Rajasthan : ಒಂದೊಂದು ದೇಶದಲ್ಲಿ ಒಂದೊಂದು ರೀತಿಯ ಆಚಾರ ವಿಚಾರಗಳು ಜಾರಿಯಲ್ಲಿರುವುದು ಸಾಮಾನ್ಯ. ಇಂತಹ ರೀತಿ ನೀತಿ, ಪದ್ಧತಿ, ಆಚಾರಗಳು ಒಬ್ಬರಿಗೆ ಇಷ್ಟವಾದರೆ ಇನ್ನೊಬ್ಬರಿಗೆ ಇಷ್ಟವಾಗುವುದಿಲ್ಲ. ಆದರೆ ಕೆಲವೊಂದು(Weird Tradition In Rajasthan) ಆಚಾರ ವಿಚಾರಗಳು ಕೆಲವರಿಗೆ ಹೆಚ್ಚು ಪ್ರಿಯವೆನಿಸುತ್ತವೆ.

ಇಷ್ಟವಾಗುವ ಆಚಾರಗಳನ್ನು ಜನರು ಖುಷಿಯಿಂದ ಚೆನ್ನಾಗಿ ಪಾಲಿಸುತ್ತಾರೆ. ಈಗ ಅಂತದ್ದೇ ಒಂದು ವಿಶಿಷ್ಟವಾದ ಪದ್ದತಿಯ ಬಗ್ಗೆ ನಾವು ನಿಮಗೆ ತಿಳಿಸುತ್ತಿದ್ದೇವೆ.
ಸಾಮಾನ್ಯವಾಗಿ ನಮಲ್ಲಿ ಎರಡು ಮದುವೆ(Weird Tradition In Rajasthan) ಆದವರ ಪರಿಸ್ಥಿತಿ ಹೇಗಿರುತ್ತದೆ ಎಂದು ಒಮ್ಮೆ ಕಲ್ಪಿಸಿಕೊಳ್ಳಿ. ಪ್ರತಿದಿನ ಜಗಳ, ರಗಳೆ, ಸಂಸಾರ ತಾಪತ್ರಯ ಎಂದು ಕಿತ್ತಾಡುತ್ತಲೇ ಇರುತ್ತಾರೆ.
ಆದರೆ ಈಗ ನಾವು ಹೇಳಹೊರಟಿರುವ ಈ ಹಳ್ಳಿಯಲ್ಲಿ, ಒಬ್ಬ ಪುರುಷನಿಗೆ ಎರಡು ಮದುವೆ ಕಡ್ಡಾಯವಂತೆ. ಇದು ಆಶ್ಚರ್ಯವಾದರೂ ನಿಜ.
ಹೌದು, ರಾಜಸ್ಥಾನದಲ್ಲಿ ವಿಚಿತ್ರವಾದ ಆಚಾರಣೆಯೊಂದಿದೆ. ಅದು ಏನೆಂದು ತಿಳಿದರೆ ನೀವು ಮೂಗಿನ ಮೇಲೆ ಬೆರಳಿಡುವುದು ಖಂಡಿತ.
ಇದನ್ನೂ ಓದಿ : https://vijayatimes.com/japanese-cleaned-qatar-stadium/
ಇಲ್ಲಿ ಎರಡು ಮದುವೆ ಆಗುವುದು ಕಡ್ಡಾಯವಂತೆ! ಅರೇ ಇದೇನಿದು ಎರಡು ಮದುವೆ ಆಗುವುದು ಕಡ್ಡಾಯವೇ ಎಂದು ನಿಮಗೆ ಆಶ್ಚರ್ಯವಾಗಬಹುದು, ಆದರೂ ಇದು ಸತ್ಯ.
ರಾಜಸ್ಥಾನದ, ಬರ್ಮೆಲ್ ಜಿಲ್ಲೆಯಲ್ಲಿನ ದೇರಸರ್ ಗ್ರಾಮದಲ್ಲಿ ಇಂತಹ ವಿಚಿತ್ರ(Weird) ಆಚಾರಣೆಯೊಂದು ಜಾರಿಯಲ್ಲಿದೆ.
ಈ ಗ್ರಾಮದ ಪ್ರತಿಯೊಬ್ಬ ಪುರುಷನೂ(Men) ಕೂಡ ಎರಡು ಮದುವೆಯಾಗಲೇಬೇಕು ಎನ್ನುವ ಪ್ರತೀತಿಯಿದೆ. ಮತ್ತು ಇಲ್ಲಿನ ಜನರು ಈ ಆಚಾರವನ್ನು ಕಟ್ಟುನಿಟ್ಟಾಗಿ ಪಾಲಿಸುತ್ತಿದ್ದು, ಈ ಆಚಾರದಲ್ಲಿ ಬಹಳ ನಂಬಿಕೆಯಿಟ್ಟಿದ್ದಾರೆ.
ದೇರಸರ್ ಗ್ರಾಮವು ಸುಮಾರು ಏಳು ನೂರು ಜನರಿರುವ ಪುಟ್ಟ ಗ್ರಾಮವಾಗಿದ್ದು, ಈ ಗ್ರಾಮದಲ್ಲಿ ಒಂದು ಮದುವೆಯಾದವರಿಗೆ ಮಕ್ಕಳಾಗುವುದಿಲ್ಲ, ಅದೇ ಎರಡು ಮದುವೆಯಾದರೆ ಮಾತ್ರ ಇಲ್ಲಿ ಮಕ್ಕಳಾಗುವುದು ಎನ್ನುವ ನಂಬಿಕೆಯಿದೆ.

