Weight Loss Health Tips For Women Live Kannada
Health Tips: ಪ್ರಸ್ತುತ ದಿನಮಾನಗಳಲ್ಲಿ ಮಾನವನ ಜೀವನ ಶೈಲಿಯು ಬದಲಾಗುತ್ತಿದ್ದು ಹಾಗೆಯೇ ಆಹಾರ ಪದ್ದತಿಯು ಬದಲಾಗುತ್ತಿದೆ ಈ ಬದಲಾವಣೆಯಿಂದ ಮನುಷ್ಯನ ಆರೋಗ್ಯದ ಮೇಲೆ ಹೆಚ್ಚಿನ ಪ್ರಭಾವ ಬೀರುತ್ತಿದ್ದು ಇದರಿಂದ ಪಾರಾಗಲು ಸಾಂಪ್ರದಾಯಕ ಆಹಾರ ಕ್ರಮಗಳಾದ ಸಿರಿಧಾನ್ಯಗಳ ಬಳಕೆ ಉತ್ತಮ .
ಸಿರಿಧಾನ್ಯಗಳನ್ನು ನವಧಾನ್ಯ, ಕಿರುದಾನ್ಯ , ಸಣ್ಣಗಾತ್ರದ ಧಾನ್ಯಗಳೆಂದು (Grain) ಕರೆಯಲಾಗುತ್ತದೆ. ಸಿರಿಧಾನ್ಯದ ಲ್ಲಿ ಮಾನವನ ದೇಹಕ್ಕೆ ಬೇಕಾದ ಹೆಚ್ಚಿನ ಪೋಷಕಾಂಶಗಳು ಮತ್ತು ಖನಿಜಾಂಶಗಳು ಹೇರಳವಾಗಿರುವುದರಿಂದ ಇವುಗಳ ಸೇವನೆಯಿಂದ ಆರೋಗ್ಯವಂತರಾಗಬಹುದು. ಹಾಗಾದರೆ ಸಿರಿ ಧಾನ್ಯಗಳ ಸಂಪೂರ್ಣ ಮಾಹಿತಿ ಈ ಕೆಳಕಂಡಂತಿದೆ.
ಒಟ್ಟು ಒಂಬತ್ತು ರೀತಿಯ ಸಿರಿಧಾನ್ಯಗಳನ್ನು ಕಾಣಬಹುದು .
1. ನವಣೆ
2. ಹಾರಕ
3. ಸಾಮೆ
4. ಊದಲು
5. ಕೊರಲೆ
6. ಬರಗು
7. ರಾಗಿ
8. ಜೋಳ
9. ಸಜ್ಜೆ
ಸಿರಿಧಾನ್ಯಗಳ ಮಹತ್ವ ಮತ್ತು ಉಪಯೋಗಗಳು :
ಸಕ್ಕರೆ ಅಂಶ ಕ ಕೆಡಿಮೆ ಮಾಡುತ್ತದೆ.ಸಿರಿಧಾನ್ಯಗಳು ಮಧುಮೇಹಿ (Diabetic) ರೋಗಿಗಳಿಗೆ ರಾಮಬಾಣ ಎಂದು ಹೇಳಬಹುದು. ಏಕೆಂದರೆ ಸಿರಿದಾನ್ಯಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ನಾರಿನಂಶ ಇರುವುದರಿಂದ ಮಾನವನ ರಕ್ತದಲ್ಲಿನ ಸಕ್ಕರೆಯ ಅಂಶ ಕಡಿಮೆ ಮಾಡಿ ಮಧುಮೇಹ ಸಮಸ್ಯೆಯನ್ನು ನಿಯಂತ್ರಿಸುತ್ತದೆ.
ರೋಗ ನಿರೋಧಕ ಶಕ್ತಿ ಹೆಚ್ಚಿಸುತ್ತದೆ .
