Breaking News
ಒಂದು ದೇಶ, ಒಂದು ಪಕ್ಷ ಎಂದು ಹೇಳುವ ಬಿಜೆಪಿ ಲಸಿಕೆಗೆ ಒಂದೇ ಬೆಲೆ ಇಟ್ಟಿಲ್ಲ ಯಾಕೆ: ಮಮತಾ ಬ್ಯಾನರ್ಜಿ‘ಇನ್ನೆರಡು ತಾಸುಗಳಷ್ಟೇ..ಆಮೇಲೆ ಆಕ್ಸಿಜನ್​ ಇರೋದಿಲ್ಲ, ರೋಗಿಗಳು ಸಾಯ್ತಾರೆ..’ ಕಣ್ಣೀರಿಟ್ಟ ಆಸ್ಪತ್ರೆ ಸಿಇಒಶಾಸಕ ಜಮೀರ್ ಅಹ್ಮದ್, ಮಧು ಬಂಗಾರಪ್ಪಗೆ ಕೊರೊನಾ ಪಾಸಿಟಿವ್: ನಿನ್ನೆಯಷ್ಟೇ ಸಿದ್ದರಾಮಯ್ಯ ಭೇಟಿಯಾಗಿದ್ದ ಜಮೀರ್ಕೊರೊನಾ ನಿರ್ವಹಣೆ ವಿಚಾರವನ್ನು ಸ್ವಯಂಪ್ರೇರಿತವಾಗಿ ಕೈಗೆತ್ತಿಕೊಂಡ ಸುಪ್ರೀಂಕೋರ್ಟ್ಮೇ 1ರಿಂದ 18 ವರ್ಷ ಮೇಲ್ಪಟ್ಟವರು ಲಸಿಕೆ ಪಡೆಯಲು ನೋಂದಾವಣೆ ಮಾಡಿಕೊಳ್ಳುವ ವಿಧಾನ ಇಲ್ಲಿದೆರೆಮ್‌ಡಿಸಿವಿರ್‌ ವೈಜ್ಞಾನಿಕವಾಗಿ ಲೈಫ್ ಸೇವಿಂಗ್ ಡ್ರಗ್ ಅಲ್ಲ: ಸಚಿವ ಸುಧಾಕರ್ಭಾರತಕ್ಕೆ ಬಂದಿಳಿದ 5ನೇ ಬ್ಯಾಚ್​​ನ ರಫೇಲ್​​ ಯುದ್ಧ ವಿಮಾನಗಳುಮುಖ್ಯಮಂತ್ರಿ ಯಡಿಯೂರಪ್ಪ ಆಸ್ಪತ್ರೆಯಿಂದ ಡಿಸ್ಚಾರ್ಜ್ಪ್ರಚಾರಗಳನ್ನ ಬಿಟ್ಟು ಜನರ ರಕ್ಷಣೆ ಜತೆಗೆ ಜನರ ವಿಶ್ವಾಸ ಗೆಲ್ಲುವ ಕೆಲಸ ಮಾಡಿ: ಬಿಜೆಪಿಗೆ ಕುಮಾರಸ್ವಾಮಿ ಚಾಟಿನೀವು ಖುಷಿಯಾಗಿ ಸಮಯ ಹಾಳು ಮಾಡಿ, ಜನ ಮಾತ್ರ ಸಾಯ್ತಾ ಇರ್ಲಿ: ಕೇಂದ್ರ ಸರ್ಕಾರಕ್ಕೆ ದೆಹಲಿ ಹೈಕೋರ್ಟ್​ ತರಾಟೆ

ಪ್ರಮುಖ ಸುದ್ದಿ

ನುಂಗುವ ಔಷಧದ ರೂಪದಲ್ಲಿ ರೆಮ್​ಡೆಸಿವಿರ್​: ಔಷಧ ನಿಯಂತ್ರಕರ ಅನುಮತಿಗೆ ಅರ್ಜಿ

ಅಮೆರಿಕದ ಎಫ್​ಡಿಎ (Food and Drug Administration – FDA) ಸಂಪೂರ್ಣ ಅನುಮೋದನೆ ನೀಡಿರುವ ಮೊದಲ ಮತ್ತು ಏಕೈಕ ಔಷಧ ರೆಮ್​ಡೆಸಿವಿರ್. ರೆಮ್​ಡಿಸಿವಿರ್​ನ ಈ ಹೊಸ ರೂಪಕ್ಕೆ ಅನುಮೋದನೆ ದೊರೆತರೆ ಇಂಜೆಕ್ಷನ್​ ಪೂರೈಕೆಗಾಗಿ ಫಾರ್ಮಾ ಕಂಪನಿಗಳ ಮೇಲಿರುವ ಒತ್ತಡವೂ ತುಸು ಕಡಿಮೆಯಾಗುತ್ತದೆ.

