Breaking News
ಬಂದೂಕು ಹಿಡಿದು ಸೆಲ್ಫಿಗೆ ಪೋಸ್: ಆಕಸ್ಮಿಕವಾಗಿ ಗುಂಡು ಹಾರಿ ನವವಿವಾಹಿತೆ ಸಾವುಎದೆಹಾಲು ನೀಡುವ ತಾಯಂದಿರು ಈ ಆಹಾರಗಳಿಂದ ದೂರವಿರಿಜುಲೈ 27ರಿಂದ ಭಾರತ ಪ್ರವಾಸ ಆರಂಭಿಸಲಿರುವ ಅಮೆರಿಕದ ರಕ್ಷಣಾ ಕಾರ್ಯದರ್ಶಿ ಆ್ಯಂಟನಿ ಬ್ಲಿಂಕೆನ್ಎಲ್‌ಪಿಜಿ ಸಿಲಿಂಡರ್‌ ಸ್ಪೋಟ; ಏಳು ಮಂದಿ ಸಾವುಅಂಬೇಡ್ಕರ್ ಅಂತ್ಯಸಂಸ್ಕಾರ ಮಾಡಲು ಕಾಂಗ್ರೆಸ್ ಜಾಗ ಕೊಡಲಿಲ್ಲ: ನಳಿನ್ ಕುಮಾರ್‌ ಕಟೀಲ್ ಟೀಕೆಮಳೆಗಾಲದಲ್ಲಿ ಹೆಚ್ಚಾಗಿ ಕಾಡುವ ಹೊಟ್ಟೆಯ ನೋವು ತಡೆಯುವುದು ಹೇಗೆ?ನುಗ್ಗೆ ಸೊಪ್ಪಿನಲ್ಲಿದೆ ಕೂದಲಿನ ಸಮಸ್ಯೆ ನಿವಾರಿಸುವ ಶಕ್ತಿವಿಯೆಟ್ನಾಂ: ಹನೊಯಿನಲ್ಲಿ 15 ದಿನಗಳ ಲಾಕ್‌ಡೌನ್‌ಕಳೆದ ೨೪ಗಂಟೆಯಲ್ಲಿ 39,097 ಹೊಸ ಕೊರೊನಾ ಪ್ರಕರಣಗಳು, 546 ಸಾವುಜು.25ರಿಂದ ರಾಜ್ಯಾದ್ಯಂತ ದೇವಾಲಯಗಳಲ್ಲಿ ಪೂಜಾದಿ ಸೇವೆ & ಪ್ರಸಾದಿ ವಿತರಣೆಗೆ ಅವಕಾಶ: ಸಚಿವ ಕೋಟಾ ಶ್ರೀನಿವಾಸ ಪೂಜಾರಿ

ಪ್ರಮುಖ ಸುದ್ದಿ

ಬಂದೂಕು ಹಿಡಿದು ಸೆಲ್ಫಿಗೆ ಪೋಸ್: ಆಕಸ್ಮಿಕವಾಗಿ ಗುಂಡು ಹಾರಿ ನವವಿವಾಹಿತೆ ಸಾವು

ಮೃತಯುವತಿ ರಾಧಿಕಾ ಗುಪ್ತಾ (26) ತನ್ನ ಮಾವನ ಸಿಂಗಲ್‌‌ ಬ್ಯಾರೆಲ್‌ ಬಂದೂಕಿನ ಜೊತೆ ಸೆಲ್ಫಿ ಕ್ಲಿಕ್ಕಿಸುವಲ್ಲಿ ತೊಡಗಿದ್ದಳು. ಆದರೆ ಸೆಲ್ಫಿಗೆ ಪೋಸ್‌ ನೀಡುವ ವೇಳೆ ಬಂದೂಕಿನಲ್ಲಿ ಗುಂಡು ತುಂಬಿರುವುದು ಆಕೆಗೆ ತಿಳಿದಿರಲಿಲ್ಲ. ಹೀಗಾಗಿ ಅವರು ಬಂದೂಕಿನ ನಳಿಕೆಯನ್ನು ಎಳೆದಿದ್ದು, ಈ ಸಂದರ್ಭ ಗುಂಡು ಅವರ ಕುತ್ತಿಗೆಯನ್ನು ಹೊಕ್ಕಿದೆ.

