New Delhi: ಇತ್ತೀಚೆಗೆ ಆನ್ಲೈನ್ (Online) ವಂಚನೆಗಳು ಹೆಚ್ಚಾಗುತ್ತಿದೆ ಇಂತಹ ಸಮಯದಲ್ಲಿ ವಿಶ್ವದ ಪ್ರಖ್ಯಾತವಾಗಿರುವ ಮೆಸೇಜಿಂಗ್ ಅಪ್ಲಿಕೇಶನ್ ಆಗಿರುವ ವಾಟ್ಸ್ಆಪ್ ಇದೀಗ (WhatsApp new feature) ಮತ್ತೆ ಹೊಸ ಫೀಚರ್ಗಳನ್ನು ಬಿಡುಗಡೆ ಮಾಡುತ್ತಿದೆ, ಅತೀ ಶೀಘ್ರದಲ್ಲಿಯೇ 2 ಹೊಸ ಫೀಚರ್ಗಳು ವ್ಯಾಟ್ಸ್ಆಪ್ಗೆ (Whatsapp) ಸೇರ್ಪಡೆಗೊಳ್ಳಲಿದೆ.

ವ್ಯಾಟ್ಸ್ಆಪ್ನಲ್ಲಿ (Whatsapp) ಇನ್ನು ಮುಂದೆ ಫೋನ್ನಂಬರ್ಗಳನ್ನು ನೀವು ಹೈಡ್ ಮಾಡಬಹುದು ಅಷ್ಟೇ ಅಲ್ಲದೆ ಫೋನ್ ನಂಬರ್ ಕಾಣುವ ಬದಲು ಕಾಂಟಾಕ್ಟ್ ಲಿಸ್ಟ್ನಲ್ಲಿ
ನಿಮ್ಮ ಯೂಸರ್ನೇಮ್ ಕಾಣಿಸಿಕೊಳ್ಳಲಿದೆ ಅಷ್ಟೇ ಅಲ್ಲದೆ ಇನ್ನು ಮುಂದೆ ವಿಡಿಯೋ ಕಾಲ್ ಮಾಡುವಾಗ ಅದೇ ವೇಳೆ ಸ್ಕ್ರೀನ್ ಶೇರ್ (Screenshot) ಕೂಡ ಮಾಡಬಹುದು.
ವಾಟ್ಸ್ಆಪ್ ಮೆಸೇಜಿಂಗ್ ಅಪ್ಲಿಕೇಶನ್ ಇತ್ತೀಚೆಗಷ್ಟೇ ಚಾಟ್ ಲಾಕ್ ಮಾಡುವ ಫೀಚರ್ ಬಿಡುಗಡೆ ಮಾಡಿತ್ತು ಅಷ್ಟೇ ಅಲ್ಲದೆ ನೀವು ಯಾವುದಾದರು ಹೊಸ ಸಂದೇಶಗಳನ್ನು ಕಳುಹಿಸಿದ ನಂತರವೂ ಅದನ್ನು ಎಡಿವ್ ಮಾಡುವ ಆಯ್ಕೆಗಳಿವೆ.
ಇಷ್ಟೇ ಅಲ್ಲದೆ ಒಂದೇ ವ್ಯಾಟ್ಸ್ಆಪ್ (Whatsapp) ಖಾತೆಯನ್ನು ಹಲವು ಫೋನ್ಗಳಲ್ಲಿ ಬಳಸುವ ಆಯ್ಕೆಗಳನ್ನು ಕೂಡ ನೀಡಿತ್ತು.
ಈ ಮೂರು (WhatsApp new feature) ಹೊಸ ಫೀಚರ್ಗಳನ್ನು ಇತ್ತೀಚೆಗೆ ಬಿಡುಗಡೆ ಮಾಡಿತ್ತು.
ವ್ಯಾಟ್ಸ್ಆಪ್ ಈಗ ಮತ್ತೆ 2 ಹೊಸ ಫೀಚರ್ಗಳನ್ನು (Picture) ಬಿಡುಗಡೆ ಮಾಡಿದೆ ಅವುಗಳ ವಿವರ ಇಲ್ಲಿದೆ.
