ಹಿಂದಿನ ಕಾಲದಲ್ಲಿ ಒಂದು ನಂಬಿಕೆಯಿತ್ತು. ಗಂಡು ಮಗು ಇದ್ದರೆ ಮಾತ್ರ ಮುಕ್ತಿ ಸಿಗುತ್ತದೆ, ಗಂಡು ಮಗುವೇ ವಂಶೋದ್ದಾರಕ, ಹಾಗಾಗಿ ಗಂಡು ಮಗ ಬೇಕೆಂದು ಎಷ್ಟೇ ಹೆಣ್ಣು ಮಕ್ಕಳಾದರೂ ಕೊನೆಗೆ ಗಂಡು ಮಗು ಹುಟ್ಟುತ್ತದೆ ಎನ್ನುವ ನಂಬಿಕೆಯಿಂದ ಕಾಯುತ್ತಿದ್ದರು.

ಈ ರೀತಿಯ ವಾಡಿಕೆ ನಮ್ಮ ಭಾರತದಲ್ಲಿತ್ತು. ಆದರೆ ಇಲ್ಲಿ ಒಂದು ಕುಟುಂಬ ನೋಡಿ, ನಮಗೆ ಒಂದು ಹೆಣ್ಣು ಮಗು ಬೇಕೇ ಬೇಕು ಎನ್ನುವ ಹಂಬಲದಿಂದ 10 ಗಂಡು ಮಕ್ಕಳಿಗೆ ಜನ್ಮ ನೀಡಿದ್ದಾರೆ. ನಂತರ ಇವರಿಗೆ ಒಂದು ಹೆಣ್ಣು ಮಗು ಹುಟ್ಟಿದ್ದು ಈಗ ಇವರಿಗೆ ಹನ್ನೊಂದು ಮಕ್ಕಳಿದ್ದಾರೆ. ಇನ್ನೊಂದು ವಿಚಿತ್ರ ಕುಟುಂಬದ ಕಥೆ ಕೇಳಿ. ಈ ಕುಟುಂಬದಲ್ಲಿದ್ದ ದಂಪತಿಗಳಿಗೆ ಎರಡು ಮಕ್ಕಳಾದ ಮೇಲೆ ಕಾರಣಾಂತರಗಳಿಂದ ಗಂಡ ಹೆಂಡತಿಯನ್ನು ಬಿಟ್ಟು ಹೋಗಿರುತ್ತಾನೆ. ನಂತರ ಆತನ ಮಗಳು ದೊಡ್ಡವಳಾಗಿ ಮದುವೆಯಾದ ಮೇಲೆ ಮನೆಗೆ ವಾಪಾಸಾಗುತ್ತಾನೆ.
ಆದರೆ ಮಗಳಿಗೆ ತಂದೆ ಮೇಲೆಯೇ ವ್ಯಾಮೋಹ ಉಂಟಾಗಿ ಗಂಡನಿಗೆ ವಿಚ್ಛೇದನ ನೀಡಿ ತಂದೆಯನ್ನೇ ಮದುವೆಯಾಗುತ್ತಾಳೆ. ನಿಮ್ಮ ಆಂಡ್ ಆಂಡಿ ಹೆನ್ಸಿಲ್, ಇವರಿಗೆ ಒಂದೇ ದೇಹ ಆದರೆ ಎರಡು ತಲೆಯಿದೆ. ಯೋಚನಾ ವಿಧಾನವೂ ಭಿನ್ನವಾಗಿದೆ. ಇಬ್ಬರೂ ಬೇರೆ ಬೇರೆ ರೀತಿ ಮಾತನಾಡುತ್ತಾರೆ. ಶಿಕ್ಷಕಿಯರಾಗಿ ಕೆಲಸ ಮಾಡುತ್ತಿರುವ ಇವರು ಬೇರೆ ಬೇರೆ ಸಬ್ಜೆಕ್ಟ್ ಗೆ ಪಾಠವನ್ನು ಮಾಡುತ್ತಾರೆ!
ರಫುನಝೆಲ್ ಕುಟುಂಬ:– ಈ ಕುಟುಂಬದಲ್ಲಿರುವ ಎಲ್ಲಾ ಮಹಿಳೆಯರು ಅತಿ ಉದ್ದವಾದ ಕೂದಲನ್ನು ಹೊಂದಿದ್ದಾರೆ. ಹಾಗಾಗಿ ಇದು ಅತ್ಯಂತ ಉದ್ದನೆಯ ಕೂದಲನ್ನು ಹೊಂದಿರುವ ಕುಟುಂಬವಾಗಿದೆ.
ಬೇಬಿ ಡಾಲ್ ಫ್ಯಾಮಿಲಿ : ಇವರು ನಮ್ಮಂತೆಯೇ ಸಾಮಾನ್ಯ ಮನುಷ್ಯರಾದರೂ, ಇವರಿಗೆ ಗೊಂಬೆ ಎಂದರೆ ತುಂಬಾ ಇಷ್ಟ. ಹಾಗಾಗಿ ಹಲವಾರು ಸರ್ಜರಿ ಮಾಡಿಸಿಕೊಂಡು ಗೊಂಬೆಯ ರೀತಿ ಕಾಣುವಂತೆ ಬದಲಾಗಿದ್ದಾರೆ.

ಅನಿಮಲ್ ವಾಕಿಂಗ್ ಫ್ಯಾಮಿಲಿ : ಈ ಕುಟುಂಬದವರು ಸಾಮಾನ್ಯ ಮನುಷ್ಯರಂತೆಯೇ ಕಾಣಿಸುತ್ತಾರೆ. ಆದರೆ ವಿಚಿತ್ರವೆಂದರೆ ಇವರು ತಮ್ಮ ಕೈಯನ್ನು ಬಳಸಿಕೊಂಡು ನಡೆಯುತ್ತಾರೆ. ಹೌದು ಇವರು ಪ್ರಾಣಿಗಳ ರೀತಿ ನಾಲ್ಕು ಕಾಲಿನಲ್ಲಿ ನಡೆಯುತ್ತಾರೆ. ಈ ಕುಟುಂಬದಲ್ಲಿ ಹುಟ್ಟಿದ ಮಕ್ಕಳು ಕೂಡ ದೊಡ್ಡವರನ್ನು ನೋಡಿ ಇದೇ ರೀತಿ ನಡೆಯಲು ಕಲಿತಿದ್ದಾರೆ!