• ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
    • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Menu
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
    • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Vijaya Times logo
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
    • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Menu
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
    • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Visit Channel
Home ಲೈಫ್ ಸ್ಟೈಲ್

ತೂಕ ಇಳಿಸ್ಬೇಕಾ? ಹಾಗಾದ್ರೆ ಈ ಸರಳ ಸೂತ್ರ ಪಾಲಿಸಿ ಸುಲಭವಾಗಿ, ಶೀಘ್ರವಾಗಿ ತೂಕ ಕಡಿಮೆ ಮಾಡಿ

Preetham Kumar P by Preetham Kumar P
in ಲೈಫ್ ಸ್ಟೈಲ್
ತೂಕ ಇಳಿಸ್ಬೇಕಾ? ಹಾಗಾದ್ರೆ ಈ ಸರಳ ಸೂತ್ರ ಪಾಲಿಸಿ ಸುಲಭವಾಗಿ, ಶೀಘ್ರವಾಗಿ ತೂಕ ಕಡಿಮೆ ಮಾಡಿ
0
SHARES
0
VIEWS
Share on FacebookShare on Twitter

ತೂಕ ಹೆಚ್ಚಳ, ಬೊಜ್ಜಿನ ಸಮಸ್ಯೆ ಇತ್ತೀಚಿನ ದಿನಗಳಲ್ಲಿ ಹೆಚ್ಚಿನ ಜನರನ್ನು ಕಾಡುತ್ತಿರುವ ಪ್ರಮುಖ ಸಮಸ್ಯೆ. ಈ ಸಮಸ್ಯೆಗೆ ಅನೇಕರು ನಿಯಮಿತ ವ್ಯಾಯಾಮ ಹಾಗೂ ಆಹಾರ ಸೇವನೆಯಲ್ಲಿ ನಿಯಂತ್ರಣ ಸಾಧಿಸಿ ಯಶಸ್ವಿಯಾಗಿ ತೂಕ ಇಳಿಸಿಕೊಳ್ಳುತ್ತಾರೆ. ಇವರು ತಾವು ಸೇವಿಸುವ ಆಹಾರದ ಕ್ಯಾಲೋರಿಗಳ ಬಗ್ಗೆ ಹೆಚ್ಚಿನ ಅಸ್ಥೆ ವಹಿಸಬೇಕಾಗುತ್ತದೆ. ಇದರ ಜೊತೆಗೇ ದೇಹದ ಕಲ್ಮಶಗಳನ್ನು ನಿವಾರಿಸುವ ದ್ರವಗಳನ್ನೂ ಸೇವಿಸಿದ್ರೆ ಶೀಘ್ರವಾಗಿ ತೂಕ ಇಳಿಕೆ ಮಾಡಿಕೊಳ್ಳಬಹುದು.

ಇದುವರೆಗೆ ಈ ದ್ರವಗಳನ್ನು ಪ್ರಯತ್ನಿಸದೇ ಇದ್ದಲ್ಲಿ ಈಗಿನಿಂದಲೇ ಪ್ರಯತ್ನಿಸಬಹುದು. ದೇಹದ ಅನಗತ್ಯ ಕಲ್ಮಶಗಳು ನಿವಾರಣೆಯಾದರೆ, ತೂಕ ಇಳಿಕೆಯ ಪ್ರಯತ್ನಗಳು ಇನ್ನಷ್ಟು ಫಲಪ್ರದ ಹಾಗೂ ಶೀಘ್ರವಾಗಿ ನೆರವೇರಲಿವೆ. ದೇಹದ ಕಲ್ಮಶಗಳನ್ನು ನಿವಾರಿಸುವ (ಡಿಟಾಕ್ಸ್ ಡ್ರಿಂಕ್) ಪಾನೀಯ ಅಥವಾ ಪಾನಕಗಳಲ್ಲಿ ನಿಂಬೆರಸ ಮತ್ತು ಬೆಲ್ಲದಿಂದ ತಯಾರಿಸಿದ ಪಾನಕ ಪ್ರಮುಖ ಸ್ಥಾನ ಪಡೆಯುತ್ತದೆ. ಇವೆರಡೂ ನಮ್ಮ ಅಡುಗೆ ಮನೆಯಲ್ಲಿ ಸದಾ ಲಭ್ಯವಿರುವ ಸಾಮಾಗ್ರಿಗಳೇ ಆಗಿವೆ. ಕಲ್ಮಶ ನಿವಾರಣೆಯ ಇತರ ಪಾನಕಗಳೆಂದರೆ ಜೀರಿಗೆ ನೀರು ಹಾಗೂ ಸೌಂಫ್ ಅಥವಾ ದೊಡ್ಡ ಜೀರಿಗೆಯ ನೀರು. ಇವನ್ನು ಆಗಾಗ ಬದಲಿಸಿಕೊಳ್ಳುತ್ತಾ ಸೇವಿಸುತ್ತಿದ್ದರೆ ಹೆಚ್ಚಿನ ಪ್ರಯೋಜನ ಪಡೆಯಬಹುದು.

