Visit Channel

ಇಲ್ಲಿನ ಮದುವೆ ಸಂಪ್ರದಾಯಗಳನ್ನು ಕೇಳಿದರೆ `ಹೀಗೂ ಉಂಟಾ’ ಎಂದು ಹೇಳ್ತೀರಾ!

Weird

ನಮ್ಮ ದೇಶ ವಿವಿಧತೆಯಲ್ಲಿ ಏಕತೆಯನ್ನು ಸಾರುವ ಪುಣ್ಯಭೂಮಿ. ನಮ್ಮ ದೇಶದ ಪ್ರತಿ ಧರ್ಮದಲ್ಲಿಯೂ ವಿವಾಹಗಳಿಗೆ ತಮ್ಮದೇ ಆದ ಶಾಸ್ತ್ರಗಳಿವೆ,

marriage

ಆದರೆ ಕೆಲವು ಶಾಸ್ತ್ರಗಳು ಬೇರೆ ಪಂಗಡದವರಿಗೆ ವಿಚಿತ್ರ ಎನ್ನಿಸುತ್ತದೆ. ಆದರೆ ಕೆಲವು ಕಡೆ ಇರುವ ಶಾಸ್ತ್ರಗಳು ಮಾತ್ರ ನಾವು ನೀವು ಊಹಿಸಲೂ ಸಾಧ್ಯವಿಲ್ಲ. ಇಂತಹ ಚಿತ್ರ- ವಿಚಿತ್ರ ಸಂಪ್ರದಾಯಗಳನ್ನು(Tradition) ಆಚರಿಸಿದ ಬಳಿಕವೇ ದಂಪತಿಗಳನ್ನು ಅಲ್ಲಿನ ಸಮಾಜ ಸ್ವಾಗತಿಸುತ್ತದೆಯಂತೆ. ಪ್ಯಾರಿಸ್(Paris) ಜನಪ್ರಿಯವಾಗಿರುವುದೇ ಪ್ರೇಮಿಗಳ ನಗರ ಎಂದು. ಫ್ರಾನ್ಸ್(France) ದೇಶದಲ್ಲಿ ವಿವಾಹವಾದ ಬಳಿಕ ವಧೂವರರಿಗೆ ಉಡುಗೊರೆಯಾಗಿ ಬಂದ ಪ್ರತೀ ವಸ್ತುವನ್ನೂ ವಧೂವರರ ಸ್ನೇಹಿತರು ಮತ್ತು ಸಂಬಂಧಿಕರು ಸೇರಿ ಎಲ್ಲರ ಸಮ್ಮುಖದಲ್ಲಿ ಒಡೆದು ಚಿಂದಿ ಮಾಡುತ್ತಾರೆ.

ಒಡೆಯಲಾಗದ ವಸ್ತುಗಳನ್ನು ಗರಗಸದಿಂದ ಕೊಯ್ದು ಹಾಕಲಾಗುತ್ತದೆಯಂತೆ. ಉಡುಗೊರೆಗಳನ್ನು ಒಡೆಯುವಾಗ ಎಲ್ಲರೂ ಹೊಡೆಯುವ ಬೊಬ್ಬೆ ಇಡೀ ಊರನ್ನೇ ಬೆಚ್ಚಿ ಬೀಳಿಸುತ್ತದೆ. ಇದನ್ನು ವಧು ವರರ ಪ್ರಥಮ ರಾತ್ರಿಯನ್ನು ಆಚರಿಸುವ ಮೊದಲು ಮಾಡಲಾಗುತ್ತದೆ. ಇದರಿಂದ ವಧೂವರರಿಗೆ ಜೀವನದಲ್ಲಿ ಎದುರಾಗಬಹುದಾದ ಸಂಕಷ್ಟಗಳನ್ನೆಲ್ಲಾ ನಾಶ ಮಾಡಿದಂತೆ ಎಂದು ಅವರು ನಂಬುತ್ತಾರೆ.

Weird

ಫ್ರಾನ್ಸ್‌ನ ಕೆಲವು ಪ್ರದೇಶಗಳಲ್ಲಿ, ವಿವಾಹದ ಬಳಿಕ ವಧೂವರರ ಸ್ನೇಹಿತರು ಮತ್ತು ಸಂಬಂಧಿಕರು ಔತಣದ ಬಳಿಕ ಉಳಿದ ಎಲ್ಲಾ ಆಹಾರವನ್ನು ಶೌಚಾಲಯದ ಕಮೋಡ್‌ನಲ್ಲಿ ಹಾಕಿ ತುಂಬಿಸಿಡುತ್ತಾರೆ. ವಿವಾಹದ ಸಂಭ್ರಮವೆಲ್ಲಾ ಮುಗಿದ ಬಳಿಕ ವಧೂವರರು ಈ ಕಮೋಡ್‌ನಲ್ಲಿದ್ದ ಆಹಾರವನ್ನು ಸೇವಿಸಿದರೆ ಮಾತ್ರ ವಿವಾಹ(Marriage) ಸಂಪೂರ್ಣವಾದಂತೆ ಲೆಕ್ಕ.

