• ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
  • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
  • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Vijaya Times logo
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
  • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
  • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Visit Channel
Home ಪ್ರಮುಖ ಸುದ್ದಿ

ಬೆಂಗಳೂರಿನಲ್ಲಿ ಕಸಕ್ಕೆ ಬೆಂಕಿ ಹಚ್ಚಿದರೆ ಕ್ರಿಮಿನಲ್ ಕೇಸ್ : BSWML ನಿಂದ ಖಡಕ್ ಎಚ್ಚರಿಕೆ

Teju Srinivas by Teju Srinivas
in ಪ್ರಮುಖ ಸುದ್ದಿ, ರಾಜ್ಯ, ವಿಜಯ ಟೈಮ್ಸ್‌
ಬೆಂಗಳೂರಿನಲ್ಲಿ ಕಸಕ್ಕೆ ಬೆಂಕಿ ಹಚ್ಚಿದರೆ ಕ್ರಿಮಿನಲ್ ಕೇಸ್ : BSWML ನಿಂದ ಖಡಕ್ ಎಚ್ಚರಿಕೆ
0
SHARES
74
VIEWS
Share on FacebookShare on Twitter
  • ಬೆಂಗಳೂರು ನಗರದಲ್ಲಿ ಕಸಕ್ಕೆ ಬೆಂಕಿ (Warning from BSWML) ಹಚ್ಚಿದರೆ ಕ್ರಿಮಿನಲ್ ಕೇಸ್
  • ಮೊದಲ ಸಲ ತಪ್ಪಿಗೆ ₹10,000 ದಂಡ, ಮರುಕಳಿಸಿದರೆ ಜೈಲು ಶಿಕ್ಷೆ ಗ್ಯಾರಂಟಿ
  • ನಗರದ ಪರಿಸರ ಮಾಲಿನ್ಯ ತಡೆಯಲು ಹೊಸ ಕ್ರಮ ಕೈಗೊಂಡ BSWML

Bengaluru: ಬೆಂಗಳೂರು ನಗರದಲ್ಲಿ ಕಸ ನಿರ್ವಹಣೆಯ ಸಮಸ್ಯೆ (Warning from BSWML) ದಿನದಿಂದ ದಿನಕ್ಕೆ ಗಂಭೀರವಾಗುತ್ತಿದೆ.

ಮನೆಗಳಲ್ಲಿ ಉತ್ಪತ್ತಿಯಾಗುವ ತ್ಯಾಜ್ಯವನ್ನು ರಸ್ತೆಗಳ ಮೇಲೆ ಸುರಿಯುವುದು, ಅದರ ಮೇಲೆ ಬೆಂಕಿ ಹಚ್ಚುವುದು ಎನ್ನುವುದು ಈಗ ಅನೇಕ ಕಡೆಗಳಲ್ಲಿ ಸಾಮಾನ್ಯ ದೃಶ್ಯವಾಗಿದೆ.

ಇದರಿಂದ ನಗರದಲ್ಲಿ ವಾಯುಮಾಲಿನ್ಯ ಹೆಚ್ಚಾಗುತ್ತಿರುವುದನ್ನು ಗಮನಿಸಿದ ಬೆಂಗಳೂರು ಘನ ತ್ಯಾಜ್ಯ ನಿರ್ವಹಣೆ ನಿಗಮ (BSWML) ಈಗ ಕಠಿಣ ಕ್ರಮಕ್ಕೆ ಮುಂದಾಗಿದೆ.

Warning from BSWML

ಕೆಲವು ದಿನಗಳ ಹಿಂದಷ್ಟೇ ಅಧಿಕಾರಿಗಳು ರಸ್ತೆಗೆ ಕಸ ಸುರಿದ ಮನೆಗಳ ಬಾಗಿಲಿನ (Warning from BSWML) ಮುಂದೆ ಕಸ ಹಿಂತಿರುಗಿಸಿ ಸುರಿದು ದಂಡ ವಸೂಲಿ ಮಾಡುವ ಕೆಲಸಕ್ಕೆ ಚಾಲನೆ ನೀಡಿದ್ದರು.

