‘ಹಲಾಲ್’ ಅಷ್ಟೊಂದು ಡೇಂಜರಾ ; ‘ಹಲಾಲ್‌’ ಅಂದ್ರೇನು? ಹಲಾಲ್‌ ಆರೋಗ್ಯಕ್ಕೆ ಹಾನಿಕಾರಕವೋ ಅಥವಾ ಪೂರಕವೋ?

‘ಹಲಾಲ್’(Halal) ಈ ಪ್ರಶ್ನೆ ಕರುನಾಡಿನ ಜನರನ್ನು ಕಾಡಲಾರಂಭಿಸಿದೆ. ಯಾಕಂದ್ರೆ ಕೆಲ ಹಿಂದೂಪರ ಸಂಘಟನೆಗಳು ಹಲಾಲ್ ಮಾಂಸ ಮಾರಾಟವನ್ನು ನಿಷೇಧಿಸಬೇಕು. ಹಿಂದೂಗಳು ಯಾರೂ ಹಲಾಲ್‌ ಕಟ್‌(Halal Cut) ಮಾಂಸವನ್ನು ತಿನ್ನಬಾರದು ಅಂತ ಕೆಲವರು ಬೀದಿ ಬೀದಿ ಸುತ್ತಿ ಕರಪತ್ರ ಹಂಚುತ್ತಿದ್ದಾರೆ. ಹಾಗಾದ್ರೆ ಹಲಾಲ್ ಕಟ್‌ನಿಂದ ಆರೋಗ್ಯಕ್ಕೇನಾದ್ರೂ ಅಪಾಯ ಇದೆಯ? ಹಲಾಲ್ ಕಟ್‌ ಅಕ್ರಮವಾ? ಅದರಿಂದ ದೇಶದ ಆರ್ಥಿಕತೆಗೆ ತೊಂದರೆ ಇದೆಯಾ?

ಇದು ಮುಸ್ಲಿಮರು ತಮ್ಮ ಆರ್ಥಿಕತೆಯನ್ನ ಬಲಿಷ್ಠಗೊಳಿಸಲು ಅವರೇ ಸೃಷ್ಟಿಸಿಕೊಂಡ ಸಂಪ್ರದಾಯವೇ? ಒಟ್ಟಾರೆ ಹಲಾಲ್ ಅಂದ್ರೆ ಏನು? ಇದನ್ನ ವಿವರವಾಗಿ ತಿಳಿಯೋಣ ಬನ್ನಿ. ಬಹುತೇಕ ಧರ್ಮಗಳು ಆಹಾರಕ್ಕಾಗಿ ಪ್ರಾಣಿಗಳನ್ನ ಕೊಲ್ಲುವುದನ್ನ ಒಪ್ಪಿಕೊಂಡಿವೆ. ಆದರೆ ಕೆಲವು ಧರ್ಮಗಳು ಇದನ್ನ ಅನಾಗರಿಕವೆಂದು ಹೇಳದಿದ್ದರು ಅನೈತಿಕ ಎಂದು ಭಾವಿಸುತ್ತವೆ. ಇಸ್ಲಾಮ್ ಎಲ್ಲಾ ಜೀವಚರಗಳ ಮೇಲೆ ದಯೆ, ಕನಿಕರ ತೋರಲು ಆಜ್ಞಾಪಿಸುತ್ತದೆ. ಇದರ ಜೊತೆಗೇ ಈ ಭೂಮಿಯ ಮೇಲಿರುವ ಎಲ್ಲಾ ವನಸ್ಪತಿಗಳು ಹಾಗೂ ವನ್ಯಮೃಗಗಳನ್ನು ಮಾನವನ ಅನುಕೂಲತೆಗಾಗಿ ಸೃಷ್ಟಿಸಲಾಗಿದೆ ಎಂದೂ ಹೇಳುತ್ತದೆ.

