ಅಪರೂಪದ ಕಥಾಹಂದರದ ಸಿನಿಮಾ ‘ವೀಲ್ ಚೇರ್ ರೋಮಿಯೋ’ ; ಅಂಧ ವೇಶ್ಯೆ ಪಾತ್ರದಲ್ಲಿ ನಟಿ ಮಯೂರಿ!

ಹಲವಾರು ವರ್ಷಗಳಿಂದ ಸಿನಿಮಾದಲ್ಲಿ ನಿರ್ದೇಶಕನಾಗಿ(Director) ಏನಾದರೂ ಸಾಧನೆ ಮಾಡಲೇಬೇಕೆಂಬ ಹಂಬಲ ಹೊತ್ತಿದ್ದವರು ನಟರಾಜ್(Nataraj).

ಇದೀಗ ಈ ಸಿನಿಮಾ ಮುಖೇನ ಅವರ ಆಸೆ ಈಡೇರಿದೆ, ತಮ್ಮ ನಿರ್ದೇಶನದ ಮೊದಲ ಚಿತ್ರವನ್ನು ಇದೇ ತಿಂಗಳ 27ಕ್ಕೆ ಎಲ್ಲರ ಮುಂದೆ ಪ್ರಸ್ತುತ ಪಡಿಸಲಿದ್ದಾರೆ. ಹೌದು, ನಟರಾಜ್ ಅವರ ನಿರ್ದೇಶನದ ‘ವೀಲ್ ಚೇರ್ ರೋಮಿಯೋ’(Wheel Chair Romeo) ಚಿತ್ರ ಇಂದು ರಾಜ್ಯಾದ್ಯಂತ ಬಿಡುಗಡೆಗೊಂಡಿದೆ. ಈ ಚಿತ್ರದ ಟ್ರೇಲರ್ ಮತ್ತು ಸಾಂಗ್ಸ್ಗಳನ್ನು ನೋಡಿದವರು, ಕಥೆಯ ಗಟ್ಟಿತನಕ್ಕೆ ಬೆರಗಾಗಿದ್ದಾರೆ. ಅಷ್ಟೊಂದು ವಿಭಿನ್ನವಾಗಿದೆ ಈ ವೀಲ್ ಚೇರ್ ರೋಮಿಯೋ ಸಿನಿಮಾದ ಕಥಾಹಂದರ.

ಸಿನಿಮಾಗಳ ಕಥೆ ಸೃಷ್ಟಿಯಾಗುವುದೇ ವಿಚಿತ್ರ ಸಂದರ್ಭಗಳಲ್ಲಿ. ಎಲ್ಲೋ ಕುಳಿತು ಏನನ್ನೋ ಯೋಚಿಸುವಾಗ, ಯಾವುದೋ ಒಂದು ಸನ್ನಿವೇಶವನ್ನು ನೋಡಿದಾಗ, ಸುತ್ತಮುತ್ತಲಿನ ಕೆಲವು ಅನುಭವಗಳು, ಹಾಗೇ ಸ್ವಂತ ಅನುಭವವೂ ಕೂಡ ಕಥೆಯಾಗುವ ಸಾಧ್ಯತೆಗಳಿರುತ್ತದೆ. ಹೀಗೆ ಒಂದು ಕತೆ ಹುಟ್ಟುವುದಕ್ಕೆ ಬೇಕಾದಷ್ಟು ಕಾರಣಗಳು ಸಿಗುತ್ತವೆ. ಅದೇ ರೀತಿ ಈ ವೀಲ್ ಚೇರ್ ರೋಮಿಯೋ ಕಥೆ ಹುಟ್ಟಿದ್ದೇ ಒಂದು ರೋಚಕ ಸನ್ನಿವೇಶದಲ್ಲಿ. ಈ ಬಗ್ಗೆ ನಿರ್ದೇಶಕ ನಟರಾಜ್ ವಿವರಿಸಿದ್ದಾರೆ.


