New Delhi : ನವೆಂಬರ್‌ನಲ್ಲಿ ಏರ್ ಇಂಡಿಯಾ ವಿಮಾನದಲ್ಲಿ(Air India) ಮಹಿಳಾ ಪ್ರಯಾಣಿಕರ ಮೇಲೆ ಕುಡಿದ ಮತ್ತಿನಲ್ಲಿ ಮೂತ್ರ ವಿಸರ್ಜಿಸಿದ ಮುಂಬೈ ಮೂಲದ ಶಂಕರ್ ಮಿಶ್ರಾನನ್ನು(Shankar Mishra) ಆತ ಕೆಲಸ ಮಾಡುತ್ತಿದ್ದ ವೆಲ್ಸ್ ಫಾರ್ಗೋ ಕಂಪೆನಿ ವಜಾಗೊಳಿಸಿದೆ.
ಶಂಕರ್ ಮಿಶ್ರಾ (34) ವಿರುದ್ಧ ಗಂಭೀರ ಆರೋಪಗಳು ಕೇಳಿ ಬಂದ ಹಿನ್ನಲೆಯಲ್ಲಿ, ಆತನನ್ನು ತಕ್ಷಣವೇ ವಜಾಗೊಳಿಸುವುದಾಗಿ ವೆಲ್ಸ್ ಫಾರ್ಗೋ(Wells Fargo fired man) ಕಂಪನಿ ಮುಖ್ಯಸ್ಥರು ತಿಳಿಸಿದ್ದಾರೆ.
ವೆಲ್ಸ್ ಫಾರ್ಗೋ ಉದ್ಯೋಗಿಗಳು ವೃತ್ತಿಪರ ಮತ್ತು ವೈಯಕ್ತಿಕ ನಡವಳಿಕೆಯ ಉನ್ನತ ಗುಣಮಟ್ಟವನ್ನು ಹೊಂದಿದ್ದಾರೆ. ಆದ್ರೆ ಶಂಕರ್ ಮಿಶ್ರಾ ಅವರ ಮೇಲಿನ ಈ ಆರೋಪಗಳು ನಿಜವಾಗ್ಲೂ ನಮಗೆ ಶಾಕ್ ನೀಡಿದೆ.
ಆದ್ದರಿಂದ ನಾವು ಈ ವ್ಯಕ್ತಿಯನ್ನು ವೆಲ್ಸ್ ಫಾರ್ಗೋದಿಂದ ವಜಾ ಮಾಡಿದ್ದೇವೆ ಎಂದು ಕಂಪನಿಯು ಮಾಧ್ಯಮಗಳಿಗೆ(Media) ತಿಳಿಸಿದೆ.
ಸದ್ಯ ಶಂಕರ್ ಮಿಶ್ರಾ ನಾಪತ್ತೆಯಾಗಿದ್ದು, ಆತನಿಗಾಗಿ ಪೊಲೀಸರು ಹುಡುಕಾಟ ನಡೆಸುತ್ತಿರುವಂತೆಯೇ ಲುಕ್‌ಔಟ್ ನೋಟಿಸ್ ಕೂಡ ಹೊರಡಿಸಲಾಗಿದೆ ಎಂದು ಹೇಳಲಾಗಿದೆ.
ನವೆಂಬರ್ 26 ರಂದು ನ್ಯೂಯಾರ್ಕ್-ದೆಹಲಿ(Wells Fargo fired man) ಏರ್ ಇಂಡಿಯಾ ವಿಮಾನದಲ್ಲಿ,
ಶಂಕರ್ ಮಿಶ್ರಾ ಕುಡಿದ ಮತ್ತಿನಲ್ಲಿ ತಮ್ಮ ಸಹ ಪ್ರಯಾಣಿಕರಾದ ಹಿರಿಯ ಮಹಿಳೆಯ ಬಳಿ ಹೋಗಿ ತಮ್ಮ ಪ್ಯಾಂಟ್ ಜೀಪ್ ಅನ್ನು ಬಿಚ್ಚಿ ಮೂತ್ರ ವಿಸರ್ಜನೆ ಮಾಡಿದ್ದಾನೆ!
ಈ ಘಟನೆ ತೀವ್ರ ಗಂಭೀರವಾಗುತ್ತಿದ್ದಂತೆ ಈ ಬಗ್ಗೆ ಪೊಲೀಸರಿಗೆ ದೂರು ನೀಡದಂತೆ ಮಹಿಳೆಯನ್ನು ಬೇಡಿಕೊಂಡಿದ್ದಾನೆ.
