ಈರುಳ್ಳಿ (Onion) ನಮ್ಮ ಅಡುಗೆಮನೆಯಲ್ಲಿ ಬಹಳ ಮುಖ್ಯವಾದ ಭಾಗ ಇದು ಇಲ್ಲದೆ ಅನೇಕ ಅಡುಗೆಗಳಿಗೆ ರುಚಿಯೇ ಇರುವುದಿಲ್ಲ.ಮಾಂಸಹಾರ (Non-vegetarian), ಸಸ್ಯಾಹಾರ (Vegetarian) ಸೇರಿ ಎಲ್ಲರಿಗೂ ಸಲ್ಲುವ ಈರುಳ್ಳಿ ಭಾರತದಲ್ಲಿ ಬಹು ಮುಖ್ಯ ತರಕಾರಿಗಳಲ್ಲಿ ಒಂದು . ಇದು ಅಡುಗೆಯ ರುಚಿಯನ್ನು ಹೆಚ್ಚಿಸುವುದು ಮಾತ್ರವಲ್ಲದೆ ಆರೋಗ್ಯಕ್ಕೆ (health) ಹಲವಾರು ರೀತಿಯಲ್ಲಿ ಪ್ರಯೋಜನವನ್ನು ನೀಡುತ್ತದೆ. ಇದು ಬಲವಾದ ವಾಸನೆ ಹೊಂದಿರುತ್ತದೆ, ಆದ್ದರಿಂದ ಅನೇಕ ಜನರು ಇದನ್ನು ತಿನ್ನಲು ಇಷ್ಟಪಡುವುದಿಲ್ಲ, ಆದರೆ ಇದು ಅನೇಕ ಗಂಭೀರ ಕಾಯಿಲೆಗಳಿಂದ ನಮ್ಮನ್ನು ರಕ್ಷಿಸುತ್ತದೆ.

ಸಾಮಾನ್ಯ ಈರುಳ್ಳಿಗೆ ಹೋಲಿಸಿದರೆ ಬಿಳಿ ಈರುಳ್ಳಿಯ (White onion) ಇಳುವರಿ ತುಂಬಾ ಕಡಿಮೆಯಾಗಿದೆ, ಆದ್ದರಿಂದ ಮಾರುಕಟ್ಟೆಯಲ್ಲಿ ಇದು ತುಂಬಾ ಕಡಿಮೆ ಸಿಗುತ್ತದೆ. ಆದರೆ ಆರೋಗ್ಯ ಪ್ರಯೋಜನಗಳಿಗೆ ಸಂಬಂಧಿಸಿದಂತೆ ಅದರ ಪ್ರಾಮುಖ್ಯತೆ ಬಹಳ. ಬಿಳಿ ಈರುಳ್ಳಿ ಸಾಮಾನ್ಯ ಈರುಳ್ಳಿಗಿಂತ ಉತ್ತಮವೂ ಹೌದು.ಮಧುಮೇಹ ರೋಗಿಗಳಿಗೆ (For diabetic patients) ಬಿಳಿ ಈರುಳ್ಳಿ ಯಾವುದೇ ಔಷಧಿಗಿಂತ ಕಡಿಮೆಯಿಲ್ಲ, ಏಕೆಂದರೆ ಇದನ್ನು ನಿಯಮಿತವಾಗಿ ಸೇವಿಸಿದರೆ, ಅದು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು (Sugar levels) ನಿಯಂತ್ರಿಸುವಲ್ಲಿ ಬಹಳ ಸಹಾಯ ಮಾಡುತ್ತದೆ.
ಇನ್ನು ಬಿಳಿ ಈರುಳ್ಳಿಯು ಆ್ಯಂಟಿ ಬಯೋಟಿಕ್ (Antibiotic) ಮತ್ತು ಉರಿಯೂತ ನಿವಾರಕ (Anti-inflammatory) ಗುಣಗಳಿಂದ ಸಮೃದ್ಧವಾಗಿದೆ. ಆಯುರ್ವೇದ ಔಷಧದಲ್ಲಿ (Ayurvedic medicine) ಹೆಚ್ಚಿನ ಪ್ರಾಮುಖ್ಯತೆಯನ್ನು ಹೊಂದಿದೆ ಎಂದು ಪೌಷ್ಟಿಕತಜ್ಞರು (Nutritionists) ಹೇಳುತ್ತಾರೆ. . ಈರುಳ್ಳಿ ಫೈಬರ್ನಲ್ಲಿ ಸಮೃದ್ಧವಾಗಿದೆ, ರೋಗನಿರೋಧಕ ಶಕ್ತಿ ವರ್ಧಕ, ಹೃದಯದ ಆರೋಗ್ಯ ಸ್ನೇಹಿ, ದೇಹವನ್ನು ತಂಪಾಗಿಸುತ್ತದೆ, ಉಸಿರಾಟದ ತೊಂದರೆಗಳನ್ನು ಗುಣಪಡಿಸುತ್ತದೆ ಮಾತ್ರವಲ್ಲ ಹೆಚ್ಚುವರಿಯಾಗಿ, ಬಿಳಿ ಈರುಳ್ಳಿ ಮೂಗು, ಕಣ್ಣು ಮತ್ತು ಕಿವಿ ಸೋಂಕುಗಳು (Nose, eye and ear infections) ಉಂಟಾಗದಂತೆ ಕೂಡ ತಡೆಯುತ್ತದೆ. ಕೂದಲು ಉದುರಿ ಹೋದರೆ ಇದನ್ನು ಔಷಧಿಯ ರೀತಿ ಬಳಸಲಾಗುತ್ತದೆ.ಬಿಳಿ ಈರುಳ್ಳಿಯಲ್ಲಿ ಎಲ್-ಟ್ರಿಪ್ಟೊಫಾನ್ (L-tryptophan) ಕಂಡುಬರುತ್ತದೆ ಎಂದು ಹಲವು ಸಂಶೋಧನೆಗಳು ಬಹಿರಂಗಪಡಿಸಿವೆ. ಬಿಳಿ ಈರುಳ್ಳಿ ನಿಮ್ಮನ್ನು ಒತ್ತಡದಿಂದ ಮುಕ್ತಗೊಳಿಸುವುದಲ್ಲದೇ ನಿದ್ರೆಯ ಗುಣಮಟ್ಟ ಸುಧಾರಿಸುತ್ತದೆ. ನೀವು ಬಿಳಿ ಈರುಳ್ಳಿ ನಿಮ್ಮ ಆಹಾರದ ಭಾಗವಾಗಿಸಿದರೆ, ನಿದ್ರಾಹೀನತೆ ಸಮಸ್ಯೆ (Insomnia is a problem) ದೂರವಾಗಿಸುತ್ತದೆ.