Breaking News
ಬಂದೂಕು ಹಿಡಿದು ಸೆಲ್ಫಿಗೆ ಪೋಸ್: ಆಕಸ್ಮಿಕವಾಗಿ ಗುಂಡು ಹಾರಿ ನವವಿವಾಹಿತೆ ಸಾವುಎದೆಹಾಲು ನೀಡುವ ತಾಯಂದಿರು ಈ ಆಹಾರಗಳಿಂದ ದೂರವಿರಿಜುಲೈ 27ರಿಂದ ಭಾರತ ಪ್ರವಾಸ ಆರಂಭಿಸಲಿರುವ ಅಮೆರಿಕದ ರಕ್ಷಣಾ ಕಾರ್ಯದರ್ಶಿ ಆ್ಯಂಟನಿ ಬ್ಲಿಂಕೆನ್ಎಲ್‌ಪಿಜಿ ಸಿಲಿಂಡರ್‌ ಸ್ಪೋಟ; ಏಳು ಮಂದಿ ಸಾವುಅಂಬೇಡ್ಕರ್ ಅಂತ್ಯಸಂಸ್ಕಾರ ಮಾಡಲು ಕಾಂಗ್ರೆಸ್ ಜಾಗ ಕೊಡಲಿಲ್ಲ: ನಳಿನ್ ಕುಮಾರ್‌ ಕಟೀಲ್ ಟೀಕೆಮಳೆಗಾಲದಲ್ಲಿ ಹೆಚ್ಚಾಗಿ ಕಾಡುವ ಹೊಟ್ಟೆಯ ನೋವು ತಡೆಯುವುದು ಹೇಗೆ?ನುಗ್ಗೆ ಸೊಪ್ಪಿನಲ್ಲಿದೆ ಕೂದಲಿನ ಸಮಸ್ಯೆ ನಿವಾರಿಸುವ ಶಕ್ತಿವಿಯೆಟ್ನಾಂ: ಹನೊಯಿನಲ್ಲಿ 15 ದಿನಗಳ ಲಾಕ್‌ಡೌನ್‌ಕಳೆದ ೨೪ಗಂಟೆಯಲ್ಲಿ 39,097 ಹೊಸ ಕೊರೊನಾ ಪ್ರಕರಣಗಳು, 546 ಸಾವುಜು.25ರಿಂದ ರಾಜ್ಯಾದ್ಯಂತ ದೇವಾಲಯಗಳಲ್ಲಿ ಪೂಜಾದಿ ಸೇವೆ & ಪ್ರಸಾದಿ ವಿತರಣೆಗೆ ಅವಕಾಶ: ಸಚಿವ ಕೋಟಾ ಶ್ರೀನಿವಾಸ ಪೂಜಾರಿ

ರಾಜಕೀಯ

ಅಂಬೇಡ್ಕರ್ ಅಂತ್ಯಸಂಸ್ಕಾರ ಮಾಡಲು ಕಾಂಗ್ರೆಸ್ ಜಾಗ ಕೊಡಲಿಲ್ಲ: ನಳಿನ್ ಕುಮಾರ್‌ ಕಟೀಲ್ ಟೀಕೆ

ಸಂವಿಧಾನ ಶಿಲ್ಪಿ ಅಂಬೇಡ್ಕರ್ ಅವರಿಗೆ ಅತೀ ಹೆಚ್ಚು ಅವಮಾನ ಮಾಡಿದ್ದೇ ಕಾಂಗ್ರೆಸ್. ಮೊದಲ ಸಚಿವ ಸಂಪುಟದಲ್ಲಿಯೇ ಅಂಬೇಡ್ಕರ್ ನೋವಿನಿಂದ ಹೊರ ಬರುವಂತೆ ಮಾಡಿದರು. ಲೋಕಸಭೆ ಚುನಾವಣೆಗೆ ಅಂಬೇಡ್ಕರ್ ನಿಂತಾಗ ಕಾಂಗ್ರೆಸ್ ಅವರನ್ನು ಸೋಲಿಸಿತು ಎಂದು ಅಸಮಾಧಾನ ವ್ಯಕ್ತಪಡಿಸಿದ ಅವರು, ಅಂಬೇಡ್ಕರ್ ಅಂತ್ಯಸಂಸ್ಕಾರ ಮಾಡಲು ಕಾಂಗ್ರೆಸ್ ಜಾಗ ಕೊಡಲಿಲ್ಲ. ಅವರಿಗೆ ಭಾರತರತ್ನವನ್ನು ಕೊಡಲಿಲ್ಲ.

