ಶ್ವಾನಗಳು(Dogs) ಅನೇಕರ ಅಚ್ಚುಮೆಚ್ಚಿನ ಮುದ್ದು ಪ್ರಾಣಿ. ಅನೇಕ ಶ್ವಾನಗಳು ಮಾಂಸ, ಮೊಟ್ಟೆಯಷ್ಟೆ ಅಲ್ಲದೇ ಚಾಕಲೇಟ್(Chocolate) ಅನ್ನು ಕೂಡ ಇಷ್ಟಪಡುತ್ತವೆ. ಆದರೆ ಸಂಶೋಧನೆಗಳ(Research) ಪ್ರಕಾರ ಚಾಕಲೇಟ್ ತಿನ್ನುವುದು ಶ್ವಾನಗಳ ಆರೋಗ್ಯಕ್ಕೆ ಒಳ್ಳೆಯದಲ್ಲ.
ಚಾಕಲೇಟ್ ತಿಂದರೆ ಶ್ವಾನದ ಆರೋಗ್ಯ ಏಕೆ ಕೆಡುತ್ತದೆ ಎಂದು ನೀವು ಯೋಚಿಸುತ್ತಿರಬಹುದು, ಅದಕ್ಕೆ ಕಾರಣಗಳು ಇಲ್ಲಿವೆ ನೋಡಿ.
ಚಾಕಲೇಟ್‌ನಲ್ಲಿರುವ ಕೋಕಾದಲ್ಲಿ ಥಿಯೋಬ್ರೊಮೈನ್ ಎಂಬ ರಾಸಾಯನಿಕವಿರುತ್ತದೆ.

ಈ ರಾಸಾಯನಿಕವು ನರಗಳ ಮೇಲೆ ಪ್ರಭಾವ ಬೀರುತ್ತದೆ, ಆದ್ದರಿಂದ ಶ್ವಾನಗಳು ಆಗಾಗ ಮೂತ್ರವಿಸರ್ಜನೆಗೆ ಹೋಗುವಂತಾಗುತ್ತದೆ, ಇದರಿಂದ ಆರೋಗ್ಯ ಕೆಡುತ್ತದೆ. ಶ್ವಾನಕ್ಕೆ ಅಪರೂಪಕ್ಕೆ ಚಾಕಲೇಟ್ ಕೊಟ್ಟರೆ ಏನೂ ತೊಂದರೆಯಿಲ್ಲ, ಆದರೆ ಪ್ರತಿದಿನ ಕೊಡುವ ಅಭ್ಯಾಸ ಒಳ್ಳೆಯದಲ್ಲ.
ಇನ್ನು, ಚಾಕಲೇಟ್ ಕೊಡುವ ಮಿತಿ ಕೂಡ ಒಂದು ಜಾತಿಯ ಶ್ವಾನದಿಂದ ಮತ್ತೊಂದು ಜಾತಿಯ ಶ್ವಾನಕ್ಕೆ ಭಿನ್ನವಾಗಿರುತ್ತದೆ. ಬುಲ್ ಜಾತಿಯ ಶ್ವಾನಕ್ಕೆ ಒಂದು ಇಡೀ ಚಾಕಲೇಟ್ ಬಾರ್ ತಿಂದರೂ ಏನೂ ಆಗುವುದಿಲ್ಲ. ಆದರೆ ಪಗ್ ಶ್ವಾನಕ್ಕೆ ಅಷ್ಟು ತಿಂದರೆ ಅನಾರೋಗ್ಯಕ್ಕೊಳಗಾಗುತ್ತದೆ.
ಅಲ್ಲದೆ ಚಾಕಲೇಟ್ ಬಗೆಗಳು ಕೂಡ ನಾಯಿಗಳ ಆರೋಗ್ಯದ ಮೇಲೆ ಪ್ರಭಾವ ಬೀರುತ್ತವೆ. ಬಿಳಿ ಚಾಕಲೇಟ್ ಅನ್ನು ಶ್ವಾನಕ್ಕೆ ಕೊಟ್ಟರೆ ಏನೂ ತೊಂದರೆಯಿಲ್ಲ, ಏಕೆಂದರೆ ಇದರಲ್ಲಿ ಕೋಕಾ ಪ್ರಮಾಣ ಕಡಿಮೆ ಇರುತ್ತದೆ.
ಇನ್ನು ಮಿಲ್ಕ್ ಚಾಕಲೇಟ್‌ಗಳನ್ನು ಸಹಾ ಸ್ವಲ್ಪ ಪ್ರಮಾಣದಲ್ಲಿ ತಿನ್ನಲು ಕೊಡಬಹುದು. ಇದರಲ್ಲಿ ಸಿಹಿ ಪ್ರಮಾಣ ಅಧಿಕವಿರುವುದರಿಂದ ಅಧಿಕ ಪ್ರಮಾಣದಲ್ಲಿ ಕೊಟ್ಟರೆ ಶ್ವಾನಗಳ ಆರೋಗ್ಯ ಹದಗೆಡುತ್ತದೆ. ಸಿಹಿಯಾದ ಕೋಕೊ ಚಾಕಲೇಟ್‌ಗಳನ್ನು ಕೊಡಲೇಬಾರದು.

ಇನ್ನು, ಚಾಕಲೇಟ್ ತಿಂದರೆ ಶ್ವಾನಗಳಿಗೆ ಯಾವ ರೀತಿಯಲ್ಲಿ ಅಪಾಯವಾಗುತ್ತದೆ ಎಂದರೆ, ಸಾಮಾನ್ಯವಾಗಿ ಚಾಕಲೇಟ್ ನಿಂದ ಶ್ವಾನಗಳ ಹಲ್ಲುಗಳು ಹಾಳಾಗುತ್ತವೆ, ಹೃದಯಕ್ಕೆ ಸಂಬಂಧಿಸಿದ ಕಾಯಿಲೆಗಳು ಉಂಟಾಗುವುದು, ಕುರುಡುತನ ಮಧುಮೇಹದಂತಹ ಕಾಯಿಲೆಗಳು ಉಂಟಾಗುತ್ತವೆ.https://vijayatimes.com/rahul-gandhi-strikes-bjp-government/
ಒಮ್ಮೊಮ್ಮೆ ಸಾವೂ ಕೂಡ ಸಂಭವಿಸುವ ಸಾಧ್ಯತೆ ಇರುತ್ತದೆ. ಆದ್ದರಿಂದ ಶ್ವಾನಗಳಿಗೆ ಚಾಕಲೇಟ್ ತಿನ್ನಲು ಕೊಡುವ ಮುನ್ನ ಯೋಚನೆ ಮಾಡುವುದು ಒಳಿತು.
- ಪವಿತ್ರ ಸಚಿನ್