ನವದೆಹಲಿ ಡಿ 17 : ಇತ್ತೀಚಿನ ದಿನಗಳಲ್ಲಿ ವಾಟ್ಸಾಪ್ ತನ್ನ ಗ್ರಾಹಕರಿಗಾಗಿ ಸಾಕಷ್ಟು ಹೊಸ ಫೀಚರ್ಸ್‌ಗಳನ್ನು ನೀಡುತ್ತಿದ್ದು, ಈಗ ಮತ್ತೊಂದು ಹೊಸ ಫೀಚರ್ ರಿಲೀಸ್ ಮಾಡಿದೆ. ಅದೇನೆಂದರೆ ಇನ್ಮುಂದೆ ವಾಯ್ಸ್ ಮೆಸೇಜ್ ಕಳಿಸೋ ಮೊದಲು, ನೀವು ರೆಕಾರ್ಡ್ ಮಾಡಿದಂತ ವಾಯ್ಸ್ ಸಂದೇಶವನ್ನು ( Voice Message ) ಪ್ರೀವ್ಯೂ ಮಾಡಿ, ಆನಂತ್ರ ಕಳಿಸೋದಕ್ಕೆ ಅವಕಾಶ ನೀಡಿದೆ.
ಹೌದು.. ಬಳಕೆಗಾರರ ಸ್ನೇಹಿಯಾಗೋ ನಿಟ್ಟಿನಲ್ಲಿ ವಾಟ್ಸಾಪ್ ಈಗ ಮತ್ತೊಂದು ಹೊಸ ಫೀಚರ್ ( WhatsApp New Feature ) ರಿಲೀಸ್ ಮಾಡಿದೆ. ಹೊಸ ಫೀಚರ್ ಅನುಸಾರ ಇದುವರೆಗೆ ಪ್ರಿವ್ಯೂ ಮಾಡದೇ ಕಳುಹಿಸಲಾಗುತ್ತಿದ್ದಂತ ವಾಯ್ಸ್ ಸಂದೇಶವನ್ನು ಇನ್ಮುಂದೆ ಪ್ರೀ ವ್ಯೂ ಮಾಡಿದ ನಂತರ ಕಳುಹಿಸಬಹುದಾಗಿದೆ.
ಹೊಸ ವೈಶಿಷ್ಟದಂತೆ ಬಳಕೆದಾರರು ತಮ್ಮ ಧ್ವನಿ ಸಂದೇಶವನ್ನು ಸೆಂಡ್ ಮಾಡೋ ಮೊದಲು, ಅವುಗಳನ್ನು ಪೂರ್ವಭಾವಿಯಾಗಿ ಕೇಳಿ, ಆನಂತ್ರ ಕಳುಹಿಸಿಕೊಡಬಹುದಾಗಿದೆ. ಅದೇ ಈ ಮೊದಲು ಧ್ವನಿ ಸಂದೇಶವನ್ನು ಕಳುಹಿಸಿಕೊಡೋದಕ್ಕೆ ಮಾತ್ರವೇ ಅವಕಾಶ ಇತ್ತು. ತಪ್ಪಾದ ವಾಯ್ಸ್ ಮೆಸೇಜ್ ಕಳುಹಿಸಿಕೊಟ್ಟಿದ್ದರೇ ಸಂಪೂರ್ಣ ನೇರವಾಗಿ ಡಿಲಿಟ್ ಮಾಡಿ, ಆನಂತ್ರ ಮತ್ತೊಂದು ಸಂದೇಶ ಕಳುಹಿಸಿಕೊಡಬೇಕಾಗಿತ್ತು. ಈಗ ಆ ಸಮಸ್ಯೆ ತಪ್ಪಿದಂತ ಆಗಿದೆ.