ಪ್ರಾಣಿಗಳನ್ನ ವಧಿಸುವ ಇಸ್ಲಾಮಿ ಪದ್ದತಿಯನ್ನು ‘ಝಬಿಹ’ ಎನ್ನುವರು. ಝಬಿಹ ಪದ್ದತಿಯು ಮಾನವಿಯತೆಯಿಂದ ಕೂಡಿದೆಯಲ್ಲದೆ, ವೈಜ್ಞಾನಿಕವಾಗಿಯೂ ಉತ್ತಮವೆಂದು ಪರಿಗಣಿಸಲ್ಪಟ್ಟಿದೆಯೆಂಬುದನ್ನು ಸ್ಪಷ್ಟಪಡಿಸುತ್ತದೆ. ‘ಝಕ್ಕೈತುಮ್’ ಎಂಬುದು ‘ಝಕಿಯ’ ಎಂಬುದರ ಕ್ರಿಯಪದವಾಗಿದ್ದು.ಇದರ ಭಾವರೂಪಕವು ‘ಝಕಾ’ ಅರ್ಥಾತ್ ಪ್ರಕಾಶಿಸು ಅಥವ ಹರಿತವಾಗಿಸು ಎಂದಾಗಿದೆ. ಆದುದರಿಂದ ಪ್ರಾಣಿಗಳನ್ನು ಝಬಿಹ ಮೂಲಕ ಈ ಕೆಳಗಿನ ಷರತ್ತುಗಳನ್ನ ಅವಶ್ಯ ಪಾಲಿಸಬೇಕಾಗಿದೆ.

ಕತ್ತಿಯು ಅತ್ಯಂತ ಹರಿತವಾಗಿರಬೇಕು ಮತ್ತು ನೋವು ಕನಿಷ್ಟವಾಗಿರುವಂತೆ ಕೊಯ್ಯುವ ಕ್ರಿಯೆಯು ಕ್ಷಿಪ್ರವಾಗಿರಬೇಕು. ಪ್ರಾಣಿಯ ಮರಣವು ಬೆನ್ನುಹುರಿಯನ್ನು ಘಾಸಿಮಾಡದ, ಗಂಟಲು, ಕೊರಳಿನ ರಕ್ತನಾಳ ಮತ್ತು ಶ್ವಾಸನಾಳಗಳ ತುಂಡರಿಸುವಿಕೆಯಿಂದ ಸಂಭವಿಸಿರಬೇಕು. ರುಂಡವನ್ನು ಬೇರ್ಪಡಿಸುವ ಮೊದಲು ಅರ್ಥಾತ್ ಬೆನ್ನುಹುರಿ ತುಂಡಾಗುವ ಮೊದಲು ರಕ್ತವು ಸಂಪೂರ್ಣವಾಗಿ ಹೊರ ಹರಿದಿರಬೇಕು.

ರಕ್ತವು ರೋಗಾಣುಗಳಿಗೆ ಒಂದು ಅತ್ಯುತ್ತಮ ತಾಣವಾಗಿದೆ. ಹೆಚ್ಚಿನೆಲ್ಲಾ ರಕ್ತವನ್ನು ಹೊರಹರಿಸುವುದರಿಂದ ಮಾಂಸವು ರೋಗಾಣುಗಳಿಂದ ಮುಕ್ತವಾಗುತ್ತದೆ. ಬೆನ್ನುಹುರಿಯು ತುಂಡರಿಸಲ್ಪಡುವುದರಿಂದ ಹೃದಯ ಸಂಬಂಧಿತ ನಾಳಗಳು ಘಾಸಿಗೊಂಡು ಹೃದಯವು ಸ್ಥಗಿತಗೊಳ್ಳಬಹುದು ಮತ್ತು ರಕ್ತವು ನಾಳಗಳಲ್ಲಿ ಉಳಿದುಬಿಡುವ ಸಾಧ್ಯತೆಗಳಿವೆ. ಆದುದರಿಂದಲೇ ಬೆನ್ನು ಹುರಿಯನ್ನು ತುಂಡರಿಸುವುದನ್ನು ತಡೆಯಲಾಗಿದೆ. ಇತರ ರೀತಿಗಳಿಗೆ ಹೋಲಿಸಿದರೆ ಇಸ್ಲಾಮಿಕ್ ಪದ್ದತಿಯಲ್ಲಿ ವಧಿಸಿದ ಪ್ರಾಣಿಗಳ ಮಾಂಸವು ಹೆಚ್ಚು ಕಾಲ ಕೆಡದೇ ಉಳಿಯುವುದು.