ನಿಂಬೆರಸ ಬೆಲ್ಲದ ಪಾನಕದ ಲಾಭಗಳೇನು?

ಬೆಲ್ಲ ನೈಸರ್ಗಿಕ ಸಕ್ಕರೆಯಾಗಿದೆ ಹಾಗೂ ನಿಂಬೆರಸ ನೈಸರ್ಗಿಕ ಆಮ್ಲವಾಗಿದೆ. ಇವೆರಡರ ಮಿಶ್ರಣ ಉತ್ತಮ ಕಲ್ಮಶ ನಿವಾರಕ ಹಾಗೂ ಚೇತೋಹಾರಿಯಾಗಿದೆ. ಇವೆರಡೂ ಸಾಮಾಗ್ರಿಗಳ ಪ್ರಯೋಜನಗಳನ್ನು ಪ್ರತ್ಯೇಕವಾಗಿ ನೋಡೋಣ:

ಬೆಲ್ಲ

ಇದರಲ್ಲಿ ಆಂಟಿ ಆಕ್ಸಿಡೆಂಟುಗಳು ಸಮೃದ್ಧವಾಗಿದ್ದು ರೋಗ ನಿರೋಧಕ ಶಕ್ತಿಯನ್ನು ಉತ್ತಮಗೊಳಿಸುತ್ತದೆ. ಬಳಲಿದ ದೇಹಕ್ಕೆ ಈ ಆಂಟಿ ಆಕ್ಸಿಡೆಂಟುಗಳು ಹೆಚ್ಚಿನ ಚೈತನ್ಯವನ್ನು ಒದಗಿಸುತ್ತವೆ. ಇದೇ ಕಾರಣಕ್ಕೆ ಬೇಸಿಗೆಯಲ್ಲಿ ಬಿಸಿಲಿನ ಝಳ ಕಡಿಮೆಗೊಳಿಸಲು ತಣ್ಣೀರಿನೊಂದಿಗೆ ಬೆಲ್ಲವನ್ನು ಸೇವಿಸಬೇಕು. ಇಂದಿಗೂ ಮಲೆನಾಡಿನಲ್ಲಿ ಬೇಸಿಗೆಯಲ್ಲಿ ದಾರಿಹೋಕರಿಗೆ ಕುಡಿಯಲು ನೀರಿನ ಜೊತೆಗೆ ಚಿಕ್ಕ ಬೆಲ್ಲದ ತುಂಡೊಂದನ್ನು ನೀಡಲಾಗುತ್ತದೆ. ಬೆಲ್ಲ ಜೀರ್ಣಕ್ರಿಯೆಯನ್ನು ಉತ್ತಮಗೊಳಿಸುತ್ತದೆ, ದೇಹದ ಕಲ್ಮಶಗಳನ್ನು ನಿವಾರಿಸುತ್ತದೆ ಹಾಗೂ ತೂಕ ಇಳಿಕೆಗೂ ಸಹಕರಿಸುತ್ತದೆ.

