India : ಪ್ರಪಂಚದಾದ್ಯಂತ ಹೆಚ್ಚಿನ ಸಂಖ್ಯೆಯ ವಾಟ್ಸಾಪ್ (Whats App Service Down) ಬಳಕೆದಾರರಿಗೆ, ಮಂಗಳವಾರ ವಾಟ್ಸಾಪ್ ಸೇವೆಯೂ ಸಂಪೂರ್ಣವಾಗಿ ಕೆಲ ಗಂಟೆಗಳು ಅಸ್ತವ್ಯಸ್ತಗೊಂಡಿತ್ತು.
ಜನಪ್ರಿಯ ಮೆಸೇಜಿಂಗ್ ಅಪ್ಲಿಕೇಶನ್ ವಾಟ್ಸಾಪ್ ಅನ್ನು ಹೊಂದಿರುವ ಮೆಟಾ, ಮನೆಯಿಂದ ಕೆಲಸ ಮಾಡುವವರಿಗೆ, ಐಟಿ ಸೆಂಟರ್‌ನಲ್ಲಿ ಕೆಲಸ ಮಾಡುವವರಿಗೆ ಹೇಳಿ ಮಾಡಿಸಿದ ಸಾಧನವಾಗಿದೆ.
ಈ ಒಂದು ಆ್ಯಪ್ ಕೆಲ ಗಂಟೆಗಳ ಕಾಲ ಸ್ಥಗಿತಗೊಂಡಿದ್ದಕ್ಕೆ, ಬಳಕೆದಾರರು ವಾಟ್ಸಾಪ್ ಸಂಸ್ಥೆಯನ್ನು ತೀವ್ರ ಟ್ರೋಲ್ (Whats App Service Down) ಮಾಡುವ ಮೂಲಕ ಟೀಕೆ ಮಾಡಿದೆ.
ಈ ಕುರಿತು ಸ್ಪಷ್ಟನೆ ನೀಡಿದ ಮೆಸೇಜಿಂಗ್ ಸಂಸ್ಥೆ, ವಾಟ್ಸಾಪ್ ಗ್ರಾಹಕರಿಗೆ ಒದಗಿಸುತ್ತಿದ್ದ ದಿನನಿತ್ಯದ ಸೇವೆಯಲ್ಲಿ ಉಂಟಾದ ವ್ಯತ್ಯಯದ ಬಗ್ಗೆ ಒಪ್ಪಿಕೊಂಡಿದೆ.
https://vijayatimes.com/girl-beaten-to-death/
ಪ್ರತಿಯೊಬ್ಬ ಗ್ರಾಹಕರಿಗೂ ಸಾಧ್ಯವಾದಷ್ಟು ಬೇಗ ಸೇವೆಗಳನ್ನು ಮರುಸ್ಥಾಪಿಸಲು ನಾವು ಕೆಲಸ ಮಾಡುತ್ತಿದ್ದೇವೆ, ಶೀಘ್ರವೇ ಸೇವೆಗಳು ಆರಂಭಗೊಳ್ಳಲಿದೆ ಎಂದು ಹೇಳಿತು.
ರಿಯಲ್ ಟೈಮ್ ಮಾನಿಟರ್ ಡೌನ್‌ಡೆಕ್ಟರ್ ಮಾಹಿತಿಯ ಪ್ರಕಾರ, ವಾಟ್ಸಾಪ್ ಸ್ಥಗಿತವು ಮಧ್ಯಾಹ್ನ 12:30ರ ಸಮಯಕ್ಕೆ ಸ್ಥಗಿತಗೊಂಡು, 2:40ರ ಸಮಯಕ್ಕೆ ಮತ್ತೆ ಸೇವೆಯನ್ನು ಮರು ಪ್ರಾರಂಭಿಸಿತು.
https://fb.watch/gnqQdm7CLx/ ಕಿತ್ತು ಹೋದ ರಸ್ತೆಗೆ ಪೂಜೆ ಮಾಡಿದ ಕೆ.ಆರ್.ಎಸ್ ಕಾರ್ಯಕರ್ತರು!
