸೃಷ್ಟಿಸಿದೆ.

ಕೋವಿಡ್ ಸಂಕಷ್ಟ: ಕ್ರಿಕೆಟ್ ದೇವರು ಸಚಿನ್ ಸೇರಿದಂತೆ ಹಲವರಿಂದ ಆರ್ಥಿಕ ನೆರವು

ಇತ್ತೀಚೆಗಷ್ಟೇ ಆಸ್ಟ್ರೇಲಿಯಾ ತಂಡದ ಮಾಜಿ ವೇಗಿ ಬ್ರೆಟ್ ಲೀ ಪ್ರಧಾನಮಂತ್ರಿ ಪರಿಹಾರ ನಿಧಿಗೆ 40 ಲಕ್ಷ ರೂಪಾಯಿ ದೇಣಿಗೆ ನೀಡಿದ್ದರು. ಇವರಿಗೂ ಮುನ್ನ ಕೆಕೆಆರ್ ತಂಡದ ಆಲ್ರೌಂಡರ್,
ಆಸ್ಟ್ರೇಲಿಯಾದ ಪ್ಯಾಟ್ ಕಮ್ಮಿನ್ಸ್ ಆಕ್ಸಿಜನ್ ಸಿಲಿಂಡರ್ ಖರೀದಿಸಲು 37 ಲಕ್ಷ ರೂಪಾಯಿ ದೇಣಿಗೆ ನೀಡಿದ್ದಾರೆ.

ಐಪಿಎಲ್ 2021: ಪಡಿಕಲ್ ಚೊಚ್ಚಲ ಶತಕ, ಕೋಹ್ಲಿ ಅದ್ಭುತ ಆಟ: ಬೆಂಗಳೂರಿಗೆ ರಾಯಲ್ ಗೆಲುವು

ವಾಂಖೆಡೆ ಕ್ರೀಡಾಂಗಣದಲ್ಲಿ ಗುರುವಾರ ನಡೆದ ಪಂದ್ಯದಲ್ಲಿ ಬ್ಯಾಟಿಂಗ್‌ ಹಾಗೂ ಬೌಲಿಂಗ್‌ನಲ್ಲಿ ಅದ್ಭುತ ಪ್ರದರ್ಶನ ನೀಡಿದ ಆರ್‌ಸಿಬಿ, ಟೂರ್ನಿಯಲ್ಲಿ ತನ್ನ ಗೆಲುವಿನ ನಾಗಾಲೋಟ ಮುಂದುವರಿಸಿದೆ. ಪಂದ್ಯದಲ್ಲಿ ಟಾಸ್‌ ಸೋತು ಮೊದಲು ಬ್ಯಾಟಿಂಗ್‌ ನಡೆಸಿದ ರಾಜಸ್ಥಾನ್‌ ರಾಯಲ್ಸ್‌, ಆರಂಭಿಕ ಬ್ಯಾಟ್ಸಮನ್‌ಗಳ ವೈಫಲ್ಯದ ನಡುವೆಯೂ 20 ಓವರ್‌ನಲ್ಲಿ 9 ವಿಕೆಟ್‌ ನಷ್ಟಕ್ಕೆ 177 ರನ್‌ ಕಲೆಹಾಕಿತು.

ಐಪಿಎಲ್‌: ಮತ್ತೆ ಮುಗ್ಗರಿಸಿದ ಪಂಜಾಬ್‌: ಗೆಲುವಿನ ಖಾತೆ ತೆರೆದ ಸನ್‌ರೈಸರ್ಸ್‌ ಹೈದ್ರಾಬಾದ್

ಟಾಸ್‌ ಗೆದ್ದು ಬ್ಯಾಟಿಂಗ್‌ ಆಯ್ಕೆ ಮಾಡಿಕೊಂಡ ಪಂಜಾಬ್‌, ಬ್ಯಾಟ್ಸಮನ್‌ಗಳ ನೀರಸ ಪ್ರದರ್ಶನದಿಂದ 19.4 ಓವರ್‌ಗಳಲ್ಲಿ 120 ರನ್‌ಗಳಿಸಿ ಆಲೌಟ್‌ ಆಯಿತು. ಈ ಸವಾಲು ಬೆನ್ನತ್ತಿದ ಹೈದ್ರಾಬಾದ್‌, ಆರಂಭಿಕರಾದ ಜಾನಿ ಬೈರ್ಸ್ಟೋವ್‌ 63(56) ಹಾಗೂ 37(37) ಹಾಗೂ ವಿಲಿಯಂಸನ್‌ 16(19) ಅವರುಗಳ ಜವಾಬ್ದಾರಿಯುತ ಬ್ಯಾಟಿಂಗ್‌ನಿಂದ 18.4 ಓವರ್‌ಗಳಲ್ಲಿ 1 ವಿಕೆಟ್‌ ಕಳೆದುಕೊಂಡು 121 ರನ್‌ಗಳಿಸುವ ಮೂಲಕ 9 ವಿಕೆಟ್‌ಗಳ ಭರ್ಜರಿ ಗೆಲುವು ಸಾಧಿಸಿತು.