1.ಇನ್ನು ಮುಂದೆ ಸಿಗಲಿದೆ ಶೇರ್ ಸ್ಕ್ರೀನ್ ಫೀಚರ್:
ಕೋಟ್ಯಂತರ ಜನರು ಮೆಸೇಜ್ (Message) ಹಾಗೂ ವಿಡಿಯೋ ಕರೆಗಳಿಗಾಗಿ ವ್ಯಾಟ್ಸ್ಆಪ್ಅನ್ನು ಉಪಯೋಗಿಸುತ್ತಿದ್ದಾರೆ.
ಇನ್ನು ಮುಂದೆ ನೀವು ವಿಡಿಯೋ ಕಾಲ್ ಮಾಡಿರುವ ಸಂದರ್ಭಗಳಲ್ಲಿ ನಿಮ್ಮ ಸ್ಕ್ರೀನ್ಅನ್ನು ಶೇರ್ ಮಾಡಬಹುದು.
ಈ ಸ್ಕ್ರೀನ್ ಶೇರಿಂಗ್ ಫೀಚರ್ ಬಂದ ಬಳಿಕ ಗೂಗಲ್ ಮೀಟ್ನ ಅಗತ್ಯ ಕಡಿಮೆಯಾಗಬಹುದು ಏಕೆಂದರೆ ವಾಟ್ಸ್ಆಪ್ನಲ್ಲಿ ಪ್ರಸ್ತುತ ಏಕಕಾಲದಲ್ಲಿ 32 ವ್ಯಕ್ತಿಗಳೊಂದಿಗೆ ವಿಡಿಯೋ ಕಾಲ್ (Video Call) ಮಾಡಬಹುದು.
ಇನ್ನು ಮುಂದೆ ಈ ಹೊಸ ಫೀಚರ್ ಅನ್ನು ವ್ಯಾಟ್ಸ್ಆಪ್ ನೀಡಲಿದೆ.ಆಂಡ್ರಾಯ್ಡ್ ಬೇಟಾ ಟೆಸ್ಟರ್ಗಳಿಗೆ ಪ್ರಸ್ತುತ ಇದನ್ನು ನೀಡಲಾಗಿದೆ.ಉಳಿದವರಿಗೂ ಶೀಘ್ರದಲ್ಲಿಯೇ ಲಭ್ಯವಾಗುವ ಸಾಧ್ಯತೆಗಳು ಇವೆ.
2.ಇನ್ನು ಮುಂದೆ ಫೋನ್ ನಂಬರ್ ಹೈಡ್ ಮಾಡಬಹುದು:
ವಾಬೆಟಾಇನ್ಫೋ ಇತ್ತೀಚೆಗೆ ಸ್ಕ್ರೀನ್ಶಾಟ್ಗಳನ್ನು ಹಂಚಿಕೊಂಡಿತ್ತು ಇದರ ಪ್ರಕಾರ ಯೂಸರ್ನೇಮ್ ಅನ್ನು ನಿಮ್ಮ ವಾಟ್ಸ್ಆಪ್ ಖಾತೆಗೆ ನೀಡಲಾಗುತ್ತದೆ,
ಇದರಿಂದ ಆಗುವ ಉಪಯೋಗವೇನೆಂದರೆ ನೀವು ಇನ್ನು ಮುಂದೆ ಯಾವುದೇ ವ್ಯಕ್ತಿಯಿಂದ ವ್ಯಾಟ್ಸ್ಆಪ್ ಮೆಸೇಜ್ ಸ್ವೀಕರಿಸಬೇಕಾದರೆ ನಿಮ್ಮ ಮೊಬೈಲ್ ನಂಬರ್ ನೀಡುವ ಅಗತ್ಯ ಇರುವುದಿಲ್ಲ ಬದಲಾಗಿ ನಿಮ್ಮ ಯೂಸರ್ನೇಮ್ (Username) ಕೊಟ್ಟರೆ ಸಾಕು,
ಅದರಿಂದಲೇ ಮೆಸೇಜ್ಗಳನ್ನು ಕಳಿಸಬಹುದಾಗಿದೆ.ಈ ಮೂಲಕ ಇನ್ನು ಮುಂದೆ ಜನರು ತಮ್ಮ ವ್ಯಾಟ್ಸ್ಆಪ್ ಸಂಖ್ಯೆಯನ್ನು ಬಹಿರಂಗಪಡಿಸದೆಯೇ ಕೇವಲ ಯೂಸರ್ನೇಮ್ ಬಳಸಿಕೊಂಡು
ಇತರ ಜನರನ್ನು ಸಂಪರ್ಕಿಸುವ ಅವಕಾಶ ನೀಡುತ್ತದೆ.ಪ್ರಸ್ತುತ ಈ ಹೊಸ ಫೀಚರ್ (Picture) ಅಭಿವೃದ್ಧಿ ಹಂತದಲ್ಲಿದೆ.ಬೀಟಾ ವರ್ಷನ್ನಲ್ಲಿ ಭವಿಷ್ಯದ ಅಪ್ಡೇಟ್ನಲ್ಲಿ ಬಿಡುಗಡೆ ಮಾಡಲಾಗುತ್ತದೆ.
