• ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
  • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Menu
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
  • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Vijaya Times logo
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
  • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Menu
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
  • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Visit Channel
Home ಪ್ರಮುಖ ಸುದ್ದಿ

ಬೆಂಗಳೂರಿನ ರಸ್ತೆ ಗುಂಡಿಗಳಿಗೆ ಮುಕ್ತಿ: 150 ಕಿಮೀ ಉದ್ದದ ರಸ್ತೆಯಲ್ಲಿ ವೈಟ್‌ ಟಾಪಿಂಗ್‌ ಕಾಮಗಾರಿಗೆ ಬಿಬಿಎಂಪಿ ಸಜ್ಜು.

Bhavya by Bhavya
in ಪ್ರಮುಖ ಸುದ್ದಿ, ರಾಜಕೀಯ, ರಾಜ್ಯ, ವಿಜಯ ಟೈಮ್ಸ್‌
ಬೆಂಗಳೂರಿನ ರಸ್ತೆ ಗುಂಡಿಗಳಿಗೆ ಮುಕ್ತಿ: 150 ಕಿಮೀ ಉದ್ದದ ರಸ್ತೆಯಲ್ಲಿ ವೈಟ್‌ ಟಾಪಿಂಗ್‌ ಕಾಮಗಾರಿಗೆ ಬಿಬಿಎಂಪಿ ಸಜ್ಜು.
0
SHARES
315
VIEWS
Share on FacebookShare on Twitter

Bengaluru: ಸಂಚಾರಿ ನಿಯಮಗಳು ಕಠಿನವಾಗುತ್ತಿದೆ ಆದರೆ ರಸ್ತೆಗಳು ಮಾತ್ರ ಸಂಪೂರ್ಣವಾಗಿ ಹಾಳಾಗಿದೆ ಎಂದು ಬೇಸರ ವ್ಯಕ್ತಪಡಿಸುತ್ತಿದ್ದ ಸಿಲಿಕಾನ್ ಸಿಟಿ ಬೆಂಗಳೂರಿನ (Bengaluru) ಜನರಿಗೆ ಇದೀಗ ಈ ಸಮಸ್ಯೆಯಿಂದ ಮುಕ್ತಿ ಸಿಗುವ ಸೂಚನೆ ಸಿಗುತ್ತಿದೆ. ಬೆಂಗಳೂರಿನ (Bengaluru) 43 ರಸ್ತೆಗಳಿಗೆ 15 ಪ್ಯಾಕೇಜ್​​​ನಲ್ಲಿ ವೈಟ್ ಟಾಪಿಂಗ್ ಮಾಡಲು ಪಾಲಿಕೆ ಸಜ್ಜಾಗಿದ್ದು, ಶೀಘ್ರದಲ್ಲೇ ಕಾಮಗಾರಿಗೆ ಚಾಲನೆ ನೀಡಲು ತಯಾರಿ ನಡೆಸಿದೆ. ಯಾವೆಲ್ಲ ರಸ್ತೆಗಳಿಗೆ ವೈಟ್ ಟಾಪಿಂಗ್ ಮಾಡಲಾಗುತ್ತದೆ ಎಂಬ ವಿವರಗಳು ಹೀಗಿವೆ.

BBMP

ಅಲ್ಲಲ್ಲಿ ಗುಂಡಿ ಬಿದ್ದು ಹಾಳಾಗಿದ್ದ ಬೆಂಗಳೂರಿನ ರಸ್ತೆಗಳಿಗೆ ವೈಟ್ ಟಾಪಿಂಗ್ ಮಾಡಲು ಸಜ್ಜಾಗಿರುವ ಬಿಬಿಎಂಪಿ (BBMP), ಶೀಘ್ರದಲ್ಲೇ ಕಾಮಗಾರಿ ಶುರು ಮಾಡಲು ತಯಾರಿ ನಡೆಸಿದೆ. ನಗರದ 43 ರಸ್ತೆಗಳಿಗೆ 1,700 ಕೋಟಿ ರೂಪಾಯಿ ವೆಚ್ಚದಲ್ಲಿ ವೈಟ್ ಟಾಪಿಂಗ್ ನಡೆಸೋಕೆ ತಯಾರಿ ನಡೆದಿದ್ದು, ಈ ಬಗ್ಗೆ ಬಿಬಿಎಂಪಿ ಸಭೆ ನಡೆಸಿದೆ. ವೈಟ್ ಟಾಪಿಂಗ್ ಕಾಮಗಾರಿ ನಡೆಯುವ ರಸ್ತೆಗಳಲ್ಲಿ ಪೈಪ್ ಲೈನ್, ಕೇಬಲ್ (Pipe Line, Cable) ಅಳವಡಿಕೆ ಇದ್ದರೆ ಕಾಮಗಾರಿಗೂ ಮೊದಲೇ ಮುಗಿಸುವಂತೆ ಬಿಡಿಎ (BDA), ಜಲಮಂಡಳಿ ಹಾಗೂ ಟೆಲಿಕಾಂ ಕಂಪನಿಗಳಿಗೆ ಸೂಚಿಸಿದೆ.