ಜುಲೈ 27ರಿಂದ ಭಾರತ ಪ್ರವಾಸ ಆರಂಭಿಸಲಿರುವ ಅಮೆರಿಕದ ರಕ್ಷಣಾ ಕಾರ್ಯದರ್ಶಿ ಆ್ಯಂಟನಿ ಬ್ಲಿಂಕೆನ್

ಭಾರತಕ್ಕೆ ಇದು ಬ್ಲಿಂಕೆನ್‌ ಅವರ ಮೊದಲ ಭೇಟಿಯಾಗಿದೆ. ಈ ಪ್ರವಾಸದ ಸಮಯದಲ್ಲಿ ಅವರು ಪ್ರಧಾನಿ ನರೇಂದ್ರ ಮೋದಿ, ವಿದೇಶಾಂಗ ಸಚಿವ ಎಸ್‌.ಜೈಶಂಕರ್‌ ಹಾಗೂ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್‌ ಡೋಭಾಲ್ ಅವರೊಂದಿಗೆ ಮಾತುಕತೆ ನಡೆಸಲಿದ್ದಾರೆ.

ಎಲ್‌ಪಿಜಿ ಸಿಲಿಂಡರ್‌ ಸ್ಪೋಟ; ಏಳು ಮಂದಿ ಸಾವು

ಕಾರ್ಖಾನೆಯೊಂದರ ಕೆಲವು ಕಾರ್ಮಿಕರು ಮತ್ತು ಅವರ ಕುಟುಂಬದವರು ಸಣ್ಣ ಕೊಠಡಿಯೊಂದರಲ್ಲಿ ಮಲಗಿದ್ದರು. ಈ ವೇಳೆ ಎಲ್‌ಪಿಜಿ ಸಿಲಿಂಡರ್‌ನಿಂದ ಅನಿಲ ಸೋರಿಕೆಯಾಗಿದೆ. ಈ ಬಗ್ಗೆ ಎಚ್ಚರಿಕೆ ನೀಡಲು ನೆರೆ ಮನೆಯವರು ಬಾಗಿಲು ತಟ್ಟಿದ್ಧಾರೆ.

ಅಂಬೇಡ್ಕರ್ ಅಂತ್ಯಸಂಸ್ಕಾರ ಮಾಡಲು ಕಾಂಗ್ರೆಸ್ ಜಾಗ ಕೊಡಲಿಲ್ಲ: ನಳಿನ್ ಕುಮಾರ್‌ ಕಟೀಲ್ ಟೀಕೆ

ಸಂವಿಧಾನ ಶಿಲ್ಪಿ ಅಂಬೇಡ್ಕರ್ ಅವರಿಗೆ ಅತೀ ಹೆಚ್ಚು ಅವಮಾನ ಮಾಡಿದ್ದೇ ಕಾಂಗ್ರೆಸ್. ಮೊದಲ ಸಚಿವ ಸಂಪುಟದಲ್ಲಿಯೇ ಅಂಬೇಡ್ಕರ್ ನೋವಿನಿಂದ ಹೊರ ಬರುವಂತೆ ಮಾಡಿದರು. ಲೋಕಸಭೆ ಚುನಾವಣೆಗೆ ಅಂಬೇಡ್ಕರ್ ನಿಂತಾಗ ಕಾಂಗ್ರೆಸ್ ಅವರನ್ನು ಸೋಲಿಸಿತು ಎಂದು ಅಸಮಾಧಾನ ವ್ಯಕ್ತಪಡಿಸಿದ ಅವರು, ಅಂಬೇಡ್ಕರ್ ಅಂತ್ಯಸಂಸ್ಕಾರ ಮಾಡಲು ಕಾಂಗ್ರೆಸ್ ಜಾಗ ಕೊಡಲಿಲ್ಲ. ಅವರಿಗೆ ಭಾರತರತ್ನವನ್ನು ಕೊಡಲಿಲ್ಲ.

