India : ನಟ ಅಲ್ಲು ಅರ್ಜುನ್(We Want Pushpa 2 Update) ಈ ತಿಂಗಳು ಪುಷ್ಪ : ದಿ ರೂಲ್ ಎರಡನೇ ಭಾಗದ ಚಿತ್ರೀಕರಣವನ್ನು ಪ್ರಾರಂಭಿಸಲು ಸಿದ್ಧರಾಗಿದ್ದಾರೆ.
ಈ ಮಧ್ಯೆ ಅಲ್ಲು ಅರ್ಜುನ್ ಅಭಿಮಾನಿಗಳು(Allu Arjun Fans) ಬೀದಿಗಿಳಿದು ಪುಷ್ಪ ೨ ಚಿತ್ರದ ಬಗ್ಗೆ ಮಾಹಿತಿಯನ್ನು ನೀಡಿ ಎಂದು ಮನವಿ ಮಾಡಿದ್ದಾರೆ.

‘ನಮಗೆ ಪುಷ್ಪ 2 ಅಪ್‌ಡೇಟ್ ಬೇಕು’ ಎಂಬ ಬ್ಯಾನರ್‌ಗಳನ್ನು ಕೈಯಲ್ಲಿ ಹಿಡಿದುಕೊಂಡು ದೊಡ್ಡ ಗುಂಪುಗಳಲ್ಲಿ ಅಭಿಮಾನಿಗಳು ಬೀದಿಗಿಳಿದು ಚಿತ್ರತಂಡವನ್ನು ಕೇಳಿದ್ದಾರೆ.
ಇತ್ತೀಚಿಗಷ್ಟೇ ಪುಷ್ಪಾ ಚಿತ್ರದ ಛಾಯಾಗ್ರಾಹಕ ಮಿರೋಸ್ಲಾ ಕುಬಾ ಬ್ರೋಜೆಕ್ ಅವರು ಸೆಟ್‌ಗಳಿಂದ ಫೋಟೊವನ್ನು Instagram ನಲ್ಲಿ ಹಂಚಿಕೊಂಡರು.
ಪೋಸ್ಟ್ ನಲ್ಲಿ ಇದೊಂದು ಸಾಹಸದ ಪ್ರಾರಂಭ, ಈ ತಿಂಗಳ ಕೊನೆಯಲ್ಲಿ ರೆಗ್ಯುಲರ್ ಶೂಟಿಂಗ್ ಆರಂಭವಾಗಲಿದೆ ಎಂದು ಹೇಳಿಕೊಂಡಿದ್ದಾರೆ. ಈ ನಡುವೆ ಇಂಡಸ್ಟ್ರಿ ಟ್ರ್ಯಾಕರ್ ರಮೇಶ್ ಬಾಲಾ ಅವರು,
ಅಲ್ಲು ಅರ್ಜುನ್ ಅಭಿಮಾನಿಗಳು ತಮ್ಮ ಕೈಯಲ್ಲಿ ಬ್ಯಾನರ್‌ಗಳನ್ನು ಹಿಡಿದು ಬೀದಿ ಬೀದಿಗಳಲ್ಲಿ ತಿರುಗುತ್ತಿರುವ ಫೋಟೊವನ್ನು ತಮ್ಮ ಟ್ವಿಟರ್(Twitter) ಖಾತೆಯಲ್ಲಿ ಹಂಚಿಕೊಂಡಿದ್ದಾರೆ.
ಇದನ್ನೂ ಓದಿ : https://vijayatimes.com/chetan-statement-on-tipu/
ಅಲ್ಲು ಅರ್ಜುನ್ ಅಭಿಮಾನಿಗಳು ಪುಷ್ಪಾ ೨ ಸಿನಿಮಾದ ಮಾಹಿತಿ ನಮಗೆ ಬೇಕು ಎಂಬ ಬ್ಯಾನರ್ ಹಿಡಿದು ಬೀದಿ ಬೀದಿಗಳಲ್ಲಿ ನಿಂತು, ಚಿತ್ರತಂಡವನ್ನು ಮನವಿ ಮಾಡಿದ್ದಾರೆ.
