Health : ದೇಹದಲ್ಲಿನ ಎಲ್ಲ ಕಾರ್ಯಗಳು ಉತ್ತಮವಾಗಿ ನಡೆಯಲು ಮೂತ್ರಪಿಂಡಗಳು (Excreatory System) ಅತಿಮುಖ್ಯ ಪಾತ್ರವಹಿಸುತ್ತವೆ. ಆದರೆ ಇತ್ತೀಚಿನ ದಿನಗಳಲ್ಲಿ ಮೂತ್ರಪಿಂಡ ವೈಫಲ್ಯದಂತ ಗಂಭೀರ ಸಮಸ್ಯೆಗಳಿಗೆ ಅನೇಕರು ತುತ್ತಾಗುತ್ತಿದ್ದಾರೆ.
ಆದ್ದರಿಂದ ಕಿಡ್ನಿ (Kidney) ಆರೋಗ್ಯದ ಕುರಿತು ಎಚ್ಚರ ವಹಿಸಬೇಕಾದ ಅಗತ್ಯವಿದೆ. ಹೀಗಾಗಿ ಕಿಡ್ನಿ ವೈಫಲ್ಯದ ಲಕ್ಷಣಗಳು ಮತ್ತು ಕಾರಣಗಳ ವಿವರ ಇಲ್ಲಿದೆ ನೋಡಿ.

ಆ ಸಮಸ್ಯೆಗಳು ಪ್ರಾರಂಭವಾಗುವ ಮೊದಲೇ ಅದನ್ನು ನೀವು ಗುರುತಿಸಿದರೆ, ಅವುಗಳನ್ನು ಎದುರಿಸುವುದು ಸುಲಭವಾಗುತ್ತದೆ.
ನಿಮ್ಮ ಮನಸ್ಸಿನಲ್ಲಿ ಮೂತ್ರಪಿಂಡ ವೈಫಲ್ಯದ ಬಗ್ಗೆ ಯಾವುದೇ ಸಂದೇಹ ಅಥವಾ ಅನುಮಾನವಿದ್ದರೆ,ಈ ಲೇಖನದ ಮೂಲಕ ದೂರ ಮಾಡಿಕೊಳಬಹುದು.

ಕಿಡ್ನಿ ವೈಫಲ್ಯವನ್ನು ಸಾಮಾನ್ಯವಾಗಿ ಎರಡು ಮುಖ್ಯ ಭಾಗಗಳಾಗಿ ವಿಂಗಡಿಸಲಾಗಿದೆ.
ಅಲ್ಪಾವಧಿಯ ಮೂತ್ರಪಿಂಡ ವೈಫಲ್ಯ(AKI)
ದೀರ್ಘಕಾಲೀನ ಮೂತ್ರಪಿಂಡ ವೈಫಲ್ಯ(CKD)
ಅಲ್ಪಾವಧಿಯ ಕಿಡ್ನಿ ವೈಫಲ್ಯ : ಕೆಲ ದಿನಗಳ ಮಟ್ಟಿಗೆ ಕಿಡ್ನಿ ಕಾರ್ಯ ಸ್ಥಗಿತವಾಗಿರುತ್ತದೆ. ಅದಕ್ಕೆ ಮುಖ್ಯಕಾರಣಗಳೆಂದರೆ ದೊಡ್ಡ ಶಸ್ತ್ರಚಿಕಿತ್ಸೆ, ಫ್ಲೂ, ನೋವುನಿವಾರಕ ಮಾತ್ರೆಗಳನ್ನು ತೆಗೆದುಕೊಳ್ಳುವುದು. ಇದನ್ನು ಸೂಕ್ತ ಚಿಕಿತ್ಸೆಯ ಮೂಲಕ ಪರಿಹರಿಸಬಹುದು.
- ಅಲ್ಪಾವಧಿಯ ಮೂತ್ರಪಿಂಡ ವೈಫಲ್ಯದ ಲಕ್ಷಣಗಳು
- ಶ್ವಾಸಕೋಶದಲ್ಲಿ ನೀರು ತುಂಬುವುದು.
- ಉಸಿರಾಟದ ತೊಂದರೆ.
- ಕಡಿಮೆ ಮೂತ್ರ ವಿಸರ್ಜನೆ.
- ಪಾದಗಳುಲ್ಲಿ ಊತ.
- ರಕ್ತದಲ್ಲಿ ಪೊಟ್ಯಾಸಿಯಮ್ ಅಧಿಕ ವಾಗುವುದು.