ನಿಂಬೆ ರಸ

ನಿಂಬೆ ರಸ ಸಿಟ್ರಿಕ್ ಆಮ್ಲದ ಅತ್ಯುತ್ತಮ ಮೂಲವಾಗಿದೆ. ವಿಟಮಿನ್ ‘ಸಿ’ ನಿಂದ ಸಮೃದ್ಧವಾಗಿದೆ. ವಿಟಮಿನ್ ಸಿ ರೋಗ ನಿರೋಧಕ ಶಕ್ತಿಯನ್ನು ಬಲಪಡಿಸುವ ಜೊತೆಗೇ ದೇಹದಲ್ಲಿ ಆರ್ದ್ರತೆಯನ್ನು ಹೆಚ್ಚಿಸಲು, ತ್ವಚೆಯ ಆರೋಗ್ಯ ಸುಧಾರಿಸಲು, ಜೀರ್ಣಕ್ರಿಯೆ ಉತ್ತಮಗೊಳಿಸಲು, ಹೃದ್ರೋಗ ಆವರಿಸುವ ಸಾಧ್ಯತೆ ತಗ್ಗಿಸಲು, ಹೃದಯದ ಆರೋಗ್ಯ ವೃದ್ದಿಸಲು ಹಾಗೂ ಮುಖ್ಯವಾಗಿ ಕೊಬ್ಬನ್ನು ಬಳಸಿಕೊಳ್ಳುವ ಮೂಲಕ ತೂಕ ಇಳಿಕೆ ಮತ್ತು ತೂಕ ನಿರ್ವಹಣೆಗೆ ನೆರವಾಗುತ್ತದೆ.

ನಿಂಬೆರಸ ಮತ್ತು ಬೆಲ್ಲವನ್ನು ಜೊತೆಗೂಡಿಸಿದರೆ, ಈ ಎಲ್ಲಾ ಪ್ರಯೋಜನಗಳು ಜಂಟಿಯಾಗಿ ಲಭಿಸುವ ಜೊತೆಗೇ ತೂಕ ಇಳಿಕೆಯ ಪ್ರಯತ್ನಗಳು ಹೆಚ್ಚು ಶೀಘ್ರವಾಗಿ ಸಫಲಗೊಳ್ಳುತ್ತವೆ.

ಪಾನಕ ತಯಾರಿಸುವ ವಿಧಾನ

ಒಂದು ಲೋಟ ನೀರಿನಲ್ಲಿ ಒಂದು ಚಿಕ್ಕ ತುಂಡು ಬೆಲ್ಲವನ್ನು ಹಾಕಿ ನೀರನ್ನು ಕುದಿಸಿ. ಬೆಲ್ಲ ಪೂರ್ಣ ಕರಗಿದ ಬಳಿಕ ಈ ನೀರನ್ನು ಸೋಸಿ ತಣಿಯಲು ಬಿಡಿ. ನೀರು ಸಾಮಾನ್ಯ ತಾಪಮಾನಕ್ಕೆ ಇಳಿದ ಬಳಿಕ ಒಂದು ದೊಡ್ಡ ಚಮಚದಷ್ಟು ನಿಂಬೆರಸವನ್ನು ಇದಕ್ಕೆ ಸೇರಿಸಿ. ಈ ನೀರನ್ನು ಪ್ರತಿದಿನ ಬೆಳಗ್ಗಿನ ಮೊದಲ ಆಹಾರವಾಗಿ ಸೇವಿಸಿ. ನಂತರ ಮುಕ್ಕಾಲು ಘಂಟೆ ಏನನ್ನೂ ಸೇವಿಸದಿರಿ ಹಾಗೂ ನಿಮ್ಮ ನಿತ್ಯದ ನಡಿಗೆ ಅಥವಾ ವ್ಯಾಯಾಮಗಳನ್ನು ನಿರ್ವಹಿಸಿ.