ಇತ್ತೀಚೆಗಷ್ಟೇ ವ್ಯಾಟ್ಸ್ಆಪ್ ಎಲ್ಲರಿಗೂ ಚಾಟ್ಲಾಕ್ (Chat lock) ಫೀಚರ್ಅನ್ನು ಪರಿಚಯ ಮಾಡಿತ್ತು.ಚಾಟ್ ಲಾಕ್ ಫೀಚರ್ಸ್ ಅನ್ನು ವ್ಯಾಟ್ಸ್ ಆ್ಯಪ್ ಇತ್ತೀಚೆಗೆ ಬಿಡುಗಡೆ ಮಾಡಿದೆ.
ನಿಮ್ಮ ಸಂದೇಶಗಳು ಯಾರಿಗೂ ಕಾಣಿಸಬಾರದು ಎಂದರೆ ಚಾಟ್ ಲಾಕ್ ಮಾಡಬೇಕಾಗುತ್ತದೆ. ಈ ಚಾಟ್ ಲಾಕ್ ಮಾಡಿದ ಸಂದೇಶಗಳು ಯಾರಿಗೂ ಕಾಣಿಸುವುದಿಲ್ಲ.
ಲಾಕ್ ಆಗಿರುವ ಸಂದೇಶಗಳು ವ್ಯಾಟ್ಸ್ ಆ್ಯಪ್ ಆಪ್ಲಿಕೇಶನ್ (Application) ಒಪನ್ ಆಗಿದ್ದರೂ ಕಾಣಿಸುವುದಿಲ್ಲ.ಲಾಕ್ ಆಗಿರುವ ಮೆಸೇಜೇಗಳು ಪ್ರತ್ಯೇಕ ಫೋಲ್ಡರ್ನಲ್ಲಿ ಇರುತ್ತವೆ, ಈ ಮೆಸ್ಸೇಜ್ ಗಳು ಕಾಣಿಸಬೇಕಾದರೆ ಫಿಂಗರ್ ಪ್ರಿಂಟ್ ಲಾಕ್ ಮೂಲಕ ಒಪನ್ ಮಾಡಬೇಕಾಗುತ್ತದೆ.

ವ್ಯಾಟ್ಸ್ಆ್ಯಪ್ ನಲ್ಲಿ ಇನ್ನು ಮುಂದೆ ವಾಯ್ಸ್ ಸ್ಟೇಟಸ್ : ಈ ಹೊಸ ಫೀಚರ್ ಈಗ ಎಲ್ಲಾ ಬಳಕೆದಾರರಿಗೆ ಲಭ್ಯ!
ಈಗ ಹೊಸ ವೈಶಿಷ್ಟ್ಯವನ್ನು ಪರಿಚಯಿಸಲಾಗಿದೆ. ವ್ಯಾಟ್ಸ್ ಆ್ಯಪ್ ವಾಯ್ಸ್ ಸ್ಟೇಟಸ್. WhatsApp ಮಾರ್ಚ್ನಲ್ಲಿ ಧ್ವನಿ ಸ್ಟೇಟಸ್ ವೈಶಿಷ್ಟ್ಯವನ್ನು ಪರಿಚಯಿಸಿದೆ .
