ರೈಲ್ವೆ ನಿಲ್ದಾಣಗಳನ್ನು (Railway Station) ಪ್ರತಿ ರಾಜ್ಯ, ನಗರ, ಪಟ್ಟಣ, ಗ್ರಾಮಗಳಲ್ಲಿ ನಾವು ಕಾಣಬಹುದು.ದೇಶದ ಮೂಲೆ ಮೂಲೆಗಳಲ್ಲಿ ರೈಲ್ವೆ ನಿಲ್ದಾಣಗಳಿದ್ದು, ಅಗ್ಗದ ಪ್ರಯಾಣ ಮಾಡಬೇಕು ಎಂದು ಅಂದುಕೊಳ್ಳುವವರು ರೈಲಿನಲ್ಲಿ ಪ್ರಯಾಣ ಮಾಡಲು ಇಚ್ಛಿಸುತ್ತಾರೆ.

ಅತ್ಯಂತ ಆರಾಮದಾಯಕ ಪ್ರಯಾಣಗಳಲ್ಲಿ ರೈಲುಗಳು ತನ್ನದೇ ಆದ ಸ್ಥಾನವನ್ನ ಪಡೆದಿದೆ. ಪ್ರತಿನಿತ್ಯ ಲಕ್ಷಾಂತರ, ಕೋಟ್ಯಾಂತರ ಜನರು ರೈಲಿನ ಮೂಲಕ ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ಪ್ರಯಾಣ ಮಾಡುತ್ತಾರೆ.
ಇಂತಹ ರೈಲು ಪ್ರಯಾಣದ ಕೆಲವು ವಿಚಿತ್ರ ಸಂಗತಿಗಳ ಬಗ್ಗೆ ತಿಳಿಯೋಣ.
ಭಾರತದ ಈ ರಾಜ್ಯವು ಹೆಸರಿಲ್ಲದ ರೈಲು ನಿಲ್ದಾಣವನ್ನು ಹೊಂದಿದೆ : ಯಾವುದೇ ಹೆಸರಿಲ್ಲದೆ ಸಂಪೂರ್ಣವಾಗಿ ಕಾರ್ಯನಿರ್ವಹಿಸುವಂತಹ ನಿಲ್ದಾಣದ ಬಗ್ಗೆ ನೀವು ಎಂದಾದರೂ ಕೇಳಿದ್ದೀರಾ, ಎಂದರೆ ಹೆಸರಿಲ್ಲದ ರೈಲು ನಿಲ್ದಾಣ.
ಭಾರತದ ಪಶ್ಚಿಮ ಬಂಗಾಳದ (West Bengal) ಬರ್ಧಮಾನ್‌ನಿಂದ 35 ಕಿಮೀ ದೂರದಲ್ಲಿರುವ ಬಂಕುರಾ-ಮಸ್‌ಗ್ರಾಮ್ ರೈಲು ಮಾರ್ಗದಲ್ಲಿರುವ ಈ ಹೆಸರಿಸದ ರೈಲು ನಿಲ್ದಾಣವನ್ನು 2008 ರಲ್ಲಿ ನಿರ್ಮಿಸಲಾಯಿತು.
ಇದನ್ನೂ ಓದಿ : https://vijayatimes.com/will-jio-customers-get-5g/
ಇದನ್ನು ರೈನಗರ ಎಂದು ಹೆಸರಿಸಲಾಯಿತು. ಆದರೆ ರೈನಾ ಗ್ರಾಮದ ಜನರಿಗೆ ಈ ರೈಲು (Weird Railway stations of india) ನಿಲ್ದಾಣದ ಹೆಸರು ಇಷ್ಟವಾಗಲಿಲ್ಲ,
ಆದ್ದರಿಂದ ಅವರು ನಿಲ್ದಾಣದ ಹೆಸರನ್ನು ಬದಲಾಯಿಸಲು ರೈಲ್ವೆ ಮಂಡಳಿಗೆ ದೂರು ನೀಡಿದರು.
ನಂತರ ಈ ನಿಲ್ದಾಣದ ಬೋರ್ಡ್‌ನಿಂದ ರೈ ನಗರ ಹೆಸರನ್ನು ತೆಗೆದು ಹಾಕಲಾಗಿದೆ. ಅಂದಿನಿಂದ ಈ ರೈಲು ನಿಲ್ದಾಣ ಹೆಸರಿಲ್ಲದೆಯೇ ಕಾರ್ಯನಿರ್ವಹಿಸುತ್ತಿದೆ.
ಈ ನಿಲ್ದಾಣಕ್ಕೆ ಹೋಗುವ ಮೊದಲು ವೀಸಾ ತೆಗೆದುಕೊಳ್ಳಬೇಕು : ನೀವು ಅಟ್ಟಾರಿ ರೈಲು ನಿಲ್ದಾಣದಿಂದ ರೈಲನ್ನು ಹಿಡಿಯಲು ಅಥವಾ ಈ ನಿಲ್ದಾಣದಲ್ಲಿ ಇಳಿಯಲು ಬಯಸಿದರೆ, ನೀವು ವೀಸಾವನ್ನು ಹೊಂದಿರಬೇಕು.
ಹೌದು, ವೀಸಾ ಇಲ್ಲದಿದ್ದರೆ ಭಾರತ ಮತ್ತು ಪಾಕಿಸ್ತಾನದ ಗಡಿಯಲ್ಲಿರುವ ಅಮೃತಸರದ ಅಟ್ಟಾರಿ ರೈಲು ನಿಲ್ದಾಣದಲ್ಲಿ ಇಳಿಯುವುದನ್ನು ಕಟ್ಟುನಿಟ್ಟಾಗಿ ನಿಷೇಧಿಸಲಾಗಿದೆ.