ಕೊರಳ ನಾಳಗಳನ್ನು ಕ್ಷಿಪ್ರವಾಗಿ ಕೊಯ್ಯುವುದರಿಂದ ನೋವಿನ ಅರಿವುನ್ನುಂಟು ಮಾಡುವ ಮೆದುಳಿನ ನರಗಳಿಗೆ ರಕ್ತ ಪೂರೈಕೆ ಸ್ಥಗಿತಗೊಳ್ಳುತ್ತದೆ ಮತ್ತು ಇದರಿಂದ ವಧಾಪ್ರಾಣಿಗೆ ನೋವು ಅನುಭವಕ್ಕೆ ಬರಲಾರದು. ಮರಣ ವೇಳೆಯಲ್ಲಿ ಪ್ರಾಣಿಯ ಒದ್ದಾಟವು ನೋವಿನ ಕಾರಣದಿಂದಲ್ಲ ಬದಲಾಗಿ ಅದು ಸ್ನಾಯುಗಳ ಚಲನೆ (Contraction & Relaxation)ಯಿಂದಾಗಿರುತ್ತದೆ. ಹೀಗೆ ಪ್ರಾಣಿಗಳನ್ನು ವಧಿಸುವ ಇಸ್ಲಾಮಿ ವಧಾ ರೀತಿ ಝಬಿಹಯು ಅತ್ಯಂತ ಶುದ್ಧ ಹಾಗು ನೋವನ್ನು ಅತ್ಯಂತ ಕನಿಷ್ಟಗೊಳಿಸುವ ಅತ್ಯುತ್ತಮ ರೀತಿಯಾಗಿದೆ.

ಪ್ರಸಕ್ತ ಭಾರತದಲ್ಲಿ ಮುಸ್ಲಿಮರ ವಿರುದ್ಧದ ಅಸಹನೆಯ ಭಾಗವಾಗಿ ಮುಸ್ಲಿಮರು ಮಾಂಸದ ಪ್ರಾಣಿಯನ್ನ ಕೊಯ್ಯುವಾಗ ಅನುಸರಿಸೋ ಹಲಾಲ್ ಮಾಂಸವನ್ನ ಬಹಿಷ್ಕರಿಸಬೇಕು ಎನ್ನುವ ಹೊಸ ಕೂಗು ಭಾರಿ ಚರ್ಚೆಯಲ್ಲಿದೆ, ವಿಮರ್ಶಿಸೋ ಬಹುತೇಕರಿಗೆ ಹಲಾಲ್ ಎಂಬ ಶಬ್ದದ ಡೆಫಿನಿಶನ್ ಕೂಡಾ ಗೊತ್ತಿಲ್ಲ. ಇನ್ನು ಹಲಾಲ್ ಪದ್ಧತಿಯಿಂದ ಮುಸ್ಲಿಮರ ಆರ್ಥಿಕತೆಯನ್ನ ಬಲಿಷ್ಠಗೊಳಿಸಲು ಅವರೇ ಸೃಷ್ಟಿಸಿಕೊಂಡ ಸಂಪ್ರದಾಯ ಎಂದು ಕೆಲವರು ತಪ್ಪು ಸಂದೇಶಗಳನ್ನು ಕೂಡ ವ್ಯಾಪಕಾವಾಗಿ ರವಾನಿಸುತ್ತಿದ್ದಾರೆ, ವಾಸ್ತವಲ್ಲಿ ಈ ಆರೋಪಗಳೆಲ್ಲವು ಶುದ್ಧ ಸುಳ್ಳು.

ಹಲಾಲ್(Halal) ಮತ್ತು ಹರಾಂ(Haram) ಎನ್ನುವುದು ಇಸ್ಲಾಮೀ ಕರ್ಮಶಾಸ್ತ್ರದಲ್ಲಿ ಬಹಳ ಸ್ಥಾನವಿರುವ ಪದಗಳು. ಹಲಾಲ್ ಎಂದರೆ ಒಪ್ಪಿತ ಎಂದೂ, ಹರಾಂ ಎಂದರೆ ತಿರಸ್ಕೃತ ಅಥವಾ ನಿಷಿದ್ಧ ಎಂದು ಸ್ಪಷ್ಟವಾದ ಅರ್ಥವಿದೆ. ಆದರೆ ಇತ್ತೀಚೆಗೆ ನಮ್ಮ ದೇಶದಲ್ಲಿ ಕೇವಲ ಮಾಂಸದ ಪ್ರಾಣಿಯನ್ನ ಕೊಯ್ಯುವ ವಿಧಾನವೊಂದನ್ನಷ್ಟೇ ಹಲಾಲ್ ಎಂದು ಬಹುತೇಕರು ತಪ್ಪು ತಿಳಿದುಕೊಂಡಿದ್ದಾರೆ . ವಾಸ್ತವದಲ್ಲಿ ಪ್ರಾಣಿಯನ್ನ ವಧಿಸುವ ಇಸ್ಲಾಮೀ ವಿಧಾನದ ಹೆಸರು ದ್ಸಬಹ್ ಎಂದಾಗಿದೆ.

