London (ಜೂ.29): ಆಸ್ಪರ್ಟೇಮ್ (WHO warning about CocaCola) ಅನ್ನುವುದು ಪ್ರಪಂಚದಲ್ಲಿಯೇ ಅತ್ಯಂತ ಪ್ರಸಿದ್ಧ ಹಾಗೂ ಸಾಮಾನ್ಯವಾದ ಕೃತಕ ಸಿಹಿಕಾರಕ ವಸ್ತುವಾಗಿದೆ.
ಇದೀಗ ಜಾಗತಿಕ ಆರೋಗ್ಯ ಸಂಸ್ಥೆಯಾಗಿರುವ ವಿಶ್ವ ಆರೋಗ್ಯ ಸಂಸ್ಥೆ (World Health Organisation) ಈ ಆಸ್ಪರ್ಟೇಮ್ ಅನ್ನು ಸಂಭವನೀಯ ಕಾರ್ಸಿನೋಜೆನ್(Carcinogen) ಎಂದು ಘೋಷಿಸಲು
ಸಿದ್ಧತೆ ನಡೆಸಿದೆ. ಡಬ್ಲ್ಯುಎಚ್‌ಓ ಮೂಲಗಳು ಈ ಕುರಿತಾಗಿ ಖಚಿತಪಡಿಸಿದೆ ಎಂದು ರಾಯಿಟರ್ಸ್(WHO warning about CocaCola) ವರದಿ ಮಾಡಿದೆ.

ಆಹಾರ ಉದ್ಯಮ ಮತ್ತು ನಿಯಂತ್ರಕರಿಗೆ ವಿರುದ್ಧವಾಗಿದೆ:
ಜೀವಂತ ಅಂಗಾಂಶಗಳಲ್ಲಿ ಕ್ಯಾನ್ಸರ್ (Cancer) ಉಂಟುಮಾಡುವ ಸಾಮರ್ಥ್ಯವಿರುವ ವಸ್ತುವಾಗಿದೆ ಈ ಕಾರ್ಸಿನೋಜೆನ್.ವಿಶ್ವ ಆರೋಗ್ಯ ಸಂಸ್ಥೆಯೂ (WHO) ಈ ಕೃತಕ ಸಿಹಿಕಾರಕ
ಆಸ್ಪರ್ಟೇಮ್ ಅನ್ನು ಸಂಭವನೀಯ ಕಾರ್ಸಿನೋಜೆನ್ ಎಂದು ಘೋಷಣೆ ಮಾಡಲು ಸಿದ್ಧತೆ ನಡೆಸಿದೆ.
ಇದನ್ನೂ ಓದಿ : ಹೈಡ್ರಾಫೇಶಿಯಲ್ ಮಾಡಿಸಿಕೊಳ್ಳುವವರೇ ಎಚ್ಚರ : 17,000ರೂ ಕೊಟ್ಟು ಫೇಶಿಯಲ್ ಮಾಡಿಸಿ ಮುಖವೇ ಸುಟ್ಟೋಯ್ತು!
ಈ ಆಸ್ಪರ್ಟೇಮ್ ಅನ್ನು ಕೋಕಾ-ಕೋಲಾ ಡಯಟ್ ಸೋಡಾಗಳಲ್ಲಿ (COCA COLA Diet Soda), ಕೆಲವು ಸ್ನ್ಯಾಪಲ್ ಪಾನೀಯಗಳಲ್ಲಿ (Snapple Drinks) ಮತ್ತು ಮಾರ್ಸ್‌ನ ಎಕ್ಸ್‌ಟ್ರಾ ಚೂಯಿಂಗ್
ಗಮ್ ಗಳಲ್ಲಿ (MARS Extra Chewing Gum) ಬಳಸಲಗುತ್ತದೆ. ಇದು “ಮನುಷ್ಯರಿಗೆ ಕ್ಯಾನ್ಸರ್ ಜನಕ” ಎಂದು ಜುಲೈನಲ್ಲಿ ಮೊದಲ ಬಾರಿಗೆ ಇಂಟರ್ನ್ಯಾಷನಲ್ ಏಜೆನ್ಸಿ ಫಾರ್ ರಿಸರ್ಚ್
ಆನ್ ಕ್ಯಾನ್ಸರ್ (IARC) ವರದಿ ಮಾಡಲಿದೆ. ಇದು ವಿಶ್ವ ಆರೋಗ್ಯ ಸಂಸ್ಥೆಯ (WHO) ಕ್ಯಾನ್ಸರ್ ಸಂಶೋಧನಾ ವಿಭಾಗ ಎಂದು ಮೂಲಗಳು ತಿಳಿಸಿವೆ.