ಆದರೆ ಈಗ ಅದಕ್ಕಿಂತಲೂ ಗಂಭೀರವಾಗಿ, ಕಸಕ್ಕೆ ಬೆಂಕಿ ಹಾಕುವವರ ಮೇಲೆ ನೇರವಾಗಿ ಎಫ್ಐಆರ್ ದಾಖಲಿಸಿ, ಅಗತ್ಯವಿದ್ದರೆ ಜೈಲು ಶಿಕ್ಷೆ ನೀಡುವ ಯೋಜನೆ ರೂಪಿಸಲಾಗಿದೆ.

ಹೆಚ್ಚುತ್ತಿರುವ ಮಾಲಿನ್ಯ, ಜನರಲ್ಲಿ ಜವಾಬ್ದಾರಿತನದ ಕೊರತೆ ಹಾಗೂ ಪರಿಸರ ಹಾನಿ ಎಲ್ಲ ಸೇರಿ ಈ ಕ್ರಮಕ್ಕೆ ಕಾರಣವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಇನ್ನು BSWML ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕರಿಗೌಡ ಅವರು ನೀಡಿರುವ ಮಾಹಿತಿಯ ಪ್ರಕಾರ, ಈಗಿನಿಂದ ಕಸ ಸುಡುವ ಪ್ರಕರಣಗಳಿಗೆ ದೊಡ್ಡ ದಂಡಗಳನ್ನು ವಿಧಿಸಲಾಗಲಿದೆ.

ಮೊದಲ ಬಾರಿ ಕಸಕ್ಕೆ ಬೆಂಕಿ ಇಟ್ಟರೆ ₹10,000 ದಂಡ ವಿಧಿಸಲಾಗುತ್ತದೆ. ಅದೇ ತಪ್ಪನ್ನು ಮತ್ತೆ ಮಾಡಿದರೆ ಮರುಕಳಿಸಿದರೆ ದಂಡ ಮೊತ್ತ ₹20,000 ಕ್ಕೆ ಏರಲಿದೆ.

ಕ್ರಮ ಕೈಗೊಳ್ಳಲಿಲ್ಲವೆಂದು ಮುಂದುವರಿಸಿದರೆ ದಂಡ ₹5 ಲಕ್ಷವರೆಗೆ ಜಾರಿಯಾಗಬಹುದು.

ಇಷ್ಟು ದಂಡದ ನಂತರವೂ ಕಸ ಸುಡುವ ಹಠವಿದ್ದರೆ, ನಿಗಮ ನೇರವಾಗಿ ಎಫ್ಐಆರ್ ದಾಖಲಿಸಿ, ಕ್ರಿಮಿನಲ್ ಕೇಸ್ (Criminal Case) ಹಾಕಿ, ಕಾನೂನು ಪ್ರಕ್ರಿಯೆಯ ಪ್ರಕಾರ ಬಂಧಿಸಲು ಕೂಡ ಮುಂದಾಗಲಿದೆ.

ಇಂತಹ ಕಠಿಣ ಕ್ರಮಗಳು ಪರಿಸರ ಕಾಪಾಡುವ ನಿಟ್ಟಿನಲ್ಲಿ ಅನಿವಾರ್ಯ ಎಂದು ಅವರು ತಿಳಿಸಿದ್ದಾರೆ.

ಪರಿಸರ ಸಂರಕ್ಷಣಾ ಕಾಯ್ದೆ ಹಾಗೂ ವಾಯು ಮಾಲಿನ್ಯ ನಿಯಂತ್ರಣ ಕಾಯ್ದೆಯನ್ನು ಬಳಸಿಕೊಂಡು ಕಾನೂನು ಕ್ರಮ ಮುಂದುವರಿಸುವಂತೆ ಅಧೀನ ಅಧಿಕಾರಿಗಳಿಗೆ ಈಗಾಗಲೇ ನಿರ್ದೇಶನ ನೀಡಲಾಗಿದೆ.

