ಹೆಚ್ಚಿನವರು ಬೆಳಗ್ಗಿನ ಸಮಯದಲ್ಲಿ ಎದ್ದ ತಕ್ಷಣ ಟೀ ಕಾಫಿ ಕುಡಿಯುತ್ತಾರೆ, ಆದರೆ ಅಧ್ಯಯನದ ಪ್ರಕಾರ ಖಾಲಿ ಹೊಟ್ಟೆಯಲ್ಲಿ (Weight loss Tips) ಟೀ ಕಾಫಿ ಕುಡಿಯಬಾರದು. ಬೆಳಿಗ್ಗೆ ಎದ್ದ ತಕ್ಷಣ ಒಂದು ಲೋಟ ಬಿಸಿ ನೀರನ್ನು ಕುಡಿಯಬಹುದು.
ಆದರೆ ಟೀ ಕಾಫಿ ಪರ್ಯಾಯವಾಗಿ ಆರೋಗ್ಯಕರವಾಗಿ ಲೆಮನ್ ಟೀ ಅಭ್ಯಾಸ ಮಾಡಿಕೊಳ್ಳಬಹುದು. ನಿಂಬೆಹಣ್ಣಿನ ಚಹಾ ಕುಡಿಯುವುದರಿಂದ ದೇಹದಲ್ಲಿ ರಕ್ತಸಂಚಲನ ಸರಾಗವಾಗಿ ನಡೆಯುತ್ತದೆ, ಇದರಿಂದ ಹೃದಯ ಸಂಬಂಧಿ ಕಾಯಿಲೆ ,ಪಾರ್ಶ್ವವಾಯು ಸಮಸ್ಯೆ ಕಂಡು ಬರಲು ಸಾಧ್ಯವಿಲ್ಲ.
ಈ ಲೆಮನ್ ಟೀ ಕುಡಿಯುವುದರಿಂದ ತೂಕ ಕಡಿಮೆ ಮಾಡಿಕೊಳ್ಳಬಹುದು. ಏಕೆಂದರೆ ಇದರಲ್ಲಿ ಪ್ಲೇವೋನಾಯ್ಡ್ ಎಂಬ ಅಂಶಗಳು (Weight loss Tips) ಇರುವುದರಿಂದ ದೇಹದಲ್ಲಿರುವ ಕೆಟ್ಟ ಕೊಲೆಸ್ಟ್ರಾಲ್ ಗಳ ಅಂಶಗಳ ಮಟ್ಟವನ್ನು ನಿಯಂತ್ರಣಕ್ಕೆ ತರುತ್ತದೆ.
ನಿಂಬೆ ಹಣ್ಣಿನಲ್ಲಿ ಸಿಗುವ ವಿಟಮಿನ್ ಸಿ
ನಿಂಬೆ ಹಣ್ಣಿನಲ್ಲಿ ವಿಟಮಿನ್ ಸಿ ಜೊತೆಗೆ ಕರಗುವ ನಾರಿನಾಂಶ ಹೆಚ್ಚಾಗಿರುವುದರಿಂದ ಇದು ಮೆಟಬಾಲಿಸಂ ಪ್ರಕ್ರಿಯೆಯನ್ನು ಹೆಚ್ಚಿಸುವುದರಿಂದ ಇದು ದೇಹದಲ್ಲಿನ ಕ್ಯಾಲೋರಿಗಳನ್ನು ಕರಗಿಸುತ್ತದೆ, ಇದರಿಂದ ದೇಹದಲ್ಲಿರುವ ಅನಿಯಂತ್ರಿತ ಬೊಜ್ಜು ಕರಗಿಸುವಲ್ಲಿ ಸಹಾಯ ಮಾಡುತ್ತದೆ
ಇದನ್ನೂ ಓದಿ: https://vijayatimes.com/2023-odi-world-cup/
ಲೆಮನ್ ಟೀ ಹೇಗೆ ತಯಾರು ಮಾಡುವುದು
- ಮೊದಲಿಗೆ ಒಂದು ಪಾತ್ರೆಯಲ್ಲಿ ಒಂದು ಲೋಟ ನೀರನ್ನು ಚೆನ್ನಾಗಿ ಕುದಿಸಿ
- ಇದಕ್ಕೆ ಒಂದು ಟೇಬಲ್ ಚಮಚ ಟೀ ಪೌಡರ್, ಮತ್ತು ಸಕ್ಕರೆ ಹಾಕಿ ಸ್ವಲ್ಪ ಕುದಿಸಿ
- ಸ್ಟವ್ ಆಫ್ ಮಾಡಿ ಸ್ವಲ್ಪ ನಿಂಬೆಹಣ್ಣಿನ ರಸ ಹಾಕಿ
- ನಂತರ ಸ್ಪೂನ್ ನಿಂದ ಚೆನ್ನಾಗಿ ಮಿಕ್ಸ್ ಮಾಡಿ
- ಇದನ್ನು ಬಿಸಿ ಇರುವಾಗ ಕುಡಿಯಬಹುದು , ಅಥವಾ ತಣ್ಣಗಾದ ಮೇಲೂ ಕುಡಿಯಬಹುದು
ಸಕ್ಕರೆ ಕಾಯಿಲೆ ಇರುವವರು ಹೇಗೆ ಸೇವಿಸಬಹುದು
https://vijayatimes.com/chandrababu-2024-last-election/
ನಿಮಗೆ ಸಕ್ಕರೆ ಕಾಯಿಲೆ ಇದ್ದಲ್ಲಿ ತಯಾರು ಮಾಡುವಾಗ ಸಕ್ಕರೆ ಸೇರಿಸಬೇಡಿ ಅದರ ಬದಲಿಗೆ ಜೇನುತುಪ್ಪವನ್ನು ಸೇರಿಸಬಹುದು.
ಸಲಹೆ: ಲೆಮನ್ ಟೀ ಕುಡಿಯುವುದರಿಂದ ದೇಹದ ತೂಕ ಇದ್ದಕ್ಕಿದ್ದಂತೆ ಕಡಿಮೆ ಆಗುವುದಿಲ್ಲ. ನಿಯಮಿತವಾದ ವ್ಯಾಯಾಮ ಆರೋಗ್ಯಕರವಾದ ಆಹಾರ ಶೈಲಿ ಕೂಡ ಅತ್ಯಗತ್ಯ ಹಾಗಾಗಿ ಕೇವಲ ಇದರ ಮೇಲೆ ಅವಲಂಬಿತರಾಗಬೇಡಿ ಜೊತೆಗೆ ವೈದ್ಯರ ಸಲಹೆಯನ್ನು ಕೂಡ ಪಡೆಯಿರಿ.
ರಶ್ಮಿತಾ ಅನೀಶ್