English English Kannada Kannada

ಕವರ್‌ ಸ್ಟೋರಿ

ಅಂಗನವಾಡಿ ಆಹಾರ ರಹಸ್ಯ ಬಯಲು ! ಆಹಾರ ಸುರಕ್ಷತಾ ಸರ್ಟಿಫಿಕೇಟ್‌ ಇಲ್ಲದೆಯೇ ಮಕ್ಕಳ ಆಹಾರ ತಯಾರಿಕೆ. ವಿಜಯಟೈಮ್ಸ್‌ ರಿಯಾಲಿಟಿ ಚೆಕ್‌ನಲ್ಲಿ ಬಯಲಾಯ್ತು ಆಹಾರ ಸೀಕ್ರೆಟ್ಸ್.

ಹಾಸನ ಭಾಗದ ಮಂದಿ ಅಂಗನವಾಡಿಯಲ್ಲಿ ಸರಬರಾಜಾಗೋ ಪೌಷ್ಟಿಕ ಆಹಾರ  ಪುಡಿಯನ್ನು ಹಸುಗಳಿಗೆ ಹಾಕ್ತಿದ್ದಾರೆ ಅನ್ನೋ ದೂರು ಕೂಡ ಬರುತ್ತಿದೆ. ಇದಕ್ಕೆ ಇಲ್ಲಿನ ಮಕ್ಕಳ ಮತ್ತು ಮಹಿಳಾ ಕಲ್ಯಾಣ ಇಲಾಖೆಯಲ್ಲಿ ಮೂವತ್ತು ವರ್ಷಗಳಿಂದ ಝಾಂಡಾ ಊರಿರುವ ಕೆಲ  ಅಧಿಕಾರಿಗಳ ಕಮಿಷನ್ ದಂಧೆ, ಅರ್ಹತೆಯೇ ಇಲ್ಲದೆ ನಿಯಮಮೀರಿ ಉಪನಿರ್ದೇಶಕ ಸ್ಥಾನದಲ್ಲಿ ಕೂತಿರುವ ಅಧಿಕಾರಿ ಲಂಚಕ್ಕಾಗಿ ಮಾಡ್ತಿರೋ ಲಜ್ಜೆಗೆಟ್ಟ ವ್ಯವಹಾರಗಳೇ ಕಾರಣ ಅನ್ನೋ ಆರೋಪ ಬಲವಾಗಿ ಕೇಳಿ ಬರುತ್ತಿದೆ

ಪಿಡಿಓ, ಈಓ ಹಣವಂತರ ಏಜೆಂಟರಾಗಿದ್ದಾರೆ! ಬರೀ ದಲ್ಲಾಳಿತನ ಮಾಡಿ ಬಡವರ ರಕ್ತ ಹೀರುತ್ತಿದ್ದಾರೆ. ಪಂಚಾಯತಿಯ ಕರ್ಮಕಾಂಡ ಬಯಲು

ಜನರಿಗೆ ಸೇರಬೇಕಾದ ಯೋಜನೆಗಳು ಭ್ರಷ್ಟರ ಪಾಲಾಗುತ್ತಿದೆ. ನಕಲಿ ಬಿಲ್‌ಗೋಲ್‌ಮಾಲ್‌ ರಾಜಾರೋಷವಾಗಿ ನಡೀತಿದೆ, ಅದಕ್ಕಿಂತಲೂ ಮಿಗಿಲಾಗಿ ದುಷ್ಟರ ಕಣ್ಣು ಬಡವರ ಭೂಮಿ ಮೇಲೆ ಬೀಳುತ್ತಿದೆ ಇದು ಜನರಲ್ಲಿ ಕೋಪ ಉಕ್ಕುವಂತೆ ಮಾಡುತ್ತಿದೆ.