ವಾಯು ಮಾಲಿನ್ಯ ನಿಯಂತ್ರಣ ಕಾಯ್ದೆ 1981ರ ಸೆಕ್ಷನ್ 5ರಡಿ ಪ್ರಕರಣ ದಾಖಲಾದರೆ 6 ತಿಂಗಳಿನಿಂದ 6 ವರ್ಷಗಳವರೆಗೆ ಜೈಲು ಶಿಕ್ಷೆ ವಿಧಿಸಲಾಗುತ್ತದೆ.

ಹಿಂದೆ ಕೇವಲ ದಂಡ ಅಥವಾ ಎಚ್ಚರಿಕೆ ನೀಡುತ್ತಿದ್ದ ಅಧಿಕಾರಿಗಳು ಈಗ ಕಾನೂನು ಕ್ರಮದತ್ತ ತಿರುಗಿರುವುದು ಮಹತ್ವದ ಬದಲಾವಣೆ.

BSWML ಈಗ ಕಸ ಸುಡುವ ಪ್ರಕರಣಗಳನ್ನು ನೇರವಾಗಿ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ (KSPCB)ಗೆ ವರ್ಗಾವಣೆ ಮಾಡುವ ಯೋಜನೆಯನ್ನೂ ಪ್ರಾರಂಭಿಸಿದೆ.

ಚಳಿಗಾಲದಲ್ಲಿ ವಾಯು ಮಾಲಿನ್ಯ ಹೆಚ್ಚುವ ಪರಿಸ್ಥಿತಿಯಲ್ಲಿ, ಕಸ ಸುಡುವ ಪ್ರಕರಣಗಳು ಪರಿಸರದ ಮೇಲೆ ಅತ್ಯಂತ ಹಾನಿಕಾರಕ ಪರಿಣಾಮ ಬೀರಲಿವೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಆದ್ದರಿಂದ ತಕ್ಷಣದ ಮಟ್ಟಿಗೆ ಕಠಿಣ ಕ್ರಮ ಜಾರಿ ಮಾಡುವ ಅಗತ್ಯವಿದೆ ಎಂಬ ನಿಲುವು ಆಡಳಿತದಲ್ಲಿದೆ.

ಇನ್ನು ಈ ಕ್ರಮಕ್ಕೆ ಜನರು ಮಿಶ್ರ ಪ್ರತಿಕ್ರಿಯೆ ನೀಡಿದ್ದಾರೆ. ನಗರದಲ್ಲಿ ಅನೇಕರು ಮಾಲಿನ್ಯ ತಡೆಯಲು ಈ ರೀತಿಯ ಕಠಿಣ ಕ್ರಮದ ಅಗತ್ಯವಿದೆ ಎಂದು ಒಪ್ಪಿಕೊಂಡಿದ್ದಾರೆ.

ಆದರೆ ಇನ್ನೊಂದು ವಲಯದವರು, ಮೊದಲು ಸರ್ಕಾರವೇ ಸರಿಯಾದ ಕಸ ಸಂಗ್ರಹಣೆ ವ್ಯವಸ್ಥೆ ಮಾಡಬೇಕು, ನಂತರ ಮಾತ್ರ ಇಂತಹ ಶಿಕ್ಷೆಗಳ ನೀಡುವುದು ಸೂಕ್ತ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಇದನ್ನು ಓದಿ : SSLC–PUC ಪರೀಕ್ಷಾ ವಿಧಾನದಲ್ಲಿ ಮಹತ್ವದ ಬದಲಾವಣೆ: ಶಿಕ್ಷಣ ಇಲಾಖೆಯಿಂದ ಹೊಸ ಮಾರ್ಗಸೂಚಿ ಪ್ರಕಟ
Tags: bengaluruBSWMLCriminal CaseGarbage dispposalKarnataka

