ವಾಟ್ಸ್ಯಾಪ್ನಲ್ಲಿ ಸುರಕ್ಷಿತ ಚಾಟ್ ಮಾಡಬಹುದೆಂದು ತಿಳಿದುಕೊಂಡಿದ್ದೇವೆ. ಆದರೆ ವಾಟ್ಸ್ಯಾಪ್ನಲ್ಲಿ ನಿಮ್ಮ ಚಾಟ್ಗಳು ಲೀಕ್ ಆಗುವ ಎಲ್ಲಾ ಸಾದ್ಯತೆಗಳಿವೆ. ಅದು ಹೇಗೆ? ಇಲ್ಲಿದೆ ಉತ್ತರ.
ವಾಟ್ಸಾಪ್ ಚ್ಯಾಟ್ ಬ್ಯಾಕ್ ಅಪ್ ನಿಮ್ಮ ಮೊಬೈಲ್ನಲ್ಲಿ ಸೇವ್ ಆಗುತ್ತದೆ. ಇದನ್ನು ಪೂರ್ವನಿಯೋಜಿತವಾಗಿ ಐ ಕ್ಲೌಡ್ಗೆ ಹೊಂದಿಸಲಾಗಿದೆ. ಆಪನ್ನು ಬಳಕೆ ಮಾಡುವಾಗ ಇರುವಂತಹ ಸುರಕ್ಷತೆ, ಐಕ್ಲೌಡ್ನಲ್ಲಿ ಸೇವ್ ಆದಾಗ ಆ ಚ್ಯಾಟ್ ಬ್ಯಾಕಪ್ಗೆ ಇರುವುದಿಲ್ಲ ಎನ್ನುತ್ತಾರೆ ತಜ್ಞರು. ಇದರಿಂದಾಗಿ ಐಕ್ಲೌಡಲ್ಲಿರುವ ಬ್ಯಾಕಪ್ಪನ್ನು ತೆಗೆದುಕೊಂದು ಚ್ಯಾಟ್ ಮಾಡಿದ್ದನ್ನು ನೋಡಬಹುದಾಗಿದೆ. ಡಿಲಿಟ್ ಫಾರ್ ಎವ್ರಿಒನ್ ಎಂಬ ಆಯ್ಕೆಯನ್ನು ವಾಟ್ಸಾಪ್ ನೀಡಿದ್ದರೂ ಮೆಸೇಜ್ ಬಂದ ತಕ್ಷಣ ಸ್ಕ್ರೀನ್ ಸೋಟ್ ತೆಗೆದರೆ ಅದು ನಿಮ್ಮ ಮೊಬೈಲಲ್ಲಿ ಸೇವ್ ಆಗುತ್ತದೆ. ಈ ಆಯ್ಕೆಯನ್ನು ತೆಗೆದು ಹಾಕಬೇಕೆಂದು ಜನ ಅಭಿಪ್ರಾಯಪಡುತ್ತಿದ್ದಾರೆ.