ಹವಮಾನ ವರದಿ(Weather Report) ಮಾಡುವ ನಿರೂಪಕಿಯೊಬ್ಬರು(Anchor) ತಮ್ಮ ವರದಿ ನೀಡುವ ಸಮಯದಲ್ಲಿ ಕ್ಯಾಮೆರಾ(Camera) ಮುಂದೆ ಪ್ರಾರಂಭಿಸುವ ಮುನ್ನ ತಮ್ಮ ಮೂರು ತಿಂಗಳ ಪುಟ್ಟ ಕಂದಮ್ಮನೊಟ್ಟಿಗೆ ವರದಿ ಮಾಡಿರುವ ವಿಡಿಯೋ ಸದ್ಯ ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ ಆಗಿದೆ. ಸಾಮಾಜಿಕ ಜಾಲತಾಣ(Social Media) ಎಂದರೆ ಹಾಗೆ, ಉದ್ದೇಶ ಪೂರ್ವಕವಲ್ಲದ ವೀಡಿಯೋ ಕೂಡ ತಿಳಿಯದಂತೆ ಸದ್ದಿಲ್ಲದೇ ವೈರಲ್(Viral) ಆಗುತ್ತದೆ. ಇನ್ನು ಕೆಲವು ಉದ್ದೇಶ ಪೂರ್ವಕವಾಗಿ ವೈರಲ್ ಮಾಡಬೇಕು ಎಂದುಕೊಂಡರು ಕೂಡ ಅದು ವೈರಲ್ ಆಗೋದಿಲ್ಲ. ಇದೇ ನೋಡಿ ಸೋಷಿಯಲ್ ಮೀಡಿಯಾ(Social Media) ಪವರ್(Power)!
ಸದ್ಯ ಇದೇ ಹಾದಿಯಲ್ಲಿ ಸೋಷಿಯಲ್ ಮೀಡಿಯಾ ಯಾರನ್ನು, ಯಾವ ವೀಡಿಯೊವನ್ನು ಈ ಬಾರಿ ವೈರಲ್ ಮಾಡಬೇಕು ಎಂದು ನಿರ್ಧರಿಸಲಿದೆ ಎಂಬುದನ್ನು ಗಮನಿಸಿ ನೋಡುವುದಾದರೇ. ಈ ಬಾರಿ ಸ್ಥಳೀಯ ಮಾಧ್ಯಮದಲ್ಲಿ ಹವಮಾನ ವರದಿಗಾರ್ತಿಯಾಗಿ, ನಿರೂಪಕಿಯಾಗಿ ಕೆಲಸ ನಿರ್ವಹಿಸುತ್ತಿದ್ದ ರೆಬೆಕಾ ಶುಲ್ಡ್ ಎಂಬುವವರ ವೀಡಿಯೋ ಸದ್ಯ ಸಾಮಾಜಿಕ ಜಾಲತಾಣದಲ್ಲಿ ಭಾರಿ ಸದ್ದು ಮಾಡಿದೆ. ತಮ್ಮ ಮೂರು ತಿಂಗಳಿನ ಮಗುವಿನೊಂದಿಗೆ ಹವಮಾನ ವರದಿ ಮಾಡಿರುವ ವೀಡಿಯೋ ಈಗ ವೈರಲ್ ಆಗಿರುವಂತದ್ದು. ಯುಎಸ್ನ ವಿಸ್ಕಾನ್ಸಿನ್ ರಾಜ್ಯದ CBS 58 ಎಂಬ ಮಾಧ್ಯಮದಲ್ಲಿ ಹವಮಾನ ವರದಿಗಾರ್ತಿಯಾಗಿ ಕೆಲಸ ಮಾಡುತ್ತಿರುವ ರೆಬೆಕಾ ಶುಲ್ಡ್ ಅವರ ವೀಡಿಯೋ ಸಾಮಾಜಿಕ ಜಾಲತಾಣಗಳಾದ ಫೇಸ್‌ಬುಕ್, ಟ್ವಿಟರ್, ಇನ್ಸ್ಟಾಗ್ರಾಮ್, ಯೂಟ್ಯೂಬ್ ಗಳಲ್ಲಿ ಸದ್ದು ಮಾಡುತ್ತಿದೆ.
ಈ ಮಾಹಿತಿಯನ್ನು ಡೈಲಿ ಮೇಲ್ ವರದಿ ನೀಡಿದ್ದು, ರೆಬೆಕಾ ಶುಲ್ಡ್ ಅವರು ಪ್ರತ್ಯೇಕವಾಗಿ ಹವಮಾನ ವರದಿಗಾರ್ತಿಯಾಗಿ ಕೆಲಸ ನಿರ್ವಹಿಸುತ್ತಿದ್ದರು. ಆದರೆ ಕೊರೊನಾ ಎಲ್ಲೆಡೆ ವ್ಯಾಪಕವಾಗಿ ಆವರಿಸಿಕೊಂಡಿದ್ದ ಕಾರಣ ಜೊತೆಗೆ 4 ತಿಂಗಳ ಹಿಂದೆ ಅವರು ತಮ್ಮ ಮಗುವಿಗೆ ಜನ್ಮ ನೀಡಿದ್ದರಿಂದ ಅವರು ಮನೆಯಲ್ಲಿಯೇ ವರ್ಕ್ ಫ್ರಂ ಹೋಂ ಮಾಡುತ್ತಿದ್ದರು. ಅದೇ ರೀತಿಯಲ್ಲಿ ತಮ್ಮ ಮೂರು ತಿಂಗಳ ಮಗುವನ್ನು ಆರೈಕೆ ಮಾಡಿಕೊಂಡು, ಮನೆಯಲ್ಲಿ ಕೆಲಸ ಮಾಡಿಕೊಂಡಿದ್ದ ರೆಬೆಕಾ ಅವರು ಎಂದಿನಂತೆ ಇದ್ದ ನೇರಪ್ರಸಾರ ವರದಿ ಕಾರ್ಯಕ್ರಮಕ್ಕೆ ಸಿದ್ದರಾಗಿದ್ದರು.
ಇದಕ್ಕಾಗಿ ಮಗುವನ್ನು ಮಲಗಿಸಿ ನೇರಪ್ರಸಾರ ಹವಮಾನ ವರದಿಗೆ ಕ್ಯಾಮೆರಾ ಎದುರಿಗೆ ಬಂದ ವೇಳೆಯಲ್ಲೇ ಮಗು ಎಚ್ಚರಗೊಂಡಿದೆ. ಈ ಕಾರಣಕ್ಕಾಗಿ ಕೂಡಲೇ ಮಗುವನ್ನು ಹೆಗಲ ಮೇಲೆ ಎತ್ತಿಕೊಂಡೇ ನೇರಪ್ರಸಾರದಲ್ಲಿ ಹವಮಾನ ವರದಿ ಮಾಡಿದ್ದಾರೆ. ಸದ್ಯ ರೆಬೆಕಾ ಅವರ ವೀಡಿಯೊಗೆ ನೆಟ್ಟಿಗರಿಂದ ಭಾರಿ ಮೆಚ್ಚುಗೆ ವ್ಯಕ್ತವಾಗಿದೆ.