• ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
    • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Menu
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
    • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Vijaya Times logo
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
    • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Menu
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
    • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Visit Channel
Home ದೇಶ-ವಿದೇಶ

ಹೊಸ ನಿಯಮಗಳಿಗೆ ಒಪ್ಪಿಗೆ ಸೂಚಿಸಿದ ವಾಟ್ಸ್ಯಾಪ್, ಗೂಗಲ್‌, ಫೇಸ್‌ಬುಕ್‌

Sharadhi by Sharadhi
in ದೇಶ-ವಿದೇಶ, ಪ್ರಮುಖ ಸುದ್ದಿ
ಹೊಸ ನಿಯಮಗಳಿಗೆ ಒಪ್ಪಿಗೆ ಸೂಚಿಸಿದ ವಾಟ್ಸ್ಯಾಪ್, ಗೂಗಲ್‌, ಫೇಸ್‌ಬುಕ್‌
0
SHARES
0
VIEWS
Share on FacebookShare on Twitter

ನವದೆಹಲಿ, ಮೇ. 29: ಸೋಷಿಯಲ್ ಮೀಡಿಯಾಗಳಾದ ಫೇಸ್​ಬುಕ್, ಟ್ವಿಟ್ಟರ್, ವಾಟ್ಸ್​​ಆಪ್​, ಗೂಗಲ್​ ಹೊಸ ಮಧ್ಯವರ್ತಿ ಮಾರ್ಗಸೂಚಿಗಳನ್ನು ಅನುಸರಿಸಿಲ್ಲವೆಂದು ಭಾರತದಲ್ಲಿ ಇವು ಬ್ಯಾನ್ ಆಗಲಿವೆ ಎನ್ನಲಾಗಿತ್ತು. ಆದರೆ ಈಗ ಗೂಗಲ್, ಫೇಸ್​ಬುಕ್ ಮತ್ತು ವಾಟ್ಸ್ಯಾಪ್​ನಂತಹ ಬೃಹತ್​ ಸಾಮಾಜಿಕ ಮಾಧ್ಯಮ ಕಂಪನಿಗಳು ಹೊಸ ಡಿಜಿಟಲ್​​ ನಿಯಮಗಳನ್ನು ಪಾಲಿಸಲು ಒಪ್ಪಿಕೊಂಡಿದ್ದು, ಐಟಿ ಸಚಿವಾಲಯದ ಜೊತೆ ಮಾಹಿತಿ ಹಂಚಿಕೊಂಡಿವೆ. ಆದರೆ ಟ್ವಿಟ್ಟರ್​ ಇನ್ನೂ ಸಹ ಹೊಸ ನಿಯಮಗಳನ್ನು ಪಾಲಿಸಲು ಒಪ್ಪಿಗೆ ನೀಡಿಲ್ಲ. ಜೊತೆಗೆ ವಿವರಗಳನ್ನು ಐಟಿ ಸಚಿವಾಲಯಕ್ಕೆ ಕಳುಹಿಸಿಲ್ಲ ಎಂದು ಪಿಟಿಐ ಸರ್ಕಾರದ ಮೂಲಗಳನ್ನು ಉಲ್ಲೇಖಿಸಿ ವರದಿ ಮಾಡಿದೆ. ಗೂಗಲ್, ಫೇಸ್‌ಬುಕ್, ವಾಟ್ಸಾಪ್, ಕೂ, ಶೇರ್‌ಚಾಟ್, ಟೆಲಿಗ್ರಾಮ್ ಮತ್ತು ಲಿಂಕ್ಡಿನ್ ಸೇರಿದಂತೆ ಮಹತ್ವದ ಸಾಮಾಜಿಕ ಮಾಧ್ಯಮ ಕಂಪನಿಗಳು ಈ ವಾರದ ಆರಂಭದಲ್ಲಿ ಜಾರಿಗೆ ಬಂದ ಐಟಿ ಮಾನದಂಡಗಳ ಅಗತ್ಯಕ್ಕೆ ಅನುಗುಣವಾಗಿ ವಿವರಗಳನ್ನು ಸಚಿವಾಲಯದೊಂದಿಗೆ ಹಂಚಿಕೊಂಡಿವೆ. ಆದರೆ, ಟ್ವಿಟರ್ ಇನ್ನೂ ಐಟಿ ನಿಯಮಗಳನ್ನು ಪಾಲಿಸಿಲ್ಲ ಎಂದು ತಿಳಿದು ಬಂದಿದೆ. ಟ್ವಿಟ್ಟರ್​ ಇನ್ನೂ ಸಹ ಮುಖ್ಯ ಅನುಸರಣೆ ಅಧಿಕಾರಿಯ(chief compliance officer) ವಿವರಗಳನ್ನು ಐಟಿ ಸಚಿವಾಲಯಕ್ಕೆ ಕಳುಹಿಸಿಲ್ಲ. ಕಾನೂನು ಸಂಸ್ಥೆಯಲ್ಲಿ ನೋಡಲ್​ ಸಂಪರ್ಕ ವ್ಯಕ್ತಿಯಾಗಿ ಕೆಲಸ ಮಾಡುವ ವಕೀಲರೊಬ್ಬರ ಮತ್ತು ಕೊಂದುಕೊರತೆ ಅಧಿಕಾರಿಯ ಮಾಹಿತಿಯನ್ನು ಹಂಚಿಕೊಂಡಿದೆ ಎಂದು ಮೂಲಗಳು ತಿಳಿಸಿವೆ.