ಅನೇಕ ಜನರು ಸಕ್ಕರೆಯನ್ನು ಆರೋಗ್ಯಕ್ಕೆ ಹಾನಿಕಾರಕವೆಂದು ಪರಿಗಣಿಸಿ ಸೇವಿಸುವುದನ್ನು ತಪ್ಪಿಸುತ್ತಾರೆ. ಆದರೆ ಇದು ಅಪಾಯವಲ್ಲ, ಕೇವಲ ರುಚಿಗೆ, ಎಂದು ಭಾವಿಸಿ ಕೃತಕ ಸಿಹಿಯನ್ನು ಬಳಸುತ್ತಾರೆ.
ಕೃತಕ ಸಿಹಿಕಾರಕಗಳ ಬಗ್ಗೆ WHO (ವಿಶ್ವ ಆರೋಗ್ಯ ಸಂಸ್ಥೆ) ನಡೆಸಿದ ಸಂಶೋಧನೆಯಲ್ಲಿ ಆಘಾತಕಾರಿ ಮಾಹಿತಿ ಬಹಿರಂಗವಾಗಿದೆ.
ಇದನ್ನೂ ಓದಿ : ಭಾರತದಿಂದ ಬ್ಯಾಂಕಾಕ್‌ಗೆ ಶೀಘ್ರದಲ್ಲಿಯೇ ಹೆದ್ದಾರಿ : ಥೈಲ್ಯಾಂಡ್‌ಗೆ ಈ ಹೆದ್ದಾರಿ ಶಾರ್ಟ್‌ಕಟ್
ಒಬ್ಬ ವ್ಯಕ್ತಿಯು ಎಷ್ಟು ಸುರಕ್ಷಿತವಾಗಿ ಆಸ್ಪರ್ಟೇಮ್ ಹೊಂದಿರುವ ಉತ್ಪನ್ನವನ್ನು ಬಳಸಬಹುದು ಎಂಬುದು ಇನ್ನೂ ತಿಳಿದಿಲ್ಲ. ಡಬ್ಲ್ಯುಎಚ್‌ಓ ತಜ್ಞರ ಸಮಿತಿಯಿಂದ ಒಬ್ಬ ವ್ಯಕ್ತಿಯು ಎಷ್ಟು ಹಾನಿಕಾರಕ
ವಸ್ತುವನ್ನು ಸೇವಿಸಬಹುದು ಎಂಬುದರ ಕುರಿತು ರಾಷ್ಟ್ರೀಯ ನಿಯಂತ್ರಕರ ನಿರ್ಣಯದ ಶಿಫಾರಸುಗಳನ್ನು ಜೊತೆಗೆ ಆಹಾರ ಸೇರ್ಪಡೆಗಳ ಮೇಲೆ ಪ್ರತ್ಯೇಕ ಮಾಡಲಾಗುತ್ತದೆ. ಇದನ್ನು JECFA (ಜಂಟಿ
WHO ಮತ್ತು ಆಹಾರ ಮತ್ತು ಕೃಷಿ ಸಂಸ್ಥೆಯ ಆಹಾರ ಸೇರ್ಪಡೆಗಳ ತಜ್ಞರ ಸಮಿತಿ) ನೀಡುತ್ತದೆ.

ಈ ವರ್ಷ ಆಸ್ಪರ್ಟೇಮ್ ಬಳಕೆಯನ್ನು ಡಬ್ಲ್ಯುಎಚ್‌ಓನ ಸೇರ್ಪಡೆಗಳ ಸಮಿತಿ JECFA ಪರಿಶೀಲಿಸುತ್ತಿದೆ. ಆಸ್ಪರ್ಟೇಮ್ ಅನ್ನು ಮಿತಿಯೊಳಗೆ ಪ್ರತಿದಿನ ಸೇವಿಸಿದರೆ ಸುರಕ್ಷಿತವಾಗಿದೆ ಎಂದು 1981 ರಲ್ಲಿ
JECFA ಹೇಳಿದೆ. ಉದಾಹರಣೆಗೆ, ದಿನಕ್ಕೆ 12-36 ಡಯೆಟ್ ಸೋಡಾವನ್ನು (ಆಸ್ಪರ್ಟೇಮ್ ಪ್ರಮಾಣವನ್ನು ಅವಲಂಬಿಸಿ) 60 ಕೆಜಿ ತೂಕದ ವಯಸ್ಕನು ಕುಡಿಯುತ್ತಿದ್ದರೆ ಅಪಾಯವಿದೆ.
ರಶ್ಮಿತಾ ಅನೀಶ್