ಜು.25ರಿಂದ ರಾಜ್ಯಾದ್ಯಂತ ದೇವಾಲಯಗಳಲ್ಲಿ ಪೂಜಾದಿ ಸೇವೆ & ಪ್ರಸಾದಿ ವಿತರಣೆಗೆ ಅವಕಾಶ: ಸಚಿವ ಕೋಟಾ ಶ್ರೀನಿವಾಸ ಪೂಜಾರಿ

ಕೊರೊನಾ ಹಿನ್ನೆಲೆಯಲ್ಲಿ ಈ ಹಿಂದೆ ದೇವಸ್ಥಾನಗಳಲ್ಲಿ ಕೇವಲ ದೇವರ ದರ್ಶನಕ್ಕೆ ಮಾತ್ರವೇ ಭಕ್ತರಿಗೆ ಅವಕಾಶ ನೀಡಿದ್ದರ ಪರಿಣಾಮ ಇತರೆ ಸೇವೆಗಳು, ಪ್ರಸಾದ ವಿನಿಯೋಗಕ್ಕೆ ಅವಕಾಶ ಇರಲಿಲ್ಲ. ಆದರೆ ಇದೀಗ ಈ ಆದೇಶವನ್ನು ಹಿಂಪಡೆದಿರುವ ಸರ್ಕಾರ, ಜು.25ರಿಂದ ಪ್ರಸಾದ, ಸೇವೆಗಳನ್ನು ಆರಂಭಿಸಲು ಸಮ್ಮತಿ ನೀಡಿದೆ.

ರಾಜ್ಯದಲ್ಲಿಡೆ ಪ್ರವಾಹ ಭೀತಿ ಹಿನ್ನೆಲೆ: ವಿಡಿಯೋ ಸಂವಾದ ಮೂಲಕ ಪರಿಸ್ಥಿತಿ ಅವಲೋಕಿಸಿದ ಯಡಿಯೂರಪ್ಪ

ಅತಿವೃಷ್ಟಿ ಪೀಡಿತ ಜಿಲ್ಲೆಗಳ ಜಿಲ್ಲಾ ಉಸ್ತುವಾರಿ ಸಚಿವರುಗಳು ಉಸ್ತುವಾರಿ ಜಿಲ್ಲೆಯಲ್ಲಿಯೇ ಉಳಿದು ಜನರ ಸಂಕಷ್ಟಗಳಿಗೆ ನೆರವಾಗಬೇಕು. ಅಧಿಕಾರಿಗಳು ಯಾವುದೇ ಕಾರಣಕ್ಕೂ ರಜೆ ಹಾಕಬಾರದು ಹಾಗೂ ಕೇಂದ್ರ ಸ್ಥಳವನ್ನು ಬಿಟ್ಟು ಹೋಗಬಾರದು. ಜನ ಸಮಸ್ಯೆಗಳಿಗೆ ದಿನದ 24 ಗಂಟೆ ಸ್ಪಂದಿಸಬೇಕು ಎಂದು ನಿರ್ದೇಶನ ನೀಡಿದರು.

ಮಲೆ ಮಹದೇಶ್ವರನ ಸನ್ನಿಧಿಗೆ ಹರಿದುಬಂತು ಕೋಟಿಗಟ್ಟಲೆ ಆದಾಯ: 2 ಕೋಟಿ 33 ಲಕ್ಷಕ್ಕೂ ಅಧಿಕ ರೂ. ಸಂಗ್ರಹ

ಮಹದೇಶ್ವರ ಬೆಟ್ಟದ ಹುಂಡಿಯಲ್ಲಿ ಸಂಗ್ರಹವಾಗಿರುವ ಕಾಣಿಕೆಯನ್ನು ಏಣಿಕೆ ಕಾರ್ಯವು ಬಿಗಿ ಬಂದೂ ಬಸ್ತ್ ನೊಂದಿಗೆ ನಡೆಯಿತು. ಕಳೆದ ಏಪ್ರಿಲ್ ತಿಂಗಳಲ್ಲಿ ಹುಂಡಿ ಏಣಿಕೆ ಕಾರ್ಯ ನಡೆಯಬೇಕಿತ್ತು ಆದರೆ ಕೋರೊನಾ ಲಾಕ್ ಡೌನ್ ನಿಂದಾಗಿ ಹುಂಡಿ ಏಣಿಕೆ ಕಾರ್ಯ ಮುಂದೂಡಿಕೆ ಮಾಡಲಾಗಿತ್ತು.