ಇದನ್ನೂ ಓದಿ: https://vijayatimes.com/ranveer-deepika-ready-for-divorce/
ಈ ಘಟನೆಯಿಂದ ತನ್ನ ಹೆಂಡತಿ ಮತ್ತು ಮಗುವಿನ ಮೇಲೆ ಗಂಭೀರ ಪರಿಣಾಮ ಬೀರಲಿದೆ ಎಂದು ಹೇಳಿ ದೂರುದಾರರನ್ನು ಮನವೊಲಿಸಲು ಯತ್ನಿಸಿದ್ದಾನೆ ಎನ್ನಲಾಗಿದೆ.
ಏರ್ ಇಂಡಿಯಾ ಈ ವಾರವಷ್ಟೇ ದೆಹಲಿ ಪೊಲೀಸರಿಗೆ ದೂರು ನೀಡಿದ್ದು, ಏರ್ ಇಂಡಿಯಾ ವಿಮಾನಯಾನ ಸಂಸ್ಥೆ ಶಂಕರ್ ಮಿಶ್ರಾಗೆ 30 ದಿನಗಳ ಕಾಲ ವಿಮಾನ ಹಾರಾಟವನ್ನು ನಿಷೇಧಿಸಿದೆ.
ವಿಮಾನಯಾನ ನಿಯಂತ್ರಕ, ನಾಗರಿಕ ವಿಮಾನಯಾನ ಮಹಾನಿರ್ದೇಶನಾಲಯ (ಡಿಜಿಸಿಎ),
ಈಗ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಇನ್ಮುಂದೆ ಅಶಿಸ್ತಿನಿಂದ ಅಥವಾ ಅನುಚಿತವಾಗಿ ವರ್ತಿಸುವ ಪ್ರಯಾಣಿಕರ ವಿರುದ್ಧ
ಕ್ರಮ ಕೈಗೊಳ್ಳಲು ವಿಫಲವಾದರೆ ವಿಮಾನಯಾನ ಸಿಬ್ಬಂದಿ ವಿರುದ್ಧ ಕಠಿಣ ಕ್ರಮಕೈಗೊಳ್ಳುವ ಎಚ್ಚರಿಕೆ ನೀಡಿದೆ.
ಏರ್ ಇಂಡಿಯಾ ಈ ಪ್ರಕರಣದ ತನಿಖೆ ನಡೆಸುತ್ತಿದ್ದಂತೆ ಅದರ ಸಿಇಒ ಕ್ಯಾಂಪ್‌ಬೆಲ್ ವಿಲ್ಸನ್ ಅವರು ಈ ವಿಷಯವು ಇತ್ಯರ್ಥಗೊಂಡಿದೆ ಎಂದು ತಿಳಿಸಿ ಗೊಂದಲ ಮೂಡಿಸಿದ್ದಾರೆ.
ಮುಂದಿನ ದಿನಗಳಲ್ಲಿ ಇಂಥ ಘಟನೆಗಳು ಕಂಡು ಬಂದರೆ ಅಥವಾ ವಿಮಾನದಲ್ಲಿ ಯಾವುದೇ ಅನುಚಿತ ವರ್ತನೆ ಕಂಡರೇ ಕೂಡಲೇ ಅಧಿಕಾರಿಗಳಿಗೆ ವರದಿ ಮಾಡಬೇಕು ಎಂದು ಸೂಚಿಸಿದ್ದಾರೆ.
ಈ ಘಟನೆ ಹೊರಬರುತ್ತಿದ್ದಂತೆ ಸಾಮಾಜಿಕ ಜಾಲತಾಣದಲ್ಲಿ ಭಾರಿ ಚರ್ಚೆಯಾಗಿದ್ದು, ಏರ್ ಇಂಡಿಯಾ ಸಂಸ್ಥೆಯ ಸಿಬ್ಬಂದಿ ವಿರುದ್ಧ ಕೆಲವರು ಅಸಮಾಧಾನ ವ್ಯಕ್ತಪಡಸಿದ್ರೆ ಇನ್ನು ಕೆಲವರು ಅನುಚಿತವಾಗಿ ವರ್ತಿಸಿದ ವ್ಯಕ್ತಿಗೆ ಸೂಕ್ತ ಶಿಕ್ಷೆಯಾಗಬೇಕು ಎಂದು ಒತ್ತಾಯಿಸಿದ್ದಾರೆ.