ಯಾವ ಬೆಲ್ಲ ಉತ್ತಮ?

ಬೆಲ್ಲ ಆದಷ್ಟೂ ಮಟ್ಟಿಗೆ ಸಾವಯವ ಹಾಗೂ ಗಾಢ ಕಂದು ಬಣ್ಣದಲ್ಲಿರಲಿ. ಬಿಳಿ ಬೆಲ್ಲ, ಅಥವಾ ಹಳದಿ ಬೆಲ್ಲ ಸೂಕ್ತವಲ್ಲ! ಇವು ಸುಣ್ಣ ಬೆರೆಸಿರುವ ಬೆಲ್ಲವಾಗಿದ್ದು ಇದರ ಸೇವನೆಯಿಂದ ಜೀರ್ಣಕ್ರಿಯೆಗೆ ಸಂಬಂಧಿಸಿದ ಇತರ ತೊಂದರೆಗಳು ಬರಬಹುದು. ಆದ್ದರಿಂದ ಆದಷ್ಟೂ ಗಾಢ ಬಣ್ಣದಲ್ಲಿರುವ ಹಾಗೂ ಸುಲಭವಾಗಿ ಬೆರಳುಗಳಿಂದಲೇ ತುಂಡು ಮಾಡಬಹುದಾದ ಮೃದುವಾಗಿರುವ ಬೆಲ್ಲವೇ ಸೂಕ್ತ.

ನಿಂಬೆಯ ಆಯ್ಕೆ

ಸಾಮಾನ್ಯವಾಗಿ ನಾಟಿ ನಿಂಬೆಯೇ ಉತ್ತಮ. ಒಂದು ದೊಡ್ಡ ಚಮಚ ನಿಂಬೆ ರಸ ಪಡೆಯಲು ಚಿಕ್ಕದಾದರೆ ಒಂದು ದೊಡ್ಡದಾದ ಅರ್ಧ ನಿಂಬೆ ಸಾಕಾಗುತ್ತದೆ. ಇದಕ್ಕೂ ಹೆಚ್ಚಿನ ಪ್ರಮಾಣ ಬೇಡ. ಗಜನಿಂಬೆ ಅಥವಾ ದೊಡ್ಡ ಗಾತ್ರದ ಇತರ ಜಾತಿಯ ನಿಂಬೆಯೂ ಅಷ್ಟೊಂದು ಸೂಕ್ತವಲ್ಲ. ಪ್ರತಿ ದಿನವೂ ಹೊಸ ನಿಂಬೆಯನ್ನೇ ಕತ್ತರಿಸಬೇಕೇ ವಿನಃ ನಿಂಬೆಯ ರಸದ ಸಿದ್ಧರೂಪದ ಉತ್ಪನ್ನಗಳೂ ಸೂಕ್ತವಲ್ಲ!

                ಈ ರೀತಿ ನಿಯಮಿತವಾಗಿ ಬೆಲ್ಲ ಮತ್ತು ನಿಂಬೆ ಪಾನಕ ಕುಡಿಯಿರಿ ಜೊತೆಗೆ ವ್ಯಾಯಾಮವನ್ನೂ ಮಾಡಿದರೆ ಫಲಿತಾಂಶ ಶೀಘ್ರವಾಗಿ, ಸುಲಭವಾಗಿ ಸಿಗುತ್ತೆ. ಟ್ರೈ ಮಾಡಿ ರಿಸಲ್ಟ್‌ ಪಡೀರಿ.