ಇತ್ತೀಚಿಗೆ ನ್ಯಾಷನಲ್ ಜಿಯೋಗ್ರಫಿ(National Geography) ಚಾನೆಲ್ ವೀಕ್ಷಕರ ಸಂಖ್ಯೆ ಹೆಚ್ಚಾಗಿದೆ. ಏಕೆಂದರೆ ಅದರಲ್ಲಿ ಪ್ರಸಾರವಾಗುವ ಸಂಗತಿಗಳ ವೈಶಿಷ್ಟ್ಯವೇ ಆ ರೀತಿ ಇದೆ. ಹಲವಾರು ಆಸಕ್ತಿದಾಯಕ ಹಾಗೇ ಅಪರೂಪದ ವಿಚಾರಗಳು ಈ ಚಾನೆಲ್ ನಲ್ಲಿ ಕಾಣಸಿಗುತ್ತವೆ. ಹೀಗೆ ಒಂದು ಎಪಿಸೋಡ್ ನಲ್ಲಿ, ಆಸ್ಟ್ರೇಲಿಯಾದ(Australia) ತಂದೆಯೊಬ್ಬ ಮಗನನ್ನು ವೇಶ್ಯಾಗೃಹಕ್ಕೆ(Prostitute House) ಕರೆದುಕೊಂಡು ಹೋಗುವ ಸನ್ನಿವೇಶಗಳಿದ್ದವಂತೆ. ಇದನ್ನು ನಮ್ಮ ಸಮಾಜ ಒಪ್ಪಿಕೊಳ್ಳುವುದು ದೂರದ ಮಾತು, ಕಲ್ಪನೆ ಮಾಡಿಕೊಳ್ಳಲೂ ಅಸಹ್ಯ ಪಡುತ್ತೆ. ಆದರೆ ನಿರ್ದೇಶಕ ನಟರಾಜ್ ಅವರಿಗೆ ಈ ಒಂದು ಸನ್ನಿವೇಶದ ಎಳೆ ನಾನಾ ದಿಕ್ಕಿನಲ್ಲಿ ಯೋಚಿಸುವಂತೆ ಪ್ರೆರೇಪಿಸಿತ್ತು.


ಇದೇ ಎಳೆಯನ್ನು ಹಿಡಿದು, ಒಂದಷ್ಟು ಕಾಲ ಯೋಚಿಸಿ ಒಂದು ಚೆಂದದ ವಿಭಿನ್ನ ಕಥೆಯನ್ನು ಹೆಣೆಯಲಾರಂಭಿಸಿದರು. ಇದರ ಫಲವಾಗಿ ಜೀವ ತಳೆದಿದ್ದು ‘ವೀಲ್‌ಚೇರ್ ರೋಮಿಯೋ’ ಕಥೆ. ಪ್ರೀತಿ ಹುಟ್ಟಲು ಕಾರಣ ಸಮಯ ಸಂದರ್ಭ ಯಾವುದೂ ಬೇಕಿಲ್ಲ ಎಂಬ ಮಾತಿನಂತೆ, ‘ವೀಲ್ ಚೇರ್ ರೋಮಿಯೋ’ ಚಿತ್ರದಲ್ಲಿ ಕಣ್ಣು ಕಾಣದ ಸುಂದರ ವೇಶ್ಯೆಯ ಮೇಲೆ ವೀಲ್ ಚೇರ್ ನಲ್ಲಿಯೇ ಜೀವನ ಸಾಗಿಸುತ್ತಿರುವ ಹುಡುಗನಿಗೆ ಪ್ರೀತಿ ಹುಟ್ಟುತ್ತದೆ. ಇಷ್ಟು ಗಂಭೀರ ಎಳೆಯಿರುವ ಚಿತ್ರ ನಿರ್ದೇಶಕರ ಯೋಚನೆಗೆ ತಕ್ಕಂತೆ ಮೂಡಿ ಬಂದಿದೆ. ನಿರ್ದೇಶಕರ ಸೃಜನಶೀಲತೆ ಗಮನ ಸೆಳೆಯುವಂತಿದೆ. ಇದೊಂದು ಕಂಪ್ಲೀಟ್‌ ಎಮೋಶನ್‌ ಸಬ್ಜೆಕ್ಟ್.

