ಇತ್ತೀಚಿನ ದಿನಗಳಲ್ಲಿ ಸಿಸೇರಿಯನ್ (Cesarean) ಹೆರಿಗೆಗಳ(Delivery) ಪ್ರಮಾಣ ತೀವ್ರಗತಿಯಲ್ಲಿ ಹೆಚ್ಚಾಗುತ್ತಿದೆ. ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆಯ ವರದಿ ಪ್ರಕಾರ, ಭಾರತದಲ್ಲಿ ಸಿಸೇರಿಯನ್ ಹೆರಿಗೆಗಳ ಪ್ರಮಾಣ ಶೇಕಡಾ 4.3ರಷ್ಟು ಹೆಚ್ಚಾಗಿದೆ.
ಈ ಮೊದಲು ಈ ಪ್ರಮಾಣ ಕೇವಲ ಶೇಕಡಾ 17.2ರಷ್ಟಿತ್ತು. ಆದರೆ ಕಳೆದ ಐದು ವರ್ಷಗಳಲ್ಲಿ ಈ ಪ್ರಮಾಣ ಹೆಚ್ಚಾಗುತ್ತಿರುವುದು ತೀವ್ರ ಕಳವಳಕ್ಕೆ ಕಾರಣವಾಗಿದೆ. ಇನ್ನು ಸಿಸೇರಿಯನ್ ಹೆರಿಗೆಗಳ ಪ್ರಮಾಣ ಹೆಚ್ಚಾಗಲು ಮುಖ್ಯ ಕಾರಣಗಳೆಂದರೆ,
- ಮಹಿಳೆಯರು ತಡವಾಗಿ ಮದುವೆಯಾಗುವುದು
- ಮಹಿಳೆಯರು 35 ವರ್ಷಗಳನ್ನು ತಲುಪಿದ ನಂತರ ಸಿಸೇರಿಯನ್ ಹೆರಿಗೆ ಪ್ರಮಾಣ ಹೆಚ್ಚಾಗುತ್ತದೆ.
- 25 ಕ್ಕಿಂತ ಹೆಚ್ಚಿನ ಬಿಎಂಐ ಹೆರಿಗೆ ತೊಂದರೆಗಳನ್ನು ಹೆಚ್ಚಿಸಬಹುದು ಹೀಗಾಗಿ ಸಿಸೇರಿಯನ್ ಹೆರಿಗೆ ಪ್ರಮಾಣ ಹೆಚ್ಚಾಗುತ್ತದೆ.
- ಹೆರಿಗೆ ಕೋಣೆಯಲ್ಲಿ ನಿರಂತರ ನಿಗಾ ವಹಿಸುವುದರಿಂದ ಸಿಸೇರಿಯನ್ ಹೆರಿಗೆ ಸಾಧ್ಯತೆ ಹೆಚ್ಚುತ್ತದೆ.
- ನೋವಿನ ಭಯದಿಂದ ಮಹಿಳೆಯರೇ ಸಿಸೇರಿಯನ್ ಹೆರಿಗೆಗೆ ಮುಂದಾಗುತ್ತಿರುವುದು.
- ನೋವು ನಿವಾರಣೆ ಮತ್ತು ಆ್ಯಂಟಿಬಯೋಟಿಕ್ಸ್ ಬಳಕೆ
- ಅಪಾಯ ಮತ್ತು ನೋವು ಕಡಿಮೆಯಿರುವುದರಿಂದ ಅನೇಕರು ಸಿಸೇರಿಯನ್ ಹೆರಿಗೆಯನ್ನು ಆಯ್ಕೆ ಮಾಡಿಕೊಳ್ಳುತ್ತಿದ್ದಾರೆ.