ವಲಸಿಗರನ್ನ ಪಕ್ಷಕ್ಕೆ ಸೇರಿಸಿಕೊಳ್ಳೋ ಪ್ರಶ್ನೆಯೇ ಇಲ್ಲ: ವಿಪಕ್ಷ‌ ನಾಯಕ ಸಿದ್ದರಾಮಯ್ಯ ಪುನರುಚ್ಚಾರ

ಇದೇ ವೇಳೆ ರಾಜ್ಯದ ಪ್ರವಾಹ ಪರಿಸ್ಥಿತಿ ಕುರಿತು ಪ್ರತಿಕ್ರಿಯಿಸಿದ ಅವರು, 2019ರಲ್ಲಿ ಬಂದ ಪ್ರವಾಹದಿಂದ ಸಂತ್ರಸ್ತರಾದವರಿಗೇ ಇನ್ನೂ ಬಿಜೆಪಿ ಸರ್ಕಾರ ಪರಿಹಾರ ಕೊಟ್ಟಿಲ್ಲ. ಈಗ ಎಲ್ಲಾ ಕಡೆ ಮಳೆ ಬಂದು ಜನ, ಜಾನುವಾರಗಳ ಪ್ರಾಣ ಹಾನಿಯಾಗಿದೆ, ಮನೆಗಳು ಬಿದ್ದಿವೆ.

ದಲಿತ ಸಿಎಂ ವಿಚಾರ: ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ ಶುರುವಾಯ್ತು ರಾಜಕೀಯ ಜಟಾಪಟಿ

ಇದೀಗ ರಾಜ್ಯದಲ್ಲಿ ಮುಖ್ಯಮಂತ್ರಿ ಸ್ಥಾನ ತೆರವಾಗುತ್ತಿದ್ದು, ತಾಕತ್ತಿದ್ದರೆ ನಳಿನ್ ಕುಮಾರ್ ಕಟೀಲ್ ದಲಿತರನ್ನು ಮುಖ‍್ಯಮಂತ್ರಿ ಮಾಡಲಿ. ಕಾಂಗ್ರೆಸ್ ನಲ್ಲಿ ಈಗಾಗಲೇ ನಾಲ್ವರು ದಲಿತರು ಸಿಎಂ ಅಗಿದ್ದಾರೆ. ಬಿಜೆಪಿ ಇದುವರೆಗೆ ದಲಿತರನ್ನು ಮುಖ‍್ಯಮಂತ್ರಿ ಮಾಡಿಲ್ಲ. ಇದೀಗ ಬಿಜೆಪಿಗೆ ಇಂತಹ ಅವಕಾಶ ರಾಜ್ಯದಲ್ಲಿ ಬಂದಿದ್ದು, ದಲಿತರನ್ನು ಮುಖ‍್ಯಮಂತ್ರಿ ಮಾಡಲಿ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಸವಾಲು ಹಾಕಿದ್ದಾರೆ.

ವರುಣನ ಅಬ್ಬರ: ಕೃಷ್ಣಾನದಿ ಪಾತ್ರದಲ್ಲಿ ಹೆಚ್ಚಿದ ಪ್ರವಾಹ: ಅಗತ್ಯ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳುವಂತೆ ಬೆಳಗಾವಿ ಜಿಲ್ಲಾಧಿಕಾರಿಗೆ ಸಿಎಂ ಸೂಚನೆ

ರಾಜ್ಯದ ಕರಾವಳಿ ಪ್ರದೇಶ, ಉತ್ತರ ಕರ್ನಾಟಕ ಸೇರಿದಂತೆ ಬಹುತೇಕ ಜಿಲ್ಲೆಗಳಲ್ಲಿ ಕಳೆದ ಕೆಲವು ದಿನಗಳಿಂದ ನಿರಂತರ ಮಳೆಯಾಗುತ್ತಿದೆ. ಈ ನಡುವೆ ಮಹಾರಾಷ್ಟ್ರದಲ್ಲೂ ವರುಣನ ಅಬ್ಬರ ಜೋರಾಗಿದೆ. ಹೀಗಾಗಿ ಕೃಷ್ಣಾನದಿಗೆ ಹೆಚ್ಚಿನ ನೀರು ಹರಿದು ಬರುತ್ತಿರುವ ಪರಿಣಾಮ ಕೃಷ್ಣಾನದಿ ಪಾತ್ರದಲ್ಲಿ ಪ್ರವಾಹ ಪರಿಸ್ಥಿತಿ ಹೆಚ್ಚಾಗಿರುವುದರಿಂದ ಜನಜೀವನ ಅಸ್ತವ್ಯಸ್ಥವಾಗಿದೆ.

