download app

FOLLOW US ON >

Monday, August 8, 2022
Breaking News
ಹಿಟ್ಲರ್ ಕೂಡಾ ಚುನಾವಣೆಗಳನ್ನು ಗೆಲ್ಲುತ್ತಿದ್ದ : ರಾಹುಲ್‌ ಗಾಂಧಿಆಮ್ಲಜನಕ ಕೊರತೆ ; ಮಾರ್ಗಸೂಚಿ ಪಾಲಿಸುವಲ್ಲಿ ಸಿಬ್ಬಂದಿಯ ವಿಫಲವೆಂದ ಬಿ.ಎ ಪಾಟೀಲ್ ವರದಿ : `ದ ಫೈಲ್ಸ್’ಅರ್ಪಿತಾ ಮುಖರ್ಜಿ ಪ್ರಾಣಕ್ಕೆ ಅಪಾಯವಿದೆ ; ಆಹಾರ ಮತ್ತು ನೀರನ್ನು ಪರೀಕ್ಷಿಸಬೇಕು : ನ್ಯಾಯಾಲಯಕ್ಕೆ ಇ.ಡಿ ಮನವಿಕಾಮನ್ ವೆಲ್ತ್ ಗೇಮ್ಸ್ 2022 : ಕೇವಲ 1 ಗಂಟೆ ಅಂತರದಲ್ಲಿ ಹ್ಯಾಟ್ರಿಕ್ ಚಿನ್ನ ಗೆದ್ದ ಕುಸ್ತಿ ವೀರರುಜ್ಯೂಸ್ ಬಾಟಲಿಯನ್ನೇ ಮೈಕ್ ಮಾಡಿಕೊಂಡು ಶಾಲೆಯ ದುಸ್ಥಿತಿಯನ್ನು ವರದಿ ಮಾಡಿದ ಬಾಲಕ ; ವೀಡಿಯೋ ವೈರಲ್ಸಚಿವ ಸುನೀಲ್‌ ಕುಮಾರ್‌ಗೆ ಇಂಥಾ ಗುಲಾಮಿ ಮನಸ್ಥಿತಿ ಬರಬಾರದಿತ್ತು : ಸಿದ್ದರಾಮಯ್ಯಮೋದಿ-ಮಮತಾ ಬ್ಯಾನರ್ಜಿ ಭೇಟಿ : ಪಶ್ಚಿಮ ಬಂಗಾಳಕ್ಕೆ ಹಣ ಬಿಡುಗಡೆಗೆ ಒತ್ತಾಯ!ಸಿಎಂಗೆ ಕೋವಿಡ್ ಪಾಸಿಟಿವ್ ದೃಢ ; ದೆಹಲಿ ಪ್ರವಾಸ ರದ್ದು!ಜಮೀರ್‌ ಅಹಮದ್‌ ಮುಸ್ಲಿಂ ಮಹಿಳೆಯರು ಚುನಾವಣೆಗೆ ಸ್ಪರ್ಧಿಸುವುದನ್ನು ಬಯಸುವುದಿಲ್ಲ : ಬಿಜೆಪಿಜಮ್ಮು- ಕಾಶ್ಮೀರದಲ್ಲಿ ಪತ್ತೆಯಾಗಿದೆ 1,200 ವರ್ಷಗಳ ಹಿಂದಿನ ಮೂರು ತಲೆಯ ವಿಷ್ಣುವಿನ ಪುರಾತನ ವಿಗ್ರಹ!
English English Kannada Kannada

‘ಚಿನ್ನಾ’ ನೀನ್ಯಾಕೆ ಇಷ್ಟೊಂದು ಚಂಚಲೆ? ಚಿನ್ನದ ದರ ಏರಿಳಿಕೆಗೆ ಏನು ಕಾರಣ?

ಇತ್ತೀಚಿನ ದಿನಗಳಲ್ಲಿ ಚಿನ್ನದ ದರ ಬದಲಾಗ್ತಾನೆ ಇದೆ. ಒಮ್ಮೆ ಚಿನ್ನದ ಬೆಲೆ ಭಾರೀ ಏರಿಕೆ ಕಂಡ್ರೆ ಕೆಲವೊಮ್ಮೆ ಭಾರೀ ಇಳಿಕೆ ಕಾಣುತ್ತೆ. ಇದಕ್ಕೆ ಉದಾಹರಣೆ ಕೊಡುವುದಾದರೆ.
  • ಕಶ್ಯಪ್‌ ಪುತ್ತೂರು