ಸಿಲಿಂಡರ್‌ ಬಾಂಬ್‌ !! ಯಾವಾಗ ಬೇಕಾದ್ರೂ ಸ್ಫೋಟಿಸಬಹುದು. ದಂಧೆಕೋರರ ಭಯಾನಕತೆ ಬಯಲು ಮಾಡಿತು ವಿಜಯಟೈಮ್ಸ್‌

ಗ್ಯಾಸ್‌ ಸಿಲಿಂಡರಿನ ಬಳಕೆಯ ವೇಳೆ ತುಂಬಾನೇ ಕೇರ್‌ಫುಲ್‌ ಆಗಿರಬೇಕು. ಇಲ್ಲದಿದ್ರೆ ಭಾರೀ ಅಪಾಯ ಕಟ್ಟಿಟ್ಟ. ಅದಕ್ಕಾಗಿಯೇ ಗ್ಯಾಸ್‌ ಸಿಲಿಂಡರ್‌ ಬಳಕೆ, ಸಂಗ್ರಹಣೆಗೆ ಕಟ್ಟು ನಿಟ್ಟಿನ ನಿಯಮಗಳನ್ನು ರೂಪಿಸಲಾಗಿದೆ. ಯಾರೂ ಬೇಕಾದ್ರೂ, ಎಷ್ಟು ಬೇಕಾದ್ರೂ ಎಲ್‌ಪಿಜಿ ಗ್ಯಾಸ್‌ ಸಿಲಿಂಡರ್‌ ಮಾರುವ ಹಾಗಿಲ್ಲ. ಅಕ್ರಮ ಗ್ಯಾಸ್‌ ಸಿಲಿಂಡರ್‌ ಸಂಗ್ರಹಣೆ ಕಾನೂನು ಪ್ರಕಾರ ಅಪರಾಧ

ತೂಕದಲ್ಲಿ ಮೋಸ ! ಗ್ರಾಹಕರ ಜೇಬಿಗೆ ಭಾರೀ ಖೋತಾ, ಮಾಪನ ಶಾಸ್ತ್ರ ಅಧಿಕಾರಿಗಳಿಂದಲೇ ದೋಖಾ!

5 ಕೆ.ಜಿ ತೂಕದ ಬಂಡಲ್‌ ಹಿಡ್ಕೊಂಡು ತೂಕದ ಯಂತ್ರ ಚೆಕ್‌ ಮಾಡಲು ಶುರು ಮಾಡಿದ್ವಿ. ಆಗ ನಮ್ಮ ಬಲೆಗೆ ಅನೇಕ ಖದೀಮರು ಸಿಕ್ಕಿ ಬಿದ್ರು. ಒಂದು ಅಂಗಡಿಯವನಂತು 50 ಕೆ.ಜಿಗೆ 16.250ಗ್ರಾಂ ತೂಕದಲ್ಲಿ ಮೋಸ ಮಾಡ್ತಿದ್ದ. ಈ ದಂಧೆ ಬಾರೀ ರಾಜಾರೋಷವಾಗಿ ನಡೀತಿದೆ ಅನ್ನೋದಕ್ಕೆ ಪಕ್ಕಾ ಸಾಕ್ಷಿ ಸಿಕ್ತು

ಹಾವೇರಿ ಮರಳು ಮಾಫಿಯಾಕ್ಕೆ ಪೊಲೀಸರ ಕಾವಲು, ಪತ್ರಕರ್ತರ ಶ್ರೀರಕ್ಷೆ

ದುರಂತ ಅಂದ್ರೆ ಹಾವೇರಿಯ ಗುತ್ತಲ ಪೊಲೀಸ್ ಠಾಣೆ ಮುಂದೆಯೇ ರಾಜಾರೋಷವಾಗಿ ಮರಳು ಲೂಟಿ ಮಾಡಿಕೊಂಡು ಹೋಗ್ತಿದ್ದಾರೆ. ಆದ್ರೆ ಅದನ್ನು ತಡೆಯುವ ಧಮ್ ಯಾವೊಬ್ಬನಿಗೂ ಇಲ್ಲ. ನಾವು ಇತ್ತ ನಡುರಾತ್ರಿಯಲ್ಲಿ ಮರಳು ಮಾಫಿಯಾ ಮಂದಿಯ ರಹಸ್ಯ ಕಾರ್ಯಾಚರಣೆ ಮಾಡುತ್ತಿದ್ರೆ, ಅತ್ತ ಗುತ್ತಲ ಪೊಲೀಸ್ ಠಾಣೆಯ ಪಕ್ಕದಲ್ಲೇ ಪೊಲೀಸರು ಸಬ್‌ಇನ್ಸೆ÷್ಪಕ್ಟರ್ ಸಿದ್ದರೋಡ ಬಡಿಗೇರ ಅವರ ಬರ್ತ್ಡೇ ಪಾರ್ಟಿ ಮಾಡುತ್ತಿದ್ರು.

Submit Your Article