Tags: "ನಿಂಬೆ ಹಾಗೂ ಬೆಲ್ಲhow to eat jaggery for weight lossjaggery water recipelemon jaggery recipelime and jaggery for burn fatLime juiceweight loss tipsತೂಕ ಇಳಿಸಿಕೊಳ್ಳಲು ಟಿಪ್ಸ್

Related News

ಡೆಡ್ಲಿ ಕೆಮಿಕಲ್‌ನಿಂದ ಹಣ್ಣಾಗಿರುವ ಮಾವಿನ ಹಣ್ಣನ್ನು ಪತ್ತೆ ಹಚ್ಚುವುದು ಹೇಗೆ? ನಿಮಗಾಗಿ ಇಲ್ಲಿದೆ ಈ ಟಿಪ್ಸ್!
ಆರೋಗ್ಯ

ಡೆಡ್ಲಿ ಕೆಮಿಕಲ್‌ನಿಂದ ಹಣ್ಣಾಗಿರುವ ಮಾವಿನ ಹಣ್ಣನ್ನು ಪತ್ತೆ ಹಚ್ಚುವುದು ಹೇಗೆ? ನಿಮಗಾಗಿ ಇಲ್ಲಿದೆ ಈ ಟಿಪ್ಸ್!

May 26, 2023
ಹೆಲ್ತಿಡ್ರಿಂಕ್ಸ್ ಹಾರಿಬಲ್ ಸೀಕ್ರೇಟ್! ಅಧ್ಯಯನದಿಂದ ಬಯಲಾಯ್ತು ಹೆಲ್ತಿ ಡ್ರಿಂಕ್ಸ್ ಭಯಾನಕ ಸತ್ಯ!
ಆರೋಗ್ಯ

ಹೆಲ್ತಿಡ್ರಿಂಕ್ಸ್ ಹಾರಿಬಲ್ ಸೀಕ್ರೇಟ್! ಅಧ್ಯಯನದಿಂದ ಬಯಲಾಯ್ತು ಹೆಲ್ತಿ ಡ್ರಿಂಕ್ಸ್ ಭಯಾನಕ ಸತ್ಯ!

May 2, 2023
ಗುಚ್ಚಿ ಮಶ್ರೂಮ್ ತಿಂದವನೇ ಬಲ್ಲ ಇದರ ರುಚಿ: ಇದರ ಬೆಲೆ ಚಿನ್ನವನ್ನೇ ಮೀರಿಸುತ್ತೆ ಗೊತ್ತಾ?
Lifestyle

ಗುಚ್ಚಿ ಮಶ್ರೂಮ್ ತಿಂದವನೇ ಬಲ್ಲ ಇದರ ರುಚಿ: ಇದರ ಬೆಲೆ ಚಿನ್ನವನ್ನೇ ಮೀರಿಸುತ್ತೆ ಗೊತ್ತಾ?

April 27, 2023
2022ರಲ್ಲಿ ಅತಿ ಹೆಚ್ಚು ವಿವಾಹಗಳನ್ನು ಆಯೋಜಿಸಿದ ನಗರ ಯಾವುದು ಗೊತ್ತಾ ?
ಲೈಫ್ ಸ್ಟೈಲ್

2022ರಲ್ಲಿ ಅತಿ ಹೆಚ್ಚು ವಿವಾಹಗಳನ್ನು ಆಯೋಜಿಸಿದ ನಗರ ಯಾವುದು ಗೊತ್ತಾ ?

January 20, 2023

ವಿಜಯ ಟೈಮ್ಸ್‌ - ಬದಲಾವಣೆಯ ಹಾದಿ

Vijaya Times logo

ವಿಜಯ ಟೈಮ್ಸ್‌

  • ಪ್ರಮುಖ ಸುದ್ದಿ
  • ರಾಜಕೀಯ
  • ದೇಶ-ವಿದೇಶ
  • ಮನರಂಜನೆ
Menu
  • ಪ್ರಮುಖ ಸುದ್ದಿ
  • ರಾಜಕೀಯ
  • ದೇಶ-ವಿದೇಶ
  • ಮನರಂಜನೆ

Quick Links

  • About Us
  • Contact Us
  • For Advertisement
Menu
  • About Us
  • Contact Us
  • For Advertisement

Follow Us

Facebook Twitter Instagram Youtube

Download Vijaya Times App

Android
© 2022 Vijaya Times. All rights reserved.