ಈ ವರ್ಷದ ಆರಂಭದಲ್ಲಿ ಅಂದರೆ ಫೆಬ್ರವರಿ 25 ರಂದು ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯವು (ಎಂಇಐಟಿ) ಹೊಸ ಐಟಿ ನಿಯಮಗಳನ್ನು ಪಾಲಿಸಲು ಎಲ್ಲಾ ಸಾಮಾಜಿಕ ಮಾಧ್ಯಮ ವೇದಿಕೆಗಳಿಗೆ ಮೂರು ತಿಂಗಳ ಗಡುವನ್ನು ನೀಡಿತ್ತು. ಈ ನಿಯಮಗಳಲ್ಲಿ ಅನುಸರಣೆ ಅಧಿಕಾರಿಗಳ ನೇಮಕ, ಭಾರತದಲ್ಲಿ ಅವರ ಹೆಸರು ಮತ್ತು ಸಂಪರ್ಕ ವಿಳಾಸ, ದೂರು ಪರಿಹಾರ, ಆಕ್ಷೇಪಾರ್ಹ ವಿಷಯದ ಮೇಲ್ವಿಚಾರಣೆ, ಅನುಸರಣೆ ವರದಿ ಮತ್ತು ಆಕ್ಷೇಪಾರ್ಹ ವಿಷಯವನ್ನು ತೆಗೆದುಹಾಕುವುದು ಸೇರಿವೆ. ಇಲ್ಲಿಯವರೆಗೆ, ಒಬ್ಬರನ್ನು ಹೊರತುಪಡಿಸಿ ಯಾವುದೇ ಕಂಪನಿಯು ಅಂತಹ ಯಾವುದೇ ಅಧಿಕಾರಿಗಳನ್ನು ನೇಮಿಸಿಲ್ಲ ಎಂದು ವರದಿಯಾಗಿದೆ. ಭಾರತೀಯ ಸಂಸ್ಥೆ ‘ಕೂ’ ಹೊರತುಪಡಿಸಿ, ಇತರ ಯಾವುದೇ ಪ್ರಮುಖ ಸಾಮಾಜಿಕ ಮಾಧ್ಯಮ ವೇದಿಕೆಗಳು (50 ಲಕ್ಷಕ್ಕೂ ಹೆಚ್ಚು ಬಳಕೆದಾರರನ್ನು ಹೊಂದಿರುವ) ಹೊಸ ಐಟಿ ನಿಯಮಗಳನ್ನು ಪಾಲಿಸಿಲ್ಲವೆಂದು ಮೂಲಗಳು ತಿಳಿಸಿದೆ. ಗುರುವಾರ ಕೇಂದ್ರ ಸರ್ಕಾರದ ಬಲವಾದ ಪ್ರತಿಕ್ರಿಯೆಯ ನಂತರ, ಟ್ವಿಟ್ಟರ್​ ಭಾರತದ ಕಾನೂನು ಸಂಸ್ಥೆಯಲ್ಲಿ ನೋಡಲ್​ ಸಂಪರ್ಕ ವ್ಯಕ್ತಿಯಾಗಿ ಕೆಲಸ ಮಾಡುವ ವಕೀಲರೊಬ್ಬರ ಮತ್ತು ಕೊಂದುಕೊರತೆ ಅಧಿಕಾರಿಯ ಮಾಹಿತಿಯನ್ನು ಹಂಚಿಕೊಂಡಿದೆ ಎಂದು ಮೂಲಗಳು ತಿಳಿಸಿವೆ.ಹೊಸ ಕಾನೂನು ಪ್ರಕಾರ, ಮೇಲುಸ್ತುವಾರಿ ಸಮಿತಿಯಲ್ಲಿ ರಕ್ಷಣಾ ಸಚಿವಾಲಯ, ವಿದೇಶಾಂಗ ವ್ಯವಹಾರ, ಗೃಹ, ಮಾಹಿತಿ ಮತ್ತು ಪ್ರಸಾರ, ಕಾನೂನು, ಮಾಹಿತಿ ತಂತ್ರಜ್ಞಾನ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಿಂದ ಸದಸ್ಯರಿರುತ್ತಾರೆ. ಯಾವುದಾದರೂ ಕಂಪೆನಿ ನೀತಿ ಸಂಹಿತೆಯನ್ನು ಉಲ್ಲಂಘಿಸಿದಲ್ಲಿ ಈ ಸಮಿತಿಯು ಸ್ವಯಂಪ್ರೇರಿತವಾಗಿ ದೂರು ತೆಗೆದುಕೊಂಡು, ವಿಚಾರಣೆ ನಡೆಸಬಹುದು. ಸರ್ಕಾರದಿಂದ ಜಂಟಿ ಕಾರ್ಯದರ್ಶಿ ಅಥವಾ ಮೇಲ್ಪಟ್ಟ ದರ್ಜೆಯವರನ್ನು ನೇಮಕ ಮಾಡುತ್ತದೆ. ಅವರಿಗೆ ಮಾಹಿತಿಯನ್ನು ತಡೆಹಿಡಿಯುವ ಅಧಿಕಾರ ಇರುತ್ತದೆ. ಮೇಲ್ಮನವಿ ಸಮಿತಿಗೆ ಯಾವುದೇ ಸೋಷಿಯಲ್ ಮೀಡಿಯಾ ಕಂಪೆನಿಯು ಮಾಹಿತಿ ವಿಚಾರದಲ್ಲಿ ಕಾನೂನು ಮೀರುತ್ತಿರುವುದು ಕಂಡುಬಂದಲ್ಲಿ ಅಂಥದ್ದನ್ನು ತಡೆಹಿಡಿಯುವಂತೆ ಸರ್ಕಾರದ ನಿಯಂತ್ರಣದಲ್ಲಿರುವ ಸಮಿತಿಗೆ ಕೇಳಬಹುದು.