ಸೂಡಾನ್ ನ ವಿಚಿತ್ರ ಸಂಪ್ರದಾಯ: ಆಫ್ರಿಕಾದ(Africa) ಸೂಡಾನ್ನಲ್ಲಿ(Sudan) ಮದುವೆ ಸಂಪನ್ನಗೊಳ್ಳಲು ಬೇಕಾಗುವ ಅರ್ಹತೆ ಎಂದರೆ ಇಬ್ಬರು ಮಕ್ಕಳನ್ನು ಹೆತ್ತು ಕೊಡುವುದು. ಹೌದು, ಒಂದು ವೇಳೆ ಮದುವೆಯಾದ ಬಳಿಕ ಹೆಂಡತಿ ಎರಡು ಮಕ್ಕಳನ್ನು ಹೆರದೇ ಇದ್ದರೆ ವರನಿಗೆ ಈ ಮದುವೆಯಿಂದ ಮುಕ್ತಿ ದೊರೆತು ಇನ್ನೊಂದು ಮದುವೆಯಾಗಲು ಪೂರ್ಣ ಅವಕಾಶವಿದೆ. ಬಹಳ ವಿಚಿತ್ರವಾದ ಈ ಸಂಪ್ರದಾಯ ಸೂಡಾನ್‌ನಲ್ಲಿ ಇಂದಿಗೂ ಜೀವಂತವಾಗಿದೆ.

Marriage

ಆಫ್ರಿಕಾದ ವಿಚಿತ್ರ ಸಂಪ್ರದಾಯ: ಆಫ್ರಿಕಾದ ಸಾವಿರಾರು ಬುಡಕಟ್ಟು ಜನಾಂಗಗಳಲ್ಲಿ ಇಂದಿಗೂ ವಿವಾಹದ ಬಳಿಕ ಮೊದಲ ರಾತ್ರಿಯು ಹಿರಿಯ ಮಹಿಳೆಯ ಸಮ್ಮುಖದಲ್ಲಿ ನಡೆಸಬೇಕಾಗುತ್ತದೆ. ಪ್ರಥಮ ರಾತ್ರಿಯಂದು ಆ ಬುಡಕಟ್ಟಿನ ಅತ್ಯಂತ ಹಿರಿಯ ಮಹಿಳೆಯೂ ವಧೂವರರೊಂದಿಗೆ ಕೋಣೆಯೊಳಕ್ಕೆ ನಡೆದು ಮುಂದಿನ ಎಲ್ಲಾ ವಿಧಾನಗಳನ್ನು ಹೇಳಿಕೊಡುವ ಪರಿಪಾಠವಿದೆ.

Latest News

Pakistan
ದೇಶ-ವಿದೇಶ

ಪಾಕಿಸ್ತಾನ : ಗರ್ಭಿಣಿ ಮಹಿಳೆ ಮೇಲೆ ಭದ್ರತಾ ಸಿಬ್ಬಂದಿ ಹಲ್ಲೆ ; ಭಾರೀ ಆಕ್ರೋಶ

ನೋಮನ್ ಗ್ರ್ಯಾಂಡ್ ಸಿಟಿ ಅಪಾರ್ಟ್ಮೆಂಟ್ ಕಟ್ಟಡದ ಹೊರಗೆ ಭದ್ರತಾ ಸಿಬ್ಬಂದಿ ಗರ್ಭಿಣಿ ಮಹಿಳೆಯನ್ನು ಥಳಿಸಿದ್ದಾರೆ ಎಂದು ಪಾಕ್ ಮೂಲದ ಜಿಯೋ ನ್ಯೂಸ್ ವರದಿ ಮಾಡಿದೆ.

Culprits
ಪ್ರಮುಖ ಸುದ್ದಿ

ಹಾಲಿನ ವ್ಯಾಪಾರದ ಸೋಗಿನಲ್ಲಿ ಖೋಟಾ ನೋಟು ದಂಧೆ ; ಬಿಜೆಪಿ ಮುಖಂಡ ಸೇರಿ ಮೂವರ ಬಂಧನ

ಆರೋಪಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಈ ಕುರಿತು ಪೊಲೀಸರು ತನಿಖೆ ಮುಂದುವರೆಸಿದ್ದು, ಕುಂದಗೋಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

rss
ರಾಜಕೀಯ

RSS ಭಾರತದಲ್ಲಿನ ತಾಲಿಬಾನ್ ಇದ್ದಂತೆ : ಕಾಂಗ್ರೆಸ್‌

ಆರ್‌ಎಸ್‌ಎಸ್‌ ಎಂದಿಗೂ ಭಾರತೀಯತೆಯನ್ನು ಒಪ್ಪಿಲ್ಲ, ಮುಂದೆಯೂ ಒಪ್ಪುವುದಿಲ್ಲ. ಪ್ರತ್ಯೇಕ ಐಡೆಂಟಿಟಿಯಲ್ಲಿ ಇರಲು ಭಯಸುವ ಆರ್‌ಎಸ್‌ಎಸ್‌, ಭಾರತದಲ್ಲಿನ ತಾಲಿಬಾನ್ ಇದ್ದಂತೆ.