ಈ ನಿಲ್ದಾಣವನ್ನು ದಿನದ 24 ಗಂಟೆಗಳ ಕಾಲ ಭದ್ರತಾ ಪಡೆಗಳು ಮೇಲ್ವಿಚಾರಣೆ ಮಾಡುತ್ತವೆ. ಯಾವುದೇ ಒಬ್ಬ ವ್ಯಕ್ತಿ ವೀಸಾ ಇಲ್ಲದೆ ಸಿಕ್ಕಿಬಿದ್ದರೆ,
ಆತನನ್ನು 14 ವಿದೇಶಿ ಕಾಯಿದೆಯ ಅಡಿಯಲ್ಲಿ ಬುಕ್ ಮಾಡಬಹುದು ಮತ್ತು ಆ ವ್ಯಕ್ತಿಯನ್ನು ಶಿಕ್ಷೆಗೂ ಗುರಿಪಡಿಸಬಹುದು.
ಬೋರ್ಡ್ ಇಲ್ಲದ ರೈಲು ನಿಲ್ದಾಣ : ಜಾರ್ಖಂಡ್‌ನ (Jharkhand) ರಾಜಧಾನಿ ರಾಂಚಿಯಿಂದ (Ranchi) ಟೋರಿಗೆ ಹೋಗುವ ರೈಲು ಹೆಸರಿಲ್ಲದ ನಿಲ್ದಾಣದ ಮೂಲಕ ಹಾದುಹೋಗುತ್ತದೆ.
ಇಲ್ಲಿ ಯಾವುದೇ ರೀತಿಯ ಸೈನ್ ಬೋರ್ಡ್ ಕೂಡ ಕಾಣಿಸುವುದಿಲ್ಲ. 2011ರಲ್ಲಿ ಈ ನಿಲ್ದಾಣದಿಂದ ಮೊದಲ ಬಾರಿಗೆ ರೈಲು ಸಂಚಾರ ನಡೆಸಿದಾಗ ಅದಕ್ಕೆ ಬಡ್ಕಿಚಂಪಿ ಎಂದು ನಾಮಕರಣ ಮಾಡಲು ರೈಲ್ವೇ ಚಿಂತಿಸಿತ್ತು.
https://fb.watch/fTCZHCFreh/ COVER STORY | ಪೋಷಕರೇ ಎಚ್ಚರ! Free seat dokha!
ಆದರೆ ಕಾಮ್ಲೆ ಗ್ರಾಮದ ಜನರ ಪ್ರತಿಭಟನೆಯ ನಂತರ ಈ ನಿಲ್ದಾಣವೂ ಹೆಸರಿಲ್ಲದೆ ಉಳಿಯಿತು. ಈ ರೈಲು ನಿಲ್ದಾಣವನ್ನು ನಿರ್ಮಿಸಲು ತಮ್ಮ ಗ್ರಾಮದ ಭೂಮಿ ಮತ್ತು ಕಾರ್ಮಿಕರು ತೊಡಗಿಸಿಕೊಂಡಿದ್ದಾರೆ.
ಆದ್ದರಿಂದ ಈ ಗ್ರಾಮಕ್ಕೆ ಕಾಮ್ಲೆ ನಿಲ್ದಾಣ ಎಂದು ಹೆಸರಿಡಬೇಕೆಂದು ಅಲ್ಲಿನ ಜನರು ಆಗ್ರಹಿಸಿದರು. ವಿವಾದಗಳಿಂದಾಗಿ ಈ ರೈಲು ನಿಲ್ದಾಣಕ್ಕೆ ಹೆಸರೇ ಇಟ್ಟಿಲ್ಲ.
ಎರಡು ರಾಜ್ಯಗಳ ಗಡಿ ಇರುವ ನಿಲ್ದಾಣ : ನವಪುರ ರೈಲು ನಿಲ್ದಾಣದ ಹೆಸರು ಭಾರತದ ಅತ್ಯಂತ ವಿಭಿನ್ನ ಮತ್ತು ವಿಶಿಷ್ಟವಾದ ರೈಲು ನಿಲ್ದಾಣಗಳ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ.
ಈ ನಿಲ್ದಾಣದ ಒಂದು ಭಾಗ ಮಹಾರಾಷ್ಟ್ರದಲ್ಲಿದ್ದರೆ, ಇನ್ನೊಂದು ಭಾಗ ಗುಜರಾತ್‌ನಲ್ಲಿದೆ.

ಈ ಕಾರಣಕ್ಕಾಗಿ, ನವಪುರ ರೈಲು ನಿಲ್ದಾಣವನ್ನು ಎರಡು ವಿಭಿನ್ನ ರಾಜ್ಯಗಳಾಗಿ ವಿಂಗಡಿಸಲಾಗಿದೆ, ಅಲ್ಲಿ ಮಹಾರಾಷ್ಟ್ರ ಮತ್ತು ಗುಜರಾತ್ ಎಂದು ಪ್ಲಾಟ್‌ಫಾರ್ಮ್‌ನಿಂದ ಬೆಂಚಿನವರೆಗೆ ಬರೆಯಲಾಗಿದೆ.
ನಿಲ್ದಾಣದಲ್ಲಿ ಪ್ರಕಟಣೆಗಳನ್ನು 4 ಭಾಷೆಗಳಲ್ಲಿ ಮಾಡಲಾಗುತ್ತದೆ, ಇಂಗ್ಲಿಷ್, ಹಿಂದಿ, ಮರಾಠಿ ಮತ್ತು ಗುಜರಾತಿ.
- ಪವಿತ್ರ