ಮಧ್ಯಪ್ರಾಚ್ಯ ಸಂಘರ್ಷ (warplane crashes in US Iran conflict) ಮತ್ತಷ್ಟು ತೀವ್ರ
ಅಮೆರಿಕದ F-15 ಯುದ್ಧವಿಮಾನ ಹೊಡೆದುರುಳಿಸಿದ್ದಾಗಿ ಇರಾನ್ ಹೇಳಿಕೆ
ಇರಾನ್ ಹೇಳಿಕೆ ಬಳಿಕ ಜಾಗತಿಕ ಮಟ್ಟದಲ್ಲಿ ಉದ್ವಿಗ್ನತೆ ಹೆಚ್ಚಳ
ಮಧ್ಯಪ್ರಾಚ್ಯದಲ್ಲಿ ನಡೆಯುತ್ತಿರುವ ಉದ್ವಿಗ್ನ ಪರಿಸ್ಥಿತಿಯ ನಡುವೆ ಇರಾನ್ ಮತ್ತೆ ಅಮೆರಿಕದ (warplane crashes in US Iran conflict) ಯುದ್ಧವಿಮಾನವನ್ನು ಹೊಡೆದುರುಳಿಸಿದ್ದಾಗಿ ಘೋಷಿಸಿದ್ದು, ಪ್ರದೇಶದಲ್ಲಿ ಉದ್ವಿಗ್ನತೆ ಮತ್ತಷ್ಟು ಹೆಚ್ಚಾಗಿದೆ.
ಹಾರ್ಮುಜ್ ಸಮುದ್ರಸಂಧಿಯ ಸಮೀಪ ಅಮೆರಿಕದ ಎಫ್-15 ಫೈಟರ್ ಜೆಟ್ (F-15 Fighter Jet) ಅನ್ನು ತನ್ನ ವಾಯು ರಕ್ಷಣಾ ವ್ಯವಸ್ಥೆ ಮೂಲಕ ಹೊಡೆದುರುಳಿಸಲಾಗಿದೆ ಎಂದು ಇರಾನ್ ಸೇನೆ ಹೇಳಿಕೊಂಡಿದೆ.

ಈ ಘಟನೆ ದೃಢಪಟ್ಟರೆ, ಅಮೆರಿಕ ಮತ್ತು ಅದರ ಮಿತ್ರ ರಾಷ್ಟ್ರಗಳ ವಿರುದ್ಧ ನಡೆಯುತ್ತಿರುವ ಸಂಘರ್ಷದಲ್ಲಿ ಹಲವಾರು ಯುದ್ಧವಿಮಾನಗಳು ಪತನಗೊಂಡಂತಾಗುತ್ತದೆ ಎಂದು ವರದಿಗಳು ಸೂಚಿಸುತ್ತಿವೆ.
ಇರಾನ್ ಮಾಧ್ಯಮಗಳು ನೀಡಿರುವ ಮಾಹಿತಿಯ ಪ್ರಕಾರ, ದೇಶದ ದಕ್ಷಿಣ ಕರಾವಳಿ ಪ್ರದೇಶದಲ್ಲಿ (warplane crashes in US Iran conflict) ಶತ್ರು ರಾಷ್ಟ್ರದ ಯುದ್ಧ
ವಿಮಾನ ಹಾರಾಟ ನಡೆಸುತ್ತಿದ್ದ ವೇಳೆ ನೆಲದಿಂದ ಗಾಳಿಗೆ ಕ್ಷಿಪಣಿ ವ್ಯವಸ್ಥೆ ಬಳಸಿಕೊಂಡು ಅದನ್ನು ಗುರಿಯಾಗಿಸಲಾಗಿದೆ.
ಈ ಕಾರ್ಯಾಚರಣೆಯ ವಿಡಿಯೋವನ್ನು ಕೂಡ ಇರಾನ್ ಮಾಧ್ಯಮಗಳು ಬಿಡುಗಡೆ ಮಾಡಿದ್ದು, ಅದರಲ್ಲಿ ವಾಯು ರಕ್ಷಣಾ ವ್ಯವಸ್ಥೆ ವಿಮಾನವನ್ನು ಲಾಕ್
ಮಾಡುತ್ತಿರುವ ದೃಶ್ಯಗಳಿವೆ ಎಂದು ಹೇಳಲಾಗಿದೆ. ಆದರೆ ಈ ಘಟನೆ ಬಗ್ಗೆ ಅಮೆರಿಕ ಅಥವಾ ಇತರ ಮಿತ್ರ ರಾಷ್ಟ್ರಗಳಿಂದ ಅಧಿಕೃತ ದೃಢೀಕರಣ ಇನ್ನೂ ಹೊರಬಂದಿಲ್ಲ.
ಎಫ್-15 ಯುದ್ಧವಿಮಾನವು ಅಮೆರಿಕದ ಅತ್ಯಂತ ಶಕ್ತಿಶಾಲಿ ಮತ್ತು ವಿಶ್ವಾಸಾರ್ಹ ಯುದ್ಧವಿಮಾನಗಳಲ್ಲಿ ಒಂದಾಗಿದೆ.
