New delhi : ವಾಟ್ಸಾಪ್ ನಲ್ಲಿ(WhatsApp) ಸಂದೇಶಗಳ ಚಾಟ್ ಅನ್ನು ಮರೆಮಾಡಲು ಇದ್ದ ಒಂದು ಮಾರ್ಗವೆಂದರೆ ಅದು ಆರ್ಕೈವ್ ಮಾಡುವುದು. ಆದ್ರೆ, ಆ ಆಯ್ಕೆ ಬಳಸದೆ ಚಾಟ್ ಅನ್ನು ಬಚ್ಚಿಡಲು ಇಲ್ಲಿದೆ ಸುಲಭ ಮಾರ್ಗ! ಆಂಡ್ರೈಂಡ್ ಮತ್ತು ಐ ಫೋನ್ ಎರಡಕ್ಕೂ ಅನ್ವಯವಾಗುವಂತೆ ಇರುವ ಸರಳ ಮಾರ್ಗ ಹೀಗಿದೆ ಅನುಸರಿಸಿ.

ವಾಟ್ಸಾಪ್ ಜಗತ್ತಿನ ಅತ್ಯಂತ ವೇಗವಾದ, ಸರಳವಾದ ಸಂದೇಶ ಕಳಿಸುವಂತೆ ಸಾಮಾಜಿಕ ಜಾಲತಾಣದ ಆಪ್! ಇಂದಿನ ನವಯುಗದಲ್ಲಿ ಜನಸಾಮಾನ್ಯರು ಮೊಬೈಲ್ ಆಕರ್ಷಣೆಗೆ ತೀವ್ರವಾಗಿ ಒಳಗಾಗಿದ್ದು, ಸ್ಮಾರ್ಟ್‌ಫೋನ್(Smartphone) ಇಲ್ಲದೇ ಜೀವನವಿಲ್ಲ ಎಂಬಂತೆ ಜೀವಿಸುತ್ತಿದ್ದಾರೆ.
ಒಂದು ದಿನ ಸ್ಮಾರ್ಟ್‌ಫೋನ್ ಇಲ್ಲದ ಜೀವನವನ್ನು ಊಹಿಸಿಕೊಳ್ಳಲು ಅಸಾಧ್ಯ ಎಂಬಂತೆ ಬದುಕು ನಿರ್ಮಾಣವಾಗಿದೆ. ಅದರಲ್ಲೂ ಸಾಮಾಜಿಕ ಜಾಲತಾಣಕ್ಕೆ ಕಟ್ಟುಬಿದ್ದಿರುವ ಜನರು, ಸಂದೇಶ, ವೀಡಿಯೋ ಕಳಿಸುವ ವಾಟ್ಸಾಪ್ ಮೇಲೆ ಹೆಚ್ಚು ಪ್ರಭಾವಿತರಾಗಿದ್ದಾರೆ. ತಮ್ಮ ದೈನಂದಿನ ಕೆಲಸಗಳನ್ನು ಕೂಡ ವಾಟ್ಸಾಪ್ ಮೂಲಕವೇ ಹೆಚ್ಚು ಜನರು ಪ್ರಾರಂಭಿಸುತ್ತಾರೆ.
https://vijayatimes.com/congress-retaliated-nalinkumar-statement/
ಪ್ರತಿಬಾರಿ ವಾಟ್ಸಾಪ್ ತನ್ನ ವಿಶೇಷ ಫೀಚರ್‌ಗಳನ್ನು ಬಳಕೆದಾರರಿಗೆ ಪರಿಚಯಿಸುತ್ತಿರುತ್ತದೆ. ತನ್ನ ಅತ್ಯಾಧುನಿಕ ಫೀಚರ್‌ಗಳಲ್ಲಿ ಚಾಟ್ ಅನ್ನು ಮರೆಮಾಚಲು ಇರುವ ಆಯ್ಕೆ ಎಂದರೇ ಅದು ಆರ್ಕೈವ್(Archive) ಮಾತ್ರ! ಆದ್ರೆ, ಅದನ್ನು ಹೊರೆತುಪಡಿಸಿ ಕೂಡ ಚಾಟ್ ಅನ್ನು ಬಚ್ಚಿಡಲು ಮತ್ತೊಂದು ಆಯ್ಕೆ ಇದೆ. ಈ ಆಯ್ಕೆ ಹಲವರಿಗೆ ತಿಳಿದಿಲ್ಲ. ಈ ಫೀಚರ್ ಐಫೋನ್ ಮತ್ತು ಆಂಡ್ರಾಯ್ಡ್ ಎರಡಕ್ಕೂ ಅನ್ವಯವಾಗುವಂತೆ ಇದೆ. ಅದು ಹೀಗಿದೆ ಅನುಸರಿಸಿ.
iPhone :
- WhatsApp ತೆರೆದು, ಅದರಲ್ಲಿ ಕೆಳಗಿನ ಬಲಭಾಗದಲ್ಲಿ ಸೆಟ್ಟಿಂಗ್ ಆಯ್ಕೆ ಕ್ಲಿಕ್ ಮಾಡಿ.