ಚಿನ್ನದ ರೇಟ್‌ ಯಾಕೆ ಇಷ್ಟೊಂದು ಏರಿಳಿಕೆ ಕಾಣುತ್ತಿದೆ? ಇದರಿಂದ ಗ್ರಾಹಕರಿಗೆ ಆಗೋ ಸಮಸ್ಯೆ ಏನು? ದರ ಏರಿಳಿಕೆ ಸಂದರ್ಭದಲ್ಲಿ ಚಿನ್ನ ಖರೀದಿಸೋದು ಸೇಫಾ? ಈ ಥರ ಬದಲಾಗ್ತಾನೇ ಇರೋ ದರಗಳ ಹಿಂದಿನ ಮರ್ಮ ಏನು? ಯಾವ ಸಂದರ್ಭಗಳಲ್ಲಿ ಚಿನ್ನದ ದರಗಳು ನಿಮ್ಮ ಜೇಬಿಗೆ ಹೆಚ್ಚು ಭಾರ ಅನ್ಸಲ್ಲ ಅನ್ನೋದ್ರ ಸತ್ಯವನ್ನ ತಿಳ್ಕೊಳ್ಳೋಣ

ಇತ್ತೀಚಿನ ದಿನಗಳಲ್ಲಿ ಚಿನ್ನದ ದರ ಬದಲಾಗ್ತಾನೆ ಇದೆ. ಒಮ್ಮೆ ಚಿನ್ನದ ಬೆಲೆ ಭಾರೀ ಏರಿಕೆ ಕಂಡ್ರೆ ಕೆಲವೊಮ್ಮೆ ಭಾರೀ ಇಳಿಕೆ ಕಾಣುತ್ತೆ. ಇದಕ್ಕೆ ಉದಾಹರಣೆ ಕೊಡುವುದಾದರೆ.

ಜುಲೈ 30ನೇ ತಾರೀಖಿಗೆ                          – 49890

ಆಗಸ್ಟ್‌ ತಿಂಗಳ ಆರಂಭದಲ್ಲಿ                 – 47690

ಆಗಸ್ಟ್‌ 20ನೇ ತಾರೀಖಿಗೆ                         – 48830

ಚಿನ್ನದ ದರ ಒಮ್ಮೆ ಗ್ರಾಹಕರ ಮೊಗದಲ್ಲಿ ನಗು ಮೂಡಿಸಿದರೆ ಮತ್ತೊಮ್ಮೆ ಕಣ್ಣೀರು ತರಿಸುತ್ತೆ. ಹಾಗಾದ್ರೆ ಚಿನ್ನದ ದರ ಇಷ್ಟೊಂದು ಚಂಚಲ ಯಾಕೆ?

ಭಾರತದಲ್ಲಿರೋ ಹೆಚ್ಚಿನ ಚಿನ್ನ ಹೊರದೇಶಗಳಿಂದ ಆಮದು ಆಗುವಂಥದ್ದು. ಕಚ್ಚಾ ತೈಲದ ನಂತರ ಅತೀ ಹೆಚ್ಚು ವಿದೇಶಿ ಆಮದು ಆಗೋ ಪದಾರ್ಥ. ಲಂಡನ್ ನ ಬುಲಿಯನ್ ಮಾರ್ಕೆಟ್, 24 ಕ್ಯಾರೆಟ್ ಕಚ್ಚಾ ಚಿನ್ನದ ಪ್ರತಿ 28 ಗ್ರಾಂನ ಮೂಲ ದರವನ್ನ ಒಂದು ದಿನಕ್ಕೆ ನಿರ್ಧರಿಸುತ್ತೆ.  ಇದಕ್ಕೆ ಆಮದು ಮತ್ತು ರಫ್ತು ವ್ಯವಹಾರ ಮಾಡಿಕೊಳ್ಳುವ ಬ್ಯಾಂಕ್ ಗಳು 0.2% ಟ್ರಾನ್ಸಾಕ್ಷನ್ ಫೀಸ್ ನ ಹಾಕ್ತಾರೆ. ಇವೆರಡು ಸೇರಿ ಆಗೋದು ಕಚ್ಚಾ ಚಿನ್ನದ ಮೂಲ ದರ.