ವೈಯಕ್ತಿಕ ಡೇಟಾ ಸಂರಕ್ಷಣಾ ಮಸೂದೆಯ ಅನುಷ್ಠಾನವಿಲ್ಲದೆ, ಯಾವುದೇ ತಪಾಸಣೆ ಮತ್ತು ಬಾಕಿ ಇರುವುದಿಲ್ಲ ಎಂದು ತಜ್ಞರು ಹೇಳಿದ್ದಾರೆ. ನಿಯಮಗಳು ಪ್ರಮುಖ ಸಮಸ್ಯೆಗಳನ್ನು ಬರಗೆಹರಿಸಿದ್ದರೂ ನೀತಿ ಸುರಕ್ಷತೆಗಳಿಲ್ಲದೆ ನಾಗರಿಕರ ಡೇಟಾವನ್ನು ಅವರು ಹೇಗೆ ಬಳಸುತ್ತಾರೆ ಎಂಬುದರ ಕುರಿತು ಅವರು ಸರ್ಕಾರಕ್ಕೆ ಹೆಚ್ಚಿನ ನಿಯಂತ್ರಣ ನೀಡುತ್ತಾರೆ ಎಂಬುದನ್ನು ಅಲ್ಲಗಳೆಯುವಂತಿಲ್ಲ ಎಂದು ಹೇಳಲಾಗಿದೆ.

