ಅಮೇರಿಕಾ : ಅಫ್ಘಾನಿಸ್ತಾನದಲ್ಲಿ(Afghanisthan) ಅಮೇರಿಕಾದ(America) ಗುಪ್ತಚರ ಸಂಸ್ಥೆ ಸಿಐಎ(CIA) ನಡೆಸಿದ, ಡ್ರೋನ್ ದಾಳಿಯಲ್ಲಿ ಅಲ್ ಖೈದಾ ನಾಯಕ(Al-Qeada) ಅಯ್ಮಾನ್ ಅಲ್-ಜವಾಹಿರಿ(Ayman al-Zawahiri) ಸಾವನ್ನಪ್ಪಿದ್ದಾನೆ. ಈ ದಾಳಿಯ ನಂತರ ಹೇಳಿಕೆ ಬಿಡುಗಡೆ ಮಾಡಿರುವ ಅಮೇರಿಕಾ(America) ಅಧ್ಯಕ್ಷ(President) ಜೋ ಬಿಡೆನ್(Joe Biden), ಅಲ್ ಖೈದಾ ನಾಯಕ ಅಯ್ಮಾನ್ ಅಲ್-ಜವಾಹಿರಿಗೆ ನ್ಯಾಯವನ್ನು ನೀಡಲಾಗಿದೆ ಎಂದು ಹೇಳಿದ್ದಾರೆ.

ನನ್ನ ನಿರ್ದೇಶನದ ಮೇರೆಗೆ, ಅಮೇರಿಕಾ ಸೇನೆ(American Army) ಅಫ್ಘಾನಿಸ್ತಾನದ(Afghanistan) ಕಾಬೂಲ್ನಲ್ಲಿ(Kabul) ಯಶಸ್ವಿಯಾಗಿ ವೈಮಾನಿಕ ದಾಳಿಯನ್ನು ನಡೆಸಿತು. ಅಮೇರಿಕಾದ ಸೇನೆ ಅಲ್-ಖೈದಾ ನಾಯಕ ಅಯ್ಮಾನ್ ಅಲ್-ಜವಾಹಿರಿಯನ್ನು ಹತ್ಯೆ ಮಾಡುವ ಮೂಲಕ ಆತನಿಗೆ ನ್ಯಾಯವನ್ನು ನೀಡಲಾಗಿದೆ ಎಂದು ಅಧ್ಯಕ್ಷ ಜೋ ಬಿಡೆನ್ ಟ್ವೀಟ್(Tweet) ಮಾಡಿದ್ದಾರೆ. ಅಫ್ಘಾನಿಸ್ತಾನ ಮತ್ತು ಅದರಾಚೆಗಿನ ಭಯೋತ್ಪಾದನಾ ನಿಗ್ರಹ ಕಾರ್ಯಾಚರಣೆಯನ್ನು ಅಮೇರಿಕಾ ಪರಿಣಾಮಕಾರಿಯಾಗಿ ನಡೆಸುವುದನ್ನು ಮುಂದುವರಿಸುತ್ತದೆ ಎಂದು ಅಮೇರಿಕದ ಜನರಿಗೆ ನಾನು ಭರವಸೆ ನೀಡಿದ್ದೇನೆ.
ಈಗ ನಾವು ಅದನ್ನು ಮಾಡಿದ್ದೇವೆ ಎಂದು ಜೋ ಬಿಡೆನ್ ವೀಡಿಯೊ(Video) ಸಂದೇಶದಲ್ಲಿ ಹೇಳಿದ್ದಾರೆ. ಮತ್ತೊಂದು ಟ್ವೀಟ್ನಲ್ಲಿ, ಅಮೇರಿಕಾವನ್ನು ಹಾನಿ ಮಾಡಲು ಬಯಸುವವರ ವಿರುದ್ಧ ನಮ್ಮ ಸಂಕಲ್ಪ ಮತ್ತು ಅಮೇರಿಕನ್ ಜನರನ್ನು ರಕ್ಷಿಸುವ ನಮ್ಮ ಸಾಮರ್ಥ್ಯವನ್ನು ಪ್ರದರ್ಶಿಸುವುದನ್ನು ಮುಂದುವರೆಸಿದ್ದೇವೆ. ಇಂದು ರಾತ್ರಿ ನಾವು ಸ್ಪಷ್ಟಪಡಿಸಿದ್ದೇವೆ. ಎಷ್ಟು ಸಮಯ ತೆಗೆದುಕೊಂಡರೂ ಪರವಾಗಿಲ್ಲ. ನೀವು ಎಲ್ಲಿ ಮರೆಯಾಗಲು ಪ್ರಯತ್ನಿಸಿದರೂ ಪರವಾಗಿಲ್ಲ. ನಾವು ನಿಮ್ಮನ್ನು ಹುಡುಕುತ್ತೇವೆ ಎಂದು ಟ್ವೀಟ್ ಮಾಡಿದ್ದಾರೆ.

ಅಲ್ ಖೈದಾ ನಾಯಕ ಅಯ್ಮಾನ್ ಅಲ್-ಜವಾಹಿರಿ ಸೆಪ್ಟೆಂಬರ್ 11, 2001 ರಂದು ಅಮೇರಿಕಾದ ಮೇಲೆ ದಾಳಿಯ ಸಂಚು ನಡೆಸಿದ ಒಸಾಮಾ ಬಿನ್ ಲಾಡೆನ್ಗೆ(Osama Bin Laden) ಸಹಾಯ ಮಾಡಿದ್ದನು. ಹೀಗಾಗಿ ಅಯ್ಮಾನ್ ಅಲ್-ಜವಾಹಿರಿಯನ್ನು ಹತ್ಯೆ ಮಾಡಲು ಅಮೇರಿಕಾ ಪಣ ತೊಟ್ಟಿತ್ತು. ಹೀಗಾಗಿ ಅನೇಕ ವರ್ಷಗಳಿಂದ ಅಯ್ಮಾನ್ ಅಲ್-ಜವಾಹಿರಿ ಹತ್ಯೆ ಮಾಡಲು ಪ್ರಯತ್ನ ನಡೆಸುತ್ತಲೇ ಇತ್ತು. ಇದೀಗ ಅಲ್-ಜವಾಹಿರಿ ಹತ್ಯೆ ಮಾಡುವ ಮೂಲಕ ಅಮೇರಿಕಾ ಯಶಸ್ಸು ಸಾಧಿಸಿದೆ.