ದೀರ್ಘಕಾಲದ ಮೂತ್ರಪಿಂಡ ವೈಫಲ್ಯ : ಸುಮಾರು 80 ಪ್ರತಿಶತದಷ್ಟು ಕಿಡ್ನಿ ಹಾಳಾದಾಗ ದೀರ್ಘಕಾಲದ ಮೂತ್ರಪಿಂಡ ವೈಫಲ್ಯದ ರೋಗಲಕ್ಷಣಗಳು ಕಾಣಿಸಿಕೊಳ್ಳುತ್ತವೆ.
ಕ್ರಿಯಾಟಿನೈನ್ ಮೂಲಕ ವೈದ್ಯರು ಮೂತ್ರಪಿಂಡದ ವೈಫಲ್ಯದ ಹಂತವನ್ನು ನಿರ್ಧರಿಸುತ್ತಾರೆ. ದೀರ್ಘಕಾಲದ ಮೂತ್ರಪಿಂಡ ವೈಫಲ್ಯ ಪ್ರಕ್ರಿಯೆಯನ್ನು ಐದು ಹಂತಗಳಾಗಿ ವಿಂಗಡಿಸಲಾಗಿದೆ.
ದೀರ್ಘಕಾಲದ ಮೂತ್ರಪಿಂಡ ವೈಫಲ್ಯದ ಲಕ್ಷಣಗಳು
- ಅಧಿಕ ರಕ್ತದೊತ್ತಡ ನಿಯಂತ್ರಣಕ್ಕೆ ಬಾರದಿರುವುದು.
- ತೂಕ ಕಡಿಮೆ ಯಾಗುವುದು.
- ಕಣ್ಣು ಮತ್ತು ಮುಖದ ಸುತ್ತಲೂ ಉತ.
- ವಿಟಮಿನ್ ‘ಡಿ’ ಕೊರತೆ ಉಂಟಾಗುತ್ತದೆ
- ಹೊಟ್ಟೆ ಹಸಿಯದಿರದು
- ವಾಂತಿ, ವಾಕರಿಕೆ ಬರುವುದು.
- ಉಸಿರಾಟದ ತೊಂದರೆ.
- ರಾತ್ರಿಯಲ್ಲಿ ಅತಿಯಾದ ಮೂತ್ರ ವಿಸರ್ಜನೆ
ಕಿಡ್ನಿ ವೈಫಲ್ಯಕ್ಕೆ ಹಲವು ಕಾರಣಗಳು-
- ಅತಿಯಾದ ಮಧುಮೇಹ
- ಅಧಿಕ ರಕ್ತದೊತ್ತಡ
- ಕೀಮೋಥೆರಪಿನಂತಹ ಚಿಕಿತ್ಸೆ ಮೂತ್ರಪಿಂಡದ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತವೆ.
- ರಕ್ತವು ಮೂತ್ರಪಿಂಡವನ್ನು ತಲುಪುವುದು ಕಡಿಮೆಯಾದರೆ ಕಿಡ್ನಿ ವೈಫಲ್ಯದ ಅಪಾಯ ಹೆಚ್ಚಾಗುತ್ತದೆ.
- ಮೂಳೆ ಮಜ್ಜೆಯಲ್ಲಿರುವ ಪ್ಲಾಸ್ಮಾ ಕೋಶಗಳ ಕ್ಯಾನ್ಸರ್ನಂತಹ ರೋಗಗಳು ಮೂತ್ರಪಿಂಡದ ವೈಫಲ್ಯಕ್ಕೆ ಕಾರಣವಾಗಬಹುದು.
- ಹೃದಯಾಘಾತ, ಹೃದಯ ಕಾಯಿಲೆ, ಪಿತ್ತಜನಕಾಂಗದ ವೈಫಲ್ಯ, ನೀರಿನ ಕೊರತೆ, ಸೆಪ್ಸಿಸ್ನಂತಹ ಗಂಭೀರ ಸೋಂಕು ಕೂಡಾ ಕಿಡ್ನಿ ವೈಪಲ್ಯಕ್ಕೆ ಕಾರಣವಾಗುತ್ತವೆ.
- ಲೂಪಸ್ ರೋಗ ಮೂತ್ರಪಿಂಡದ ವೈಫಲ್ಯದ ಕಾರಣವಾಗಬಹುದು.