ಇದರಲ್ಲಿ ಲವ್‌, ಕಾಮಿಡಿ, ಸೆಂಟಿಮೆಂಟ್‌, ಸಾಂಗ್ಸ್‌ ಹೀಗೆ ಎಲ್ಲ ಥರದ ಎಂಟರ್‌ಟೈನ್ಮೆಂಟ್‌ ಅಂಶಗಳಿವೆ. ನಿರ್ದೇಶಕ ನಟರಾಜ್ ಅವರ ಕನಸಿನ ಕೂಸಾಗಿರುವ ‘ವೀಲ್ಚೇರ್ ರೋಮಿಯೋ’ ಚಿತ್ರದಲ್ಲಿ, ರಾಮ್ ಚೇತನ್, ಮಯೂರಿ ಕ್ಯಾತರಿ(Mayuri Kyathri) ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ರಂಗಾಯಣ ರಘು, ಸುಚೇಂದ್ರ ಪ್ರಸಾದ್, ತಬಲಾ ನಾಣಿ ಸೇರಿದಂತೆ ಖ್ಯಾತ ಕಲಾವಿದರ ದಂಡೇ ಈ ಚಿತ್ರದಲ್ಲಿದೆ. ಈಗಾಗಲೇ ಹಾಡು ಹಾಗೂ ಟ್ರೇಲರ್ ಮೂಲಕ ಸುದ್ದಿ ಮಾಡಿರುವ ಈ ವಿಭಿನ್ನ ಸಿನಿಮಾ ಇಂದು ತೆರೆ ಕಾಣಲಿದೆ.

ವಿಭಿನ್ನ ಕಥಾಹಂದರವುಳ್ಳ ಈ ಸಿನಿಮಾವನ್ನು ಸಿನಿಪ್ರೇಕ್ಷಕರು ಚಿತ್ರಮಂದಿರಕ್ಕೆ ಭೇಟಿ ನೀಡಿ, ವೀಕ್ಷಿಸಿ ನಿಮ್ಮ ಅಭಿಪ್ರಾಯವನ್ನು ಕಮೆಂಟ್ ಮಾಡಿ.

Latest News

ದೇಶ-ವಿದೇಶ

ಒಡಿಶಾದಲ್ಲಿ ಆಘಾತಕಾರಿ ಘಟನೆ ; ಹಾಡಹಗಲೇ ವೃದ್ಧನನ್ನು ಕಂಬಕ್ಕೆ ಕಟ್ಟಿ, ಥಳಿಸಿ ಕೊಂದ ಕುಟುಂಬಸ್ಥರು!

ಕೊರಾಪುಟ್ ಜಿಲ್ಲೆಯ ಬುಡಕಟ್ಟು ಪ್ರದೇಶದಲ್ಲಿ ಹಾಡಹಗಲೇ ವೃದ್ಧನನ್ನು ವಿದ್ಯುತ್ ಕಂಬಕ್ಕೆ ಕಟ್ಟಿ ತಮ್ಮ ಕುಟುಂಬಸ್ಥರೇ ಥಳಿಸಿ ಕೊಂದಿರುವ ಆಘಾತಕಾರಿ ಘಟನೆ ಬೆಳಕಿಗೆ ಬಂದಿದೆ!

ಮಾಹಿತಿ

ಕಿಡ್ನಿ ಸ್ಟೋನ್‌ ಸಮಸ್ಯೆಗೆ ಇಲ್ಲಿದೆ ನೈಸರ್ಗಿಕ ಪರಿಹಾರ ; ಈ ಸರಳ ಪರಿಹಾರ ಪಾಲಿಸಿ

ಕೆಲವು ಮನೆಮದ್ದುಗಳು(Home Remedies) ಆರಂಭಿಕ ಹಂತದ ಕಿಡ್ನಿಸ್ಟೋನ್ ಸಮಸ್ಯೆಗೆ ಪರಿಹಾರ ನೀಡುತ್ತವೆ. ಅಂತಹ ಮನೆಮದ್ದುಗಳ ವಿವರ ಇಲ್ಲಿದೆ ನೋಡಿ.

ಮಾಹಿತಿ

ದೇಹಕ್ಕೆ ಪ್ರೋಟಿನ್‌ ಕೊರತೆಯಾದ್ರೆ `ಈ’ 10 ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ

ಯುವಜನರ ದೈಹಿಕ ಬೆಳವಣಿಗೆಯಲ್ಲಿ ಪ್ರೋಟಿನ್‌ ಪ್ರಮುಖ ಪಾತ್ರ ವಹಿಸುತ್ತದೆ. ದೇಹದಲ್ಲಿನ ಸ್ನಾಯುಗಳು, ಕಿಣ್ವಗಳು ಮತ್ತು ಹಾರ್ಮೋನುಗಳಿಗೆ ಪ್ರೋಟಿನ್ ಅತ್ಯಂತ ಅವಶ್ಯಕವಾಗಿದೆ.