- ಆನ್‌ಲೈನ್ ಖರೀದಿಯಲ್ಲಿ ಜನಪ್ರಿಯವಾಗುತ್ತಿರುವ (warning about BNPL system) BNPL ವ್ಯವಸ್ಥೆ ಬಗ್ಗೆ ತಜ್ಞರ ಎಚ್ಚರಿಕೆ
- ಈಗ ಖರೀದಿ ಮಾಡಿ, ನಂತರ ಪಾವತಿಸಿ’ ಸೌಲಭ್ಯದಿಂದ ಹೆಚ್ಚುತ್ತಿರುವ ಸಾಲದ ಹೊರೆ
- ಸಮಯಕ್ಕೆ ಹಣ ಪಾವತಿಸದಿದ್ದರೆ ಬಡ್ಡಿ ಮತ್ತು ದಂಡದ ಹೊರೆ ಹೆಚ್ಚಾಗುವ ಸಾಧ್ಯತೆ
ಇತ್ತೀಚಿನ ದಿನಗಳಲ್ಲಿ ಆನ್‌ಲೈನ್ ಖರೀದಿ (warning about BNPL system) ವೇದಿಕೆಗಳಲ್ಲಿ ‘ಬೈ ನೌ ಪೇ ಲೇಟರ್’ (BNPL) ಎಂಬ ಪಾವತಿ ವ್ಯವಸ್ಥೆ ಹೆಚ್ಚು ಗಮನ ಸೆಳೆಯುತ್ತಿದೆ.
“ಈಗ ಖರೀದಿ ಮಾಡಿ, ನಂತರ ಪಾವತಿಸಿ” ಎಂಬ ಆಕರ್ಷಕ ಸಂದೇಶಗಳು ಗ್ರಾಹಕರನ್ನು ಸೆಳೆಯುತ್ತಿವೆ. ಈ ವ್ಯವಸ್ಥೆಯ ಮೂಲಕ ಗ್ರಾಹಕರು ತಕ್ಷಣ ಹಣ ಪಾವತಿಸದೇ ವಸ್ತುಗಳನ್ನು ಖರೀದಿಸಿ ನಂತರದ ದಿನಗಳಲ್ಲಿ ಹಣ ಪಾವತಿಸುವ ಅವಕಾಶ ಪಡೆಯುತ್ತಾರೆ.

ಆದರೆ ಈ ಸೌಲಭ್ಯವು ಕೆಲವೊಮ್ಮೆ ಗ್ರಾಹಕರನ್ನು ಸಾಲದ ಹೊರೆಗೂ ತಳ್ಳುವ ಸಾಧ್ಯತೆ ಇರುವುದಾಗಿ (warning about BNPL system) ಹಣಕಾಸು ತಜ್ಞರು ಎಚ್ಚರಿಸಿದ್ದಾರೆ. ಇ-ವಾಣಿಜ್ಯ (E-Commerce) ಕಂಪನಿಗಳು ತಮ್ಮ ಮಾರಾಟವನ್ನು ಹೆಚ್ಚಿಸಲು ಈ ವಿಧಾನವನ್ನು ವ್ಯಾಪಕವಾಗಿ ಬಳಸುತ್ತಿವೆ.
BNPL ವ್ಯವಸ್ಥೆಯಲ್ಲಿ ಗ್ರಾಹಕರು ಆನ್‌ಲೈನ್ ಖರೀದಿ ಮಾಡುವಾಗ ಪಾವತಿ ವಿಧಾನವಾಗಿ ಈ ಆಯ್ಕೆಯನ್ನು ಬಳಸಬಹುದು. ಸಾಮಾನ್ಯವಾಗಿ ಆಧಾರ್ ಅಥವಾ ಪ್ಯಾನ್ ಕಾರ್ಡ್ (Pan Card) ಮೂಲಕ ಕೆವೈಸಿ ಪ್ರಕ್ರಿಯೆ ಪೂರ್ಣಗೊಳಿಸಿದ ಬಳಿಕ ಈ ಸೇವೆ ಸಕ್ರಿಯವಾಗುತ್ತದೆ.
ಬಳಿಕ ಗ್ರಾಹಕರಿಗೆ ನಿರ್ದಿಷ್ಟ ಕ್ರೆಡಿಟ್ ಮಿತಿ ನೀಡಲಾಗುತ್ತದೆ. ಖರೀದಿ ಮಾಡುವಾಗ ಕಂಪನಿ ಮೊದಲು ಪಾವತಿ ಮಾಡುತ್ತದೆ ಮತ್ತು ಗ್ರಾಹಕರು ನಂತರ ನಿಗದಿತ ಅವಧಿಯೊಳಗೆ—ಉದಾಹರಣೆಗೆ 15 ಅಥವಾ 30 ದಿನಗಳಲ್ಲಿ—ಆ ಹಣವನ್ನು ಮರುಪಾವತಿಸಬೇಕಾಗುತ್ತದೆ.
ಸಮಯಕ್ಕೆ ಹಣ ಪಾವತಿಸಿದರೆ ಬಡ್ಡಿ ವಿಧಿಸಲಾಗುವುದಿಲ್ಲ, ಆದರೆ ವಿಳಂಬವಾದರೆ ಅದು ಕಂತುಗಳ ರೂಪದಲ್ಲಿ ಬಡ್ಡಿಯೊಂದಿಗೆ ಪಾವತಿಸಬೇಕಾಗುತ್ತದೆ.