ಎಂಜಿ ರಸ್ತೆಯ ಮಹಾತ್ಮಾ ಗಾಂಧಿ (Mahathma Gandhi) ವೃತ್ತದಿಂದ ಟ್ರಿನಿಟಿ ವೃತ್ತ, ರೆಸಿಡೆನ್ಸಿ ರಸ್ತೆಯಿಂದ ರಿಚ್ಮಂಡ್‌ ವೃತ್ತ, ಸಿಟಿ ಸಿವಿಲ್‌ ಕೋರ್ಟ್‌ ರಸ್ತೆಯಿಂದ ಮೈಸೂರು ಬ್ಯಾಂಕ್‌ ವೃತ್ತ-ಕೆಆರ್‌ ವೃತ್ತ, ತಿಮ್ಮಯ್ಯ ರಸ್ತೆಯಿಂದ ನಿಸ್ವಾನ್‌ ಸ್ಕೂಲ್‌-ಕಾಮರಾಜ ರಸ್ತೆ, ಅತ್ತಿಗುಪ್ಪೆ 14ನೇ ಮುಖ್ಯ ರಸ್ತೆಯಿಂದ ಕಾರ್ಡ್‌ ರಸ್ತೆ- ಗಣಪತಿ ವೃತ್ತ, ವಿಜಯನಗರ ಟಿಟಿಎಂಸಿ (Vijayanagar TTMC)ಯಿಂದ ವಿಜಯ ನಗರ ಮಾರ್ಕೆಟ್‌ ಸಿಗ್ನಲ್‌, ಮಲ್ಲೇಶ್ವರಂ 8ನೇ ಮುಖ್ಯ ರಸ್ತೆಯಿಂದ 18ನೇ ಕ್ರಾಸ್‌ನ ಚಿತ್ರಾಪುರ ಮಠ, ಸಹಕಾರ ನಗರ 20ನೇ ಕ್ರಾಸ್‌ನಿಂದ ಕೊಡಿಗೇಹಳ್ಳಿ ಮುಖ್ಯ ರಸ್ತೆ-ರಾಧಾಕೃಷ್ಣ ಚೌಲ್ಟ್ರಿಯಲ್ಲಿ ವೈಟ್‌ ಟಾಪಿಂಗ್‌ ಕಾಮಗಾರಿ ನಡೆಯಲಿದೆ.

ಅಲ್ಲದೆ, ಗೋವಿಂದರಾಜ ನಗರದ ಸರ್ವಜ್ಞ ಸ್ಕೂಲ್‌ ಸಿಗ್ನಲ್‌ ಜಂಕ್ಷನ್‌ನಿಂದ ರಹೇಜಾ ಅಪಾರ್ಟ್‌ಮೆಂಟ್‌ (Raheja Apartment), ಜಯನಗರ 22ನೇ ಕ್ರಾಸ್‌ ರಸ್ತೆಯಿಂದ 3 ಬ್ಲಾಕ್‌ ಜಂಕ್ಷನ್‌-ಕೂಲ್‌ ಜಾಯಿಂಟ್‌, ಬುಲ್‌ ಟೆಂಪಲ್‌ ರಸ್ತೆಯಿಂದ ರಾಯನ್‌ ವೃತ್ತ-5ನೇ ಮುಖ್ಯ ರಸ್ತೆ, ರೇಸ್‌ ಕೋರ್ಸ್‌ ರಸ್ತೆಯಿಂದ ಮೌರ್ಯ ಜಂಕ್ಷನ್‌-ಹರೇಕೃಷ್ಣ ಜಂಕ್ಷನ್‌ (Harekrishna Junction) ಸೇರಿದಂತೆ ಒಟ್ಟು 105 ರಸ್ತೆಗಳಲ್ಲಿ ವೈಟ್‌ ಟಾಪಿಂಗ್‌ ಕಾಮಗಾರಿ ನಡೆಯಲಿದೆ.

ಒಟ್ಟಿನಲ್ಲಿ ಗುಂಡಿ ಗಂಡಾಂತರಕ್ಕೆ ಪರಿಹಾರ ಕಂಡುಹಿಡಿಯಲಾಗದೆ ಸುಸ್ತಾಗಿದ್ದ ಪಾಲಿಕೆ, ಇದೀಗ ರಾಜಧಾನಿಯ ರಸ್ತೆಗಳಿಗೆ ವೈಟ್ ಟಾಪಿಂಗ್ ಮಾಡ ಹೊರಟಿದೆ. ಶುಕ್ರವಾರದಿಂದ ಕಾಮಗಾರಿಗಳಿಗೆ ಚಾಲನೆ ನೀಡಲು ಪಾಲಿಕೆ ಸಿದ್ಧತೆ ನಡೆಸಿದೆ.

