ಬೆಂಗಳೂರು : ರಾಜ್ಯದಲ್ಲಿ ದಲಿತ(Dalit) ಸಮುದಾಯದಿಂದ ಒರ್ವರು ಮುಖ್ಯಮಂತ್ರಿಯಾಗಬೇಕೆಂಬ ಕೂಗು ಕೇಳಿ ಬರುವುದರಲ್ಲಿ ತಪ್ಪೇನಿಲ್ಲ. ದಲಿತ ಸಮುದಾಯದಿಂದ ಯಾಕೆ ಮುಖ್ಯಮಂತ್ರಿಯಾಗಬಾರದು? ಎಂದು ರಾಜ್ಯ ಕಾಂಗ್ರೆಸ್(State Congress) ಅಧ್ಯಕ್ಷ(President) ಡಿ.ಕೆ.ಶಿವಕುಮಾರ್(DK Shivkumar) ಪ್ರಶ್ನಿಸಿದ್ದಾರೆ. ತುಮಕೂರು(Tumkuru) ನಗರದಲ್ಲಿ ನಡೆದ ಕಾಂಗ್ರೆಸ್ ಸಂಕಲ್ಪ ಶಿಬಿರದಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷವನ್ನು ಸಂಘಟಿಸುವ ನಿಟ್ಟಿನಲ್ಲಿ ಅನೇಕ ಹೊಸ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.

ರಾಜ್ಯದ ಜನರ ನಾಡಿ ಮಿಡಿತ ತಿಳಿಯಲು ಚಿಂತನ-ಮಂಥನ ಶಿಬಿರ ನಡೆಸಲು ಉದ್ದೇಶಿಸಲಾಗಿದೆ. ರಾಜ್ಯದ ಪ್ರತಿ ಜಿಲ್ಲೆಯಲ್ಲಿಯೂ ನಮ್ಮ ಕಾರ್ಯಕರ್ತರು ರೈತರ, ಕಾರ್ಮಿಕರ, ಮಹಿಳೆಯರ, ಹಿಂದುಳಿದವರ ಸಮಸ್ಯೆಗಳ ಕುರಿತು ಚರ್ಚೆ ನಡೆಸಲಿದ್ದಾರೆ. ಇದೇ ವೇಳೆ ದಲಿತ ಮುಖ್ಯಮಂತ್ರಿ ಕೂಗು ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿದ ಅವರು, ದಲಿತ ಸಮುದಾಯದಿಂದ ಇಲ್ಲಿಯವರೆಗೂ ಯಾರೂ ಮುಖ್ಯಮಂತ್ರಿಯಾಗಿಲ್ಲ. ಹೀಗಾಗಿ ಯಾಕೆ ದಲಿತ ಸಮುದಾಯದಿಂದ ಒರ್ವರು ಮುಖ್ಯಮಂತ್ರಿಯಾಗಬಾರದು ಎಂದು ಪ್ರಶ್ನಿಸಿದರು. ಆದರೆ ಚಿಂತನ-ಮಂಥನ ಶಿಬಿರದಲ್ಲಿ ದಲಿತ ಮುಖ್ಯಮಂತ್ರಿ ಕುರಿತು ಚರ್ಚೆಯಾಗುವುದಿಲ್ಲ.
ಈ ಸಭೆಯಲ್ಲಿ ಪಕ್ಷವನ್ನು ಹೇಗೆ ಸಂಘಟಿಸಬೇಕು, ನಮ್ಮ ಮುಂದಿನ ಹೋರಾಟದ ಕುರಿತು ಚರ್ಚೆ ಆಗುತ್ತದೆ ಎಂದರು. ಇನ್ನು ಜಾರಿ ನಿರ್ದೇಶನಾಲಯ ನ್ಯಾಯಾಲಯಕ್ಕೆ ಸಲ್ಲಿಸಿರುವ ಚಾರ್ಜ್ಶೀಟ್ ಸಲ್ಲಿಕೆ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಇ.ಡಿ ನ್ಯಾಯಾಲಯಕ್ಕೆ ಸಲ್ಲಿಸಿರುವ ಚಾರ್ಜ್ಶೀಟ್ ಅನ್ನು ನಾನು ನೋಡಿಲ್ಲ. ಆದರೆ ಈ ಹಿಂದೆ ಇ.ಡಿ ನನ್ನನ್ನು ಬಂಧಿಸಿದಾಗ, ನಾನು ಜೈಲಲ್ಲಿ ಇದ್ದಾಗಲೇ ಚಾರ್ಜ್ಶೀಟ್ ಅನ್ನು ನ್ಯಾಯಾಲಯಕ್ಕೆ ಸಲ್ಲಿಸಬೇಕಿತ್ತು. ಆದರೆ ಈಗ ಬಿಜೆಪಿಯವರು ರಾಜಕೀಯ ಮಾಡುತಿದ್ದಾರೆ ಎಂದು ಬಿಜೆಪಿ(BJP) ವಿರುದ್ಧ ಕಿಡಿಕಾರಿದ್ದಾರೆ