ವಿಯೆಟ್ನಾಂ: ಹನೊಯಿನಲ್ಲಿ 15 ದಿನಗಳ ಲಾಕ್‌ಡೌನ್‌

ಈ ವಾರದ ಆರಂಭದಲ್ಲಿ ಎಲ್ಲಾ ಹೊರಾಂಗಣ ಚಟುವಟಿಕೆಗಳು ಮತ್ತು ಅಗತ್ಯವಲ್ಲದ ಸೇವೆಗಳ ಸ್ಥಗಿತಕ್ಕೆ ಸೂಚಿಸಲಾಗಿತ್ತು. ಶುಕ್ರವಾರ ಹನೊಯಿಯಲ್ಲಿ ಕೋವಿಡ್‌ನ 70 ಹೊಸ ಪ್ರಕರಣಗಳು ವರದಿಯಾಗಿವೆ. ಇದರೊಂದಿಗೆ ವಿಯೆಟ್ನಾಂನಲ್ಲಿ ಕಳೆದ 24 ಗಂಟೆಗಳಲ್ಲಿ 7,295 ಹೊಸ ಪ್ರಕರಣಗಳು ಪತ್ತೆಯಾದಂತಾಗಿದೆ.

ಕಳೆದ ೨೪ಗಂಟೆಯಲ್ಲಿ 39,097 ಹೊಸ ಕೊರೊನಾ ಪ್ರಕರಣಗಳು, 546 ಸಾವು

ಕೋವಿಡ್‌ ಪ್ರಕರಣಗಳ ಸಂಖ್ಯೆ 3,13,32,159ಕ್ಕೆ ಏರಿಕೆಯಾಗಿದ್ದು, ಈ ಪೈಕಿ 3,05,03,166 ಮಂದಿ ಗುಣಮುಖರಾಗಿದ್ದಾರೆ. ಪ್ರಸ್ತುತ ಚೇತರಿಕೆ ಪ್ರಮಾಣ ಶೇ.97.35 ಮತ್ತು ಸಕ್ರಿಯ ಪ್ರಕರಣಗಳ ಪ್ರಮಾಣ ಶೇ.1.31ರಷ್ಟಿದೆ. ಸತತ 33 ದಿನಗಳಿಂದ ಕೋವಿಡ್‌ ದೃಢ ಪ್ರಮಾಣವು ಶೇ.3ಕ್ಕಿಂತ ಕಡಿಮೆ ದಾಖಲಾಗಿರುವುದು ಕೇಂದ್ರ ಆರೋಗ್ಯ ಸಚಿವಾಲಯದ ಪ್ರಕಟಣೆಯಿಂದ ತಿಳಿದು ಬಂದಿದೆ.

ತಮಿಳುನಾಡಿನ ಖಾಸಗಿ ಆಸ್ಪತ್ರೆಗಳಲ್ಲಿ ಉಚಿತ ಲಸಿಕೆ; ಸಿಎಸ್ಆರ್ ನಿಧಿ ಬಳಕೆಗೆ ಅವಕಾಶ

ಖಾಸಗಿ ಆಸ್ಪತ್ರೆಗಳ ಕೋಟಾದಡಿ ಹಂಚಿಕೆಯಾಗಿರುವ ಲಸಿಕೆಗಳನ್ನು ಕಾರ್ಪೋರೇಟ್‌ ಮತ್ತು ಖಾಸಗಿ ಸಂಸ್ಥೆಗಳು ತಮ್ಮ ಸಾಮಾಜಿಕ ಜವಾಬ್ದಾರಿ ನಿಧಿಯಡಿ (ಸಿಎಸ್‌ಆರ್‌) ಖರೀದಿಸಿ, ಅವುಗಳನ್ನು ಜನರಿಗೆ ಉಚಿತವಾಗಿ ವಿತರಿಸುವಂತೆ ತಮಿಳುನಾಡು ಸರ್ಕಾರ ಕೋರಿದೆ.