ಐಪಿಎಲ್‌ ಕದನ: ರೋಚಕ ಹೋರಾಟದಲ್ಲಿ ರಾಯಲ್‌ ಗೆಲುವು ಕಂಡ ರಾಜಸ್ಥಾನ

ವಾಂಖೆಡೆ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಟಾಸ್‌ ಸೋತು ಮೊದಲು ಬ್ಯಾಟಿಂಗ್ ಮಾಡಿದ ಡೆಲ್ಲಿ ಕ್ಯಾಪಿಟಲ್ಸ್‌, ಬ್ಯಾಟ್ಸಮನ್‌ಗಳ ವೈಫಲ್ಯದ ನಡುವೆಯೂ ನಾಯಕ ರಿಷಬ್‌ ಪಂತ್‌ ಅವರ ಜವಾಬ್ದಾರಿಯುತ ಬ್ಯಾಟಿಂಗ್‌ ನೆರವಿನೊಂದಿಗೆ 20 ಓವರ್‌ಗಳಲ್ಲಿ 8 ವಿಕೆಟ್‌ ನಷ್ಟಕ್ಕೆ 147 ರನ್‌ಗಳಿಸಿತು.

ಶಹಬಾಸ್‌ ಅಹ್ಮದ್‌ ಸ್ಪಿನ್‌ ಕಮಾಲ್‌: ಹೈದ್ರಾಬಾದ್‌ ವಿರುದ್ಧ ಬೆಂಗಳೂರು ತಂಡಕ್ಕೆ ರೋಚಕ ಜಯ

ಇಲ್ಲಿನ ಚೆಪಾಕ್‌ ಕ್ರೀಡಾಂಗಣದಲ್ಲಿ ನಡೆದ ಹೈವೋಲ್ಟೇಜ್‌ ಪಂದ್ಯದಲ್ಲಿ ಟಾಸ್‌ ಸೋತು ಮೊದಲು ಬ್ಯಾಟಿಂಗ್‌ ಮಾಡುವ ಅವಕಾಶ ಪಡೆದ ಬೆಂಗಳೂರು, 20 ಓವರ್‌ಗಳಲ್ಲಿ 8 ವಿಕೆಟ್‌ ನಷ್ಟಕ್ಕೆ 149 ರನ್‌ಗಳ ಪೈಪೋಟಿಯುತ ಮೊತ್ತ ದಾಖಲಿಸಿತು.

ಐಪಿಎಲ್‌ 2021: ಇಂದು ಬೆಂಗಳೂರು – ಹೈದ್ರಾಬಾದ್‌ ಫೈಟ್‌

ಸೀಸನ್‌ನ ಉದ್ಘಾಟನಾ ಪಂದ್ಯದಲ್ಲೇ ಬಲಿಷ್ಠ ಮುಂಬೈ ವಿರುದ್ಧ ವಿರೋಚಿತ ಗೆಲುವು ಸಾಧಿಸಿರುವ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು, ಗೆಲುವಿನ ಉತ್ಸಾಹದೊಂದಿಗೆ ಇಂದಿನ ಪಂದ್ಯಕ್ಕೆ ಸಜ್ಜಾಗಿದ್ದರೆ. ಮತ್ತೊಂದೆಡೆ ಕೋಲ್ಕತ್ತಾ ನೈಟ್‌ ರೈಡರ್ಸ್‌ ವಿರುದ್ಧದ ಪಂದ್ಯದಲ್ಲಿ ಸೋಲಿನ ಆಘಾತ ಅನುಭವಿಸಿರುವ ಹೈದ್ರಾಬಾದ್‌, ಇಂದಿನ ಪಂದ್ಯದಲ್ಲಿ ಗೆದ್ದು, ಜಯದ ಹಾದಿ ಕಂಡುಕೊಳ್ಳುವ ಲೆಕ್ಕಾಚಾರದಲ್ಲಿದೆ.

Submit Your Article