ಅಮೆರಿಕ ಹೊರತುಪಡಿಸಿ ಸೌದಿ ಅರೇಬಿಯಾ, ಇಸ್ರೇಲ್ ಮತ್ತು ಕತಾರ್ ಸೇರಿದಂತೆ ಕೆಲವು ರಾಷ್ಟ್ರಗಳೂ ಈ ಯುದ್ಧವಿಮಾನವನ್ನು ಬಳಸುತ್ತಿವೆ.
ಹೀಗಾಗಿ ಪತನಗೊಂಡ ವಿಮಾನ ಯಾವ ದೇಶದದ್ದೆಂಬುದು ಇನ್ನೂ ಸ್ಪಷ್ಟವಾಗಿಲ್ಲ. ಕೆಲವು ದಿನಗಳ ಹಿಂದೆ ಇರಾನ್ ಅಮೆರಿಕದ ಅತ್ಯಾಧುನಿಕ ಎಫ್-35 ಯುದ್ಧವಿಮಾನವನ್ನೂ ಗುರಿಯಾಗಿಸಿದೆ ಎಂದು ಹೇಳಿಕೊಂಡಿತ್ತು.
ಆದರೆ ಅಮೆರಿಕದ ರಕ್ಷಣಾ ಅಧಿಕಾರಿಗಳು ಆ ವಿಮಾನ ತುರ್ತು ಲ್ಯಾಂಡಿಂಗ್ (Landing) ಮಾಡಿದ್ದು, ಪೈಲಟ್ ಸುರಕ್ಷಿತನಾಗಿದ್ದಾನೆ ಎಂದು ತಿಳಿಸಿದ್ದರು.
ಮಧ್ಯಪ್ರಾಚ್ಯದಲ್ಲಿ ಕಳೆದ ಕೆಲವು ವಾರಗಳಿಂದ ನಡೆಯುತ್ತಿರುವ ಸಂಘರ್ಷದಲ್ಲಿ ಯುದ್ಧವಿಮಾನ ಪತನಗೊಂಡ ಘಟನೆಗಳು ಹೆಚ್ಚುತ್ತಿವೆ.
ಮಾರ್ಚ್ 1 ರಂದು ಕುವೈತ್ ವಾಯು ರಕ್ಷಣಾ ಪಡೆಗಳು ತಪ್ಪಾಗಿ ಅಮೆರಿಕದ ಎಫ್-15 ಸ್ಟ್ರೈಕ್ (F-15 Strike) ಈಗಲ್ ಯುದ್ಧವಿಮಾನಗಳನ್ನು ಹೊಡೆದುರುಳಿಸಿದ್ದ ಘಟನೆ ಕೂಡ ನಡೆದಿದೆ ಎಂದು ವರದಿಗಳು ಹೇಳಿವೆ.
ಅದಲ್ಲದೆ ಅಮೆರಿಕದ ಕೆಸಿ-135 ಇಂಧನ ತುಂಬುವ ವಿಮಾನವೂ ಅನಿರ್ದಿಷ್ಟ ಘಟನೆ ನಂತರ ಪತನಗೊಂಡಿತ್ತು ಎಂದು ಅಮೆರಿಕ ಮಿಲಿಟರಿ ತಿಳಿಸಿತ್ತು.
ಈ ಘಟನೆಗಳು ಯುದ್ಧದ ಪರಿಸ್ಥಿತಿ ಎಷ್ಟು ಸಂಕೀರ್ಣವಾಗಿದೆ ಎಂಬುದನ್ನು ತೋರಿಸುತ್ತಿವೆ.
ಒಟ್ಟಿನಲ್ಲಿ ಅಮೆರಿಕ, ಇರಾನ್, ಇಸ್ರೇಲ್ ಮತ್ತು ಇತರ ಮಧ್ಯಪ್ರಾಚ್ಯ ರಾಷ್ಟ್ರಗಳ ನಡುವಿನ ಸಂಘರ್ಷ ದಿನದಿಂದ ದಿನಕ್ಕೆ ತೀವ್ರವಾಗುತ್ತಿದ್ದು, ಜಾಗತಿಕ ರಾಜಕೀಯ ಮತ್ತು ಆರ್ಥಿಕತೆಯ ಮೇಲೂ ಪರಿಣಾಮ ಬೀರುವ ಸಾಧ್ಯತೆ ಇದೆ.
ಯುದ್ಧ ವಿರಾಮದ ಬಗ್ಗೆ ಕೆಲವೊಂದು ಮಾತುಕತೆಗಳು ನಡೆಯುತ್ತಿವೆ ಎಂಬ ಮಾಹಿತಿ ಇದ್ದರೂ, ಪರಿಸ್ಥಿತಿ ಇನ್ನೂ ಸಂಪೂರ್ಣವಾಗಿ ನಿಯಂತ್ರಣಕ್ಕೆ ಬಂದಿಲ್ಲ.
ಮುಂದಿನ ದಿನಗಳಲ್ಲಿ ಈ ಸಂಘರ್ಷ ಮತ್ತಷ್ಟು ವಿಸ್ತರಿಸುವ ಸಾಧ್ಯತೆ ಇರುವುದರಿಂದ ವಿಶ್ವದ ರಾಷ್ಟ್ರಗಳು ಆತಂಕದಿಂದ ಪರಿಸ್ಥಿತಿಯನ್ನು ಗಮನಿಸುತ್ತಿವೆ.
ಇದನ್ನು ಓದಿ : https://vijayatimes.com/zomato-increased-platform-fees/