ಬೇಸಗೆ ಕಾಲದಲ್ಲಿ ನೀರು ಎಷ್ಟು ಕುಡಿದರೂ ಸಾಕಾಗೋದಿಲ್ಲ ಅನ್ನಿಸ್ತಿತ್ತು. ಆದರೆ ಅದು ದೇಹವನ್ನು ತಂಪಾಗಿಟ್ಟು, ಡಿಹೈಡ್ರೇಷನ್ (Dehydration) ಆಗದಂತೆ ನೊಡಿಕೊಳ್ಳುವಲ್ಲಿ ಮುಖ್ಯ ಪಾತ್ರ ಇತ್ತು, ಆದರೆ ಈಗ ಮಳೆಗಾಲ ಆರಂಭವಾಗಿದೆ, ಈಗ ಎಷ್ಟು ನೀರು ಕುಡಿಯಬೇಕು ಎಂಬುದು ಹಲವರ ಪ್ರಶ್ನೆಯಾಗಿದೆ. ದೇಹ ಪ್ರಕೃತಿಗೆ ಮತ್ತದರ ಜೀವಸೆಲೆಗಳಿಗೆ ನೀರು ಅತ್ಯಾವಶ್ಯಕ, ನೀರು ಕುಡಿಯಲು ಅಥವಾ ಸೇವಿಸಲು ಯಾವುದೇ ಸೀಸನ್ ಇಲ್ಲ. ದೇಹದ ಆರೋಗ್ಯ ರಕ್ಷಣೆಗೆ ನೀರು ಬೇಕೆ ಬೇಕು ಹಾಗಾಗಿ ತಜ್ಞರ ಪ್ರಕಾರ ದಿನವೊಂದಕ್ಕೆ ಮಳೆಗಾಲದ ಹೆಚ್ಚು ದಣಿಯದ ದೇಹಕ್ಕೆ 3-3.5 ಲೀಟರ್ ನೀರು ಅವಶ್ಯಕವಾಗಿದೆ.

ಆಯುರ್ವೆದ (Ayurveda) ಚಿಕಿತ್ಸಾ ಪ್ರಕಾರ, ದೇಹ ಪ್ರಕೃತಿಯನ್ನು ಪಿತ್ತ ಹಾಗೂ ವಾತ, ಕಫ ಎಂಬಂತೆ ವಿಭಾಗಿಸುತ್ತಾರೆ, ಪಿತ್ತ ಪ್ರಕೃತಿಯವರು ನಾಲ್ಕು ಲೀಟರ್ ಹಾಗೂ ವಾತ ದೋಷದವರು 8-10 ಗ್ಲಾಸ್ ನೀರು ಕುಡಿಯುವುದು ಬಹಳ ಮುಖ್ಯ, ಜೀರ್ಣಕ್ರಿಯೆ, ಚರ್ಮದ ಸುಸ್ಥಿತಿಗೆ ನೀರು ಜೀವ ದ್ರವ್ಯವೇ ಆಗಿದೆ.
ಮಳೆಗಾಲ ಅಲ್ಲಲ್ಲಿ ನೀರು ಕುಡಿದು ಜ್ವರ, ಸಾಂಕ್ರಾಮಿಕ ಕಾಯಿಲೆಗಳಿಗೂ ತುತ್ತಾಗುತ್ತಾರೆ, ಕಾಲರ, ಟೈಫಾಯಿಡ್ (Cholera, Typhoid) ಸಮಸ್ಯೆಗಲು ಮಳೆಗಾಲದಲ್ಲಿ ಸಾಮಾನ್ಯ ಆಗಿಬಿಟ್ಟಿವೆ, ಇದಕ್ಕೆ ಸರಳ ಮದ್ದು, ನೀರನ್ನು ಕುದಿಸಿ, ಆರಿಸಿ, ಶೋಧಿಸಿ ಕುಡಿಯುವುದು. ಇದಲಲ್ಲಿ ಯಾವುದೇ ಬ್ಯಾಕ್ಟೀರಿಯಾ (Bacteria) ಅಥವಾ ರೋಗಾಣುಗಳಿದ್ದರೆ ನಶಿಸಿಹೋಗುತ್ತದೆ. ಕೆಲವರು ಮಾಡುವ ತಪ್ಪು ಕೇವಲ ನೀರನ್ನು ಕುದಿಸಿ ಆರಿಸಿ ಕುಡಿಯುತ್ತಾರೆ, ಆದರೆ ಅದರಲ್ಲಿನ ರೋಗಾಣುಗಳು ಸತ್ತಿದ್ದರೂ ದೇಹ ಸೇರುವ ಸಾಧ್ಯತೆಗಳಿರುತ್ತದೆ, ಶೋಧಿಸಿ ಕುಡಿಯುವುದು ಇಲ್ಲಿ ಮುಖ್ಯವಾಗುತ್ತದೆ.
ಬಿಸಿಲಾಗಲಿ, ಮಳೆಯಾಗಲಿ ನೀರು ಕುಡಿಯುವುದು ಮರೆತರೆ ಅತವಾ ನಿರ್ಲಕ್ಷ್ಯ ಮಾಡಿದರೇ ಸಮಸ್ಯೆ ಎದುರಿಸಬೇಕಾಗುತ್ತದೆ, ಒಟ್ಟು ದೇಹದ ಚೈತನ್ಯಕ್ಕೆ ನೀರು ಅವಶ್ಯಕ ಹೀಗಾಗಿ ಸರ್ವರೂ ಜಾಗರೂಕರಗಾಇ ನೀರು ಸೀವಿಸುವುದು ಉತ್ತಮ ಹವ್ಯಾಸಗಳಲ್ಲಿ ಒಂದಾಗಿದೆ. ಬೆಳಗ್ಗೆ ಎದ್ದೊಡನೆ ಒಂದು ಲೋಟ ನೀರು ಕುಡಿದರೇ ದೇಹಕ್ಕೆ ನವ ಚೈತನ್ಯ ಸಿಕ್ಕಂತೆಯೇ ಎಂಬುದು ಫಿಟ್ನೆಸ್ (Fitness) ಸಲಹೆಗಾರರ ಅಭಿಪ್ರಾಯವೂ ಆಗಿದೆ.