ಹಣಕಾಸು ತಜ್ಞರ ಪ್ರಕಾರ BNPL ವ್ಯವಸ್ಥೆಯ ಯಶಸ್ಸಿನ ಹಿಂದೆ ಮಾನಸಿಕ ಕಾರಣಗಳೂ ಪ್ರಮುಖವಾಗಿವೆ. ತಕ್ಷಣ ಹಣ ಖರ್ಚಾಗುತ್ತಿಲ್ಲ ಎಂಬ ಭಾವನೆ ಗ್ರಾಹಕರಲ್ಲಿ ಹೆಚ್ಚು ಖರೀದಿ ಮಾಡುವ ಮನೋಭಾವವನ್ನು ಉಂಟುಮಾಡುತ್ತದೆ. ಇದನ್ನು ಮನೋವಿಜ್ಞಾನದಲ್ಲಿ ‘ಟೆಂಪೋರಲ್ ಡಿಸ್ಕೌಂಟಿಂಗ್’(Temporal discounting) ಎಂದು ಕರೆಯಲಾಗುತ್ತದೆ.
ಈ ಮನಸ್ಥಿತಿಯನ್ನು ಇ-ಕಾಮರ್ಸ್ (E-Commerce) ಕಂಪನಿಗಳು ಬಳಸಿಕೊಂಡು ಗ್ರಾಹಕರಿಗೆ ಸುಲಭ ಸಾಲದ ಆಯ್ಕೆಯನ್ನು ನೀಡುತ್ತವೆ. ಇದರ ಪರಿಣಾಮವಾಗಿ ಕೆಲವರು ತಮ್ಮ ಆದಾಯಕ್ಕಿಂತ ಹೆಚ್ಚಾಗಿ ಖರ್ಚು ಮಾಡುವ ಪರಿಸ್ಥಿತಿಯೂ ಉಂಟಾಗಬಹುದು ಎಂದು ತಜ್ಞರು ಹೇಳಿದ್ದಾರೆ.
BNPL ವ್ಯವಸ್ಥೆಗೆ ಕೆಲವು ಸಕಾರಾತ್ಮಕ ಅಂಶಗಳೂ ಇದ್ದವೆ. ತಕ್ಷಣ ಹಣದ ಅವಶ್ಯಕತೆ ಇಲ್ಲದೇ ವಸ್ತುಗಳನ್ನು ಖರೀದಿಸಬಹುದಾಗಿದೆ. ಕಡಿಮೆ ದಾಖಲೆಗಳು ಮತ್ತು ವೇಗವಾದ ಅನುಮೋದನೆ ಇದರ ಪ್ರಮುಖ ಲಾಭಗಳಾಗಿವೆ. ಆದರೆ ಇನ್ನೊಂದು ಕಡೆ ಸಮಯಕ್ಕೆ ಹಣ ಪಾವತಿಸದಿದ್ದರೆ ದಂಡದ ಬಡ್ಡಿ ವಿಧಿಸಲಾಗುತ್ತದೆ.
ಇದರಿಂದ ಗ್ರಾಹಕರ ಕ್ರೆಡಿಟ್ ಸ್ಕೋರ್ ಕೂಡ ಹಾನಿಯಾಗುವ ಸಾಧ್ಯತೆ ಇದೆ. ಭವಿಷ್ಯದಲ್ಲಿ ಬ್ಯಾಂಕ್ ಸಾಲ ಅಥವಾ ಕ್ರೆಡಿಟ್ ಕಾರ್ಡ್ (Credit Card) ಪಡೆಯಲು ಇದರಿಂದ ತೊಂದರೆ ಎದುರಾಗಬಹುದು.
ಉದಾಹರಣೆಗೆ ₹30,000 ಬೆಲೆಯ ಸ್ಮಾರ್ಟ್‌ಫೋನ್ ಅನ್ನು BNPL ಮೂಲಕ 12 ತಿಂಗಳ ಕಂತುಗಳಲ್ಲಿ ಖರೀದಿಸಿದರೆ ಮೇಲ್ನೋಟಕ್ಕೆ ಇದು ಸುಲಭವೆನಿಸಬಹುದು.
ಆದರೆ ಬಡ್ಡಿ, ಪ್ರೊಸೆಸಿಂಗ್ ಶುಲ್ಕ ಮತ್ತು ಜಿಎಸ್‌ಟಿ ಸೇರಿ ಕೊನೆಯಲ್ಲಿ ₹36,000ರಿಂದ ₹37,000ವರೆಗೆ ಪಾವತಿಸಬೇಕಾಗುವ ಸಾಧ್ಯತೆ ಇದೆ. ಒಂದು ಕಂತು ಪಾವತಿಸಲು ವಿಳಂಬವಾದರೂ ಹೆಚ್ಚುವರಿ ದಂಡ ವಿಧಿಸಲಾಗುತ್ತದೆ.
ಆದ್ದರಿಂದ BNPL ವ್ಯವಸ್ಥೆಯನ್ನು ಬಳಸುವಾಗ ಗ್ರಾಹಕರು ತಮ್ಮ ಆದಾಯ ಮತ್ತು ಖರ್ಚಿನ ನಡುವೆ ಸಮತೋಲನ ಕಾಯ್ದುಕೊಳ್ಳುವುದು ಅಗತ್ಯ. ತಜ್ಞರ ಪ್ರಕಾರ ಜವಾಬ್ದಾರಿಯುತವಾಗಿ ಬಳಸಿದರೆ ಇದು ಉಪಯುಕ್ತವಾಗಬಹುದು, ಆದರೆ ಅಜಾಗರೂಕತೆಯಿಂದ ಬಳಸಿದರೆ ಸಾಲದ ಬಲೆಯಾಗಿ ಪರಿಣಮಿಸುವ ಅಪಾಯವೂ ಇದೆ.