- ಪ್ರೈವೆಸಿಗೆ(Privacy) ಹೋಗಿ ಮತ್ತು ಸ್ಕ್ರೀನ್ ಲಾಕ್ ಆಯ್ಕೆ ಮಾಡಿ.
- ನೀವು ಈಗ ಸ್ಕ್ರೀನ್ ಮೇಲೆ ರಿಕ್ವೈರ್ ಫೇಸ್ ಐಡಿ ಅಥವಾ ರಿಕ್ವೈರ್ ಟಚ್ ಐಡಿ ಆಯ್ಕೆಯನ್ನು ಕಾಣುತ್ತೀರಿ.
- ನೀವು ನೋಡುವ ಯಾವುದೇ ಆಯ್ಕೆಯ ಟಾಗಲ್ ಅನ್ನು ಸಕ್ರಿಯಗೊಳಿಸಿ.
- ಟಾಗಲ್ ಅನ್ನು ಸಕ್ರಿಯಗೊಳಿಸಿದ ನಂತರ, ನೀವು ನಾಲ್ಕು ಆಯ್ಕೆಗಳನ್ನು ನೋಡುತ್ತೀರಿ (ತಕ್ಷಣ, 1 ನಿಮಿಷದ ನಂತರ, 15 ನಿಮಿಷಗಳ ನಂತರ, 1 ಗಂಟೆಯ ನಂತರ) ಇವುಗಳಲ್ಲಿ ಒಂದನ್ನು ಆಯ್ಕೆ ಮಾಡಿ.
- ಆಯ್ಕೆ ಮಾಡಿದ ಸಮಯದ ಪ್ರಕಾರ ವೈಶಿಷ್ಟ್ಯವನ್ನು ಸಕ್ರಿಯಗೊಳಿಸಲಾಗುತ್ತದೆ. ಲಭ್ಯವಿದ್ದಾಗ, ಮೆಟಾ-ಮಾಲೀಕತ್ವದ ಸೇವೆಯನ್ನು ಅನ್‌ಲಾಕ್ ಮಾಡಲು ಫೇಸ್ ಐಡಿ(Face ID) ಅಥವಾ ಟಚ್ ಐಡಿ ಅಗತ್ಯವಿರುತ್ತದೆ.

Android :
- ನಿಮ್ಮ ಫೋನ್‌ನಲ್ಲಿ WhatsApp ತೆರೆದು, ಪರದೆಯ ಮೇಲಿನ ಬಲಭಾಗದಲ್ಲಿರುವ ಮೂರು ಡಾಟ್ ಮೇಲೆ ಕ್ಲಿಕ್ ಮಾಡುವ ಮೂಲಕ ಸೆಟ್ಟಿಂಗ್ ಆಯ್ಕೆ ಮಾಡಿ.
- ಪ್ರವೈಸಿ ಕ್ಲಿಕ್ ಮಾಡಿ, ನಂತರ ಅಕೌಂಟ್‌ಗೆ ಹೋಗಿ.
- ಅಲ್ಲಿ ಫಿಂಗರ್‌ಪ್ರಿಂಟ್ ಲಾಕ್ ಆಯ್ಕೆ ಮಾಡಿ ಮತ್ತು ಫಿಂಗರ್‌ಪ್ರಿಂಟ್‌ನೊಂದಿಗೆ ಅನ್‌ಲಾಕ್ ಮಾಡಿ.
- ಮುಂದೆ, ಅಪ್ಲಿಕೇಶನ್(application) ಅನ್ನು ಎಷ್ಟು ಸಮಯದ ನಂತರ ಲಾಕ್ ಮಾಡಬೇಕೆಂದು ನಿರ್ಧರಿಸಲು ಪ್ರದರ್ಶಿಸಲಾದ ಆಯ್ಕೆಗಳಲ್ಲಿ ಒಂದನ್ನು ಆಯ್ಕೆ ಮಾಡಿ.