ಲಂಡನ್ ನಲ್ಲಿ ಡಿಸೈಡ್ ಆದ ಈ ದರ, ಅಮೇರಿಕಾದಲ್ಲಿ ಡಾಲರ್ ಗೆ ಮೊದಲು ಕನ್ವರ್ಟ್ ಆಗುತ್ತೆ. ಆ ದಿನ ಡಾಲರ್ ಎದುರು ರುಪಾಯಿ ಮೌಲ್ಯ ಎಷ್ಟು ಅಂತ ನೋಡಿ, ಈ ದರ ಪ್ರತಿ ಹತ್ತು ಗ್ರಾಂ ಕಚ್ಚಾ ಚಿನ್ನಕ್ಕೆ ಇಂತಿಷ್ಟು ಅಂತ ನಿರ್ಧರಿಸಲಾಗುತ್ತೆ.  ಇದೇ ದರಕ್ಕೆ ಸೇರೋದು ಕಸ್ಟಮ್ ಟ್ಯಾಕ್ಸ್ ಗಳು, ಅರ್ಥಾತ್ ಆಮದು ಮತ್ತು ರಫ್ತು ಮಾಡುವ ದೇಶಗಳು ಹಾಕೋ ಟ್ಯಾಕ್ಸ್ ಗಳು. ಕೇಂದ್ರೀಯ ಅಬಕಾರಿ ಇಲಾಖೆ, ತನ್ನ ಟ್ಯಾಕ್ಸ್ ದರಗಳನ್ನ ಆಗಿಂದಾಗ, ಅಗತ್ಯ ಮತ್ತು ಸಂದರ್ಭಕ್ಕೆ ಸರಿಯಾಗಿ ಪರಿಶ್ಕರಿಸುತ್ತಿರುತ್ತೆ. ಟ್ಯಾಕ್ಸ್ ಗರಿಷ್ಟ 10 ಶೇಕಡ ಇರಬಹುದಷ್ಟೇ.

ಮುಂದೆ ಬರೋದು ಮಾರುಕಟ್ಟೆಯಲ್ಲಿನ ಬದಲಾವಣೆಗಳ ಮತ್ತು ಕೇಂದ್ರ ಸರಕಾರದ ನೀತಿಗಳ ಪ್ರಭಾವ. ಇದರ ಜೊತೆ ಹಬ್ಬಗಳ ಮದು ಮದುವೆಗಳ ಸೀಸನ್ ನಲ್ಲೂ ರೇಟ್ ಬದಲಾಗುತ್ತೆ. ಒಂದು ಅಧ್ಯಯನದ ಪ್ರಕಾರ ಭಾರತದ ಅರ್ಧಕ್ಕರ್ಧ ಚಿನ್ನ ಖರೀದಿಯಾಗೋದು ಮದುವೆ ಉದ್ದೇಶದಿಂದಲೇ. ಹೀಗಾಗಿ ಇವಿಷ್ಟು ಹೇಳಿದ ಕಾರಣಗಳು ಕಚ್ಚಾ ಚಿನ್ನದ ಮೂಲ ದರದಲ್ಲಿ ಬದಲಾವಣೆಗೆ ಕಾರಣ.

ಇನ್ನು ಇದು ಹೋಗೋದು ಚಿನ್ನ ತಯಾರಕರು ಮತ್ತು ಮಾರಾಟಗಾರರ ಬಳಿಗೆ. ಅದಕ್ಕೂ ಮುನ್ನ ರಾಜ್ಯ ಸರಕಾರ ತನ್ನ ಪಾಲಿನ ತೆರಿಗೆಯನ್ನು ವಿಧಿಸಿಯಾಗಿರುತ್ತೆ. ಇದು ಪ್ರತೀ ರಾಜ್ಯದಲ್ಲಿ ಬೇರೆ ಬೇರೆ ಇರುತ್ತೆ. ನಂತರ ತಯಾರಕರು ತಮಗೆ ತಗುಲುವ ತಯಾರಿಕಾ ವೆಚ್ಚ ಮತ್ತು ಲಾಭಾಂಶವನ್ನ ಸೇರಿಸುತ್ತಾರೆ, ಇದನ್ನೇ ಮೇಕಿಂಗ್ ಚಾರ್ಜಸ್ ಅನ್ನೋದು. ಇದೇ ಮೇಕಿಂಗ್ ಚಾರ್ಜ್ ನಲ್ಲಿ ಹೆಚ್ಚಾಗಿ ಲೇಬರ್ ಚಾರ್ಜ್ ಮತ್ತು ವೇಸ್ಟೇಜ್ ಜೋಡಿಸಲಾಗಿರುತ್ತೆ.

ನಂತರ ಮಾರಾಟಗಾರರು, ತಮ್ಮ ಸಿಬ್ಬಂದಿ ಸಂಬಳ, ಅಂಗಡಿ ಖರ್ಚು, ಜಾಹೀರಾತು ಮತ್ತು ಲಾಭದ ಲೆಕ್ಕಾಚಾರ ಹಾಕಿ ಒಂದಿಷ್ಟು ದರವನ್ನ ಫೈನಲ್ ಮಾಡ್ತಾರೆ. ಇದೇ ನೀವು ಖರೀದಿಸುವ ಚಿನ್ನದ ಪ್ರತಿ ಗ್ರಾಂ ನ ದರ.

Share News on

Share on facebook
Facebook
Share on google
Google+
Share on twitter
Twitter
Share on linkedin
LinkedIn
Share on whatsapp
WhatsApp
error: Content is protected !!

Submit Your Article