Tags: BBMPbengaluruMahathma Gandhiwhite Topping

Related News

ದೆಹಲಿಯಲ್ಲಿ ಭುಗಿಲೆದ್ದ ನೀಟ್ ಪ್ರತಿಭಟನೆ: ಲಾಠಿ ಚಾರ್ಜ್‌, ಅಶ್ರುವಾಯು ಪ್ರಯೋಗ, ಮೆಟ್ರೋ ಮತ್ತು ಇಂಟರ್‌ನೆಟ್ ಸೇವೆ ಸ್ಥಗಿತ
ದೇಶ-ವಿದೇಶ

ದೆಹಲಿಯಲ್ಲಿ ಭುಗಿಲೆದ್ದ ನೀಟ್ ಪ್ರತಿಭಟನೆ: ಲಾಠಿ ಚಾರ್ಜ್‌, ಅಶ್ರುವಾಯು ಪ್ರಯೋಗ, ಮೆಟ್ರೋ ಮತ್ತು ಇಂಟರ್‌ನೆಟ್ ಸೇವೆ ಸ್ಥಗಿತ

July 20, 2026
18 ಸಾವಿರ ಪೌರ ಕಾರ್ಮಿಕರಿಗೆ ಅಧ್ಯಯನ ಪ್ರವಾಸ: ಸ್ವಚ್ಛತಾ ನಿರ್ವಹಣೆಯ ಹೊಸ ಮಾದರಿಗಳ ಅರಿವಿಗೆ ಬಿಬಿಎಂಪಿ ಮಹತ್ವದ ಹೆಜ್ಜೆ
ಪ್ರಮುಖ ಸುದ್ದಿ

18 ಸಾವಿರ ಪೌರ ಕಾರ್ಮಿಕರಿಗೆ ಅಧ್ಯಯನ ಪ್ರವಾಸ: ಸ್ವಚ್ಛತಾ ನಿರ್ವಹಣೆಯ ಹೊಸ ಮಾದರಿಗಳ ಅರಿವಿಗೆ ಬಿಬಿಎಂಪಿ ಮಹತ್ವದ ಹೆಜ್ಜೆ

July 20, 2026
ಆಂಧ್ರಪ್ರದೇಶದಲ್ಲಿ ಓಮಿಕ್ರಾನ್ RF.5 ರೂಪಾಂತರ ಪತ್ತೆ: ಆತಂಕ ಬೇಡ, ಎಚ್ಚರಿಕೆ ಮಾತ್ರ ಅಗತ್ಯ ಎಂದ ಆರೋಗ್ಯ ಇಲಾಖೆ
ದೇಶ-ವಿದೇಶ

ಆಂಧ್ರಪ್ರದೇಶದಲ್ಲಿ ಓಮಿಕ್ರಾನ್ RF.5 ರೂಪಾಂತರ ಪತ್ತೆ: ಆತಂಕ ಬೇಡ, ಎಚ್ಚರಿಕೆ ಮಾತ್ರ ಅಗತ್ಯ ಎಂದ ಆರೋಗ್ಯ ಇಲಾಖೆ

July 20, 2026
ಫಿಫಾ ವಿಶ್ವಕಪ್ 2026: ₹6,322 ಕೋಟಿ ಬಹುಮಾನ ಹಂಚಿಕೆ, ಸ್ಪೇನ್‌ಗೆ ವಿಶ್ವಕಪ್ ಕಿರೀಟ
Sports

ಫಿಫಾ ವಿಶ್ವಕಪ್ 2026: ₹6,322 ಕೋಟಿ ಬಹುಮಾನ ಹಂಚಿಕೆ, ಸ್ಪೇನ್‌ಗೆ ವಿಶ್ವಕಪ್ ಕಿರೀಟ

July 20, 2026

ವಿಜಯ ಟೈಮ್ಸ್‌ - ಬದಲಾವಣೆಯ ಹಾದಿ

Vijaya Times logo

ವಿಜಯ ಟೈಮ್ಸ್‌

  • ಪ್ರಮುಖ ಸುದ್ದಿ
  • ರಾಜಕೀಯ
  • ದೇಶ-ವಿದೇಶ
  • ಮನರಂಜನೆ
  • ಪ್ರಮುಖ ಸುದ್ದಿ
  • ರಾಜಕೀಯ
  • ದೇಶ-ವಿದೇಶ
  • ಮನರಂಜನೆ

Quick Links

  • About Us
  • Contact Us
  • For Advertisement
  • Privacy policy
  • About Us
  • Contact Us
  • For Advertisement
  • Privacy policy

Follow Us

Facebook Twitter Instagram Youtube

Download Vijaya Times App

Android
© 2022 Vijaya Times. All rights reserved.
No Result
View All Result
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
  • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ

© 2022 Vijaya Times. All Rights Reserved.