ಸಹಜ ಹೆರಿಗೆಯ ಸಾಧ್ಯತೆಯನ್ನು ಹೆಚ್ಚಿಸುವ ವಿಧಾನಗಳು :
ಇದನ್ನೂ ಓದಿ : https://vijayatimes.com/health-tips-for-dark-circle/
ಸ್ಕ್ವಾಟಿಂಗ್ : ಸಹಜ ಹೆರಿಗೆಗೆ ಸ್ಕ್ವಾಟಿಂಗ್ ಉತ್ತಮ ಆಯ್ಕೆಯಾಗಿದೆ. ಸ್ಕ್ವಾಟ್ ಮಾಡುವಾಗ ಪೆಲ್ವಿಸ್ ತೆರೆದುಕೊಳ್ಳುತ್ತದೆ (Why cesarean delivery cases are more?) ಮತ್ತು ಯೋನಿ ದ್ವಾರವನ್ನು ಹೆರಿಗೆಗೆ ಸಜ್ಜುಗೊಳಿಸುತ್ತದೆ.
ಇದು ಸಹಜ ಹೆರಿಗೆಯ ಸಾಧ್ಯತೆಗಳನ್ನು ಹೆಚ್ಚಿಸುತ್ತದೆ.
ಪ್ರಸವಪೂರ್ವ ಪೋಷಣೆ : ಉತ್ತಮ ಆಹಾರ ಮತ್ತು ವ್ಯಾಯಾಮದ ಮೂಲಕ ಗರ್ಭಾಶಯವನ್ನು ಬಲಿಷ್ಠವಾಗಿ ಸಿದ್ಧವಾಗಿರಿಸಿಕೊಳ್ಳಬೇಕು.
ಗರ್ಭಾವಸ್ಥೆಯಲ್ಲಿ ಅಗತ್ಯವಾದ ಪೋಷಣೆ ಮಾಡಿಕೊಳ್ಳುವುದನ್ನು ಕಲಿಯಬೇಕು. ಇದು ಸಹಜ ಹೆರಿಗೆಯ ಸಾಧ್ಯತೆಗಳನ್ನು ಹೆಚ್ಚಿಸುತ್ತದೆ.
ಸಾಮಾನ್ಯ ಅಭ್ಯಾಸಗಳು : ಸಹಜ ಹೆರಿಗೆಯ ಕುರಿತು ಕೆಲ ಸಾಮಾನ್ಯ ತಿಳುವಳಿಕೆ ಮತ್ತು ಜ್ಞಾನವನ್ನು (Why cesarean delivery cases are more?) ತಿಳಿದುಕೊಳ್ಳುವುದು ಅತಿಮುಖ್ಯ. ಅದರಿಂದ ಸಾಮಾನ್ಯ ಅಭ್ಯಾಸಗಳನ್ನು ಮಾಡಬೇಕಾಗುತ್ತದೆ.
ಅವುಗಳೆಂದರೆ, ಸಂಕೋಚನಗಳನ್ನು ಹೇಗೆ ನಿರ್ವಹಿಸುವುದು, ಸ್ವಯಂ-ಸಂಮೋಹನ, ಉಸಿರಾಟ, ನೋವು ನಿರ್ಹಹಣೆಯಂತಹ ಸರಳ ತಂತ್ರಗಳನ್ನು ಅಭ್ಯಾಸ ಮಾಡಬೇಕು. ಇದು ಹೆರಿಗೆ ಸಮಯದಲ್ಲಿ ನೆರವಾಗುತ್ತದೆ.
ಇದನ್ನೂ ಓದಿ : https://vijayatimes.com/deadly-bpa/
ನಿಯಮಿತವಾಗಿ ವ್ಯಾಯಾಮ : ಪ್ರತಿದಿನ ವ್ಯಾಯಾಮ ಮಾಡುವುದರಿಂದ ದೇಹವು ಹೆರಿಗೆಗೆ ಸಜ್ಜುಗೊಳ್ಳುತ್ತದೆ. ಆದರೆ ವ್ಯಾಯಾಮ ಮಾಡುವ ಮೊದಲು ವೈದ್ಯರ ಸಲಹೆ ಪಡೆಯಬೇಕು ಮತ್ತು ವೈದ್ಯರು ಸೂಚಿಸಿದ ವ್ಯಾಯಾಮಗಳನ್ನು ಮಾತ್ರ ಮಾಡಬೇಕು.
- ಮಹೇಶ್.ಪಿ.ಎಚ್