ಕಳೆದ ವರ್ಷ ಬಿಡುಗಡೆಗೊಂಡಿದ್ದ ಪುಷ್ಪಾ ೧ ಸಿನಿಮಾದ ಯಶಸ್ಸಿನ ನಂತರ, ಅಲ್ಲು ಅರ್ಜುನ್ ಅಭಿಮಾನಿಗಳು ಅದರ ಮುಂದಿನ ಭಾಗವಾದ ಪುಷ್ಪಾ ೨ ಚಿತ್ರದ ಮಾಹಿತಿಯನ್ನು ತಿಳಿಯಲು ಬೀದಿಗಿಳಿದು ತಮ್ಮದೇ ಶೈಲಿಯಲ್ಲಿ ಮನವಿ ಮಾಡಿದ್ದಾರೆ.
ಅಲ್ಲು ಅರ್ಜುನ್ ಅವರ ಅಭಿಮಾನಿಗಳ ಈ ವೀಡಿಯೋ ಸಂಪೂರ್ಣವಾಗಿ ಅದ್ಭುತವಾಗಿದೆ, ಹಿಂದೆಂದೂ ಕಂಡಿರದ ವಿದ್ಯಮಾನ ಇದು! ಅವರ ಧ್ವನಿಯಲ್ಲಿ ಉತ್ಸಾಹ ಜೋರಾಗಿದೆ ಎಂದು ರಮೇಶ್ ಟ್ವೀಟ್ ಮಾಡಿದ್ದಾರೆ.
‘ನಮಗೆ ಪುಷ್ಪ 2 ಅಪ್‌ಡೇಟ್ ಬೇಕು’ ಎಂಬ ಬ್ಯಾನರ್‌ಗಳನ್ನು ಕೈಯಲ್ಲಿ ಹಿಡಿದುಕೊಂಡು ಗುಂಪುಗಳಲ್ಲಿ ಅಭಿಮಾನಿಗಳು ಬೀದಿಗಿಳಿದಿರುವುದು ವಿಚಿತ್ರ ಎಂದು ಅನಿಸಿದೆ.

ಪುಷ್ಪಾ : ದಿ ರೂಲ್, ಎರಡನೇ ಭಾಗವು ಅಲ್ಲು ಅರ್ಜುನ್ ಮತ್ತು ಫಹದ್ ಫಾಸಿಲ್ ನಡುವೆ ಇರುವ ಕಥೆ ಎಂಬುದನ್ನು ಮೊದಲ ಭಾಗದ ಅಂತ್ಯದಲ್ಲಿ ತೋರಿಸಿರುವುದರಿಂದ ೨ನೇ ಭಾಗದಲ್ಲಿ ಇದು ಪ್ರಮುಖವಾಗಿರಲಿದೆ ಎಂಬುದು ಅಭಿಮಾನಿಗಳ ನಿರೀಕ್ಷೆ!
ಸದ್ಯ ಅಲ್ಲು ಅರ್ಜುನ್ ಪುಷ್ಪಾ ೨ ಚಿತ್ರದಲ್ಲಿ ನಟಿಸಲು ಸಾಕಷ್ಟು ತಯಾರಿ ಮಾಡಿಕೊಂಡಿರುವುದರ ಬಗ್ಗೆ ಈ ಹಿಂದೆಯೇ ಚಿಕ್ಕದಾಗಿ ಮಾಹಿತಿ ಹಂಚಿಕೊಂಡಿದ್ದರು. ಪುಷ್ಪಾ ೧ ರಲ್ಲಿ ಅಲ್ಲು ಅರ್ಜುನ್ಗೆ ನಾಯಕಿಯಾಗಿ ಸಾಥ್ ನೀಡಿ,
ಮಿಂಚಿದ್ದ ನಟಿ ರಶ್ಮಿಕಾ ಮಂದಣ್ಣ(Rashmika Mandanna) ಪಾತ್ರದ ಬಗ್ಗೆ ಕೂಡ ಅಭಿಮಾನಿಗಳು ನಿರೀಕ್ಷಿಸಿದ್ದಾರೆ.