Uttar Pradesh : ಉತ್ತರ ಪ್ರದೇಶದ(UttarPradesh) ಲಖಿಂಪುರ ಖೇರಿಯಲ್ಲಿ(Lakhimpur Kheri) ಮೃತ(Dead) ಯುವತಿಯರ ಕುಟುಂಬಸ್ಥರು ತಮ್ಮ ಬೇಡಿಕೆ ಈಡೇರುವವರೆಗೂ ಶವ ಸಂಸ್ಕಾರ(Funeral) ಮಾಡುವುದಿಲ್ಲ ಎಂದು ನಿರಾಕರಿಸಿದ್ದಾರೆ.

ಇಬ್ಬರು ಯುವತಿಯರನ್ನು ಅತ್ಯಾಚಾರವೆಸಗಿ, ಹತ್ಯೆಗೈದು ಮರಕ್ಕೆ ನೇಣು ಹಾಕಿದ್ದಾರೆ ಎಂದು ಯುವತಿಯರ ತಾಯಿ ಆರೋಪಿಸಿ ಪೊಲೀಸ್ ಠಾಣೆಯಲ್ಲಿ(Police Station) ಪ್ರಕರಣ ದಾಖಲಿಸಿದ್ದರು. ಪೋಸ್ಟ್ ಮಾರ್ಟಮ್(Autopsy Report) ವರದಿ ಕೂಡ ಬಂದಿದ್ದು, ಪೊಲೀಸರು ಅಪರಾಧಿಗಳಿಗೆ ಸೂಕ್ತ ಶಿಕ್ಷೆಯನ್ನು ವಿಧಿಸಲಿದ್ದೇವೆ ಎಂದು ಹೇಳಿಕೆ ನೀಡಿದ್ದಾರೆ.
ಈ ಕುರಿತು ಪ್ರತಿಕ್ರಿಯೆ ಕೊಟ್ಟ ಉತ್ತರಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್(Yogi Adityanath), ಅತ್ಯಾಚಾರ(Rape) ಎಸಗಿದ ಆರೋಪಿಗಳಿಗೆ ಅತ್ಯಂತ ಕಠಿಣ ಶಿಕ್ಷೆ ವಿಧಿಸಲಿದ್ದೇವೆ ಎಂಬ ಭರವಸೆ ನೀಡಿದ್ದಾರೆ. ಇನ್ನು ಯುವತಿ ಕುಟುಂಬಸ್ಥರು ದುಃಖದಲ್ಲಿದ್ದು, ತಮ್ಮ ಅತ್ಯಾಚಾರಕ್ಕೆ ಬಲಿಯಾದ ಮಕ್ಕಳ ಮೃತ ದೇಹವನ್ನು ಮುಂದಿಟ್ಟು ಪ್ರತಿಭಟನೆ ನಡೆಸಿದ್ದಾರೆ.
ಇದನ್ನೂ ಓದಿ : https://vijayatimes.com/what-is-lumpy-virus/
ನಮ್ಮ 3 ಬೇಡಿಕೆಗಳನ್ನು ಸರ್ಕಾರ ಈಡೇರಿಸುವವರೆಗೂ ಮೃತ ದೇಹವನ್ನು ಅಂತ್ಯಸಂಸ್ಕಾರ ಮಾಡುವುದಿಲ್ಲ ಎಂದು ಕುಟುಂಬಸ್ಥರು ಆಗ್ರಹಿಸಿದ್ದಾರೆ. ತಮಗೆ 1 ಕೋಟಿ ಪರಿಹಾರ, ಮೃತ ಬಾಲಕಿಯ ಸಹೋದರನಿಗೆ ಸರ್ಕಾರಿ ನೌಕರಿ ಹಾಗೂ ಆರೋಪಿಗಳಿಗೆ ಮರಣದಂಡನೆ ಶಿಕ್ಷೆ ವಿಧಿಸಬೇಕು ಎಂದು ಒತ್ತಾಯಿಸಿದ್ದಾರೆ.
ಈ ಸಂಬಂಧ ಪೊಲೀಸರು ಆರು ಜನರನ್ನು ಬಂಧಿಸಿದ್ದು, ಆದ್ರೆ ಆರೋಪಿಗಳಲ್ಲಿ ಒಬ್ಬನನ್ನು ಪೊಲೀಸರು ಎನ್ಕೌಂಟರ್ ಮಾಡಿದ ನಂತರ ಬಂಧಿಸಿದ್ದಾರೆ ಎನ್ನಲಾಗಿದೆ. ಬುಧವಾರ ಲಖಿಂಪುರ ಖೇರಿಯಲ್ಲಿ ಮರಕ್ಕೆ ನೇಣು ಬಿಗಿದ ಸ್ಥಿತಿಯಲ್ಲಿ ಇಬ್ಬರು ದಲಿತ ಹದಿಹರೆಯದ ಯುವತಿಯರ ಮೇಲೆ ಅತ್ಯಾಚಾರ ಮತ್ತು ಹತ್ಯೆ ಮಾಡಲಾಗಿದೆ ಎಂದು ಶವಪರೀಕ್ಷೆ ವರದಿ ಬಳಿಕ ದೃಢವಾಗಿದೆ.

“ಉತ್ತರ ಪ್ರದೇಶ ಸರ್ಕಾರವು ಪ್ರಕರಣದಲ್ಲಿ ತ್ವರಿತ ಕ್ರಮ ಮತ್ತು ನ್ಯಾಯ ಕೊಡಿಸುವ ಭರವಸೆ ನೀಡಿದೆ. ಮುಂದಿನ ಪೀಳಿಗೆಯವರ ಆತ್ಮವೂ ನಡುಗುವಂತೆ ಸರ್ಕಾರ ಕ್ರಮ ಕೈಗೊಳ್ಳಲಿದೆ” ಎಂದು ಉತ್ತರ ಪ್ರದೇಶದ ಉಪಮುಖ್ಯಮಂತ್ರಿ ಬ್ರಜೇಶ್ ಪಾಠಕ್ ಗುರುವಾರ ಹೇಳಿದ್ದಾರೆ.