ಇದು ಮೂಢನಂಬಿಕೆ(Superstition) ಎಂದು ಜರಿದ ಕೆಲವರು, ಈ ನಂಬಿಕೆಯನ್ನು ಪರೀಕ್ಷಿಸಿ ಕೂಡ ನೋಡಿದ್ದಾರಂತೆ.
ಆದರೆ ಒಂದು ಮದುವೆ ಆದವರಿಗೆ ಮಕ್ಕಳೇ ಆಗಲಿಲ್ಲವಂತೆ, ಕೊನೆಗೆ ಎರಡನೇ ಮದುವೆಯಾದ ಮೇಲೆಯೇ ಅವರಿಗೆ ಮಕ್ಕಳಾಗಿದೆಯಂತೆ. ಈ ಕಾರಣಕ್ಕಾಗಿ ಇಲ್ಲಿ ಎರಡು ಮದುವೆ ಆಗುವುದು ಕಡ್ಡಾಯ ಎನ್ನುವ ನಂಬಿಕೆ ಬಲವಾಗಿದ್ದು,
https://fb.watch/gYidvj4I1B/ ಪ್ರವಾಸೋದ್ಯಮ ಇಲಾಖೆಯವರಿಗೆ ಮೊದಲು ಮಾಡಿರುವುದನ್ನು ಸರಿಪಡಿಸುವ ಯೋಗ್ಯತೆ ಇಲ್ಲ!
ಈ ನಂಬಿಕೆಯನ್ನು ಇಲ್ಲಿನ ಜನರು ಚಾಚೂತಪ್ಪದೇ ಪಾಲಿಸಿಕೊಂಡು ಬರುತ್ತಿದ್ದಾರೆ. ಈ ಗ್ರಾಮದ ಪುರುಷರು ಇಂದಿಗೂ ಎರಡು ಮದುವೆಯನ್ನು ತಪ್ಪದೇ ಮಾಡಿಕೊಳ್ಳುತ್ತಿದ್ದಾರೆ.
ಇನ್ನು, ಈಗಿನ ಯುವಕರೂ ಕೂಡ ಸಿಕ್ಕಿದ್ದೇ ಚಾನ್ಸ್ ಎನ್ನುವಂತೆ, ಈ ಆಚಾರದ ಬಗ್ಗೆ ಬಹಳಾನೇ ನಂಬಿಕೆಯಿಟ್ಟು ಶ್ರದ್ಧೆಯಿಂದ ಎರಡು ಮದುವೆಯಾಗಿ ಸಂಸಾರ ಮಾಡುತ್ತಿದ್ದಾರೆ.

ಆದರೆ ಎರಡು ಮದುವೆಯಾದ ಮಾತ್ರಕ್ಕೆ ಬೇಕಾಬಿಟ್ಟಿ ಸಂಸಾರ ನಡೆಸುವಂತಿಲ್ಲ. ಇಬ್ಬರೂ ಪತ್ನಿಯರನ್ನು ಸಮಾನವಾಗಿ ಜವಾಬ್ದಾರಿಯಿಂದ ನೋಡಿಕೊಳ್ಳಬೇಕು ಎನ್ನುವ ನಿಯಮವೂ ಇದೆ.
ಅದೇ ರೀತಿ, ಈ ಆಚಾರಣೆಯಲ್ಲಿ ಯಾರೂ ಜಗಳವಾಡುವಂತಿಲ್ಲ. ಇಬ್ಬರು ಹೆಂಡತಿಯರು ಒಂದೆ ಮನೆಯಲ್ಲಿಯೇ ವಾಸಿಸಬೇಕು.
ಇದನ್ನೂ ಓದಿ : https://vijayatimes.com/state-govt-over-app-service/
ಗಂಡ ಯಾರ ಜೊತೆ ಬೇಕಾದರೂ ಹೆಚ್ಚು ಸಮಯ ಕಳೆಯಬಹುದು, ಇದರ ಬಗ್ಗೆ ಪತ್ನಿಯರು ತಕರಾರು ತೆಗೆದು, ಗಲಾಟೆ ಮಾಡಿ ಜಗಳ ಆಡುವಂತಿಲ್ಲ.
ಹಾಗೆಯೇ, ಪತಿಯೂ ಇಬ್ಬರಿಗೂ ಸಮಾನ ಸ್ಥಾನ ಮಾನ ಗೌರವ ನೀಡಿ ನೋಡಿಕೊಳ್ಳಬೇಕು. ಸದ್ಯ, ಈ ಆಚಾರ ಅಕ್ಕ ಪಕ್ಕದ ಹಳ್ಳಿಗಳಿಗೂ ವ್ಯಾಪಿಸುತ್ತಿದೆ ಎನ್ನುವುದು ವಿಶೇಷ!
- ಪವಿತ್ರ