ಕೊರೋನಾ ಕರ್ತವ್ಯದ ನಡುವೆ ಮೃತಪಟ್ಟ ಆರೋಗ್ಯ ಕಾರ್ಯಕರ್ತರಿಗೆ ಇನ್ಸುರೆನ್ಸ್ ಸೌಲಭ್ಯವಿಲ್ಲ: ಕೇಂದ್ರ ಸರ್ಕಾರ

ಕೋವಿಡ್ 19 ಸಂದರ್ಭದಲ್ಲಿ ಜೀವದ ಹಂಗು ತೊರೆದು ಕೆಲಸ ನಿರ್ವಹಿಸುವ ಆರೋಗ್ಯ ಸಿಬ್ಬಂದಿಗೆ ಏನಾದರೂ ಆಗಿ ಜೀವ ಹೋದರೆ, ಅವರ ಕುಟುಂಬಗಳು ಅನಾಥವಾಗದಂತೆ ತಡೆಯಲು ಈ ವಿಮಾ ಯೋಜನೆ ಜಾರಿಗೆ ತರಲಾಗಿತ್ತು.

ಕೊರೊನಾ ಪರಿಸ್ಥಿತಿ ಎದುರಿಸಲು ರಾಜ್ಯ ಸರ್ಕಾರ ಏನು ಮಾಡಿದೆ ಎಂಬ ಬಗ್ಗೆ ಶ್ವೇತಪತ್ರ ಹೊರಡಿಸಲಿ: ಸಿದ್ದರಾಮಯ್ಯ

ಕೊರೊನಾ ಎರಡನೇ ಅಲೆ ಮಾರಣಾಂತಿಕವಾಗುತ್ತಿದ್ದು, ಸೋಂಕು ಹರಡುವುದನ್ನು ತಡೆಯಲಿಕ್ಕಾಗದ ರಾಜ್ಯ ಸರ್ಕಾರ ಜನತೆಯ ಮುಂದೆ ಬೆತ್ತಲಾಗುತ್ತಿದೆ. ತನ್ನ ವೈಫಲ್ಯವನ್ನು ಮುಚ್ಚಿಕೊಳ್ಳುವ ವಿಫಲ ಪ್ರಯತ್ನದಲ್ಲಿ ತೊಡಗಿದೆ.

ಲಾಕ್‌ಡೌನ್‌ ನಿರ್ಧಾರ ತಳ್ಳಿ ಹಾಕಿದ ಸಚಿವ ಮಾಧುಸ್ವಾಮಿ

ಚಾಮರಾಜನಗರ ಜಿಲ್ಲೆಯ ಮಲೆ ಮಹದೇಶ್ವರ ಬೆಟ್ಟದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೊರೊನಾ ಹಿನ್ನೆಲೆ ನೈಟ್ ಕರ್ಫ್ಯೂ ಮಾಡಬೇಕು ಎಂಬ ಚರ್ಚೆ ಇತ್ತು. ಅಲ್ಲದೇ ನಮ್ಮ ನಿರೀಕ್ಷೆ ಮೀರಿ ಬೆಂಗಳೂರಿನಲ್ಲಿ ಎಫೆಕ್ಟ್ ಆಗ್ತಿದೆ. ಜೀವನ, ಜೀವ ಎರಡೂ ನೋಡಬೇಕಿದೆ.

ಕಾಲುವೆಗೆ ಬಿದ್ದ ವಾಹನ; ಭೀಕರ ಅಪಘಾತದಲ್ಲಿ 13 ಮಂದಿ ಸಾವು

ಕಳಿಂಗ ಪ್ರಾಂತ್ಯದ ಟಬೂಕ್ ಸಿಟಿಯ ಬರಂಗೇ ಬುಲೋ ಎಂಬಲ್ಲಿ ಈ ಭೀಕರ ಅಪಘಾತ ಆಗಿದೆ. 11 ಜನರು ಸ್ಥಳದಲ್ಲೇ ಮೃತಪಟ್ಟಿದ್ದರು. ಇನ್ನಿಬ್ಬರು ಆಸ್ಪತ್ರೆಗೆ ಕರೆದೊಯ್ಯುವ ಮಾರ್ಗಮಧ್ಯದಲ್ಲಿ ಸಾವನ್ನಪ್ಪಿದ್ದಾರೆ.

ದೆಹಲಿಯಲ್ಲಿ ಇಂದಿನಿಂದ ಒಂದು ವಾರಗಳ ಕಾಲ ಸಂಪೂರ್ಣ ಲಾಕ್ ಡೌನ್ ಜಾರಿ

ಭಾನುವಾರ ದೆಹಲಿಯಲ್ಲಿ 25,462 ಹೊಸ ಪ್ರಕರಣಗಳು ವರದಿ ಆಗಿದ್ದು, ಇಲ್ಲಿ ಪಾಸಿಟಿವಿಟಿ ದರ ಶೇ 30 ರಷ್ಟಿದೆ. ಕೊರೊನಾ ಸೋಂಕು ನಿಯಂತ್ರಣಕ್ಕಾಗಿ ರಾಜ್ಯ ರಾಜಧಾನಿಯಲ್ಲಿ ‘ಬ್ರೇಕ್ ದಿ ಚೈನ್ ಅಭಿಯಾನ’ ನಡೆಸಿ ವಾರಾಂತ್ಯ ಕರ್ಫ್ಯೂ ಘೋಷಿಸಿದ್ದರೂ ಜನರು ನಿಯಮಗಳ ಉಲ್ಲಂಘನೆ ಮಾಡುತ್ತಲೇ ಇದ್ದಾರೆ.

