Bengaluru : ಭಯೋತ್ಪಾದನಾ ಚಟುವಟಿಕೆಗಳ(We have taken it Seriously) ಬಗ್ಗೆ ಕರ್ನಾಟಕ ಪೊಲೀಸರು(Karnataka Police) ಜಾಗರೂಕರಾಗಿದ್ದಾರೆ.
ರಾಜ್ಯದಲ್ಲಿ ಇದುವರೆಗೂ 18 ಭಯೋತ್ಪಾದಕ ಸ್ಲೀಪರ್ ಸೆಲ್ಗಳನ್ನು ರಾಜ್ಯ ಪೊಲೀಸರು ಭೇದಿಸಿದ್ದಾರೆ ಎಂದು ಕರ್ನಾಟಕ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಸಿಎಂ ಬೊಮ್ಮಾಯಿ(We have taken it Seriously) ಅವರು, “ಕರ್ನಾಟಕ ಪೊಲೀಸರು 18 ಟೆರರ್ ಸ್ಲೀಪರ್ ಸೆಲ್ಗಳನ್ನು ಭೇದಿಸಿ ಜೈಲಿಗೆ ಕಳುಹಿಸಿದ್ದಾರೆ ಎಂಬುದು ನಿಮಗೆ ತಿಳಿದಿರಬೇಕು.
ರಾಜ್ಯದಲ್ಲಿ ಭಯೋತ್ಪಾದನಾ ಚಟುವಟಿಕೆಗಳ ಬಗ್ಗೆ ಅವರು ಎಚ್ಚರದಿಂದಿದ್ದಾರೆ.
ಇದನ್ನೂ ಓದಿ : https://vijayatimes.com/5-86-lakh-udid-cards-issued/
ರಾಷ್ಟ್ರೀಯ ತನಿಖಾ ಸಂಸ್ಥೆ(NIA) ಮಂಗಳೂರು ಸ್ಫೋಟದ ಶಂಕಿತ ಉಗ್ರರ ಹಿಂದೆ ಅಂತಾರಾಷ್ಟ್ರೀಯ ಅಥವಾ ರಾಷ್ಟ್ರೀಯ ಭಯೋತ್ಪಾದಕ ಸಂಘಟನೆಗಳ ಚಲನವಲನಗಳನ್ನು ಪತ್ತೆಹಚ್ಚಲು ಕ್ರಮಗಳನ್ನು ಆರಂಭಿಸಿದೆ.
ನಾವು ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದೇವೆ. ಬೇರೆ ರಾಜ್ಯಗಳೊಂದಿಗೆ ಸಂಪರ್ಕ ಹೊಂದಿರುವ ಕೆಲವರು ಕರ್ನಾಟಕದಲ್ಲಿ ಭಯೋತ್ಪಾದನಾ ಚಟುವಟಿಕೆ ನಡೆಸುತ್ತಿದ್ದಾರೆ ಎಂದು ತಿಳಿಸಿದ್ದಾರೆ.
https://youtu.be/cViS_eJ77Vo ಕ್ರಷರ್ ನಿಂದ ನೆಮ್ಮದಿ ಕಳೆದುಕೊಂಡ ಸೌದತ್ತಿ ಗ್ರಾಮಸ್ಥರು!
ಇದೇ ವೇಳೆ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ (ಕಾನೂನು ಮತ್ತು ಸುವ್ಯವಸ್ಥೆ) ಅಲೋಕ್ ಕುಮಾರ್ ಮಾತನಾಡಿ, ಮಂಗಳೂರು ಸ್ಪೋಟದ ಆರೋಪಿಯ ಕರ್ನಾಟಕದ ಹೊರಗಿನ ಜನರೊಂದಿಗೆ ಸಂಪರ್ಕವನ್ನು ಕಂಡುಹಿಡಿಯಲು ಪೊಲೀಸರು ಪ್ರಯತ್ನಿಸುತ್ತಿದ್ದಾರೆ.
ಶಿವಮೊಗ್ಗ(Shivamoga) ಜಿಲ್ಲೆಯ ತೀರ್ಥಹಳ್ಳಿಯ ಶಾರಿಕ್ ಎಂಬಾತ ಡಿಟೋನೇಟರ್,

ವೈರ್ ಮತ್ತು ಬ್ಯಾಟರಿ ಅಳವಡಿಸಿದ್ದ ಪ್ರೆಶರ್ ಕುಕ್ಕರ್ನೊಂದಿಗೆ ಆಟೋರಿಕ್ಷಾದಲ್ಲಿ ಪ್ರಯಾಣಿಸುತ್ತಿದ್ದಾಗ ಮಂಗಳೂರು ಹೊರವಲಯದಲ್ಲಿ ಸ್ಫೋಟ ಸಂಭವಿಸಿದೆ. ಗಂಭೀರ ಹಾನಿ ಉಂಟು ಮಾಡುವ ಉದ್ದೇಶದಿಂದ ಈ ಕೃತ್ಯ ಎಸಗಲಾಗಿದೆ.
ಇದೊಂದು ಭಯೋತ್ಪಾದನಾ ಕೃತ್ಯವಾಗಿದ್ದು, ರಾಜ್ಯ ಪೊಲೀಸರು ಮತ್ತು ಕೇಂದ್ರೀಯ ತನಿಖಾ ಸಂಸ್ಥೆಗಳು ಜಂಟಿಯಾಗಿ ಈ ಪ್ರಕರಣವನ್ನು ಕೈಗೆತ್ತಿಕೊಂಡಿವೆ.
ಇದನ್ನೂ ಓದಿ : https://vijayatimes.com/tipu-nija-kanasugalu/
ಈಗಾಗಲೇ ಹಲವು ಮಹತ್ವದ ಸುಳಿವುಗಳ ಲಭ್ಯವಾಗಿದ್ದು, ತನಿಖೆಯನ್ನು ತೀವ್ರಗೊಳಿಸಿದ್ದೇವೆ. ಕರ್ನಾಟಕದಲ್ಲಿ ಯಾವುದೇ ರೀತಿಯ ಭಯೋತ್ಪಾದನಾ ಕೃತ್ಯಗಳನ್ನು ನಡೆಸದಂತೆ ತಡೆಯಲು ರಾಜ್ಯ ಪೊಲೀಸರು ಸಮರ್ಥರಾಗಿದ್ದಾರೆ.
ಈ ಪ್ರಕರಣವನ್ನು ನಾವು ಗಂಭೀರವಾಗಿ ತೆಗೆದುಕೊಂಡಿದ್ದೇವೆ ಎಂದು ಹೇಳಿದ್ದಾರೆ.
- ಮಹೇಶ್.ಪಿ.ಎಚ್