Visit Channel

ಎಮ್ಮೆಗಳಲ್ಲಿ ಬಿಳಿತೊನ್ನು ಸಮಸ್ಯೆ ಯಾಕೆ ಕಾಣಿಸಿಕೊಳ್ಳುತ್ತದೆ? ಇಲ್ಲಿದೆ ಉತ್ತರ!

buffalo

ಪ್ರಾಣಿಗಳ ಬಿಳಿತೊನ್ನು ಮನುಷ್ಯರಿಗೆ ಬಾರದು. ಎಮ್ಮೆ, ಜಾನುವಾರುಗಳಲ್ಲಿ ಅಪರೂಪಕ್ಕೆ ಕಾಣುವ ಈ ರೀತಿಯ ಬಿಳಿತೊನ್ನು ನೋಡಿರುತ್ತೀರಿ. ಅನೇಕರಲ್ಲಿ ಪ್ರಾಣಿಗಳಲ್ಲಿ ಕಂಡುಬರುವ ಈ ಬಿಳಿತೊನ್ನು ಹಾಲಿನ ಮುಖಾಂತರ ಅಥವಾ ಅದರ ಚರ್ಮವನ್ನು ಸ್ಪರ್ಶಿಸಿದಾಗ ಮನುಷ್ಯರಿಗೂ ಅಂಟುವುದೆಂಬ ತಪ್ಪು ಕಲ್ಪನೆ ಇರುತ್ತದೆ. ಇದೇ ಕಾರಣಕ್ಕೆ ಬಿಳಿತೊನ್ನು ಸಮಸ್ಯೆ ಇರುವ ಎಮ್ಮೆಗಳಿಗೆ ಗಿರಾಕಿಗಳು ಇಲ್ಲದೆ ಮಾಲೀಕರು ನಷ್ಟ ಅನುಭವಿಸುತ್ತಾರೆ. ಆದರೆ ವೈಜ್ಞಾನಿಕವಾಗಿ ಅದು ನಿರಾಧಾರವಾಗಿದ್ದು, ಈ ರೀತಿಯ ಬಿಳಿತೊನ್ನು ಮನುಷ್ಯರಿಗೆ ಖಂಡಿತ ದಾಟುವುದಿಲ್ಲ.

buffalo

ನೀವು ಧೈರ್ಯವಾಗಿ ಅಂತಹ ಜಾನುವಾರುಗಳ ಹಾಲನ್ನು ಸೇವಿಸಬಹುದು ಹಾಗೂ ಸಾಕಾಣಿಕೆ ಮಾಡಬಹುದು. ಚರ್ಮದಲ್ಲಿ “ಮೆಲಾನಿನ್” ಪ್ರಮಾಣ ಕಡಿಮೆಯಾಗಿ ಈ ರೀತಿಯ ಬಿಳಿತೊನ್ನು ಕಂಡು ಬರುತ್ತದೆ ಎಂದು ತಿಳಿದಿರುವ ಸಂಗತಿಯಾಗಿದೆ. ಒಮ್ಮೆ ಪಶು ವೈದ್ಯಕೀಯ ಕಾಲೇಜಿನಲ್ಲಿ ಫಾರ್ಮಕಾಲಜಿ ವಿಭಾಗದಲ್ಲಿ ಪ್ರಾಧ್ಯಾಪಕರಾಗಿರುವ ಡಾ.ಶ್ರೀಧರ್ ಅವರೊಂದಿಗೆ ಈ ಕುರಿತು ಚರ್ಚಿಸಿದಾಗ ಜಾನುವಾರುಗಳಲ್ಲಿ ತೊನ್ನಿನ ಸಮಸ್ಯೆಗೆ ಹಲವಾರು ಕಾರಣಗಳಿದ್ದು, ಹೆಚ್ಚಿನ ಸಂದರ್ಭಗಳಲ್ಲಿ ಎಮ್ಮೆಗಳಿಗೆ ತಾಮ್ರದ ಕೊರತೆಯಿಂದ ತೊನ್ನು ಕಂಡು ಬರುತ್ತದೆ ಎಂದು ಮಾಹಿತಿ ಹಂಚಿಕೊಂಡಿದ್ದರು.