ಮುಸ್ಲಿಮರಿಗೆ ಹಲಾಲ್ ಮತ್ತು ಹರಾಂ ಆದ ಅನೇಕ ಅನೇಕ ವಿಚಾರಗಳನ್ನ ಖರಾನ್ ಮತ್ತು ಪ್ರವಾದಿ ವಚನಗಳಲ್ಲಿ ಕಲಿಸಲಾಗಿದೆ, ಮತ್ತು ಆದೇಶಿಸಲಾಗಿದೆ. ಇಸ್ಲಾಮಿನ ಹರಾಂ ಪದ್ಧತಿನ್ನ ಶೀಘ್ರವಾಗಿ ಅರ್ಥೈಸಲು ಬಸವಣ್ಣರ ಅಂತರಂಗ ಶುದ್ಧಿ ಬಹಿರಂಗ ಶುದ್ಧಿ ಅನ್ನೋ ಪ್ರಸಿದ್ಧ ವಚನವೇ ಸಾಕು. ಇಸ್ಲಾಮಿನಲ್ಲಿ ಕೊಲ್ಲುವುದು, ಕದಿಯುವುದು, ಸುಳ್ಳು ಹೇಳುವುದು, ಡಂಭಾಚಾರ, ಅಹಂಕಾರ ಮೆರೆಯುವುದು, ಪರರನ್ನ ಹಿಯಾಳಿಸುವುದು ಇವಿಷ್ಟು ಅಲ್ಲದೇ ಇನ್ನಷ್ಟು ಹರಾಂಗಳಿವೆ.

ಮದ್ಯ ಸೇವನೆ ವ್ಯಭಿಚಾರ ಪರರ ಸ್ವತ್ತನ್ನು ಲಪಟಾಯಿಸುವುದು, ಬಡ್ಡಿ, ಸರಕುಗಳನ್ನ ಸಂಪತ್ತು ಅಧಿಕಗೊಳಿಸಲು ಶೇಖರಿಸಿಟ್ಟು ಕೃತಕ ಅಭಾವ ಸೃಷ್ಟಿಸಿ ಹೆಚ್ಚುವರಿ ಲಾಭ ಪಡೆಯುವುದು, ತೂಕದಲ್ಲಿ ವಂಚನೆಗೈಯುವುದು, ಬಡಪಾಯಿಯ ವೇತನ ನೀಡದೇ ಸತಾಯಿಸುವುದು, ಜನರ ಹಕ್ಕುಗಳಿಗೆ ನಿರ್ಭ0ಧ ಹೇರುವುದು ,ಮನುಷ್ಯರಲ್ಲಿ ಮೇಲು ಕೀಳೆಂದು ತಾರತಮ್ಯ ಮಾಡುವುದು, ಸತ್ಯವನ್ನ ಹೇಳಲು ಭಯಪಡುವುದು ಇವೆಲ್ಲವೂ ಹರಾಂ ಆಗಿದೆ.

ಹಲಾಲ್ ಬಗ್ಗೆ ಪ್ರವಾದಿ ಸಂದೇಶ ಹೀಗಿದೆ. ” ಓರ್ವ ಮನುಷ್ಯ ಸೇವಿಸುವ ಆಹಾರದಲ್ಲಿ ಅತ್ಯಂತ ಶ್ರೇಷ್ಠ ಆಹಾರ ಸ್ವಯಂ ದುಡಿದ ಆಹಾರ”. ಜೊತೆಗೆ ಮನುಷ್ಯನೊಬ್ಬ ತಾನು ತಿನ್ನುವ ಆಹಾರ ನ್ಯಾಯಯುತವಾದ ಮಾರ್ಗದಲ್ಲಿ ಸಂಪಾದಿಸಿದ್ದರೆ ಅದು ಮಾತ್ರ ಆತನಿಗೆ ಹಲಾಲ್. ಬಹುತೇಕ ಧರ್ಮಗಳು ಆಹಾರಕ್ಕಾಗಿ ಪ್ರಾಣಿಗಳನ್ನ ಕೊಲ್ಲುವುದನ್ನ ಒಪ್ಪಿಕೊಂಡಿವೆ. ಆದರೆ ಕೆಲವು ಧರ್ಮಗಳು ಇದನ್ನ ಅನಾಗರಿಕವೆಂದು ಹೇಳದಿದ್ದರು ಅನೈತಿಕ ಎಂದು ಭಾವಿಸುತ್ತವೆ.