Related News

ಡಾರ್ಕ್ ಚಾಕೊಲೇಟ್ ಸೀಕ್ರೆಟ್: ಹೃದಯದಿಂದ ಮೆದುಳಿನವರೆಗೆ 5 ಲಾಭಗಳು
ಆರೋಗ್ಯ

ಡಾರ್ಕ್ ಚಾಕೊಲೇಟ್ ಸೀಕ್ರೆಟ್: ಹೃದಯದಿಂದ ಮೆದುಳಿನವರೆಗೆ 5 ಲಾಭಗಳು

October 7, 2026
ಸುಪ್ರೀಂ ಕೋರ್ಟ್‌ನಲ್ಲಿ 250 ಜೂನಿಯರ್ ಕೋರ್ಟ್ ಅಸಿಸ್ಟೆಂಟ್ (JCI) ಹುದ್ದೆಗಳಿಗೆ ಅರ್ಜಿ ಆಹ್ವಾನ
ಪ್ರಮುಖ ಸುದ್ದಿ

ಸುಪ್ರೀಂ ಕೋರ್ಟ್‌ನಲ್ಲಿ 250 ಜೂನಿಯರ್ ಕೋರ್ಟ್ ಅಸಿಸ್ಟೆಂಟ್ (JCI) ಹುದ್ದೆಗಳಿಗೆ ಅರ್ಜಿ ಆಹ್ವಾನ

October 7, 2026
ಫೈಜರ್ ಹೆಸರಿನಲ್ಲಿ ನಕಲಿ ಔಷಧಿ ದಂಧೆ: 15 ಸಾವಿರಕ್ಕೂ ಹೆಚ್ಚು ವಯಲ್‌ಗಳ 90ಕ್ಕೂ ಹೆಚ್ಚು ಆಸ್ಪತ್ರೆಗಳಿಗೆ ಪೂರೈಕೆ
ಪ್ರಮುಖ ಸುದ್ದಿ

ಫೈಜರ್ ಹೆಸರಿನಲ್ಲಿ ನಕಲಿ ಔಷಧಿ ದಂಧೆ: 15 ಸಾವಿರಕ್ಕೂ ಹೆಚ್ಚು ವಯಲ್‌ಗಳ 90ಕ್ಕೂ ಹೆಚ್ಚು ಆಸ್ಪತ್ರೆಗಳಿಗೆ ಪೂರೈಕೆ

October 7, 2026
ಸೈಟ್ ಕ್ಲೀನಿಂಗ್ ಡ್ರೈವ್: ಎರಡು ತಿಂಗಳಲ್ಲಿ 709 ಖಾಲಿ ನಿವೇಶನ ಸ್ವಚ್ಛಗೊಳಿಸಿದ ಪಾಲಿಕೆ,372 ಮಾಲೀಕರಿಗೆ ನೋಟಿಸ್
ಪ್ರಮುಖ ಸುದ್ದಿ

ಸೈಟ್ ಕ್ಲೀನಿಂಗ್ ಡ್ರೈವ್: ಎರಡು ತಿಂಗಳಲ್ಲಿ 709 ಖಾಲಿ ನಿವೇಶನ ಸ್ವಚ್ಛಗೊಳಿಸಿದ ಪಾಲಿಕೆ,372 ಮಾಲೀಕರಿಗೆ ನೋಟಿಸ್

October 7, 2026

ವಿಜಯ ಟೈಮ್ಸ್‌ - ಬದಲಾವಣೆಯ ಹಾದಿ

Vijaya Times logo

ವಿಜಯ ಟೈಮ್ಸ್‌

  • ಪ್ರಮುಖ ಸುದ್ದಿ
  • ರಾಜಕೀಯ
  • ದೇಶ-ವಿದೇಶ
  • ಮನರಂಜನೆ
  • ಪ್ರಮುಖ ಸುದ್ದಿ
  • ರಾಜಕೀಯ
  • ದೇಶ-ವಿದೇಶ
  • ಮನರಂಜನೆ

Quick Links

  • About Us
  • Contact Us
  • For Advertisement
  • Privacy policy
  • About Us
  • Contact Us
  • For Advertisement
  • Privacy policy

Follow Us

Facebook Twitter Instagram Youtube

Download Vijaya Times App

Android
© 2022 Vijaya Times. All rights reserved.
No Result
View All Result
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
  • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ

© 2022 Vijaya Times. All Rights Reserved.