ಭಾರತದ ಆಲ್ ರೌಂಡರ್ ವಾಷಿಂಗಟನ್ ಸುಂದರ್ ವೆಸ್ಟ್ ಇಂಡೀಸ್ ವಿರುದ್ದದ ಟಿ- 20 ಸರಣಿಯಿಂದ ಹೊರ ಉಳಿದಿದ್ದಾರೆ. ಕೋವಿಡ್-19 ಸೋಂಕಿನ ಕಾರಣದಿಂದಾಗಿ ಕೊನೆಯ ಕ್ಷಣದಲ್ಲಿ ದಕ್ಷಿಣ ಆಫ್ರಿಕಾ ಪ್ರವಾಸ ಮಿಸ್ ಮಾಡಿಕೊಂಡಿದ್ದ ತಮಿಳುನಾಡು ಮೂಲದ ಆಲ್ರೌಂಡರ್ ವಾಷಿಂಗ್ಟನ್ ಸುಂದರ್ ನಂತರ ಟೀಂ ಇಂಡಿಯಾಗೆ ಕಂಬ್ಯಾಕ್ ಮಾಡಿದ್ರು. ಏಕದಿನ ಸರಣಿಯಲ್ಲಿ ಭಾಗವಹಿಸಿದ್ದ ಸುಂದರ್ 10 ತಿಂಗಳುಗಳ ಕಾಲ ಅಂತರಾಷ್ಟ್ರೀಯ ಕ್ರಿಕೆಟ್ನಿಂದ ಹೊರಗುಳಿದಿದ್ರು. ಆದ್ರೆ ಏಕದಿನ ಸರಣಿ ಆಡಿದ ಬೆನ್ನಲ್ಲೇ ಮತ್ತೆ ಅಲಭ್ಯರಾಗಿದ್ದು, ಕೊರೊನಾದಿಂದಾಗಿ ಟಿ-20 ಸರಣಿ ಮಿಸ್ ಮಾಡಿಕೊಂಡಿದ್ದಾರೆ.

ಟಿ20 ಸರಣಿಯ ವೇಳಾಪಟ್ಟಿ:
ಫೆಬ್ರವರಿ 16 , ಬುಧವಾರ, ಕೋಲ್ಕತ್ತಾ 7 ಗಂಟೆ
ಫೆಬ್ರವರಿ 18 , ಶುಕ್ರವಾರ, ಕೋಲ್ಕತ್ತಾ 7 ಗಂಟೆ
ಫೆಬ್ರವರಿ 20 , ಭಾನುವಾರ, ಕೋಲ್ಕತ್ತಾ 7 ಗಂಟೆ

ಟಿ-20 ತಂಡ : ರೋಹಿತ್ ಶರ್ಮಾ (ನಾಯಕ), ಕೆ.ಎಲ್ ರಾಹುಲ್ (ಉಪನಾಯಕ), ಇಶಾನ್ ಕಿಶನ್, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಸೂರ್ಯ ಕುಮಾರ್ ಯಾದವ್, ರಿಷಭ್ ಪಂತ್ (ವಿಕೆಟ್ ಕೀಪರ್), ವೆಂಕಟೇಶ್ ಅಯ್ಯರ್, ದೀಪಕ್ ಚಾಹರ್, ಶಾರ್ದೂಲ್ ಠಾಕೂರ್, ರವಿ ಬಿಷ್ಣೋಯ್, ಅಕ್ಸರ್ ಪಟೇಲ್, ಯುಜವೇಂದ್ರ ಚಾಹಲ್, ಮೊಹಮ್ಮದ್ ಸಿರಾಜ್, ಭುವನೇಶ್ವರ್, ಅವೇಶ್ ಖಾನ್, ಹರ್ಷಲ್ ಪಟೇಲ್
ನ್ಯೂಜಿಲೆಂಡ್ ವಿರುದ್ಧ ಚೊಚ್ಚಲ ಟಿ-20 ಸರಣಿ ಹಾಗೂ ವಿಂಡೀಸ್ ವಿರುದ್ಧ ಏಕದಿನ ಸರಣಿಯಲ್ಲಿ ಯಶಸ್ವಿಯಾಗಿ ತಂಡವನ್ನ ಮುನ್ನಡೆಸಿದ್ದ ರೋಹಿತ್ ಶರ್ಮಾ ವಿಂಡೀಸ್ ವಿರುದ್ಧ ಟಿ20 ಸರಣಿಯಲ್ಲಿ ಗೆಲ್ಲುವ ವಿಶ್ವಾಸವನ್ನು ಹೊಂದಿದೆ.