Related News

ರಾಮನಗರ: ಕಾಂಗ್ರೆಸ್ ಅಭ್ಯರ್ಥಿ ಕೊಟ್ಟಿದ್ದ ಕುಕ್ಕರ್ ಸ್ಫೋಟ; ಬಾಲಕಿಗೆ ಗಂಭೀರ ಗಾಯ
ಪ್ರಮುಖ ಸುದ್ದಿ

ರಾಮನಗರ: ಕಾಂಗ್ರೆಸ್ ಅಭ್ಯರ್ಥಿ ಕೊಟ್ಟಿದ್ದ ಕುಕ್ಕರ್ ಸ್ಫೋಟ; ಬಾಲಕಿಗೆ ಗಂಭೀರ ಗಾಯ

May 27, 2023
8 ಬ್ಯಾಂಕುಗಳ ಲೈಸೆನ್ಸ್ ರದ್ದು ಮಾಡಿದೆ RBI : ಕರ್ನಾಟಕದಲ್ಲಿರುವ ಬ್ಯಾಂಕ್‌ಗಳೂ ಈ ಲಿಸ್ಟಲ್ಲಿವೆ
ಪ್ರಮುಖ ಸುದ್ದಿ

8 ಬ್ಯಾಂಕುಗಳ ಲೈಸೆನ್ಸ್ ರದ್ದು ಮಾಡಿದೆ RBI : ಕರ್ನಾಟಕದಲ್ಲಿರುವ ಬ್ಯಾಂಕ್‌ಗಳೂ ಈ ಲಿಸ್ಟಲ್ಲಿವೆ

May 27, 2023
ಗೃಹಲಕ್ಷ್ಮೀ ಯೋಜನೆಗೆ ಆಧಾರ್ ಕಾರ್ಡ್ ಲಿಂಕ್ ಮಾಡಬೇಕು ಎಂಬ ಸುಳ್ಳು ಸುದ್ದಿ : ಸೈಬರ್ ಕೇಂದ್ರಗಳಿಗೆ ಮುಗಿಬಿದ್ದ ಮಹಿಳೆಯರು
ಪ್ರಮುಖ ಸುದ್ದಿ

ಗೃಹಲಕ್ಷ್ಮೀ ಯೋಜನೆಗೆ ಆಧಾರ್ ಕಾರ್ಡ್ ಲಿಂಕ್ ಮಾಡಬೇಕು ಎಂಬ ಸುಳ್ಳು ಸುದ್ದಿ : ಸೈಬರ್ ಕೇಂದ್ರಗಳಿಗೆ ಮುಗಿಬಿದ್ದ ಮಹಿಳೆಯರು

May 27, 2023
ನೂತನ ಕಾಂಗ್ರೆಸ್ ಸರ್ಕಾರದ ಭರ್ತಿಯಾದ ಸಿದ್ದರಾಮಯ್ಯ ಸಂಪುಟ: ಯಾವ ಜಿಲ್ಲೆಗೆ ಎಷ್ಟು ಸಚಿವ ಸ್ಥಾನ? ಯಾವ ಜಿಲ್ಲೆಗಿಲ್ಲ ಮಂತ್ರಿಭಾಗ್ಯ ಪಟ್ಟ?
ಪ್ರಮುಖ ಸುದ್ದಿ

ನೂತನ ಕಾಂಗ್ರೆಸ್ ಸರ್ಕಾರದ ಭರ್ತಿಯಾದ ಸಿದ್ದರಾಮಯ್ಯ ಸಂಪುಟ: ಯಾವ ಜಿಲ್ಲೆಗೆ ಎಷ್ಟು ಸಚಿವ ಸ್ಥಾನ? ಯಾವ ಜಿಲ್ಲೆಗಿಲ್ಲ ಮಂತ್ರಿಭಾಗ್ಯ ಪಟ್ಟ?

May 27, 2023

ವಿಜಯ ಟೈಮ್ಸ್‌ - ಬದಲಾವಣೆಯ ಹಾದಿ

Vijaya Times logo

ವಿಜಯ ಟೈಮ್ಸ್‌

  • ಪ್ರಮುಖ ಸುದ್ದಿ
  • ರಾಜಕೀಯ
  • ದೇಶ-ವಿದೇಶ
  • ಮನರಂಜನೆ
Menu
  • ಪ್ರಮುಖ ಸುದ್ದಿ
  • ರಾಜಕೀಯ
  • ದೇಶ-ವಿದೇಶ
  • ಮನರಂಜನೆ

Quick Links

  • About Us
  • Contact Us
  • For Advertisement
Menu
  • About Us
  • Contact Us
  • For Advertisement

Follow Us

Facebook Twitter Instagram Youtube

Download Vijaya Times App

Android
© 2022 Vijaya Times. All rights reserved.