ರಾಜ್ಯದಲ್ಲಿ ಶಾಲೆ ಆರಂಭಕ್ಕೆ ಚಿಂತನೆ ಹಿನ್ನೆಲೆ: ಶಾಲಾ ಶಿಕ್ಷಕರು, ಸಿಬ್ಬಂದಿಗೆ ಶೇ.100 ಲಸಿಕೆ ನೀಡಲು ಸರ್ಕಾರ ಕ್ರಮ

ಇದಕ್ಕಾಗಿ ರಾಜ್ಯದ ಎಲ್ಲಾ ಶಾಲೆಗಳ ಶಿಕ್ಷಕರು ಹಾಗೂ ಸಿಬ್ಬಂದಿಗಳಿಗೆ ಕ್ರಮಬದ್ಧವಾಗಿ ಮತ್ತು ಆದ್ಯತೆ ಮೇರೆಗೆ ಲಸಿಕೆ ನೀಡಲು ಮಾರ್ಗಸೂಚಿ ರೂಪಿಸಲಾಗಿದೆ. ಮಕ್ಕಳ ಭವಿಷ್ಯದ ದೃಷ್ಟಿಯಿಂದ ಈ ನಿರ್ಧಾರ ಕೈಗೊಳ್ಳಲಾಗಿದ್ದು, ಶಾಲೆಗಳ ಮುಖ್ಯಸ್ಥರು ತಮ್ಮ ಸಂಸ್ಥೆಯಲ್ಲಿ 100% ಲಸಿಕೆ ಪಡೆದಿರುವಂತೆ ಕ್ರಮ ಕೈಗೊಳ್ಳಬೇಕು ಎಂದು ಆರೋಗ್ಯ ಸಚಿವ ಸುಧಾಕರ್ ಮನವಿ ಮಾಡಿದ್ದಾರೆ.

ನಾಯಕತ್ವ ಬದಲಾವಣೆ ವಿಚಾರ: ನಳಿನ್ ಕುಮಾರ್ ಆಡಿಯೋ ಹಾಗೂ ಷಡ್ಯಂತ್ರ ಸತ್ಯವಾಯ್ತಾ?: ಕಾಂಗ್ರೆಸ್ ಟ್ವೀಟ್

ಮೀರ್ ಸಾದಿಕ್ ನಳಿನ್ ಕುಮಾರ್ ಕಟೀಲ್ ರ ಆಡಿಯೋ ಸುಳ್ಳು ಎನ್ನುವ ಬಿಜೆಪಿ, ಮಾಧ್ಯಮಗಳಲ್ಲಿ, ತಮ್ಮದೇ ಪಕ್ಷದ ಶಾಸಕ, ಸಚಿವರಲ್ಲಿ ಇಷ್ಟೆಲ್ಲ ಗೊಂದಲಗಳಿದ್ದರೂ ಸ್ಪಷ್ಟನೆ ನೀಡುತ್ತಿಲ್ಲವೇಕೆ? ತಾಕತ್ತಿದ್ದರೆ ಬಿಜೆಪಿ ಪಕ್ಷದ ಐಟಿ ಸೆಲ್ ನಾಯಕತ್ವ ಬದಲಾವಣೆ ಇಲ್ಲ, ಇನ್ನೆರೆಡು ವರ್ಷ ಯಡಿಯೂರಪ್ಪ ಅವರೇ ಸಿಎಂ” ಎಂದು ಒಂದೇ ಒಂದು ಟ್ವೀಟ್ ಮಾಡಿಬಿಡಲಿ ಎಂದು ಸವಾಲು ಹಾಕಿದೆ.

ಹೈಕಮಾಂಡ್‌ ಆದೇಶಕ್ಕೆ ಕಾಯುವ ನಡುವೆ ಬಿಎಸ್‌ವೈ ಸಿಟಿ ರೌಂಡ್ಸ್‌

ಇನ್ನು ತಮ್ಮ ರಾಜೀನಾಮೆ ಬೆನ್ನಲ್ಲೇ ಬಿಎಸ್​ ಯಡಿಯೂರಪ್ಪ ಈಗಾಗಲೇ ನಿಗದಿಯಾಗಿದ್ದ ಶಿವಮೊಗ್ಗ ಹಾಗೂ ಕಾರವಾರದ ಪ್ರವಾಸವನ್ನು ರದ್ದು ಮಾಡಿದ್ದಾರೆ. ಆದರೆ, ಈ ನಡುವೆ ಬೆಂಗಳೂರು ರೌಂಡ್ಸ್​ಗೆ ಅವರು ಮುಂದಾಗಿದ್ದಾರೆ. ಬೆಂಗಳೂರಿನ ವಿವಿಧ ಕಡೆ ನಾಳೆ ಸಿಎಂ ಬಿಎಸ್​ ವೈ ಭೇಟಿ ನೀಡಲಿದ್ದು, ಅಭಿವೃದ್ಧಿ ಕಾಮಗಾರಿಗಳು ಮತ್ತು ಮೆಟ್ರೋ ಕಾಮಗಾರಿಗಳ ಪರಿಶೀಲನೆ ನಡೆಸಲಿದ್ದಾರೆ.

Submit Your Article