buffalo

ಅದರ ನಿವಾರಣೆಗಾಗಿ ದಿನಕ್ಕೆ 3-5 ಗ್ರಾಂ ನಷ್ಟು (ಅರ್ಧ ಟೀ ಚಮಚ) ತುತ್ತವನ್ನು ನಿಯಮಿತವಾಗಿ 4-6 ವಾರಗಳ ಕಾಲ ನೀಡಿದಲ್ಲಿ ಉತ್ತಮ ಫಲಿತಾಂಶ ನೀಡಬಹುದೆಂಬ ಸಲಹೆಯನ್ನು ನೀಡಿದ್ದರು. ಆದರೆ ತುತ್ತವನ್ನು 5 ಗ್ರಾಂ ಗಿಂತ ಹೆಚ್ಚಿಗೆ ನೀಡಿದರೆ ಅಡ್ಡ ಪರಿಣಾಮ ಉಂಟಾಗಬಹುದು, ಆದ್ದರಿಂದ ಪಶುವೈದ್ಯರ ಮಾರ್ಗದರ್ಶನದಲ್ಲಿ ಎಚ್ಚರ ವಹಿಸಿ ನೀಡಬೇಕಾದೀತು.

  • ಡಾ.ಯುವರಾಜ್ ಹೆಗಡೆ, ಪಶುವೈದ್ಯರು, ತೀರ್ಥಹಳ್ಳಿ.
  • Source : ಪರಿಸರ ಪರಿವಾರ

Latest News

E-Shram Card
ಪ್ರಮುಖ ಸುದ್ದಿ

ಇ-ಶ್ರಮ ಕಾರ್ಡ್ ಉಪಯೋಗದ ಬಗ್ಗೆ ನಿಮಗೆ ತಿಳಿದಿಲ್ಲವೆ ?  

ಅಸಂಘಟಿತ ವಲಯದ ಕಾರ್ಮಿಕರಿಗೆ  ಸಂಪೂರ್ಣವಾಗಿ  ವೃತ್ತಿ ಮಾಹಿತಿ  ಮತ್ತು   ಸರ್ಕಾರದ  ಯೋಜನೆಗಳು  ಕಾರ್ಮಿಕರಿಗೆ ನೇರವಾಗಿ ತಲುಪಿಸುವ ,ಹಾಗೂ ದತ್ತಾಂಶ ಸಂಗ್ರಹಿಸುವ ಉದ್ದೇಶದಿಂದ 26  ಆಗಸ್ಟ್‌  2021 ರಂದು  ಕೇಂದ್ರ ಸರ್ಕಾರವು ಈ ಯೋಜನೆಯನ್ನು  ಜಾರಿಗೊಳಿಸಿದೆ. 

inflation
ದೇಶ-ವಿದೇಶ

ಅಗತ್ಯ ವಸ್ತುಗಳ ಬೆಲೆ ತಗ್ಗಿದ ಪರಿಣಾಮ: ಜುಲೈನಲ್ಲಿ ಚಿಲ್ಲರೆ ಹಣದುಬ್ಬರ ಶೇ.6.7 ಇಳಿಕೆ ನಿರೀಕ್ಷೆ

ಅಂದು 100 ರೂಪಾಯಿಗೆ ಖರೀದಿಸುವ ಸಾಮಾನು ಈಗ 500 ಕೊಟ್ಟರು ಬರುವುದಿಲ್ಲ. ಕಾರಣ ಹಣದ ಮೌಲ್ಯ ಕಡಿಮೆಯಾಗಿದೆ, ಈ ಹಣದ ಮೌಲ್ಯ ಕಡಿಮೆಯಾಗಿರುವುದನ್ನೇ ನಾವು ಹಣದುಬ್ಬರ ಎನ್ನುತ್ತೇವೆ.