ದೇಶಾದ್ಯಂತ ಮತ್ತೆ ಲಾಕ್​ಡೌನ್ ಇಲ್ಲ: ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್

ಕೊರೊನಾ ಮತ್ತೆ ಹೆಚ್ಚುತ್ತಿರುವ ಬೆನ್ನಲ್ಲೇ ನಿರ್ಮಲಾ ಸೀತಾರಾಮನ್​ ಅವರು, ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ದಿಮೆಗಳ (FISME) ಅಧ್ಯಕ್ಷ ಅನಿಮೇಶ್​ ಸಕ್ಸೇನಾರೊಂದಿಗೆ ಮಾತುಕತೆ ನಡೆಸಿದ್ದಾರೆ. ರಾಷ್ಟ್ರಾದ್ಯಂತ ಮತ್ತೆ ಲಾಕ್​ಡೌನ್ ಜಾರಿ ಮಾಡುವ ಯೋಜನೆ ಇಲ್ಲ ಎಂದು ಉದ್ಯಮ ಕ್ಷೇತ್ರಕ್ಕೆ ಭರವಸೆ ನೀಡಿದ್ದಾರೆ.

ಕೊರೊನಾ ಕಂಟಕ: ಸರ್ವಪಕ್ಷ ಸಭೆ ಬಳಿಕ ಟಫ್ ರೂಲ್ಸ್ ಜಾರಿ

ಬೆಂಗಳೂರಿನಲ್ಲಿ ಸೋಮವಾರ ಮಾಧ್ಯಮಗಳೊ‌ಂದಿಗೆ ಮಾತನಾಡಿದ ಸಚಿವ ಸುಧಾಕರ್, ಕೊರೊನಾ ನಿಯಂತ್ರಣ ಸಂಬಂಧ ಚರ್ಚಿಸಲು ಸರ್ವಪಕ್ಷ ಸಭೆ ಕರೆಯಲಾಗಿದೆ. ಸಿಎಂ ವಿಡಿಯೋ ಕಾನ್ಫರೆನ್ಸ್ ಮೂಲಕ ಭಾಗಿಯಾಗಲಿದ್ದಾರೆ. ಎಲ್ಲರ ಅಭಿಪ್ರಾಯ ಸಂಗ್ರಹಿಸಿ ಟಫ್ ರೂಲ್ಸ್ ಜಾರಿ ಮಾಡಲಾಗುತ್ತದೆ ಎಂದರು.

ಬಿಹಾರದ ಮಾಜಿ ಸಚಿವ, ಜೆಡಿಯು ಶಾಸಕ ಮೇವಾಲಾಲ್ ಚೌಧರಿ ಕೊರೊನಾಗೆ ಬಲಿ

ಕಳೆದ ವಾರ ಕೊರೊನಾ ಪರೀಕ್ಷೆಯನ್ನು ಮಾಡಿಸಿಕೊಂಡಿದ್ದ ಮೇವಾಲಾಲ್ ಚೌಧರಿಗೆ ಸೋಂಕು ಇರುವುದು ದೃಢಪಟ್ಟಿತ್ತು. ಪುಣೆಯ ಪಾರಸ್ ಆಸ್ಪತ್ರೆಯಲ್ಲಿ ಚಿಕಿತ್ಸೆಯನ್ನು ಪಡೆಯುತ್ತಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಇಂದು ಬೆಳಿಗ್ಗೆ ಸುಮಾರು 4 ಗಂಟೆ ಹೊತ್ತಿಗೆ ಮೃತಪಟ್ಟಿದ್ದಾರೆ.

ಕಳಚಿತು ಕನ್ನಡ ಸಾರಸ್ವತ ಲೋಕದ ಮತ್ತೊಂದು ಕೊಂಡಿ: ನಿಘಂಟು ತಜ್ಞ, ಪ್ರೊ.ಜಿ. ವೆಂಕಟಸುಬ್ಬಯ್ಯ ನಿಧನ

ಶತಾಯುಷಿ ವೆಂಕಟಸುಬ್ಬಯ್ಯ ಅವರು ಮೂತ್ರನಾಳದ ಸಮಸ್ಯೆ ಸೇರಿದಂತೆ ವಯೋಸಹಜ ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿದ್ದರು. ಹೀಗಾಗಿ ಅವರನ್ನು ಕಳೆದ 8 ದಿನಗಳಿಂದ ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು.

Submit Your Article