ಮಾನವರಲ್ಲಿ ರೋಗ ನಿರೋಧಕ ಶಕ್ತಿ ಕಡಿಮೆಯಾದರೆ ಅರೋಗ್ಯ ಹದಗೆಡುತ್ತದೆ. (Health Issues) ಅನೇಕ ಸಣ್ಣ ಪುಟ್ಟ ಮತ್ತು ಮಾರಕ ಖಾಯಿಲೆಗಳು ಆವರಿಸುತ್ತವೆ . ಆದ್ದರಿಂದ ಸಿರಿಧಾನ್ಯಗಳಲ್ಲಿ ಪ್ರೊಟೀನ್ ಪ್ರಮಾಣ ಹೇರಳವಾಗಿರುವುದರಿಂದ ರೋಗ ನಿರೋಧಕ ಶಕ್ತಿ ಹೆಚ್ಚಾಗಿ ಮಾರಕ ಖಾಯಿಲೆಗಳಿಂದ ಮನುಷ್ಯನ ದೇಹವನ್ನು ಸಂರಕ್ಷಿಸುತ್ತವೆ.
ಹೊಟ್ಟೆ ಹಸಿವನ್ನು ನಿಯಂತ್ರಿಸುತ್ತದೆ.
ನಾವು ಪ್ರಸ್ತುತ್ತ ದಿನಮಾನಗಳಲ್ಲಿ ಹೆಚ್ಚಾಗಿ ಸೇವಿಸುವ ಅನ್ನ ಮತ್ತು ಚಪಾತಿಗಳು ಬೇಗನೆ ಜೀರ್ಣವಾಗಿ ಕೆಲವೇ ಗಂಟೆಗಳಲ್ಲಿ ಹಸಿವಾಗುತ್ತದೆ . ಸಿರಿಧಾನ್ಯಗಾಳ ಬಳಕೆಯಿಂದ ಜೀರ್ಣ ಪ್ರಕ್ರಿಯೆ ನಿಧಾನವಾಗಿ ಜೀರ್ಣ ಕ್ರಿಯೆ ಉತ್ತಮವಾಗಿರುತ್ತದೆ.
ಹೃದಯ ಸಂಬಂದಿ ಖಾಯಿಲೆಗಳಿಂದ ರಕ್ಷಣೆ .
ಸಿರಿಧಾನ್ಯಗಳನ್ನು ಹೆಚ್ಚಾಗಿ ಬಳಸುವುದ್ದರಿಂದ ದೇಹದ ಕೊಲೆಸ್ಟ್ರಲ್ (Cholesterol) ಅಂಶಗಳನ್ನು ಕಡಿಮೆ ಮಾಡಿ ಪಾರ್ಶ್ವವಾಯಿ ಮತ್ತು ಹೃದಯ ಸಂಬಂದಿ ಸಮಸ್ಯೆಗಳನ್ನು ಇಲ್ಲವಾಗಿಸುತ್ತದೆ.
ಕಡಿಮೆ ಪ್ರಮಾಣದ ಕ್ಯಾಲೋರಿ
ಮನುಷ್ಯನ ದೇಹಕ್ಕೆ ಹೆಚ್ಚಿನ ಕ್ಯಾಲೋರಿ (Calorie) ಅಂಶಗಳು ಸೇರುತ್ತಾ ಹೋದರೆ ದೇಹದ ತೂಕ ಗಣನೀಯವಾಗಿ ಹೆಚ್ಚುತ್ತಾ ಹೋಗೋತ್ತದೆ . ಸಿರಿಧಾನ್ಯಗಳು ಈ ವಿಷಯದಲ್ಲಿ ಬಹಳ ಸಹಾಯಕವಾಗಿ ನಡೆದುಕೊಳ್ಳುತ್ತವೆ. ಇದರಿಂದ ದೇಹದ ತೂಕವು ಸಮತೋಲನವಾಗಿರುತ್ತದೆ . ಸ್ನೇಹಿತರೆ ನಮ್ಮ ಸಾಂಪ್ರದಾಯಿಕ ಆಹಾರ ಪದ್ಧತಿಗಳಿಗೆ ಹಿಂದಿರುಗುವ ಮೂಲಕ ಆರೋಗ್ಯದ ಮೇಲೆ ಪ್ರಭಾವ ಬಿರುವ ಮಾರಕ ಖಾಯಿಲೆಗಳನ್ನು ಯಾವುದೇ ಔಷಧಗಳ ಸಹಾಯವಿಲ್ಲದೆ ಆರೋಗ್ಯವಂತರಾಗೋಣ .
Nowadays, the life style of human being is changing as well as the food system is changing, due to this change, it has a great impact on the health of the human being, so it is better to use traditional food methods such as cereals.
ಗೋವಿಂದರಾಜು