Latest News

ದೇಶ-ವಿದೇಶ

ದೇಶದ ಹೆಮ್ಮೆ ತ್ರಿವರ್ಣ ಧ್ವಜವೂ ಕೂಡ ಬಿಜೆಪಿಗೆ ವ್ಯಾಪಾರದ ಸರಕಾಗಿದೆ : ಬಿ.ಕೆ.ಹರಿಪ್ರಸಾದ್

38×11,80,000=4.484 ಕೋಟಿ, ಹೇಗಿದೆ ಮೋದಿ ಸರ್ಕಾರದ ಲೂಟಿ? ಕೇಂದ್ರದ ಮೋದಿ ಸರ್ಕಾರ ವಸೂಲಿ ಬಾಜಿತನಕ್ಕೆ ರಾಷ್ಟ್ರಧ್ವಜವನ್ನ ಬಳಸಿಕೊಂಡಿರುವುದು ಅಕ್ಷಮ್ಯ ಅಪರಾಧ

ಕ್ರೀಡೆ

ಕಾಮನ್‌ವೆಲ್ತ್ ಗೇಮ್ಸ್‌ 2022 ; ಕಂಚಿನ ಪದಕ ಗೆದ್ದ ಪತ್ನಿಯನ್ನು ಅಭಿನಂದಿಸಿದ ದಿನೇಶ್ ಕಾರ್ತಿಕ್

ಭಾರತದ ಸ್ಕ್ವ್ಯಾಶ್ ಆಟಗಾರ್ತಿ ದೀಪಿಕಾ ಪಲ್ಲಿಕ್ಕಲ್(Deepika Pallikal) ಮಿಕ್ಸೆಡ್ ಡಬಲ್ಸ್ ವಿಭಾಗದಲ್ಲಿ ಕಂಚಿನ ಪದಕ(Bronze Medal) ಗೆದ್ದುಕೊಂಡಿದ್ದಾರೆ.

ಆರೋಗ್ಯ

ದೇಹ ನೀಡುವ `ಈ’ ಸೂಚನೆಗಳು ಕಿಡ್ನಿ ವೈಪಲ್ಯವನ್ನು ಸೂಚಿಸುತ್ತವೆ ; ಇಲ್ಲಿದೆ ಮಾಹಿತಿ ಓದಿ

ಕಿಡ್ನಿ(Kidney) ನಮ್ಮ ದೇಹದ ಪ್ರಮುಖ ಅಂಗವಾಗಿದೆ. ದೇಹದಲ್ಲಿ ಶುದ್ಧ ರಕ್ತವನ್ನು ಪರಿಚಲನೆ ಮಾಡುವಲ್ಲಿ ಮೂತ್ರಪಿಂಡಗಳು ಮುಖ್ಯ ಪಾತ್ರವಹಿಸುತ್ತವೆ.

ರಾಜಕೀಯ

1947ರ ಹಿಂದಿನ ಕಾಂಗ್ರೆಸ್ ಬೇರೆ, ಈಗಿನ ಸೋಗಲಾಡಿ ಸಿದ್ಧಹಸ್ತರು ಇರುವ ಕಾಂಗ್ರೆಸ್ಸೇ ಬೇರೆ : ಹೆಚ್‍ಡಿಕೆ

ಇದುವರೆಗೂ ಕಾಂಗ್ರೆಸ್ ನಡೆಸಿದ ಸ್ವಾತಂತ್ರ್ಯ ವಿರೋಧಿ ಕೃತ್ಯಗಳಿಗೆ ಉತ್ತರ ಕೊಡುವಿರಾ? ಕಾಂಗ್ರೆಸ್ ಕೋಳಿ ಕೂಗಿದರೆ ಭಾರತದಲ್ಲಿ ಬೆಳಕು ಹರಿಯುತ್ತದೆ ಎನ್ನುವ ಕಾಲ ಹೋಯಿತು.