ಈ ಹೊಸ ಹೊಸ ವಾಯ್ಸ್ ಸ್ಟೇಟಸ್ ಫೀಚರ್ ಇನ್ನು ಮುಂದೆ ಎಲ್ಲಾ ಬಳಕೆದಾರರಿಗೆ ಲಭ್ಯವಿದೆ.ವಾಟ್ಸಾಪ್ ವಾಯ್ಸ್ ಸ್ಟೇಟಸ್ (Status) ಉತ್ತಮವಾದ ವೈಶಿಷ್ಟ್ಯವಾಗಿದೆ. ಬಳಕೆದಾರರು ಮೊದಲು ಫೋಟೋಗಳನ್ನು ಪೋಸ್ಟ್ ಮಾಡುತ್ತಿದ್ದರು.
ಆದರೆ ಇನ್ನು ಮುಂದೆ ಧ್ವನಿ ಟಿಪ್ಪಣಿಗಳನ್ನು ತಮ್ಮ ತಮ್ಮ ಸ್ಟೇಟಸ್ ಗಳಲ್ಲಿ ಹಾಕಬಹುದು.ಬಳಕೆದಾರರು ತಮ್ಮದೇ ಆದ ಧ್ವನಿಯನ್ನು ರೆಕಾರ್ಡ್ ಮಾಡಬಹುದು ಮತ್ತು ಅದನ್ನು ವಾಟ್ಸಾಪ್ ಸ್ಟೇಟಸ್ ನಲ್ಲಿ ಹಾಕಬಹುದು. ಆರಂಭದಲ್ಲಿ ಬೀಟಾ ವರ್ಶನ್ನಲ್ಲಿದ್ದ ಈ ವೈಶಿಷ್ಟ್ಯವು ಈಗ ಎಲ್ಲಾ ಬಳಕೆದಾರರಿಗೆ ಲಭ್ಯವಿದೆ.
ಈ ಹೊಸ ವ್ಯಾಟ್ಸ್ಆ್ಯಪ್ ವಾಯ್ಸ್ ಸ್ಟೇಟಸ್ ಹಾಕುವುದು ಹೇಗೆ?
- ವ್ಯಾಟ್ಸ್ಆ್ಯಪ್ ಆ್ಯಪ್ಲಿಕೇಶನ್ ಅನ್ನು ಮೊದಲು ಒಪನ್ (Open) ಮಾಡಿಕೊಳ್ಳಿ
- ನಂತರ ಸ್ಟೇಟಸ್ ಟ್ಯಾಬ್ (Tab) ಕ್ಲಿಕ್ ಮಾಡಿ
- ಈ ಸ್ಟೇಟಸ್ ಟ್ಯಾಬ್ನಲ್ಲಿ ಪೆನ್ಸಿಲ್ (Pencil) ಐಕಾನ್ ಇರುತ್ತದೆ ಅದರ ಮೇಲೆ ಕ್ಲಿಕ್ ಮಾಡಿ
- ಇಲ್ಲಿ ಕಾಣಿಸುವ ಮೈಕ್ರೋಫೋನ್ (Microphone) ಬಟನ್ ಒತ್ತಿ ಹಿಡಿದು ನಿಮ್ಮ ಧ್ವನಿಯನ್ನು ರೆಕಾರ್ಡ್ ಮಾಡಿ
- ನಂತರ ಆ ಮೈಕ್ರೋಫೋನ್ ಬಟನ್ ರಿಲೀಸ್ ಮಾಡಿ
- ನಿಮ್ಮ ಸ್ಟೇಟಸ್ಗೆ ಆ್ಯಡ್ ಮಾಡಿಕೊಳ್ಳಿ.
ಇಲ್ಲಿ ಮುಖ್ಯವಾಗಿ ಗಮನಿಸಬೇಕಾಗಿರುವ ಮತ್ತೊಂದು ಅಂಶ ಎಂದರೆ 30 ಸೆಕೆಂಡ್ಗಿಂತ ಹೆಚ್ಚು ವ್ಯಾಟ್ಸ್ಆ್ಯಪ್ ಸ್ಟೇಟಸ್ ನಲ್ಲಿ ವಾಯ್ಸ್ ರೆಕಾರ್ಡ್ (Record) ಹಾಕಲು ಸಾಧ್ಯವಿಲ್ಲ.30 ಸೆಕೆಂಡ್ ಒಳಗೆ ಆ ವಾಯ್ಸ್ ನೋಟ್ ಇರಬೇಕು.
ರಶ್ಮಿತಾ ಅನೀಶ್