ಸೇವೆ ಸ್ಥಗಿತಕ್ಕೆ ಸಂಬಂಧಿಸಿದಂತೆ ಇಲ್ಲಿಯವರೆಗೂ ಭಾರತದಿಂದ 11,000 ಕ್ಕೂ ಹೆಚ್ಚು ವರದಿಗಳನ್ನು ದಾಖಲಿಸಲಾಗಿದೆ ಎಂದು ಸುದ್ದಿ ಸಂಸ್ಥೆ ರಾಯಿಟರ್ಸ್ ವರದಿ ಮಾಡಿದೆ. ಯುನೈಟೆಡ್ ಕಿಂಗ್‌ಡಮ್‌ನ ಸಂಖ್ಯೆಗಳು 68,000 ಮತ್ತು ಸಿಂಗಾಪುರಕ್ಕೆ 19,000 ಆಗಿದ್ದವು ಎನ್ನಲಾಗಿದೆ.
https://twitter.com/JACKIEAPPU1/status/1584813796916625413?s=20&t=eXhE1MkWiMScx9IhiOQ0Dg
ಕೆಲವರು ಪ್ರಸ್ತುತ ಸಂದೇಶಗಳನ್ನು ರವಾನಿಸುವಲ್ಲಿ ಅಡಚಣೆ ಎದುರಿಸುತ್ತಿದ್ದಾರೆ ಎಂದು ನಮಗೆ ತಿಳಿದು ಬಂದಿದೆ ಮತ್ತು ಸಾಧ್ಯವಾದಷ್ಟು ಎಲ್ಲರಿಗೂ ವೇಗವಾಗಿ #WhatsApp ಅನ್ನು ಮರುಸ್ಥಾಪಿಸಲು ನಮ್ಮ ತಂಡ ಚುರುಕಾಗಿ ಕೆಲಸ ಮಾಡುತ್ತಿದೆ ಎಂದು ಮೆಟಾ ಅಧಿಕಾರಿ ಹೇಳಿರುವುದನ್ನು ರಾಯಿಟರ್ಸ್ ತನ್ನ ವರದಿಯಲ್ಲಿ ಉಲ್ಲೇಖಿಸಿದೆ.
https://twitter.com/Jacksonnyakoe/status/1584812362145484803?s=20&t=gNsglamxisg3aopjoB_QWA
ವಾಟ್ಸಾಪ್ ಬಳಕೆದಾರರು ಸೇವೆಯಲ್ಲಿ ಅಡಚಣೆ ಉಂಟು ಮಾಡಿದ್ದಕ್ಕೆ, ನೇರವಾಗಿ ಸಾಮಾಜಿಕ ಜಾಲತಾಣವಾದ ಟ್ವಿಟರ್ ನಲ್ಲಿ ಹಾಸ್ಯಸ್ಪದವಾಗಿ ವಾಟ್ಸಾಪ್ ವಿರುದ್ಧ ಟ್ರೋಲ್ ಮಾಡಲಾಯಿತು.
ಟ್ವಿಟರ್ ನಲ್ಲಿ ಮೀಮ್‌ಗಳನ್ನು ಹಾಕಿ ವಾಟ್ಸಾಪ್ ಸೇವೆ ವಿರುದ್ಧ ವ್ಯಾಪಕವಾಗಿ ಟೀಕೆ ಮಾಡಲಾಯಿತು ಮತ್ತು ವಾಟ್ಸಾಪ್ ಡೌನ್ ಎಂಬ ಹ್ಯಾಶ್ ಟ್ಯಾಗ್ ಬಳಸಿ ಟ್ರೆಂಡ್ ಮಾಡಿ ಅಪಹಾಸ್ಯ ಮಾಡಿದರು.
‘