ಜು.25ರಿಂದ ರಾಜ್ಯಾದ್ಯಂತ ದೇವಾಲಯಗಳಲ್ಲಿ ಪೂಜಾದಿ ಸೇವೆ & ಪ್ರಸಾದಿ ವಿತರಣೆಗೆ ಅವಕಾಶ: ಸಚಿವ ಕೋಟಾ ಶ್ರೀನಿವಾಸ ಪೂಜಾರಿ

ಕೊರೊನಾ ಹಿನ್ನೆಲೆಯಲ್ಲಿ ಈ ಹಿಂದೆ ದೇವಸ್ಥಾನಗಳಲ್ಲಿ ಕೇವಲ ದೇವರ ದರ್ಶನಕ್ಕೆ ಮಾತ್ರವೇ ಭಕ್ತರಿಗೆ ಅವಕಾಶ ನೀಡಿದ್ದರ ಪರಿಣಾಮ ಇತರೆ ಸೇವೆಗಳು, ಪ್ರಸಾದ ವಿನಿಯೋಗಕ್ಕೆ ಅವಕಾಶ ಇರಲಿಲ್ಲ. ಆದರೆ ಇದೀಗ ಈ ಆದೇಶವನ್ನು ಹಿಂಪಡೆದಿರುವ ಸರ್ಕಾರ, ಜು.25ರಿಂದ ಪ್ರಸಾದ, ಸೇವೆಗಳನ್ನು ಆರಂಭಿಸಲು ಸಮ್ಮತಿ ನೀಡಿದೆ.

ಒಲಿಂಪಿಕ್ಸ್ ನಲ್ಲಿ ಭಾರತಕ್ಕೆ ಮೊದಲ ಪದಕ: ವೇಟ್ಲಫ್ಟಿಂಗ್​ನಲ್ಲಿ ಬೆಳ್ಳಿ ಪದಕ ಮುಡಿಗೇರಿಸಿಕೊಂಡ ಮೀರಾ ಬಾಯಿ ಚಾನು

ಮೊದಲ ಪ್ರಯತ್ನದಲ್ಲೇ ಮೀರಾಬಾಯಿ ಚಾನು ಅವರು ಸ್ನ್ಯಾಚ್‌ ವಿಭಾಗದಲ್ಲಿ 84 ಕೆ.ಜಿ ಭಾರವನ್ನು ಲೀಲಾಜಾಲವಾಗಿ ಎತ್ತುವಲ್ಲಿ ಯಶಸ್ವಿಯಾದರು. ಇದಾದ ಬಳಿಕ 87 ಕೆ.ಜಿ. ವೇಟ್‌ ಲಿಫ್ಟ್‌ ಮಾಡುವ ಸ್ಯಾಚ್‌ ಲಿಫ್ಟ್‌ ವಿಭಾಗದಲ್ಲಿ ಎರಡನೇ ಸ್ಥಾನ ಪಡೆದರು. ಇನ್ನು ಚೀನಾದ ಹ್ಯೂ ಜಿಹೈ 94 ಕೆ.ಜಿ ವೇಟ್‌ಲಿಫ್ಟ್‌ ಮಾಡುವ ಮೂಲಕ ಒಲಿಂಪಿಕ್ಸ್ ದಾಖಲೆ ಬರೆದಿದ್ದಾರೆ.

ರಾಜ್ಯದಲ್ಲಿಡೆ ಪ್ರವಾಹ ಭೀತಿ ಹಿನ್ನೆಲೆ: ವಿಡಿಯೋ ಸಂವಾದ ಮೂಲಕ ಪರಿಸ್ಥಿತಿ ಅವಲೋಕಿಸಿದ ಯಡಿಯೂರಪ್ಪ

ಅತಿವೃಷ್ಟಿ ಪೀಡಿತ ಜಿಲ್ಲೆಗಳ ಜಿಲ್ಲಾ ಉಸ್ತುವಾರಿ ಸಚಿವರುಗಳು ಉಸ್ತುವಾರಿ ಜಿಲ್ಲೆಯಲ್ಲಿಯೇ ಉಳಿದು ಜನರ ಸಂಕಷ್ಟಗಳಿಗೆ ನೆರವಾಗಬೇಕು. ಅಧಿಕಾರಿಗಳು ಯಾವುದೇ ಕಾರಣಕ್ಕೂ ರಜೆ ಹಾಕಬಾರದು ಹಾಗೂ ಕೇಂದ್ರ ಸ್ಥಳವನ್ನು ಬಿಟ್ಟು ಹೋಗಬಾರದು. ಜನ ಸಮಸ್ಯೆಗಳಿಗೆ ದಿನದ 24 ಗಂಟೆ ಸ್ಪಂದಿಸಬೇಕು ಎಂದು ನಿರ್ದೇಶನ ನೀಡಿದರು.

Submit Your Article